← Psalms (83/150) → |
1. | ಓ ದೇವರೇ, ಮೌನವಾಗಿರಬೇಡ; ಓ ದೇವರೇ, ಮೌನವಾಗಿರಬೇಡ; ಸುಮ್ಮ ನಿರಬೇಡ. |
2. | ಇಗೋ, ನಿನ್ನ ಶತ್ರುಗಳು ಗದ್ದಲ ಮಾಡು ತ್ತಾರೆ; ನಿನ್ನ ಹಗೆಯವರು ತಲೆ ಎತ್ತುತ್ತಾರೆ. |
3. | ನಿನ್ನ ಜನರಿಗೆ ವಿರೋಧವಾಗಿ ಉಪಾಯದ ಯುಕ್ತಿಯನ್ನು ಕಲ್ಪಿಸುತ್ತಾರೆ. ನೀನು ಅಡಗಿಸಿಟ್ಟವರಿಗೆ ವಿರೋಧಿಗಳು ಆಲೋಚಿಸಿಕೊಳ್ಳುತ್ತಾರೆ. |
4. | ಅವರು--ಬನ್ನಿರಿ, ಅವ ರನ್ನು ಜನಾಂಗವಾಗಿರದ ಹಾಗೆ ನಾವು ಅವರನ್ನು ನಿರ್ಮೂಲ ಮಾಡೋಣ; ಇಸ್ರಾಯೇಲಿನ ಹೆಸರು ಇನ್ನು ಜ್ಞಾಪಕಕ್ಕೆ ಬಾರದಿರಲಿ ಅನ್ನುತ್ತಾರೆ. |
5. | ಅವರು ಕೂಡ ಏಕಮನಸ್ಸಾಗಿ ಆಲೋಚನೆ ಮಾಡಿಕೊಂಡಿ ದ್ದಾರೆ; ನಿನಗೆ ವಿರೋಧವಾಗಿ ಒಡಂಬಟ್ಟಿದ್ದಾರೆ. |
6. | ಎದೋಮ್ಯರ ಮತ್ತು ಇಷ್ಮಾಯೇಲ್ಯರ ಗುಡಾರಗಳೂ ಮೋವಾಬೂ ಹಗ್ರೀಯರೂ |
7. | ಗೆಬಾಲ್ಯರೂ ಅಮ್ಮೋನಿ ಯರೂ ಮಾಲೇಕ್ಯರೂ ತೂರಿನ ನಿವಾಸಿಗಳು ಸಹಿತವಾಗಿ ಫಿಲಿಷ್ಟಿಯರದೇ; |
8. | ಅಶ್ಶೂರ್ಯರೂ ಸಹ ಅವ ರಲ್ಲಿ ಕೂಡಿಕೊಂಡು; ಅವರು ಲೋಟನ ಮಕ್ಕಳಿಗೆ ಸಹಾಯ ಮಾಡಿದ್ದಾರೆ ಸೆಲಾ. |
9. | ಮಿದ್ಯಾನಿಗೂ ಸೀಸೆರನಿಗೂ ಯಾಬೀನನಿಗೂ ಕೀಷೋನ್ ಹಳ್ಳದಲ್ಲಿ ಮಾಡಿದ ಹಾಗೆ ಅವರಿಗೆ ಮಾಡು. |
10. | ಇವರು ಎಂದೋರಿನಲ್ಲಿ ನಾಶವಾಗಿ ಭೂಮಿಗೆ ಗೊಬ್ಬರವಾದರು. |
11. | ಅವರನ್ನೂ ಅವರ ಅಧಿಪತಿಗಳನ್ನೂ ಓರೇಬ್ ಜೇಬ್ ಹಾಗೆಯೂ ಅವರ ಪ್ರಮುಖರೆಲ್ಲರನ್ನು ಜೇಬಹ ಚಲ್ಮುನ್ನರ ಹಾಗೆಯೂ ಮಾಡು. |
12. | ಅವರು--ನಾವು ದೇವರ ನಿವಾಸಗಳನ್ನು ಸ್ವತಂತ್ರಿಸಿಕೊಳ್ಳೋಣ ಅನ್ನುತ್ತಾರೆ. |
13. | ಓ ನನ್ನ ದೇವರೇ, ಅವರನ್ನು ಚಕ್ರದ ಹಾಗೆಯೂ ಗಾಳಿಯ ಮುಂದಿರುವ ಕಸದ ಹಾಗೆಯೂ ಮಾಡು. |
14. | ಕಾಡನ್ನು ಸುಡುವ ಬೆಂಕಿಯ ಹಾಗೆಯೂ ಬೆಟ್ಟಗಳನ್ನು ದಹಿಸುವ ಜ್ವಾಲೆಯ ಹಾಗೆಯೂ |
15. | ನಿನ್ನ ಬಿರುಗಾಳಿಯಿಂದ ಅವರನ್ನು ಹಿಂಸಿಸಿ ನಿನ್ನ ಸುಳಿ ಗಾಳಿಯಿಂದ ಅವರನ್ನು ತಲ್ಲಣ ಪಡಿಸು. |
16. | ಓ ಕರ್ತನೇ, ನಿನ್ನ ನಾಮವನ್ನು ಅವರು ಹುಡುಕುವ ಹಾಗೆ ಅವರ ಮುಖಗಳನ್ನು ನಾಚಿಕೆ ಯಿಂದ ತುಂಬಿಸು. |
17. | ಅವರು ನಾಚಿಕೆಪಟ್ಟು ಎಂದೆಂ ದಿಗೂ ಕಳವಳಗೊಳ್ಳಲಿ; ಹೌದು, ಅವರು ಲಜ್ಜೆ ಯಿಂದ ನಾಶವಾಗಲಿ. |
18. | ನೀನು ಮಾತ್ರ ಯೆಹೋವ ನೆಂಬ ಹೆಸರುಳ್ಳ ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ ಎಂದು ತಿಳುಕೊಳ್ಳಲಿ. |
← Psalms (83/150) → |