Romans (1/16) → |
1. | ಪೌಲನೆಂಬ ನಾನು ಯೇಸು ಕ್ರಿಸ್ತನ ದಾಸನೂ ಅಪೊಸ್ತಲನಾಗಿರುವದಕ್ಕೆ ಕರೆ ಯಲ್ಪಟ್ಟು ದೇವರ ಸುವಾರ್ತೆಗೋಸ್ಕರ ಪ್ರತ್ಯೇಕಿಸ ಲ್ಪಟ್ಟವನೂ ಆಗಿದ್ದೇನೆ. |
2. | (ಆ ಸುವಾರ್ತೆಯನ್ನು ಆತನು ಮುಂಚಿತವಾಗಿ ಪರಿಶುದ್ಧ ಬರಹಗಳಲ್ಲಿ ತನ್ನ ಪ್ರವಾದಿ ಗಳ ಮುಖಾಂತರ ವಾಗ್ದಾನ ಮಾಡಿದ್ದನು). |
3. | ಅದು ಯಾವದೆಂದರೆ, ಆತನು ಶಾರೀರಕವಾಗಿ ದಾವೀದನ ಸಂತಾನದಲ್ಲಿ ಹುಟ್ಟಿದಾತನೂ ನಮ್ಮ ಕರ್ತನೂ ಆಗಿರುವ ದೇವರಕುಮಾರನಾದ ಯೇಸು ಕ್ರಿಸ್ತನ ವಿಷಯವಾ ದದ್ದೇ; |
4. | ಪರಿಶುದ್ಧ ಆತ್ಮಕ್ಕನು ಸಾರವಾಗಿ ಸತ್ತವರೊಳ ಗಿಂದ ಪುನರುತ್ಥಾನ ಹೊಂದುವದರ ಮೂಲಕ ಆತನು ದೇವಕುಮಾರನೆಂದು ಬಲದೊಂದಿಗೆ ಪ್ರಕಟಿಸಲ್ಪ ಟ್ಟನು; |
5. | ಆತನ ಹೆಸರಿಗಾಗಿ ಎಲ್ಲಾ ಜನಾಂಗಗಳವರು ನಂಬಿಕೆಗೆ ವಿಧೇಯರಾಗುವಂತೆ ಆತನಿಂದ ನಾವು ಕೃಪೆಯನ್ನೂ ಅಪೊಸ್ತಲತನವನ್ನೂ ಹೊಂದಿದ್ದೇವೆ. |
6. | ಅವರೊಳಗೆ ನೀವು ಸಹ ಯೇಸು ಕ್ರಿಸ್ತನವರಾಗಿರುವ ದಕ್ಕಾಗಿ ಕರೆಯಲ್ಪಟ್ಟಿದ್ದೀರಿ. |
7. | ಇದಲ್ಲದೆ ದೇವರಿಗೆ ಪ್ರಿಯ ರಾಗಿದ್ದು ಪರಿಶುದ್ಧರಾಗುವದಕ್ಕೆ ಕರೆಯಲ್ಪಟ್ಟ ರೋಮ್ ನಲ್ಲಿರುವವರೆಲ್ಲರಿಗೆ ನಮ್ಮ ತಂದೆಯಾದ ದೇವ ರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಸಮಾಧಾನವೂ ಉಂಟಾಗಲಿ. |
8. | ಮೊದಲನೆಯದಾಗಿ ನಿಮ್ಮ ನಂಬಿಕೆಯು ಲೋಕ ದಲ್ಲೆಲ್ಲಾ ಪ್ರಸಿದ್ಧವಾದದರಿಂದ ನಿಮ್ಮೆಲ್ಲರ ವಿಷಯವಾಗಿ ಯೇಸು ಕ್ರಿಸ್ತನ ಮುಖಾಂತರ ನಾನು ನನ್ನ ದೇವರಿಗೆ ಸ್ತೋತ್ರಸಲ್ಲಿಸುತ್ತೇನೆ. |
9. | ನಾನು ಯಾವಾಗಲೂ ಪ್ರಾರ್ಥನೆಗಳಲ್ಲಿ ಎಡೆಬಿಡದೆ ನಿಮ್ಮನ್ನು ಜ್ಞಾಪಕ ಮಾಡಿ ಕೊಳ್ಳುತ್ತೇನೆ. ನಾನು ಯಾವಾತನ ಮಗನ ಸುವಾರ್ತೆ ಯಲ್ಲಿ ನನ್ನ ಆತ್ಮದೊಂದಿಗೆ ಸೇವಿಸುತ್ತೇನೋ ಆ ದೇವರೇ ಇದಕ್ಕೆ ನನ್ನ ಸಾಕ್ಷಿ. |
10. | ಕೊನೆಯದಾಗಿ ನಾನು ನಿಮ್ಮ ಬಳಿಗೆ ಹೇಗಾದರೂ ಬರುವದಕ್ಕೆ ದೇವರ ಚಿತ್ತದಿಂದ ನನ್ನ ಪ್ರಯಾಣವು ಸಫಲವಾಗುವಂತೆ ಬೇಡಿಕೊಳ್ಳುತ್ತೇನೆ. |
11. | ನೀವು ಸ್ಥಿರಗೊಳ್ಳುವಂತೆ ನನ್ನ ಮುಖಾಂತರ ನಿಮಗೆ ಯಾವದಾದರೂ ಆತ್ಮೀಕದಾನ ದೊರೆಯಲಿ ಎಂದು ನಾನು ನಿಮ್ಮನ್ನು ನೋಡಲು ಹಂಬಲಿಸುತ್ತೇನೆ. |
12. | ಹೀಗೆ ಪರಸ್ಪರ ನಂಬಿಕೆಯ ಮೂಲಕ ನಾನು ನಿಮ್ಮೊಂ ದಿಗೆ ಆದರಿಸಲ್ಪಡುವೆನು. |
13. | ಇದಲ್ಲದೆ ಸಹೋದರರೇ, ಬೇರೆ ಅನ್ಯಜನಗಳಲ್ಲಿ ಫಲವುಂಟಾ ದಂತೆ ನಿಮ್ಮಲ್ಲಿಯೂ ನನಗೆ ಯಾವದಾದರೂ ಫಲ ದೊರೆಯಲೆಂದು ನಿಮ್ಮ ಬಳಿಗೆ ಬರುವದಕ್ಕೆ ನಾನು ಅನೇಕಸಾರಿ ಉದ್ದೇಶಿಸಿ ದಾಗ್ಯೂ ಈ ವರೆಗೆ ಅಡ್ಡಿಯಾಯಿತೆಂದು ನೀವು ತಿಳಿದಿರಬೇಕೆಂದು ನಾನು ಆಶಿಸುತ್ತೇನೆ. |
14. | ನಾನು ಗ್ರೀಕರಿಗೂ ಅನ್ಯಜನರಿಗೂ ಜ್ಞಾನಿಗಳಿಗೂ ಅಜ್ಞಾನಿ ಗಳಿಗೂ ಋಣಸ್ಥನಾಗಿದ್ದೇನೆ. |
15. | ಹೀಗೆ ನಾನಾದರೋ ರೋಮ್‌ನಲ್ಲಿರುವ ನಿಮಗೂ ಸುವಾರ್ತೆಯನ್ನು ಸಾರಲು ಸಿದ್ಧನಾಗಿದ್ದೇನೆ. |
16. | ಕ್ರಿಸ್ತನ ಸುವಾರ್ತೆಯ ವಿಷಯದಲ್ಲಿ ನಾನು ನಾಚಿಕೆಪಡುವದಿಲ್ಲ; ಅದು ಮೊದಲು ಯೆಹೂದ್ಯ ರಿಗೂ ತರುವಾಯ ಗ್ರೀಕರಿಗೂ ಅಂತೂ ನಂಬುವ ಪ್ರತಿಯೊಬ್ಬನಿಗೂ ರಕ್ಷಣೆಗಾಗಿ ದೇವರ ಶಕ್ತಿಯಾಗಿದೆ. |
17. | ನೀತಿವಂತನು ನಂಬಿಕೆಯಿಂದಲೇ ಜೀವಿಸುವನು ಎಂದು ಬರೆಯಲ್ಪಟ್ಟಂತೆ ದೇವರ ನೀತಿಯು ಅದರಲ್ಲಿ ವಿಶ್ವಾಸದಿಂದ ವಿಶ್ವಾಸಕ್ಕೆ ಪ್ರಕಟವಾಯಿತು. |
18. | ಸತ್ಯವನ್ನು ಅನೀತಿಯಲ್ಲಿ ತಡೆಹಿಡಿದ ಮನುಷ್ಯರ ಎಲ್ಲಾ ಭಕ್ತಿಹೀನತೆಗೆ ಮತ್ತು ಅನೀತಿಗೆ ವಿರೋಧ ವಾಗಿ ದೇವರ ಕೋಪವು ಪರಲೋಕದಿಂದ ತೋರಿ ಬರುತ್ತದೆ. |
19. | ದೇವರ ವಿಷಯವಾಗಿ ತಿಳಿಯಬಹು ದಾದದ್ದು ಅವರಲ್ಲಿ ಪ್ರಕಟವಾಗಿದೆ; ದೇವರೇ ಅದನ್ನು ಅವರಿಗೆ ತಿಳಿಯಪಡಿಸಿದ್ದಾನೆ. |
20. | ಹೇಗೆಂದರೆ ಜಗದು ತ್ಪತ್ತಿಗೆ ಮೊದಲುಗೊಂಡು ಆತನ ಅದೃಶ್ಯವಾದವುಗಳು ಅಂದರೆ ಆತನ ನಿತ್ಯ ಶಕ್ತಿಯೂ ದೈವತ್ವವೂ ಸೃಷ್ಟಿಗಳನ್ನು ಗ್ರಹಿಸುವದರ ಮೂಲಕ ಸ್ಪಷ್ಟವಾಗಿ ಕಾಣಬರುತ್ತವೆ.ಆದಕಾರಣ ಅವರು ನೆವವಿಲ್ಲದವರಾಗಿದ್ದಾರೆ. |
21. | ಅವರು ದೇವರನ್ನು ಅರಿತಾಗ ಆತನನ್ನು ದೇವರೆಂದು ಮಹಿಮೆಪಡಿಸಲಿಲ್ಲ, ಕೃತಜ್ಞತೆಯುಳ್ಳವರಾಗಿಯೂ ಇರಲಿಲ್ಲ; ಅವರು ತಮ್ಮ ಕಲ್ಪನೆಗಳಲ್ಲಿ ವಿಫಲರಾದರು ಮತ್ತು ಮೂರ್ಖತನದ ಅವರ ಹೃದಯವು ಕತ್ತಲಾ ಯಿತು. |
22. | ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚ ರಾದರು; |
23. | ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಕ್ಷಿ, ಪಶುಗಳ ಮತ್ತು ಹರಿದಾಡುವವುಗಳ ಪ್ರತಿಮೆಗೆ ಮಾರ್ಪಡಿಸಿದರು. |
24. | ಆದಕಾರಣ ತಮ್ಮ ಹೃದಯಗಳ ದುರಾಶೆಗಳ ಮೂಲಕ ತಮ್ಮ ಸ್ವಂತ ದೇಹಗಳನ್ನು ತಮ್ಮೊಳಗೆ ಅವ ಮಾನಪಡಿಸಿಕೊಳ್ಳುವಂತೆ ದೇವರು ಅವರನ್ನು ಅಶುದ್ಧ ತನಕ್ಕೆ ಒಪ್ಪಿಸಿದನು; |
25. | ಅವರು ದೇವರ ವಿಷಯವಾದ ಸತ್ಯವನ್ನು ಸುಳ್ಳಿಗೆ ಬದಲಾಯಿಸಿ ಸೃಷ್ಟಿಕರ್ತನಿಗಿಂತ ಹೆಚ್ಚಾಗಿ ಸೃಷ್ಟಿಯನ್ನೇ ಆರಾಧಿಸಿ ಸೇವಿಸಿದರು; ಆತನು (ಸೃಷ್ಟಿಕರ್ತನು) ಎಂದೆಂದಿಗೂ ಸ್ತುತಿ ಹೊಂದತಕ್ಕವನು. ಆಮೆನ್. |
26. | ಈ ಕಾರಣದಿಂದ ದೇವರು ಅವರನ್ನು ತುಚ್ಛ ವಾದ ಮನೋಭಾವಗಳಿಗೆ ಒಪ್ಪಿಸಿಬಿಟ್ಟನು. ಹೇಗೆಂದರೆ ಅವರ ಹೆಂಗಸರು ಸಹ ಸ್ವಾಭಾವಿಕವಾದ ಭೋಗ ವನ್ನು ಸ್ವಭಾವ ವಿರುದ್ಧವಾದ ಭೋಗಕ್ಕೆ ಮಾರ್ಪಡಿ ಸಿದರು. |
27. | ಅದರಂತೆ ಗಂಡಸರೂ ಸ್ವಾಭಾವಿಕ ಸ್ತ್ರೀ ಭೋಗವನ್ನು ಬಿಟ್ಟು ಒಬ್ಬರಮೇಲೊಬ್ಬರು ತಮ್ಮ ಕಾಮಾತುರದಿಂದ ತಾಪಪಡುತ್ತಾ ಗಂಡಸರ ಸಂಗಡ ಗಂಡಸರು ಅಯೋಗ್ಯವಾದದ್ದನ್ನು ಮಾಡುತ್ತಾ ತಮ್ಮ ತಪ್ಪಿಗೆ ತಕ್ಕ ಪ್ರತಿಫಲವನ್ನು ತಮ್ಮಲ್ಲಿ ಹೊಂದಿದರು. |
28. | ಇದಲ್ಲದೆ ಅವರು ತಮ್ಮ ತಿಳುವಳಿಕೆಯಿಂದ ದೇವರನ್ನು ಸ್ಮರಿಸುವದಕ್ಕೆ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಮಾಡಬಾರದವುಗಳನ್ನು ಮಾಡು ವಂತೆ ಅನಿಷ್ಟಭಾವಕ್ಕೆ ಒಪ್ಪಿಸಿದನು. |
29. | ಹೀಗೆ ಅವರು ಸಕಲ ಅನೀತಿಯಿಂದಲೂ ಜಾರತ್ವ ದುರ್ಮಾರ್ಗತನ ದುರಾಶೆ ದುಷ್ಟತ್ವ ಇವುಗಳಿಂದಲೂ ತುಂಬಿದವರಾಗಿ ಹೊಟ್ಟೇಕಿಚ್ಚು ಕೊಲೆ ವಿವಾದ ಮೋಸ ತುಂಬಿದವರೂ ಅತಿಉಗ್ರತೆಯಿಂದ ತುಂಬಿದವರೂ ಪಿಸುಗುಟ್ಟುವ ವರೂ |
30. | ಚಾಡಿಹೇಳುವವರೂ ದೇವರನ್ನು ಹಗೆ ಮಾಡುವವರೂ ಧಿಕ್ಕರಿಸುವವರೂ ಅಹಂಕಾರಿಗಳೂ ಉಬ್ಬಿಕೊಳ್ಳುವವರೂ ಕೆಟ್ಟವುಗಳನ್ನು ಕಲ್ಪಿಸುವವರೂ ತಂದೆತಾಯಿಗಳಿಗೆ ಅವಿಧೇಯರೂ |
31. | ತಿಳುವಳಿಕೆಯಿಲ್ಲ ದವರೂ ಪ್ರಮಾಣಕ್ಕೆ ತಪ್ಪುವವರೂ ಸ್ವಾಭಾವಿಕವಾದ ಮಮತೆಯಿಲ್ಲದವರೂ ಸಮಾಧಾನವಾಗದವರೂ ಕರುಣೆಯಿಲ್ಲದವರೂ ಆದರು. |
32. | ಇಂಥವುಗಳನ್ನು ಮಾಡುವವರು ಮರಣಕ್ಕೆ ಯೋಗ್ಯರೆಂಬ ದೇವರ ನ್ಯಾಯತೀರ್ಪನ್ನು ಅವರು ತಿಳಿದವರಾಗಿದ್ದರೂ ಅವು ಗಳನ್ನು ಮಾಡುವದಲ್ಲದೆ ಅಂಥವುಗಳನ್ನು ಮಾಡುವವ ರಲ್ಲಿ ಸಂತೋಷಪಡುತ್ತಾರೆ. |
Romans (1/16) → |