← Psalms (76/150) → |
1. | ದೇವರು ಯೆಹೂದದಲ್ಲಿ ಪ್ರಸಿದ್ಧವಾಗಿದ್ದಾನೆ; ಇಸ್ರಾಯೇಲಿನಲ್ಲಿ ಆತನ ಹೆಸರು ದೊಡ್ಡದಾಗಿದೆ. |
2. | ಸಾಲೇಮಿನಲ್ಲಿ ಆತನ ಗುಡಾರವೂ ಚೀಯೋನಿನಲ್ಲಿ ಆತನ ವಾಸಸ್ಥಾನವೂ ಉಂಟು. |
3. | ಅಲ್ಲಿಯೇ ಬಿಲ್ಲಿನ ಬಾಣಗಳನ್ನೂ ಗುರಾಣಿಯನ್ನೂ ಕತ್ತಿಯನ್ನೂ ಯುದ್ಧವನ್ನೂ ಮುರಿದುಬಿಟ್ಟನು. ಸೆಲಾ. |
4. | ಬೇಟೆಗಳಿರುವ ಬೆಟ್ಟಗಳಿಗಿಂತ ನೀನು ಪ್ರಕಾಶವು ಳ್ಳವನೂ ಶ್ರೇಷ್ಠನೂ ಆಗಿದ್ದೀ. |
5. | ಬಲವಾದ ಹೃದಯ ದವರು ಕೊಳ್ಳೆ ಮಾಡಲ್ಪಟ್ಟಿದ್ದಾರೆ, ತೂಕಡಿಸಿ ನಿದ್ರೆ ಹೋಗಿದ್ದಾರೆ; ಪರಾಕ್ರಮಿಗಳಲ್ಲಿ ಒಬ್ಬನೂ ತನ್ನ ಕೈಗ ಳನ್ನು ಕಂಡುಕೊಳ್ಳಲಿಲ್ಲ. |
6. | ಓ ಯಾಕೋಬನ ದೇವರೇ, ನಿನ್ನ ಗದರಿಕೆಯಿಂದ ರಥವೂ ಕುದುರೆಯೂ ಗಾಢ ನಿದ್ರೆಯಲ್ಲಿ ಬಿದ್ದಿವೆ. |
7. | ನೀನು, ನೀನೇ, ಭಯಹುಟ್ಟಿಸುತ್ತೀ; ನೀನು ಒಂದು ಸಾರಿ ಕೋಪಿಸಿಕೊಂಡರೆ ನಿನ್ನ ಮುಂದೆ ನಿಲ್ಲುವವನಾರು? |
8. | ಆಕಾಶದಿಂದ ನ್ಯಾಯತೀರ್ವಿಕೆಯನ್ನು ಕೇಳಮಾಡಿದಿ. |
9. | ದೇವರು ನ್ಯಾಯತೀರಿಸುವದಕ್ಕೂ ಭೂಮಿಯ ದೀನರೆಲ್ಲರನ್ನು ರಕ್ಷಿಸುವದಕ್ಕೂ ಏಳುವಾಗ ಭೂಮಿಯ ನಿವಾಸಿಗಳು ಭಯಪಟ್ಟು ಸ್ತಬ್ಧ ರಾದರು. ಸೆಲಾ. |
10. | ನಿಶ್ಚಯವಾಗಿ ಮನುಷ್ಯನ ಕೋಪವು ನಿನ್ನನ್ನು ಕೊಂಡಾಡುವದು; ಕೋಪಶೇಷವನ್ನು ನೀನು ಬಿಗಿ ಹಿಡಿದು ಕೊಳ್ಳುವಿ. |
11. | ನಿಮ್ಮ ದೇವರಾದ ಕರ್ತನಿಗೆ ಪ್ರಮಾಣಮಾಡಿ ಸಲ್ಲಿಸಿರಿ; ಆತನ ಸುತ್ತಲಿರುವವ ರೆಲ್ಲರು ಭಯಪಡಿಸುವಾತನಿಗೆ ಕಾಣಿಕೆಗಳನ್ನು ತರಲಿ. |
12. | ಆತನು ಪ್ರಧಾನರ ಪ್ರಾಣವನ್ನು ತೆಗೆದು ಹಾಕು ತ್ತಾನೆ; ಭೂಮಿಯ ಅರಸುಗಳಿಗೆ ಭಯಂಕರ ನಾಗಿದ್ದಾನೆ. |
← Psalms (76/150) → |