← Zechariah (10/14) → |
1. | ಕರ್ತನಿಂದ ಹಿಂಗಾರುಮಳೆಯ ಕಾಲದಲ್ಲಿ ಮಳೆಗಾಗಿ ಬೇಡಿಕೊಳ್ಳಿರಿ. ಹೀಗೆ ಕರ್ತನು ಮಿಂಚುವ ಮೋಡಗಳನ್ನು ಮಾಡಿ ಅವರಿಗೆ ಜಡಿ ಮಳೆಯನ್ನೂ ಒಬ್ಬೊಬ್ಬನಿಗೆ ಹೊಲದಲ್ಲಿ ಹುಲ್ಲನ್ನೂ ಕೊಡುವನು. |
2. | ವಿಗ್ರಹಗಳು ವ್ಯರ್ಥವಾಗಿ ಮಾತ ನಾಡಿವೆ; ಶಕುನಗಾರರು ಸುಳ್ಳನ್ನು ನೋಡಿದ್ದಾರೆ; ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ; ವ್ಯರ್ಥವಾಗಿ ಆದರಿಸುತ್ತಾರೆ; ಆದದರಿಂದ ಮಂದೆಯ ಹಾಗೆ ತಮ್ಮ ದಾರಿಯಲ್ಲಿ ಹೋಗಿದ್ದಾರೆ; ಕುರುಬನಿಲ್ಲದ ಕಾರಣ ಕಳವಳಗೊಂಡಿದ್ದಾರೆ. |
3. | ಕುರುಬರಿಗೆ ವಿರೋಧವಾಗಿ ನನ್ನ ಕೋಪವು ಉರಿಯಿತು; ಮೇಕೆಗಳನ್ನು ದಂಡಿಸಿದೆನು; ಸೈನ್ಯಗಳ ಕರ್ತನು ತನ್ನ ಮಂದೆಯಾಗಿರುವ ಯೆಹೂದನ ಮನೆ ತನದವರನ್ನು ದರ್ಶಿಸಿ ಅವರನ್ನು ಯುದ್ಧದಲ್ಲಿ ತನ್ನ ಘನವಾದ ಕುದುರೆಯ ಹಾಗೆ ಮಾಡಿದ್ದಾನೆ. |
4. | ಆತ ನಿಂದ ಮೂಲೆಗಲ್ಲೂ ಆತನಿಂದ ಮೊಳೆಯೂ ಆತನಿಂದ ಯುದ್ಧದ ಬಿಲ್ಲೂ ಆತನಿಂದ ಹಿಂಸಿಸುವವರೆಲ್ಲರೂ ಕೂಡಿಕೊಂಡು ಹೊರಡುತ್ತಾರೆ. |
5. | ಅವರು ಯುದ್ಧ ದಲ್ಲಿ ಶತ್ರುವನ್ನು ಬೀದಿಗಳ ಕೆಸರಿನಲ್ಲಿ ತುಳಿಯುವ ಶೂರರ ಹಾಗಿರುವರು; ಕರ್ತನು ಅವರ ಸಂಗಡ ಇರುವದರಿಂದ ಯುದ್ಧಮಾಡುವರು; ಕುದುರೆಗಳ ಮೇಲೆ ಸವಾರಿ ಮಾಡುವವರನ್ನು ನಾಚಿಕೆಪಡಿಸುವರು. |
6. | ಇದಲ್ಲದೆ ನಾನು ಯೆಹೂದನ ಮನೆತನದವರನ್ನು ಬಲಪಡಿಸುವೆನು, ಯೋಸೇಫನ ಮನೆತನದವರನ್ನು ರಕ್ಷಿಸುವೆನು; ಅವರನ್ನು ಕನಿಕರಿಸುವದರಿಂದ ತಿರಿಗಿ ತಂದು ನಿವಾಸಿಸ ಮಾಡುವೆನು; ನಾನು ಅವರನ್ನು ತಳ್ಳಿಬಿಡಲಿಲ್ಲವೋ ಎಂಬಂತೆ ಅವರು ಇರುವರು; ನಾನೇ ಅವರ ದೇವರಾದ ಕರ್ತನಾಗಿದ್ದು ಅವರಿಗೆ ಉತ್ತರಕೊಡುವೆನು. |
7. | ಎಫ್ರಾಯಾಮಿನವರು ಶೂರನಂತೆ ಇರುವರು; ಅವರ ಹೃದಯವು ದ್ರಾಕ್ಷಾರಸದಿಂದಾದ ಹಾಗೆ ಸಂತೋಷಪಡುವದು; ಹೌದು, ಅವರ ಮಕ್ಕಳು ನೋಡಿ ಸಂತೋಷಿಸುವರು; ಅವರ ಹೃದಯವು ಕರ್ತ ನಲ್ಲಿ ಉಲ್ಲಾಸಪಡುವದು. |
8. | ನಾನು ಅವರಿಗೆ ಸಿಳ್ಳುಹಾಕಿ ಅವರನ್ನು ಕೂಡಿಸುವೆನು; ಅವರನ್ನು ವಿಮೋಚಿ ಸಿದ್ದೇನೆ; ಅವರು ಹಿಂದೆ ಹೆಚ್ಚಿದ ಹಾಗೆ ಹೆಚ್ಚುವರು. |
9. | ನಾನು ಅವರನ್ನು ಜನಗಳಲ್ಲಿ ಬಿತ್ತುವೆನು; ದೂರ ದೇಶಗಳಲ್ಲಿ ಅವರು ನನ್ನನ್ನು ಜ್ಞಾಪಕಮಾಡುವರು; ತಮ್ಮ ಮಕ್ಕಳ ಸಂಗಡ ಬದುಕಿ ಮತ್ತೆ ತಿರುಗಿಕೊಳ್ಳುವರು. |
10. | ಐಗುಪ್ತದೇಶದೊಳಗಿಂದ ಸಹ ಅವರನ್ನು ತಿರಿಗಿ ತರುವೆನು; ಅಶ್ಯೂರಿನೊಳಗಿಂದ ಅವರನ್ನು ಕೂಡಿಸು ವೆನು; ಗಿಲ್ಯಾದಿನ ಮತ್ತು ಲೆಬನೋನಿನ ದೇಶಕ್ಕೆ ಅವರನ್ನು ತರುವೆನು; ಅವರಿಗೆ ಸ್ಥಳ ಸಾಲದೆ ಇರು ವದು. |
11. | ಅವನು ಸಮುದ್ರವನ್ನು ಬಾಧೆಯಿಂದ ದಾಟುವನು; ಸಮುದ್ರದಲ್ಲಿ ತೆರೆಗಳನ್ನು ಬಡಿಯು ವನು; ನದಿಯ ಅಗಾಧಗಳೆಲ್ಲಾ ಒಣಗುವವು; ಅಶ್ಯೂರಿನ ಗರ್ವವು ತಗ್ಗಿಸಲ್ಪಡುವದು; ಐಗುಪ್ತದ ಮುದ್ರೆಕೋಲು ಹೋಗಿಬಿಡುವದು. |
12. | ಕರ್ತನಲ್ಲಿ ನಾನು ಅವರನ್ನು ಬಲಪಡಿಸುವೆನು; ಆತನ ಹೆಸರಿನಲ್ಲಿ ಅವರು ಮೇಲೆ ಕೆಳಗೆ ನಡೆಯುವರು ಎಂದು ಕರ್ತನು ಅನ್ನುತ್ತಾನೆ. |
← Zechariah (10/14) → |