← Psalms (47/150) → |
1. | ಎಲ್ಲಾ ಜನರೇ, ನೀವು ನಿಮ್ಮ ಕೈಗಳನ್ನು ತಟ್ಟಿರಿ; ಜಯಾರ್ಭಟದಿಂದ ದೇವರಿಗೆ ಧ್ವನಿಗೈಯಿರಿ. |
2. | ಮಹೋನ್ನತನಾದ ಕರ್ತನು ಭಯಂಕ ರನೂ ಭೂಮಿಯ ಮೇಲೆಲ್ಲಾ ಮಹಾಅರಸನೂ ಆಗಿದ್ದಾನೆ. |
3. | ಜನರನ್ನು ನಮ್ಮ ಕೆಳಗೂ ಜನಾಂಗಗಳನ್ನು ನಮ್ಮ ಪಾದಗಳ ಕೆಳಗೂ ಅಧೀನ ಮಾಡಿದ್ದಾನೆ. |
4. | ಆತನು ಪ್ರೀತಿಮಾಡುವ ಯಾಕೋಬನ ಘನತೆಯಾದ ನಮ್ಮ ಬಾಧ್ಯತೆಯನ್ನು ಆದುಕೊಳ್ಳುತ್ತಾನೆ--ಸೆಲಾ. |
5. | ದೇವರು ಮಹಾಧ್ವನಿಯಿಂದ, ಕರ್ತನು ತುತೂ ರಿಯ ಶಬ್ದದಿಂದ, ಮೇಲೆ ಹೋಗಿದ್ದಾನೆ. |
6. | ದೇವರಿಗೆ ಸ್ತುತಿಗಳನ್ನು ಹಾಡಿರಿ, ಸ್ತುತಿಗಳನ್ನು ಹಾಡಿರಿ; ನಮ್ಮ ಅರಸನಿಗೆ ಸ್ತುತಿಗಳನ್ನು ಹಾಡಿರಿ, ಸ್ತುತಿಗಳನ್ನು ಹಾಡಿರಿ; |
7. | ದೇವರು ಭೂಮಿಗೆಲ್ಲಾ ಅರಸನು; ತಿಳುವಳಿಕೆಯಿಂದ ಸ್ತುತಿಗಳನ್ನು ಹಾಡಿರಿ. |
8. | ಅನ್ಯಜನಾಂಗವನ್ನು ಆಳುತ್ತಾನೆ; ತನ್ನ ಪರಿಶುದ್ಧ ಸಿಂಹಾಸನದಲ್ಲಿ ಕೂತಿದ್ದಾನೆ. |
9. | ಜನರ ಅಧಿಪತಿಗಳು ಅಬ್ರಹಾಮನ ದೇವರ ಪ್ರಜೆಯ ಸಂಗಡ ಕೂಡಿ ಕೊಂಡಿದ್ದಾರೆ; ಭೂಮಿಯ ಗುರಾಣಿಗಳು ದೇವರ ವಶದಲ್ಲಿವೆ; ಆತನು ಬಹಳವಾಗಿ ಹೆಚ್ಚಿಸಲ್ಪಟ್ಟಿದ್ದಾನೆ. |
← Psalms (47/150) → |