← Zechariah (6/14) → |
1. | ನಾನು ತಿರುಗಿಕೊಂಡು ನನ್ನ ಕಣ್ಣುಗಳನ್ನೆತ್ತಿ ನೋಡಿದಾಗ ಇಗೋ, ನಾಲ್ಕು ರಥಗಳು ಎರಡು ಬೆಟ್ಟಗಳ ನಡುವೆಯಿಂದ ಹೊರಟುಬಂದವು; ಆ ಬೆಟ್ಟಗಳು ಹಿತ್ತಾಳೆಯ ಬೆಟ್ಟಗಳಾಗಿದ್ದವು. |
2. | ಮೊದಲನೇ ರಥಕ್ಕೆ ಕೆಂಪು ಕುದುರೆಗಳಿದ್ದವು; ಎರಡನೇ ರಥಕ್ಕೆ ಕಪ್ಪು ಕುದುರೆಗಳು; |
3. | ಮೂರನೇ ರಥಕ್ಕೆ ಬಿಳಿ ಕುದುರೆಗಳು; ನಾಲ್ಕನೇ ರಥಕ್ಕೆ ಕಪಿಲ ವರ್ಣದ ಕುದುರೆಗಳು. |
4. | ಆಗ ನಾನು ಉತ್ತರ ಕೊಟ್ಟು ನನ್ನ ಸಂಗಡ ಮಾತನಾಡಿದ ದೂತನಿಗೆ--ನನ್ನ ಒಡೆಯನೇ, ಇದೇನು ಅಂದೆನು. |
5. | ದೂತನು ನನಗೆ ಉತ್ತರಕೊಟ್ಟು ಹೇಳಿದ್ದೇನಂದರೆ--ಇವು ಆಕಾಶಗಳ ನಾಲ್ಕು ಆತ್ಮಗಳು; ಇವು ಸಮಸ್ತ ಭೂಮಿಯ ಕರ್ತನ ಮುಂದೆ ನಿಂತಲ್ಲಿಂದ ಹೊರಟುಬಂದವೆ. |
6. | ಆ ಕಪ್ಪು ಕುದುರೆಗಳು ಉತ್ತರ ದೇಶಕ್ಕೆ ಹೊರಡುತ್ತವೆ; ಬಿಳಿಯವುಗಳು ಇವುಗಳ ಹಿಂದೆ ಹೊರಡುತ್ತವೆ; ಚುಕ್ಕೆಗಳಿದ್ದವುಗಳು ದಕ್ಷಿಣ ದೇಶಕ್ಕೆ ಹೊರಡುತ್ತವೆ. |
7. | ಕಪಿಲ ವರ್ಣದವುಗಳು ಹೊರಟು ದೇಶದಲ್ಲಿ ಸಂಚಾರ ಮಾಡಹೋಗುವದಕ್ಕೆ ನೋಡಿದವು ಅಂದನು. ಆಗ ಅವನು--ಹೋಗಿ ದೇಶದಲ್ಲಿ ಅತ್ತಿತ್ತ ನಡೆದಾಡುವದಕ್ಕೆ ಇಲ್ಲಿಂದ ಹೋಗಿರಿ ಅಂದನು; ಹಾಗೆ ಅವು ದೇಶದಲ್ಲಿ ಅತ್ತಿತ್ತ ತಿರುಗಾಡಿದವು. |
8. | ಆಗ ಅವನು ನನಗೆ ಕೂಗಿ ಹೇಳಿದ್ದೇನಂ ದರೆ--ನೋಡು, ಉತ್ತರ ದೇಶಕ್ಕೆ ಹೊರಟವುಗಳು ಉತ್ತರ ದೇಶದಲ್ಲಿ ನನ್ನ ಆತ್ಮವನ್ನು ಶಾಂತಿಪಡಿಸಿವೆ ಅಂದನು. |
9. | ಇದಲ್ಲದೆ ಕರ್ತನ ವಾಕ್ಯವು ನನಗೆ ಉಂಟಾಯಿತು. |
10. | ಹೇಗಂದರೆ--ಆ ಸೆರೆಯವರಿಂದ ಅಂದರೆ ಬಾಬೆಲಿ ನಿಂದ ಬಂದಿರುವ ಹೆಲ್ದಾಯನಿಂದಲೂ ತೋಬೀಯ ನಿಂದಲೂ ಯೆದಾಯನಿಂದಲೂ ತಕ್ಕೊಂಡು ಅದೇ ದಿವಸದಲ್ಲಿ ನೀನು ಬಂದು ಚೆಫನ್ಯನ ಮಗನಾದ ಯೋಷೀಯನ ಮನೆಗೆ ಹೋಗಿ |
11. | ಬೆಳ್ಳಿಬಂಗಾರವನ್ನು ತಕ್ಕೊಂಡು ಕಿರೀಟಗಳನ್ನು ಮಾಡಿ ಅವುಗಳನ್ನು ಯೆಹೋಚಾದಾಕನ ಮಗನಾದ ಪ್ರಧಾನ ಯಾಜಕ ನಾದ ಯೆಹೋಶುವನ ತಲೆಯ ಮೇಲೆ ಇಟ್ಟು |
12. | ಅವನಿಗೆ ಹೇಳತಕ್ಕದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಚಿಗುರೆಂದು ಹೆಸರುಳ್ಳ ಮನುಷ್ಯನು, ಅವನು ತನ್ನ ಸ್ಥಳದೊಳಗಿಂದ ಚಿಗುರು ವನು, ಆತನೇ ಕರ್ತನ ದೇವಾಲಯವನ್ನು ಕಟ್ಟುವನು. |
13. | ಹೌದು, ಆತನು ಕರ್ತನ ದೇವಾಲಯವನ್ನು ಕಟ್ಟು ವನು; ಆತನು ಮಹಿಮೆಯನ್ನು ಧರಿಸುವನು; ಕೂತು ಕೊಂಡು ತನ್ನ ಸಿಂಹಾಸನದಲ್ಲಿ ಆಳುವನು, ತನ್ನ ಸಿಂಹಾಸನದಲ್ಲಿ ಯಾಜಕನಾಗಿರುವನು; ಸಮಾಧಾನದ ಆಲೋಚನೆ ಅವರಿಬ್ಬರೊಳಗೆ ಇರುವದು. |
14. | ಆ ಕಿರೀಟಗಳು ಹೇಲೆಮನಿಗೂ ತೋಬೀಯನಿಗೂ ಯೆದಾಯನಿಗೂ ಚೆಫನ್ಯನ ಮಗನಾದ ಹೇನನಿಗೂ ಕರ್ತನ ದೇವಾಲಯದಲ್ಲಿ ಜ್ಞಾಪಕಾರ್ಥವಾಗಿ ಇರು ವವು. |
15. | ದೂರವಾದವರು ಬಂದು ಕರ್ತನ ದೇವಾ ಲಯವನ್ನು ಕಟ್ಟುವರು; ಸೈನ್ಯಗಳ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ತಿಳಿಯುವಿರಿ; ನೀವು ನಿಮ್ಮ ದೇವರಾದ ಕರ್ತನ ಶಬ್ದಕ್ಕೆ ಜಾಗ್ರತೆಯಾಗಿ ಕಿವಿಗೊಟ್ಟರೆ ಇದು ನೆರವೇರುವದು. |
← Zechariah (6/14) → |