← Psalms (49/150) → |
1. | ಎಲ್ಲಾ ಜನರೇ, ಇದನ್ನು ಕೇಳಿರಿ; ಭೂಲೋಕದ ನಿವಾಸಿಗಳಿರಾ, ಕೇಳಿರಿ; |
2. | ಭೂಲೋಕದ ಜನರೇ, ಉಚ್ಚ ನೀಚ ಬಡವ ಬಲ್ಲಿದರೇ, ಕೇಳಿರಿ. |
3. | ನನ್ನ ಬಾಯಿ ಜ್ಞಾನವನ್ನು ನುಡಿಯುವದು, ನನ್ನ ಹೃದಯದ ಧ್ಯಾನವು ವಿವೇಕವುಳ್ಳದ್ದಾಗಿರುವದು. |
4. | ನಾನು ಸಾಮ್ಯವನ್ನು ಕಿವಿಗೊಟ್ಟು ಕೇಳಿ ಕಿನ್ನರಿಯನ್ನು ಬಾರಿಸುತ್ತಾ ಅದರ ಗೂಢಾರ್ಥವನ್ನು ಪ್ರಕಟಿಸುವೆನು. |
5. | ನನ್ನ ದ್ರೋಹವು ನನ್ನನ್ನು ಸುತ್ತಿಕೊಳ್ಳುವಾಗ ಕೇಡಿನ ದಿನಗಳಲ್ಲಿ ನಾನು ಯಾಕೆ ಭಯಪಡಬೇಕು? |
6. | ಅವರು ತಮ್ಮ ಸಂಪತ್ತಿನಲ್ಲಿ ಭರವಸವಿಟ್ಟು ಅಧಿಕ ಐಶ್ವರ್ಯಗಳಲ್ಲಿ ಹೆಚ್ಚಳಪಡುವರು. |
7. | ಆದರೆ ಸದಾ ಕಾಲಕ್ಕೂ ಬದುಕಿರುವಂತೆ ಮಾಡಿ ಕೊಳೆಯುವಿಕೆಯನ್ನು ನೋಡದ ಹಾಗೆ ತನ್ನ ಸಹೋದರನನ್ನು ಯಾವ ಮನುಷ್ಯನೂ |
8. | ಅವನು ದೇವರಿಗೆ ಹಣವನ್ನು (ಈಡು) ಕೊಟ್ಟು ಅದರಿಂದ ವಿಮೋಚಿಸಲಾರನು. |
9. | ಅವರ ಪ್ರಾಣದ ವಿಮೋಚನೆಯು ಅಮೂಲ್ಯ ವಾಗಿದೆ; ಅದು ಯುಗಯುಗಕ್ಕೂ ನಿಲ್ಲುವದು. |
10. | ಜ್ಞಾನಿಗಳು ಸಾಯುವರು; ಹುಚ್ಚನು ಪಶುಪ್ರಾಯನು ಕೂಡ ನಾಶವಾಗಿ ಬೇರೆಯವರಿಗೆ ತಮ್ಮ ಆಸ್ತಿಯನ್ನು ಬಿಡುವದನ್ನು ಅವನು ನೋಡುತ್ತಾನೆ. |
11. | ತಮ್ಮ ಮನೆಗಳು ಯುಗಯುಗಕ್ಕೂ ತಮ್ಮ ನಿವಾಸಗಳು ತಲತಲಾಂತರಕ್ಕೂ ಇರಬೇಕೆಂದು ಅಂತರ್ಯದಲ್ಲಿ ಯೋಚಿಸಿ ಭೂಮಿಗಳಿಗೆ ತಮ್ಮ ಹೆಸರುಗಳನ್ನು ಇಡು ತ್ತಾರೆ. |
12. | ಮನುಷ್ಯನು ಘನವುಳ್ಳವನಾದರೂ ಸ್ಥಿರವಿಲ್ಲ; ಅವನು ನಾಶವಾಗುವ ಪಶುಗಳ ಹಾಗೆ ಇದ್ದಾನೆ. |
13. | ಅವರ ಈ ಮಾರ್ಗವು ಅವರ ಹುಚ್ಚುತನ ವಾಗಿದೆ; ಆದರೆ ಅವರ ಸಂತಾನದವರು ಅವರ ಮಾತುಗಳನ್ನು ಮೆಚ್ಚುತ್ತಾರೆ. ಸೆಲಾ. |
14. | ಅವರು ಕುರಿ ಗಳಂತೆ ಸಮಾಧಿಯಲ್ಲಿ ಹಾಕಲ್ಪಡುತ್ತಾರೆ; ಮರಣವು ಅವರನ್ನು ತಿನ್ನುತ್ತದೆ; ಯಥಾರ್ಥರು ಬೆಳಿಗ್ಗೆ ಅವರ ಮೇಲೆ ಆಳುವರು; ಅವರಿಗೆ ನಿವಾಸವಿರದ ಹಾಗೆ ಸಮಾಧಿಯಲ್ಲಿ ಅವರ ರೂಪವು ಕ್ಷಯಿಸುವದು. |
15. | ಆದರೆ ದೇವರು ನನ್ನ ಪ್ರಾಣವನ್ನು ಸಮಾಧಿಯ ಬಲದಿಂದ ವಿಮೋಚನೆ ಮಾಡುವನು, ಆತನು ನನ್ನನ್ನು ಅಂಗೀಕರಿಸುವನು. ಸೆಲಾ. |
16. | ಒಬ್ಬನು ಐಶ್ವರ್ಯವಂತ ನಾದರೆ ಮತ್ತು ಅವನ ಮನೆಯ ಘನವು ದೊಡ್ಡದಾ ದರೆ ಭಯಪಡಬೇಡ. |
17. | ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗನು; ಅವನ ಘನವು ಅವನ ಹಿಂದೆ ಇಳಿದು ಹೋಗದು. |
18. | ಅವನು ಬದುಕಿದ್ದಾಗ ತನ್ನ ಪ್ರಾಣವನ್ನು ಸ್ತುತಿಸಿಕೊಂಡಾಗ್ಯೂ ನೀನು ನಿನಗೆ ಒಳ್ಳೇದನ್ನು ಮಾಡಿಕೊಂಡರೆ ಜನರು ನಿನ್ನನ್ನು ಕೊಂಡಾ ಡುವರು. |
19. | ಅವನು ತನ್ನ ತಂದೆಗಳ ವಂಶದ ಬಳಿಗೆ ಹೋಗುವನು; ಅವರು ಬೆಳಕನ್ನು ಎಂದಿಗೂ ನೋಡು ವದಿಲ್ಲ. |
20. | ಮನುಷ್ಯನು ಘನತೆಯಲ್ಲಿದ್ದು ವಿವೇಕ ವಿಲ್ಲದವನಾದರೆ ಮಡಿದು ಹೋಗುವ ಪಶುಗಳಿಗೆ ಸಮಾನನಾಗಿದ್ದಾನೆ. |
← Psalms (49/150) → |