← SongOfSongs (5/8) → |
1. | ನನ್ನ ತೋಟಕ್ಕೆ ಬಂದೆನು, ನನ್ನ ಸಹೋದರಿಯೇ, ವಧುವೇ; ನನ್ನ ರಕ್ತಬೋಳ ವನ್ನೂ ನನ್ನ ಸುಗಂಧಗಳನ್ನೂ ಕೂಡಿಸಿದ್ದೇನೆ; ನನ್ನ ಜೇನು ಗೂಡನ್ನೂ ಜೇನು ತುಪ್ಪವನ್ನೂ ತಿಂದಿದ್ದೇನೆ; ನನ್ನ ದ್ರಾಕ್ಷಾರಸವನ್ನೂ ನನ್ನ ಹಾಲನ್ನೂ ಕುಡಿದಿದ್ದೇನೆ. ತಿನ್ನಿರಿ, ಓ ಸ್ನೇಹಿತರೇ; ಕುಡಿಯಿರಿ. ಹೌದು, ನನ್ನ ಪ್ರಿಯರೇ, ಸಮೃದ್ಧಿಯಾಗಿ ಕುಡಿಯಿರಿ. |
2. | ನಾನು ನಿದ್ರೆಗೈದರೂ ನನ್ನ ಹೃದಯವು ಎಚ್ಚರ ವಾಗುವದು. ಇದು ತಟ್ಟುವ ನನ್ನ ಪ್ರಿಯನ ಶಬ್ದ; ಅದು--ನನಗೆ ತೆರೆ, ನನ್ನ ಸಹೋದರಿಯೇ, ನನ್ನ ಪ್ರಿಯಳೇ, ನನ್ನ ಪಾರಿವಾಳವೇ, ನಿರ್ಮಲೆಯೇ, ನನ್ನ ತಲೆಯು ಮಂಜಿನಿಂದಲೂ ನನ್ನ ಕೂದಲು ರಾತ್ರಿಯ ಬಿಂದುಗಳಿಂದಲೂ ತೋಯಲ್ಪಟ್ಟಿವೆ ಎಂಬದು. |
3. | ನಾನು ನನ್ನ ಅಂಗಿಯನ್ನು ತೆಗೆದಿದ್ದೇನೆ; ಅದನ್ನು ತೊಟ್ಟುಕೊಳ್ಳುವದು ಹೇಗೆ? ನಾನು ನನ್ನ ಕಾಲು ಗಳನ್ನು ತೊಳಕೊಂಡೆನು; ನಾನು ಅವುಗಳನ್ನು ಮೈಲಿಗೆ ಮಾಡುವದು ಹೇಗೆ? |
4. | ನನ್ನ ಪ್ರಿಯನು ಬಾಗಲ ಸಂದಿನಲ್ಲಿ ತನ್ನ ಕೈಹಾಕಿದನು; ನನ್ನ ಕರುಳುಗಳು ಅವನಿಗಾಗಿ ಮರುಗಿದವು. |
5. | ನಾನು ನನ್ನ ಪ್ರಿಯನಿಗೆ ತೆರೆಯಲು ಎದ್ದಾಗ ಬೀಗದ ಹಿಡಿಗಳ ಮೇಲೆ ನನ್ನ ಕೈಗಳಿಂದ ರಕ್ತಬೋಳವೂ ನನ್ನ ಬೆರಳುಗಳಿಂದ ಸೋರುವ ಬೋಳವೂ ಸುರಿಯಿತು. |
6. | ನಾನು ನನ್ನ ಪ್ರಿಯನಿಗೆ ಕದತೆರೆದೆನು; ಆದರೆ ನನ್ನ ಪ್ರಿಯನು ಹಿಂದಿರುಗಿ ಹೋಗಿದ್ದನು. ಅವನು ಮಾತನಾಡಿದಾಗ ನನ್ನ ಪ್ರಾಣವು ಸತ್ತಂತಿತ್ತು; ಅವನನ್ನು ಹುಡುಕಿದೆನು; ಸಿಕ್ಕದೆ ಹೋದನು; ಅವನನ್ನು ಕರೆದೆನು; ಪ್ರತ್ಯುತ್ತರ ಕೊಡದೆ ಹೋದನು. |
7. | ಪಟ್ಟಣದಲ್ಲಿ ಸಂಚರಿಸುವ ಕಾವಲುಗಾರರು ನನ್ನನ್ನು ಕಂಡು, ನನ್ನನ್ನು ಹೊಡೆದು, ಗಾಯಮಾಡಿದರು; ಗೋಡೆಗಳನ್ನು ಕಾಯುವವರು ನನ್ನ ಮುಸುಕನ್ನು ಕಸಕೊಂಡರು. |
8. | ನಿಮಗೆ ಆಣೆ ಇಡುತ್ತೇನೆ, ಓ ಯೆರೂಸಲೇಮಿನ ಕುಮಾರ್ತೆ ಯರೇ--ನೀವು ನನ್ನ ಪ್ರಿಯನನ್ನು ಕಂಡರೆ ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆಂದು ಅವನಿಗೆ ತಿಳಿಸಿರಿ. |
9. | ಇತರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯ ವೇನು? ಸ್ತ್ರೀಯರಲ್ಲಿ ಅತಿ ಸುಂದರಿಯೇ, ನೀನು ನಮಗೆ ಹೀಗೆ ಆಣೆ ಇಡುವದಕ್ಕೆ ಇತರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯವೇನು? |
10. | ನನ್ನ ಪ್ರಿಯನು ಬಿಳುಪೂ ಕೆಂಪೂ ಉಳ್ಳವನು; ಹತ್ತು ಸಾವಿರ ಜನರಲ್ಲಿ ಮೇಲಾದವನು. |
11. | ಅವನ ತಲೆಯು ಅತಿ ಚೊಕ್ಕ ಬಂಗಾರದ ಹಾಗೆಯೂ ಅವನ ಕೂದಲು ಗುಂಗುರು ಕೂದಲೂ ಕಾಗೆಯ ಹಾಗೆ ಕಪ್ಪಾಗಿಯೂ ಅವೆ. |
12. | ಅವನ ಕಣ್ಣುಗಳು ಯುಕ್ತವಾಗಿ ಇರಿಸಲ್ಪಟ್ಟು ಹಾಲಿನಿಂದ ತೊಳೆಯಲ್ಪಟ್ಟ ಜಲದ ಕಾಲಿವೆಗಳ ಬಳಿಯಲ್ಲಿರುವ ಪಾರಿವಾಳಗಳ ಕಣ್ಣುಗಳ ಹಾಗೆ ಅವೆ. |
13. | ಅವನ ಕೆನ್ನೆಗಳು ಸುಗಂಧಮಡಿಯ ಹಾಗೆಯೂ ಸುವಾಸನೆಯ ಪುಷ್ಪಗಳ ಹಾಗೆಯೂ ಅವೆ. ಅವನ ತುಟಿಗಳು ತಾವರೆಗಳ ಹಾಗೆ ಸೋರುವ ಸುಗಂಧ ರಕ್ತಬೋಳವನ್ನು ಸುರಿಯುತ್ತವೆ. |
14. | ಅವನ ಕೈಗಳು ಬೆರುಲ್ಲಗಳಿಂದ ಜೋಡಿಸಲ್ಪಟ್ಟ ಬಂಗಾರದ ಉಂಗುರಗಳಾಗಿವೆ. ಅವನ ಮೈ ನೀಲಗಳಿಂದ ಖಚಿಸ ಲ್ಪಟ್ಟ ಹೊಳೆಯುವ ದಂತದ ಹಾಗೆ ಅದೆ. |
15. | ಅವನ ಕಾಲುಗಳು ಶುದ್ಧ ಬಂಗಾರದ ಗದ್ದಿಗೆಯ ಮೇಲೆ ಇರಿಸಿದ ಬಿಳೀ ಕಲ್ಲಿನ ಸ್ತಂಭಗಳ ಹಾಗೆ ಅವೆ. ಅವನ ಮುಖವು ಲೆಬನೋನಿನ ಹಾಗೆ ದೇವದಾರುಗಳ ಹಾಗೆ ಶ್ರೇಷ್ಠವಾಗಿದೆ. |
16. | ಯೆರೂಸಲೇಮಿನ ಕುಮಾರ್ತೆ ಯರೇ, ಅವನ ಬಾಯಿ ಬಹು ಮಧುರವಾಗಿದೆ; ಹೌದು, ಅವನು ಸರ್ವಾಂಗ ಸುಂದರನು. ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು. |
← SongOfSongs (5/8) → |