← Romans (4/16) → |
1. | ಹಾಗಾದರೆ ನಮ್ಮ ಮೂಲಪಿತೃವಾಗಿರುವ ಅಬ್ರಹಾಮನು ಶರೀರಸಂಬಂಧವಾಗಿ ಏನು ಪಡೆದುಕೊಂಡನೆಂದು ಹೇಳಬೇಕು? |
2. | ಅಬ್ರಹಾ ಮನು ಕ್ರಿಯೆಗಳಿಂದಲೇ ನೀತಿವಂತನಾದ ಪಕ್ಷದಲ್ಲಿ ಹೊಗಳಿಕೊಳ್ಳುವದಕ್ಕೆ ಅವನಿಗೆ ಅಸ್ಪದವಿರುವದು; ಆದರೆ ದೇವರ ಮುಂದೆ ಹೊಗಳಿಕೊಳ್ಳುವದಕ್ಕೆ ಆಸ್ಪದವಿರುವದಿಲ್ಲ. |
3. | ಹಾಗಾದರೆ ಬರಹವು ಹೇಳುವ ದೇನು? ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲ್ಪಟ್ಟಿತು. |
4. | ಕೆಲಸ ಮಾಡಿದವನಿಗೆ ಬರುವ ಸಂಬಳವು ಕೃಪೆಯಿಂದ ದೊರಕುವಂಥದ್ದೆಂದು ಎಣಿಕೆ ಯಾಗುವದಿಲ್ಲ; ಅದು ಸಲ್ಲತಕ್ಕದ್ದೇ. |
5. | ಆದರೆ ಯಾವನು ಪುಣ್ಯಕ್ರಿಯೆಗಳನ್ನು ಮಾಡಿದವನಾಗಿರದೆ ಭಕ್ತಿಹೀನರನ್ನು ನೀತಿವಂತರೆಂದು ನಿರ್ಣಯಿಸುವಾತನಲ್ಲಿ ನಂಬಿಕೆ ಯಿಡುತ್ತಾನೋ ಅವನ ನಂಬಿಕೆಯೇ ನೀತಿ ಎಂದು ಎಣಿಸಲ್ಪಡುವದು. |
6. | ದೇವರು ಯಾವನನ್ನು ಕ್ರಿಯೆ ಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾನೋ ಅವನು ಧನ್ಯನೆಂದು ದಾವೀದನು ಸಹ ಹೇಳುತ್ತಾನೆ. |
7. | ಹೇಗಂ ದರೆ--ಯಾರ ಅಪರಾಧಗಳು ಕ್ಷಮಿಸಲ್ಪಟ್ಟಿವೆಯೋ ಯಾರ ಪಾಪಗಳು ಮುಚ್ಚಿವೆಯೋ ಅವರೇ ಧನ್ಯರು; |
8. | ಕರ್ತನು ಯಾವನ ಪಾಪವನ್ನು ಲೆಕ್ಕಕ್ಕೆ ತರುವ ದಿಲ್ಲವೋ ಆ ಮನುಷ್ಯನೇ ಧನ್ಯನು ಎಂಬದು. |
9. | ಈ ಧನ್ಯತೆಯು ಸುನ್ನತಿಯಿದ್ದವರಿಗೆ ಮಾತ್ರವೋ? ಇಲ್ಲವೆ ಸುನ್ನತಿಯಿಲ್ಲದವರಿಗೂ ಆಗುತ್ತದೋ? ಯಾಕಂದರೆ ಅಬ್ರಹಾಮನ ಲೆಕ್ಕಕ್ಕೆ ಅವನ ನಂಬಿಕೆಯೇ ನೀತಿಯೆಂದು ಎಣಿಸಲ್ಪಟ್ಟಿತೆಂಬದಾಗಿ ನಾವು ಹೇಳುತ್ತೇವಲ್ಲಾ. |
10. | ಹಾಗಾದರೆ ಅದು ಯಾವಾಗ ಎಣಿಸಲ್ಪಟ್ಟಿತು? ಅವನಿಗೆ ಸುನ್ನತಿಯಾದ ಮೇಲೆಯೋ? ಸುನ್ನತಿಯಾಗು ವದಕ್ಕೆ ಮೊದಲೋ? ಸುನ್ನತಿಯಾದ ಮೇಲೆ ಅಲ್ಲ, ಸುನ್ನತಿಯಾಗುವದಕ್ಕೆ ಮೊದಲೇ ಎಣಿಸಲ್ಪಟ್ಟಿತು. |
11. | ಆಮೇಲೆ ನೀತಿಗೆ ಮುದ್ರೆಯಾಗಿ ಸುನ್ನತಿಯನ್ನು ಗುರುತಾಗಿ ಹೊಂದಿದನು. ಇದು ಸುನ್ನತಿಯಾಗುವದಕ್ಕೆ ಮೊದಲೇ ಅವನಿಗಿದ್ದ ನಂಬಿಕೆಯಿಂದಾಯಿತು. ಹೀಗೆ ಅವನು ನಂಬುವವರೆಲ್ಲರಿಗೆ ಅಂದರೆ ಅವರು ಸುನ್ನತಿ ಯಿಲ್ಲದವರಾದಾಗ್ಯೂ ಅವರಿಗೆ ತಂದೆಯಾದನು; ಹೀಗೆ ಅವರೂ ನೀತಿವಂತರೆಂದು ಎಣಿಸಲ್ಪಡುವರು. |
12. | ಇದಲ್ಲದೆ ಸುನ್ನತಿಯಿದ್ದವರಿಗೆ ತಂದೆಯಾದವನು ಸುನ್ನತಿಯವರಿಗೆ ಮಾತ್ರವಲ್ಲ, ಆದರೆ ಅಬ್ರಹಾಮನು ಸುನ್ನತಿ ಮಾಡಿಸಿಕೊಳ್ಳುವದಕ್ಕೆ ಮುಂಚೆ ನಡೆದ ನಂಬಿಕೆಯ ಹೆಜ್ಜೆಜಾಡಿನಲ್ಲಿ ನಡೆಯುತ್ತಿರುವ ಸುನ್ನತಿ ಯಿಲ್ಲದವರಿಗೂ ತಂದೆಯಾಗಿದ್ದಾನೆ. |
13. | ಅವನು ಲೋಕಕ್ಕೆ ಬಾಧ್ಯನಾಗುವನೆಂಬ ವಾಗ್ದಾ ನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿ ಗಾಗಲಿ ನ್ಯಾಯಪ್ರಮಾಣದಿಂದ ಆದದ್ದಲ್ಲ, ನಂಬಿಕೆ ಯಿಂದಾದ ನೀತಿಯಿಂದಲೇ ಆದದ್ದು. |
14. | ನ್ಯಾಯ ಪ್ರಮಾಣವನ್ನನುಸರಿಸುವವರು ಬಾಧ್ಯರಾಗಿದ್ದರೆ ನಂಬಿ ಕೆಯು ವ್ಯರ್ಥವಾಯಿತು, ವಾಗ್ದಾನವೂ ನಿರರ್ಥಕ ವಾಯಿತು. |
15. | ನ್ಯಾಯಪ್ರಮಾಣವು ದೇವರ ಕೋಪಕ್ಕೆ ಗುರಿಮಾಡುವಂಥದ್ದು. ನ್ಯಾಯಪ್ರಮಾಣವಿಲ್ಲದ ಪಕ್ಷ ದಲ್ಲಿ ಆಜ್ಞಾತಿಕ್ರಮಣವೂ ಇಲ್ಲ; |
16. | ಆದಕಾರಣ ಕೃಪೆ ಯಿಂದಲೇ ದೊರೆಯುವ ಆ ಬಾಧ್ಯತೆಯು ನಂಬಿಕೆಯ ಮುಖಾಂತರ ಸಿಕ್ಕುತ್ತದೆ. ಹೀಗೆ ಆ ವಾಗ್ದಾನವು ಅಬ್ರಹಾ ಮನ ಸಂತತಿಯವರೆಲ್ಲರಿಗೂ ಅಂದರೆ ನ್ಯಾಯ ಪ್ರಮಾಣವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರ ವಲ್ಲದೆ ನಮ್ಮೆಲ್ಲರಿಗೆ ತಂದೆಯಾಗಿರುವ ಅಬ್ರಹಾಮ ನಲ್ಲಿದ್ದಂಥ ನಂಬಿಕೆ |
17. | (ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆ ಯಾಗಿ ನೇಮಿಸಿದ್ದೇನೆ ಎಂದು ಬರೆದಿರುವ ಪ್ರಕಾರ) ದೇವರು ಸತ್ತವರನ್ನು ಬದುಕಿಸುವವನಾಗಿಯೂ ಇಲ್ಲ ದ್ದನ್ನು ಇರುವದಾಗಿ ಕರೆಯುವವನಾಗಿಯೂ ಆಗಿದ್ದಾ ನೆಂದು ದೇವರ ಮುಂದೆ ಅಬ್ರಹಾಮನು ನಂಬಿದನು. |
18. | ಅವನು ತಾನು ಅನೇಕ ಜನಾಂಗಗಳಿಗೆ ತಂದೆಯಾಗಿ ರುವನೆಂಬ ನಿರೀಕ್ಷೆಗೆ ಆಸ್ಪದವಿಲ್ಲದಿರುವಾಗಲೂ--ನಿನ್ನ ಸಂತಾನವು ಹೀಗಾಗುವದು ಎಂದು ಹೇಳಲ್ಪಟ್ಟಂತೆ ನಿರೀಕ್ಷಿಸಿ ನಂಬಿದನು. |
19. | ಅವನು ಹೆಚ್ಚು ಕಡಿಮೆ ನೂರುವರುಷದವನಾಗಿದ್ದು ತನ್ನ ದೇಹವು ಆಗಲೇ ಮೃತಪ್ರಾಯವಾಯಿತೆಂದೂ ಸಾರಳಿಗೆ ಗರ್ಭಕಾಲ ಕಳೆದುಹೋಯಿತೆಂದೂ ಯೋಚಿಸಿದನು; ಆದಾಗ್ಯೂ ಅವನು ಅಪನಂಬಿಕೆಯಿಂದ ಚಂಚಲನಾಗಲಿಲ್ಲ. |
20. | ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ; ಆದರೆ ದೇವರನ್ನು ಘನಪಡಿಸುವವನಾಗಿ ದೃಢನಂಬಿಕೆಯುಳ್ಳ ವನಾದನು. |
21. | ಆತನು ತನ್ನ ವಾಗ್ದಾನವನ್ನು ನೆರವೇರಿ ಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟನು. |
22. | ಆದದರಿಂದ ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಯೆಂದು ಎಣಿಸಲ್ಪಟ್ಟಿತು. |
23. | ಆದರೆ ಅದು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟದ್ದು ಅವನಿಗೋಸ್ಕರ ಮಾತ್ರವಲ್ಲದೆ |
24. | ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನನ್ನು ನಂಬುವ ನಾವು ನಂಬಿಕೆಯಿಂದ ನೀತಿವಂತರೆಂದು ಎಣಿಸಲ್ಪಡುವಂತೆ ನಮಗೋಸ್ಕರವೂ ಬರೆಯಲ್ಪಟ್ಟಿದೆ. |
25. | ನಮ್ಮ ಅಪ ರಾಧಗಳ ನಿಮಿತ್ತ ದೇವರು ಆತನನ್ನು ಮರಣಕ್ಕೆ ಒಪ್ಪಿಸಿಕೊಟ್ಟು ನಮಗೆ ನೀತಿವಂತರೆಂಬ ನಿರ್ಣಯವು ಉಂಟಾಗುವ ಹಾಗೆ ಆತನನ್ನು ಜೀವದಿಂದ ಎಬ್ಬಿಸಿದನು. |
← Romans (4/16) → |