← Zechariah (9/14) → |
1. | ಹದ್ರಾಕಿನ ದೇಶದ ವಿಷಯವಾದ ಕರ್ತನ ವಾಕ್ಯದ ಭಾರವು; ಅದು ದಮಸ್ಕದಲ್ಲಿ ತಂಗುವದು; ಮನುಷ್ಯನ ಕಣ್ಣುಗಳು ಇಸ್ರಾಯೇಲಿನ ಎಲ್ಲಾ ಗೋತ್ರಗಳಂತೆ ಕರ್ತನ ಕಡೆಗೆ ಇರುವವು. |
2. | ಹಮಾತು ಬಹಳ ಜ್ಞಾನವಿರುವ ತೂರ್ ಚೀದೋನ್ ಸಹ ಅದರ ಮೇರೆಯಾಗಿದೆ. |
3. | ತೂರ್ ತನಗಾಗಿ ಬಲವಾದ ಕೋಟೆಯನ್ನು ಕಟ್ಟಿಕೊಂಡು ಬೆಳ್ಳಿಯನ್ನು ಧೂಳಿನಂತೆಯೂ ಚೊಕ್ಕ ಬಂಗಾರವನ್ನು ಬೀದಿಗಳ ಕೆಸರಿನಂತೆಯೂ ಕೂಡಿಸಿಕೊಂಡಿತು. |
4. | ಇಗೋ, ಕರ್ತನು ಅದನ್ನು ಹೊರಗೆ ಹಾಕುವನು; ಸಮುದ್ರದಲ್ಲಿ ಅದರ ಬಲವನ್ನು ಹೊಡೆಯುವನು; ಅದು ಬೆಂಕಿ ಯಿಂದ ದಹಿಸಲ್ಪಡುವದು. |
5. | ಅಷ್ಕಲೋನು ನೋಡಿ ಭಯಪಡುವದು; ಗಾಜ ಸಹ ಅದನ್ನು ನೋಡಿ ಬಹಳವಾಗಿ ವೇದನೆಪಡುವದು, ಎಕ್ರೋನು ಸಹ; ಅದರ ನಿರೀಕ್ಷೆಯು ಅದನ್ನು ನಾಚಿಕೆ ಪಡಿಸಿತು; ಗಾಜ ದೊಳಗಿಂದ ಅರಸನು ನಾಶವಾಗುವನು; ಅಷ್ಕೆಲೋನು ನಿವಾಸವಿಲ್ಲದೆ ಇರುವದು. |
6. | ಅಷ್ಡೋದಿನಲ್ಲಿ ಜಾರತ್ವ ದಿಂದ ಹುಟ್ಟಿದವನು ವಾಸವಾಗುತ್ತಾನೆ; ಫಿಲಿಷ್ಟಿಯರ ಗರ್ವವನ್ನು ನಾನು ತೆಗೆದುಬಿಡುವೆನು. |
7. | ಅವನ ರಕ್ತ ವನ್ನು ಅವನ ಬಾಯೊಳಗಿಂದಲೂ ಅವನ ಅಸಹ್ಯ ಗಳನ್ನು ಅವನ ಹಲ್ಲುಗಳ ನಡುವೆಯಿಂದಲೂ ನಾನು ತೆಗೆದುಹಾಕುವೆನು; ಅವನು ಸಹ ನಮ್ಮ ದೇವರಿಗಾಗಿ ಉಳಿಯುವನು; ಯೆಹೂದದಲ್ಲಿ ಪ್ರಭುವಿನ ಹಾಗೆ ಇರುವನು; ಎಕ್ರೋನು ಯೆಬೂಸಿಯನ ಹಾಗೆ ಇರು ವನು. |
8. | ಇದಲ್ಲದೆ ಹೋಗುತ್ತಾ ಬರುತ್ತಾ ಇರುವವನ ನಿಮಿತ್ತವೂ ಸೈನ್ಯದ ನಿಮಿತ್ತವೂ ನನ್ನ ಮನೆಯ ಹತ್ತಿರ ಪಾಳೆಯಮಾಡುತ್ತೇನೆ; ಇನ್ನು ಮೇಲೆ ಉಪದ್ರ ಕೊಡುವವನು ಅವರ ಮೇಲೆ ಹಾದು ಹೋಗುವದಿಲ್ಲ; ಯಾಕಂದರೆ ಈಗ ನನ್ನ ಕಣ್ಣುಗಳಿಂದ ನೋಡಿದ್ದೇನೆ. |
9. | ಚೀಯೋನ್ ಕುಮಾರ್ತೆಯೇ, ಬಹಳವಾಗಿ ಉಲ್ಲಾಸಪಡು; ಯೆರೂಸಲೇಮಿನ ಕುಮಾರ್ತೆಯೇ, ಆರ್ಭಟಿಸು; ಇಗೋ, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನೀತಿವಂತನಾಗಿಯೂ ರಕ್ಷಿಸುವಾತ ನಾಗಿಯೂ ದೀನನಾಗಿಯೂ ಕತ್ತೆಯ ಮೇಲೆ ಹೌದು, ಕತ್ತೆಯ ಮರಿಯ ಮೇಲೆ ಹತ್ತಿದವನಾಗಿಯೂ ಬರು ತ್ತಾನೆ. |
10. | ಇದಲ್ಲದೆ ಎಫ್ರಾಯಾಮಿನೊಳಗಿಂದ ರಥ ಗಳನ್ನೂ ಯೆರೂಸಲೇಮಿನೊಳಗಿಂದ ಕುದುರೆಗಳನ್ನೂ ತೆಗೆದುಬಿಡುವೆನು; ಯುದ್ಧದ ಬಿಲ್ಲು ಸಹ ತೆಗೆದು ಹಾಕಲ್ಪಡುವದು; ಆತನು ಅನ್ಯ ಜನಾಂಗಗಳಿಗೆ ಸಮಾ ಧಾನವನ್ನು ಹೇಳುವನು; ಆತನ ದೊರೆತನವು ಸಮುದ್ರ ದಿಂದ ಸಮುದ್ರಕ್ಕೂ ನದಿಯಿಂದ ಭೂಮಿಯ ಅಂತ್ಯಗಳ ವರೆಗೂ ಇರುವದು. |
11. | ನಿನ್ನ ವಿಷಯವಾಗಿ ಸಹ ನಿನ್ನ ಒಡಂಬಡಿಕೆಯ ರಕ್ತದಿಂದ, ನಿನ್ನ ಸೆರೆಯವರನ್ನು ನೀರಿಲ್ಲದ ಕುಣಿಯೊ ಳಗಿಂದ ಕಳುಹಿಸಿಬಿಡುತ್ತೇನೆ. |
12. | ನಿರೀಕ್ಷೆಯ ಸೆರೆಯವರೇ, ಬಲವಾದ ದುರ್ಗಸ್ಥಾನಕ್ಕೆ ತಿರಿಗಿರಿ, ಎರಡ ರಷ್ಟು ನಿಮಗೆ ಕೊಡುವೆನೆಂದು ಈ ಹೊತ್ತೇ ಪ್ರಕಟಿ ಸುತ್ತೇನೆ. |
13. | ಯೆಹೂದವನ್ನು ನನಗಾಗಿ ಬೊಗ್ಗಿಸಿದಾಗ ಎಫ್ರಾಯಾಮನ್ನು ಬಿಲ್ಲುಗಳಿಂದ ತುಂಬಿಸಿದ್ದೇನೆ; ಚೀಯೋನೇ, ನಿನ್ನ ಕುಮಾರರನ್ನು ಗ್ರೀಕ್ ಕುಮಾರರಿಗೆ ವಿರೋಧವಾಗಿ ಎಬ್ಬಿಸಿ ನಿನ್ನನ್ನು ಶೂರನ ಕತ್ತಿಯಂತೆ ಮಾಡಿದ್ದೇನೆ. |
14. | ಇದಲ್ಲದೆ ಕರ್ತನು ಅವರ ಮೇಲೆ ಕಾಣಿಸಿಕೊಳ್ಳುವನು; ಆತನ ಬಾಣಗಳು ಮಿಂಚಿನ ಹಾಗೆ ಹೊರಡುವವು; ಕರ್ತನಾದ ದೇವರು ತುತೂರಿ ಯನ್ನು ಊದಿ, ದಕ್ಷಿಣದ ಸುಳಿಗಾಳಿಯಲ್ಲಿ ಹೋಗು ವನು. |
15. | ಸೈನ್ಯಗಳ ಕರ್ತನು ಅವರನ್ನು ಕಾಪಾಡುವನು; ಅವರು ನುಂಗಿ ಕವಣೆ ಕಲ್ಲುಗಳನ್ನು ಸ್ವಾಧೀನಮಾಡಿ ಕೊಳ್ಳುವರು; ಕುಡಿದು ದ್ರಾಕ್ಷಾರಸದಿಂದಾದ ಹಾಗೆ ಓಲಾಡುವರು, ಪಾತ್ರೆಯ ಹಾಗೆಯೂ ಬಲಿಪೀಠದ ಮೂಲೆಗಳ ಹಾಗೆಯೂ ತುಂಬಿರುವರು. |
16. | ಇದಲ್ಲದೆ ಅವರ ದೇವರಾದ ಕರ್ತನು ಆ ದಿವಸದಲ್ಲಿ ಅವರನ್ನು ತನ್ನ ಜನರ ಮಂದೆಯ ಹಾಗೆ ರಕ್ಷಿಸುವನು; ಅವರು ಕಿರೀಟದ ಕಲ್ಲುಗಳಂತೆ ಆತನ ದೇಶದ ಮೇಲೆ ಧ್ವಜವಾಗಿ ಎತ್ತಲ್ಪಡುವರು. |
17. | ಆತನ ಒಳ್ಳೇತನವು ಎಷ್ಟೋ ದೊಡ್ಡದು; ಆತನ ಸೌಂದರ್ಯವು ಎಷ್ಟು ಮಹತ್ತಾ ದದ್ದು! ಧಾನ್ಯವು ಯೌವನಸ್ಥರನ್ನೂ ದ್ರಾಕ್ಷಾರಸವು ಯುವತಿಯರನ್ನೂ ಹರ್ಷಗೊಳಿಸುವವು. |
← Zechariah (9/14) → |