← Psalms (7/150) → |
1. | ನನ್ನ ದೇವರಾದ ಓ ಕರ್ತನೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ. ನನ್ನನ್ನು ಹಿಂಸಿಸುವ ವರಿಂದ ತಪ್ಪಿಸಿ ಕಾಪಾಡು; |
2. | ಇಲ್ಲವಾದರೆ ಅವನು ನನ್ನ ಪ್ರಾಣವನ್ನು ಸಿಂಹದಂತೆ ಹರಿದು ತುಂಡು ತುಂಡು ಮಾಡುವನು. |
3. | ನನ್ನ ದೇವರಾದ ಓ ಕರ್ತನೇ, ನಾನು ಇದನ್ನು ಮಾಡಿದರೆ, ಅಂದರೆ ನನ್ನ ಕೈಗಳಲ್ಲಿ ಅಪರಾ ಧವಿದ್ದರೆ, |
4. | ಹೌದು, ನನ್ನೊಂದಿಗೆ ಸಮಾಧಾನದಿಂದ ಇದ್ದವನಿಗೆ ನಾನು ಕೇಡು ಮಾಡಿದ್ದರೆ, ಯಾವ ಕಾರಣವಿಲ್ಲದೆ ನನಗೆ ವೈರಿಯಾಗಿರುವವನನ್ನು ನಾನು ಶತ್ರುವಿಗೆ ತಪ್ಪಿಸಿಬಿಟ್ಟೆನಲ್ಲಾ, |
5. | ವೈರಿಯು ನನ್ನ ಪ್ರಾಣ ವನ್ನು ಹಿಡಿದು ಹಿಂಸಿಸಿ ನನ್ನ ಜೀವವನ್ನು ಭೂಮಿಗೆ ತುಳಿದು ನನ್ನ ಗೌರವವನ್ನು ಧೂಳಿನೊಳಗೆ ಹಾಕಿ ಬಿಡಲಿ--ಸೆಲಾ. |
6. | ಓ ಕರ್ತನೇ, ನಿನ್ನ ಕೋಪದಿಂದ ಏಳು; ನನ್ನ ವೈರಿಗಳ ಉಗ್ರತೆಗಾಗಿ ಎದ್ದೇಳು; ನನ್ನ ನಿಮಿತ್ತ ಎಚ್ಚರಗೊಳ್ಳು; ನೀನು ನ್ಯಾಯತೀರ್ವಿಕೆಯನ್ನು ಆಜ್ಞಾ ಪಿಸಿದ್ದೀಯಲ್ಲಾ. |
7. | ಹೀಗೆ ಪ್ರಜೆಗಳ ಸಭೆಯು ನಿನ್ನನ್ನು ಸುತ್ತಿಕೊಳ್ಳುವದು. ಆದದರಿಂದ ಅವರ ನಿಮಿತ್ತ ನೀನು ಉನ್ನತಕ್ಕೆ ತಿರುಗಿಕೋ. |
8. | ಕರ್ತನು ಜನಗಳಿಗೆ ನ್ಯಾಯ ತೀರಿಸುವನು. ಓ ಕರ್ತನೇ, ನನ್ನಲ್ಲಿರುವ ನನ್ನ ನೀತಿಯ ಪ್ರಕಾರವೂ ಯಥಾರ್ಥತೆಯ ಪ್ರಕಾರವೂ ನನಗೆ ನ್ಯಾಯತೀರಿಸು. |
9. | ದುಷ್ಟರ ದುಷ್ಟತನವು ಮುಗಿದು ಹೋಗಲಿ, ಆದರೆ ನೀತಿವಂತನನ್ನು ದೃಢಪಡಿಸು. ನೀತಿಯುಳ್ಳ ದೇವರು ಹೃದಯವನ್ನೂ ಅಂತರಿಂದ್ರಿ ಯಗಳನ್ನೂ ಶೋಧಿಸುತ್ತಾನಲ್ಲಾ. |
10. | ಯಥಾರ್ಥ ಹೃದ ಯವುಳ್ಳವನನ್ನು ರಕ್ಷಿಸುವ ದೇವರಲ್ಲಿ ನನ್ನ ರಕ್ಷಣೆ ಉಂಟು. |
11. | ದೇವರು ನೀತಿವಂತರಿಗೆ ನ್ಯಾಯತೀರಿಸುತ್ತಾನೆ. ದೇವರು ಪ್ರತಿದಿನ ದುಷ್ಟರ ಮೇಲೆ ರೋಷವುಳ್ಳ ವನಾಗಿದ್ದಾನೆ. |
12. | ಅವನು ತಿರಿಗಿಕೊಳ್ಳದಿದ್ದರೆ ಆತನು ತನ್ನ ಕತ್ತಿ ಮಸೆಯುವನು: ತನ್ನ ಬಿಲ್ಲು ಬಗ್ಗಿಸಿ ಅದನ್ನು ಸಿದ್ಧಮಾಡಿದ್ದಾನೆ. |
13. | ಅವನಿಗೆ ಮರಣಾಯುಧಗಳನ್ನು ಸಹ ಸಿದ್ಧಮಾಡಿ, ಹಿಂಸಿಸುವವರಿಗೋಸ್ಕರ ತನ್ನ ಬಾಣಗಳನ್ನು ಸಿದ್ಧಮಾಡುತ್ತಾನೆ. |
14. | ಇಗೋ, ಅವನು ದುಷ್ಟತನದಿಂದ ಪ್ರಸವವೇದನೆ ಪಡುತ್ತಾನೆ. ಕೇಡನ್ನು ಗರ್ಭಧರಿಸಿಕೊಂಡು ಸುಳ್ಳನ್ನು ಹೆರುವನು. |
15. | ಅವನು ಕುಣಿಯನ್ನು ಅಗೆದಿದ್ದಾನೆ. ಆದರೆ ತಾನು ಅಗೆದ ಕುಣಿಯೊಳಗೆ ತಾನೇ ಬಿದ್ದಿದ್ದಾನೆ. |
16. | ಅವನ ಕೇಡು ಅವನ ಸ್ವಂತ ತಲೆಯ ಮೇಲೆ ತಿರುಗುವದು; ಅವನ ನೆತ್ತಿಯ ಮೇಲೆ ಅವನ ಬಲಾತ್ಕಾರವು ಇಳಿಯುವದು; |
17. | ಕರ್ತನನ್ನು ಆತನ ನೀತಿಯ ಪ್ರಕಾರ ನಾನು ಕೊಂಡಾಡುವೆನು; ಮಹೋನ್ನತನಾದ ಕರ್ತನ ನಾಮ ವನ್ನು ಕೀರ್ತಿಸುವೆನು. |
← Psalms (7/150) → |