← SongOfSongs (2/8) → |
1. | ಶಾರೋನಿನ ಗುಲಾಬಿ ಹೂವೂ, ತಗ್ಗುಗಳ ತಾವರೆಯೂ ನಾನೇ. |
2. | ಮುಳ್ಳುಗಳಲ್ಲಿ ತಾವರೆಯು ಹೇಗೋ ನನ್ನ ಪ್ರಿಯಳು ಕುಮಾರ್ತೆ ಗಳಲ್ಲಿ ಹಾಗೆಯೇ ಇದ್ದಾಳೆ. |
3. | ಅಡವಿಯ ಗಿಡಗಳಲ್ಲಿ ಸೇಬು ಮರ ಹೇಗೋ ಕುಮಾರರಲ್ಲಿ ನನ್ನ ಪ್ರಿಯನು ಹಾಗೆಯೇ. ನಾನು ಅವನ ನೆರಳಿನಲ್ಲಿ ಬಹು ಆನಂದವಾಗಿ ಕುಳಿತು ಕೊಂಡೆನು; ಅವನ ಫಲವು ನನ್ನ ರುಚಿಗೆ ಮಧುರ ವಾಗಿತ್ತು. |
4. | ಔತಣದ ಮನೆಗೆ ನನ್ನನ್ನು ಕರಕೊಂಡು ಬಂದನು; ನನ್ನ ಮೇಲೆ ಅವನ ಧ್ವಜ ಪ್ರೀತಿಯೇ. |
5. | ದ್ರಾಕ್ಷೆಯ ಉಂಡಿಗಳಿಂದ ನನ್ನನ್ನು ಹಿಡಿದಿರು; ಸೇಬು ಹಣ್ಣುಗಳಿಂದ ನನ್ನನ್ನು ಆದರಿಸು; ಪ್ರೀತಿಯ ದೆಸೆಯಿಂದ ಅಸ್ವಸ್ಥಳಾಗಿದ್ದೇನೆ. |
6. | ಅವನ ಎಡಗೈ ನನ್ನ ತಲೆಯ ಕೆಳಗದೆ; ಅವನ ಬಲಗೈ ನನ್ನನ್ನು ಅಪ್ಪಿ ಕೊಳ್ಳುತ್ತದೆ. |
7. | ಓ ಯೆರೂಸಲೇಮಿನ ಕುಮಾರ್ತೆಯರೇ, ನನ್ನ ಪ್ರಿಯನು ಮೆಚ್ಚುವ ವರೆಗೆ ನೀವು ಎಬ್ಬಿಸಬೇಡಿರಿ, ಇಲ್ಲವೆ ನನ್ನ ಪ್ರಿಯನನ್ನು ಎಚ್ಚರಿಸಬೇಡಿರಿ ಎಂದು ದುಪ್ಪಿಗಳಿಂದಲೂ ಅಡವಿಯ ಜಿಂಕೆಗಳಿಂದಲೂ ನಿಮಗೆ ಆಜ್ಞಾಪಿಸುತ್ತೇನೆ. |
8. | ನನ್ನ ಪ್ರಿಯನ ಸ್ವರವು! ಇಗೋ, ಅವನು ಪರ್ವತಗಳ ಮೇಲೆ ಹಾರುತ್ತಾ ಗುಡ್ಡಗಳ ಮೇಲೆ ನೆಗೆಯುತ್ತಾ ಬರುತ್ತಾನೆ. |
9. | ನನ್ನ ಪ್ರಿಯನು ಜಿಂಕೆಯ ಹಾಗೆ ಇಲ್ಲವೆ ದುಪ್ಪಿಯ ಮರಿಯ ಹಾಗೆ ಇದ್ದಾನೆ. ಇಗೋ, ಅವನು ನಮ್ಮ ಗೋಡೆಯ ಹಿಂದೆ ನಿಂತು ಜಲಾಂತರಗಳಿಂದ ತನ್ನನ್ನು ತೋರಿಸಿ ಕಿಟಕಿಗಳಿಂದ ನೋಡುತ್ತಾನೆ. |
10. | ನನ್ನ ಪ್ರಿಯನು ಮಾತಾಡಿ--ಏಳು, ನನ್ನ ಪ್ರಿಯಳೇ, ನನ್ನ ಸುಂದರಿಯೇ, ಹೊರಟು ಬಾ. |
11. | ಇಗೋ, ಚಳಿ ಗಾಲವು ಗತಿಸಿತು; ಮಳೆಯು ನಿಂತುಹೋಯಿತು; |
12. | ಪುಷ್ಪಗಳು ಭೂಮಿಯ ಮೇಲೆ ಕಾಣಿಸುತ್ತವೆ; ಪಕ್ಷಿಗಳು ಹಾಡುವ ಕಾಲ ಬಂತು; ಬೆಳವಕ್ಕಿಯ ಸ್ವರವು ನಮ್ಮ ದೇಶದಲ್ಲಿ ಕೇಳಲ್ಪಡುತ್ತದೆ. |
13. | ಅಂಜೂರದ ಗಿಡವು ಅದರ ಹೀಚುಗಳನ್ನು ಬಿಡುತ್ತದೆ. ದ್ರಾಕ್ಷೇ ಬಳ್ಳಿಗಳ ಹೂವು ಅದರ ಸುವಾಸನೆಯನ್ನು ಕೊಡು ತ್ತದೆ. ಏಳು, ನನ್ನ ಪ್ರಿಯಳೇ, ನನ್ನ ಸುಂದರಿಯೇ, ಹೊರಟು ಬಾ ಎಂಬದು. |
14. | ಗುಪ್ತವಾದ ಹಂತಗ ಳಲ್ಲಿಯೂ ಕಲ್ಲು ಸಂದುಗಳ ಮರೆಯಲ್ಲಿಯೂ ಇರುವ ಓ ನನ್ನ ಪಾರಿವಾಳವೇ, ನಿನ್ನ ಮುಖವನ್ನು ನನಗೆ ತೋರ ಮಾಡು. ನಿನ್ನ ಸ್ವರವನ್ನು ಕೇಳಿಸು. ನಿನ್ನ ಸ್ವರವು ರಮ್ಯವಾಗಿಯೂ ನಿನ್ನ ಮುಖವು ಸೌಂದರ್ಯ ವಾಗಿಯೂ ಅದೆ. |
15. | ನರಿಗಳನ್ನೂ ದ್ರಾಕ್ಷೇ ಗಿಡಗಳನ್ನು ಕೆಡಿಸುವ ಚಿಕ್ಕ ನರಿಗಳನ್ನೂ ನಮಗಾಗಿ ಹಿಡಿಯಿರಿ; ನಮ್ಮ ದ್ರಾಕ್ಷೇಗಿಡಗಳಲ್ಲಿ ಎಳೆಗಾಯಿಗಳಾಗಿವೆ. |
16. | ನನ್ನ ಪ್ರಿಯನು ನನ್ನವನು, ನಾನು ಅವನವಳು.ಅವನು ತಾವರೆ ಹೂವುಗಳ ಮಧ್ಯದಲ್ಲಿ ಮೇಯಿಸು ತ್ತಾನೆ. |
17. | ನನ್ನ ಪ್ರಿಯನೇ, ತಿರುಗಿಕೊಂಡು ಬೆಳಗಾಗು ವವರೆಗೂ ನೆರಳುಗಳು ಓಡಿಹೋಗುವ ವರೆಗೂ, ಬತೇರ್ ಪರ್ವತಗಳ ಮೇಲಿರುವ ಜಿಂಕೆಯ ಹಾಗೆ ಇಲ್ಲವೆ ದುಪ್ಪಿಯ ಮರಿಯ ಹಾಗೆ ಇರು. |
← SongOfSongs (2/8) → |