← Psalms (70/150) → |
1. | ಓ ದೇವರೇ, ನನ್ನನ್ನು ಬಿಡಿಸುವದಕ್ಕೂ ಕರ್ತನೇ, ನನ್ನ ಸಹಾಯಕ್ಕೂ ತ್ವರೆಪಡು. |
2. | ನನ್ನ ಪ್ರಾಣವನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಿಸುವವರು ಹಿಂದಿರುಗಿ ಗಲಿಬಿಲಿಯಾಗಲಿ. |
3. | ಆಹಾ, ಆಹಾ ಎಂದು ಹೇಳುವವರು ತಮ್ಮ ನಾಚಿಕೆಯ ಫಲಕ್ಕಾಗಿ ತಿರುಗಲಿ. |
4. | ನಿನ್ನನ್ನು ಹುಡುಕುವವರೆಲ್ಲರು ನಿನ್ನಲ್ಲಿ ಆನಂದಪಟ್ಟು ಸಂತೋಷಿಸಲಿ; ನಿನ್ನ ರಕ್ಷಣೆಯನ್ನು ಪ್ರೀತಿಮಾಡು ವವರು--ದೇವರು ಮಹಿಮೆಪಡಲಿ ಎಂದು ಯಾವಾ ಗಲೂ ಹೇಳಲಿ. |
5. | ಆದರೆ ನಾನು ದೀನನೂ ಬಡವನೂ ಆಗಿದ್ದೇನೆ; ಓ ದೇವರೇ ನನಗೋಸ್ಕರ ತ್ವರೆಪಡು; ನನ್ನ ಸಹಾಯವೂ ನನ್ನನ್ನು ತಪ್ಪಿಸುವವನೂ ನೀನೇ. ಓ ಕರ್ತನೇ, ತಡ ಮಾಡಬೇಡ. |
← Psalms (70/150) → |