← Psalms (56/150) → |
1. | ಓ ದೇವರೇ, ನನ್ನನ್ನು ಕರುಣಿಸು; ಮನುಷ್ಯನು ನನ್ನನ್ನು ನುಂಗಬೇಕೆಂದಿದ್ದಾನೆ; ದಿನವೆಲ್ಲಾ ಯುದ್ಧಮಾಡುತ್ತಾ ನನ್ನನ್ನು ಬಾಧಿಸುತ್ತಾನೆ. |
2. | ಓ ಅತ್ಯುನ್ನತನೇ, ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ನುಂಗಬೇಕೆಂದಿದ್ದಾರೆ; ನನಗೆ ವಿರೋಧವಾಗಿ ಗರ್ವದಿಂದ ಯುದ್ಧಮಾಡುವವರು ಅನೇಕರಾಗಿದ್ದಾರೆ. |
3. | ನನಗೆ ಹೆದರಿಕೆ ಉಂಟಾದಾಗ ನಿನ್ನಲ್ಲಿ ಭರವಸವಿ ಡುವೆನು. |
4. | ದೇವರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯಪಡೆನು, ಮನುಷ್ಯನು ನನಗೆ ಏನು ಮಾಡಬಲ್ಲನು? |
5. | ಪ್ರತಿದಿನ ಅವರು ನನ್ನ ಮಾತುಗಳನ್ನು ಅಪಾರ್ಥ ಮಾಡುತ್ತಾರೆ. ನನಗೆ ವಿರೋಧವಾಗಿರುವ ಅವರ ಆಲೋಚನೆಗಳೆಲ್ಲಾ ನನ್ನ ಕೇಡಿಗಾಗಿವೆ. |
6. | ಅವರು ಕೂಡಿಕೊಂಡು ಹೊಂಚುಹಾಕುತ್ತಾರೆ; ನನ್ನ ಪ್ರಾಣಕ್ಕೆ ಕಾಯುವವರಾಗಿ ನನ್ನ ಹೆಜ್ಜೆಗಳನ್ನು ಗುರುತಿಸುತ್ತಾರೆ. |
7. | ಅಪರಾಧದಿಂದ ಅವರು ತಪ್ಪಿಸಿಕೊಂಡಾರೋ? ಓ ದೇವರೇ, ಕೋಪದಿಂದ ಜನರನ್ನು ಕೆಡವಿಹಾಕು. |
8. | ನನ್ನ ಅಲೆದಾಡುವಿಕೆಗಳನ್ನು ನೀನು ಲೆಕ್ಕಿಸಿದ್ದೀ; ನನ್ನ ಕಣ್ಣೀರನ್ನು ನಿನ್ನ ಬುದ್ದಲಿಯಲ್ಲಿ ಹಾಕು; ಅದು ನಿನ್ನ ಪುಸ್ತಕದಲ್ಲಿ ಇಲ್ಲವೋ? |
9. | ನಾನು ನಿನ್ನನ್ನು ಕೂಗಿ ಕೊಂಡಾಗ ನನ್ನ ಶತ್ರುಗಳು ಹಿಂದಿರುಗುವರು; ದೇವರು ನನಗಿದ್ದಾನೆ ಎಂಬದನ್ನು ಬಲ್ಲೆನು. |
10. | ದೇವ ರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ಕರ್ತ ನಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು. |
11. | ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯ ಪಡೆನು; ಮನುಷ್ಯನು ನನಗೆ ಏನು ಮಾಡಬಲ್ಲನು? |
12. | ಓ ದೇವರೇ, ನಿನ್ನ ಪ್ರಮಾಣಗಳು ನನ್ನ ಮೇಲೆ ಇವೆ; ನಾನು ಸ್ತೋತ್ರಗಳನ್ನು ನಿನಗೆ ಸಲ್ಲಿಸುವೆನು. |
13. | ನನ್ನ ಪ್ರಾಣವನ್ನು ಮರಣದಿಂದ ಬಿಡಿಸಿದ್ದೀ, ಹಾಗೆ ನಾನು ಜೀವಿತರ ಬೆಳಕಿನಲ್ಲಿ ದೇವರ ಮುಂದೆ ನಡೆಯುವ ನನ್ನ ಪಾದಗಳನ್ನು ಬೀಳದಂತೆ ನೀನು ತಪ್ಪಿಸುವದಿಲ್ಲವೋ? |
← Psalms (56/150) → |