← Psalms (37/150) → |
1. | ದುರ್ಮಾರ್ಗಿಗಳಿಗೋಸ್ಕರ ಕೋಪಿಸಿ ಕೊಳ್ಳಬೇಡ; ಇಲ್ಲವೆ ನೀನು ಅಕ್ರಮ ಮಾಡುವವರಿಗೆ ವಿರೋಧವಾಗಿ ಹೊಟ್ಟೇಕಿಚ್ಚು ಪಡ ಬೇಡ. |
2. | ಅವರು ಹುಲ್ಲಿನ ಹಾಗೆ ಬೇಗ ಕೊಯ್ಯಲ್ಪಟ್ಟು ಹಸುರಾದ ಸೊಪ್ಪಿನ ಹಾಗೆ ಬಾಡಿಹೋಗುವರು. |
3. | ಕರ್ತನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ಆಗ ದೇಶದಲ್ಲಿ ವಾಸಮಾಡಿ ನಿಜವಾಗಿ ತೃಪ್ತಿ ಹೊಂದು ವಿ. |
4. | ಕರ್ತನಲ್ಲಿ ಆನಂದವಾಗಿರು; ಆಗ ಆತನು ನಿನ್ನ ಹೃದಯದ ಅಪೇಕ್ಷೆಗಳನ್ನು ನಿನಗೆ ಕೊಡುವನು. |
5. | ನಿನ್ನ ಮಾರ್ಗವನ್ನು ಕರ್ತನಿಗೆ ಒಪ್ಪಿಸು; ಆತನಲ್ಲಿ ಭರವಸ ವಿಡು; ಆತನು ಅದನ್ನು ನೆರವೇರಿಸುವನು. |
6. | ನಿನ್ನ ನೀತಿಯನ್ನು ಬೆಳಕಿನ ಹಾಗೆಯೂ ನಿನ್ನ ನ್ಯಾಯಗಳನ್ನು ಮಧ್ಯಾಹ್ನದ ಹಾಗೆಯೂ ಆತನು ಹೊರಗೆ ಬರ ಮಾಡುವನು. |
7. | ಕರ್ತನಲ್ಲಿ ಶಾಂತವಾಗಿರು; ಮೌನವಾಗಿದ್ದು ಆತನಿಗಾಗಿ ಎದುರುನೋಡು; ತನ್ನ ಮಾರ್ಗದಲ್ಲಿ ಸಫಲ ವಾಗುವವನಿಗೋಸ್ಕರವೂ ಯುಕ್ತಿಗಳನ್ನು ನಡಿಸುವ ಮನುಷ್ಯರಿಗೋಸ್ಕರವೂ ಕೋಪಮಾಡಿಕೊಳ್ಳಬೇಡ. |
8. | ಕೋಪವನ್ನು ನಿಲ್ಲಿಸು; ಉರಿಯನ್ನು ಬಿಟ್ಟುಬಿಡು; ಹೇಗಾದರೂ ಕೇಡುಮಾಡದ ಹಾಗೆ ಕೋಪಿಸಿಕೊಳ್ಳ ಬೇಡ. |
9. | ದುರ್ಮಾರ್ಗಿಗಳು ಕಡಿದು ಹಾಕಲ್ಪಡುವರು; ಕರ್ತನನ್ನು ನಿರೀಕ್ಷಿಸುವವರೇ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವರು. |
10. | ಇನ್ನು ಸ್ಪಲ್ಪ ಸಮಯದಲ್ಲಿ ದುಷ್ಟನು ಇರನು; ಹೌದು, ಅವನ ಸ್ಥಳವನ್ನು ನೀನು ಜಾಗ್ರತೆಯಾಗಿ ವಿಚಾರಿಸಿದರೂ ಇಗೋ, ಅದು ಇರು ವದಿಲ್ಲ. |
11. | ಆದರೆ ಸಾತ್ವಿಕರು ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಬಹಳ ಸಮಾಧಾನದಲ್ಲಿ ಆನಂದ ಪಡುವರು. |
12. | ದುಷ್ಟನು ನೀತಿವಂತನಿಗಾಗಿ ಹೊಂಚುಹಾಕು ವನು, ಅವನ ಮೇಲೆ ತನ್ನ ಹಲ್ಲುಗಳನ್ನು ಕಡಿಯುತ್ತಾನೆ. |
13. | ಕರ್ತನು ಅವನ ದಿನ ಬರುತ್ತದೆಂದು ನೋಡಿ ನಗುತ್ತಾನೆ. |
14. | ದುಷ್ಟರು ಬಡವನನ್ನು ಮತ್ತು ದೀನ ನನ್ನು ಕೆಡವಿಬಿಡುವದಕ್ಕೂ ಸನ್ಮಾರ್ಗದವರನ್ನು ಕೊಲ್ಲು ವದಕ್ಕೂ ಕತ್ತಿಯನ್ನು ಹಿರಿದಿದ್ದಾರೆ ಮತ್ತು ತಮ್ಮ ಬಿಲ್ಲು ಗಳನ್ನು ಬೊಗ್ಗಿಸಿದ್ದಾರೆ. |
15. | ಅವರ ಕತ್ತಿಯು ಅವರ ಹೃದಯವನ್ನೇ ಇರಿಯುವದು; ಅವರ ಬಿಲ್ಲುಗಳು ಮುರಿದುಹೋಗುವವು. |
16. | ನೀತಿವಂತನಿಗಿರುವ ಸ್ವಲ್ಪ ವಾದದ್ದು ಅನೇಕ ದುಷ್ಟರ ಐಶ್ವರ್ಯಕ್ಕಿಂತಲೂ ಶ್ರೇಷ್ಠ ವಾಗಿದೆ. |
17. | ದುಷ್ಟರ ತೋಳುಗಳು ಮುರಿದು ಹೋಗು ವವು; ಆದರೆ ನೀತಿವಂತರನ್ನು ಕರ್ತನು ಉದ್ಧಾರ ಮಾಡುತ್ತಾನೆ. |
18. | ಕರ್ತನು ಯಥಾರ್ಥರ ದಿನಗಳನ್ನು ಅರಿತಿದ್ದಾನೆ; ಅವರ ಬಾಧ್ಯತೆಯು ಯುಗಯುಗಕ್ಕೂ ಇರುವದು. |
19. | ವಿಪತ್ಕಾಲದಲ್ಲಿ ಅವರು ಆಶಾಭಂಗ ಪಡುವದಿಲ್ಲ; ಕ್ಷಾಮದ ದಿವಸಗಳಲ್ಲಿ ತೃಪ್ತಿಪಡುವರು. |
20. | ದುಷ್ಟರು ನಾಶವಾಗುವರು; ಕರ್ತನ ಶತ್ರುಗಳು ಕುರಿಮರಿಗಳ ಕೊಬ್ಬಿನ ಹಾಗೆ ಇದ್ದು ಕರಗಿಹೋಗು ವರು; ಹೊಗೆಯಲ್ಲಿ ಕರಗಿಹೋಗುವರು. |
21. | ದುಷ್ಟನು ಸಾಲಮಾಡಿ ತಿರಿಗಿ ಸಲ್ಲಿಸುವದಿಲ್ಲ; ನೀತಿವಂತನು ದಯಾಳುವಾಗಿ ಕೊಡುತ್ತಾನೆ. |
22. | ಆತನು ಆಶೀರ್ವದಿಸಿದವರು ಭೂಮಿಯನ್ನು ಸ್ವತಂತ್ರಿಸಿ ಕೊಳ್ಳುವರು; ಆತನು ಶಪಿಸಿದವರು ಕಡಿದು ಹಾಕಲ್ಪಡವರು. |
23. | ಒಳ್ಳೇ ಮನುಷ್ಯನ ಹೆಜ್ಜೆಗಳು ಕರ್ತನಿಂದ ದೃಢ ವಾಗುತ್ತವೆ; ಆತನು ಅವನ ಮಾರ್ಗದಲ್ಲಿ ಸಂತೋಷ ಪಡುತ್ತಾನೆ. |
24. | ಅವನು ಬಿದ್ದು ಹೋದಾಗ್ಯೂ ಪೂರ್ಣ ವಾಗಿ ಕೆಡವಲ್ಪಡುವದಿಲ್ಲ. ಯಾಕಂದರೆ ಕರ್ತನು ತನ್ನ ಕೈಯಿಂದ ಅವನನ್ನು ಮೇಲೆ ಎತ್ತುತ್ತಾನೆ. |
25. | ನಾನು ಬಾಲಕನಾಗಿದ್ದೆನು, ಈಗ ಮುದುಕನಾಗಿದ್ದೇನೆ; ಆದರೆ ನೀತಿವಂತನು ಕೈಬಿಡಲ್ಪಟ್ಟದ್ದನ್ನೂ ಅವನ ಸಂತತಿಯು ರೊಟ್ಟಿಗಾಗಿ ಭಿಕ್ಷೆಬೇಡುವದನ್ನೂ ನಾನು ನೋಡಲಿಲ್ಲ. |
26. | ಅವನು ಯಾವಾಗಲೂ ದಯಾಳುವಾಗಿ ಸಾಲ ಕೊಡುತ್ತಾನೆ; ಅವನ ಸಂತತಿಯು ಆಶೀರ್ವಾದ ಹೊಂದುವದು. |
27. | ಕೇಡಿನಿಂದ ತೊಲಗಿ ಒಳ್ಳೇದನ್ನು ಮಾಡು, ಆಗ ಯುಗಯುಗಕ್ಕೂ ವಾಸಮಾಡುವಿ. |
28. | ಕರ್ತನು ನ್ಯಾಯವನ್ನು ಪ್ರೀತಿಮಾಡುತ್ತಾನೆ; ತನ್ನ ಪರಿಶುದ್ಧರನ್ನು ತೊರೆದುಬಿಡನು; ಅವರು ಯುಗ ಯುಗಕ್ಕೂ ಕಾಪಾಡಲ್ಪಡುವರು; ಆದರೆ ದುಷ್ಟರ ಸಂತತಿಯು ಕಡಿದುಹಾಕಲ್ಪಡುವದು. |
29. | ನೀತಿವಂತರು ಭೂಮಿಯನ್ನು ಸ್ವಾಧೀನಮಾಡಿಕೊಂಡು ಎಂದೆಂದಿಗೂ ಅದರಲ್ಲಿ ವಾಸವಾಗಿರುವರು. |
30. | ನೀತಿವಂತನ ಬಾಯಿ ಜ್ಞಾನವನ್ನು ಉಚ್ಚರಿಸುವದು; ಅವನ ನಾಲಿಗೆ ನ್ಯಾಯ ವನ್ನು ನುಡಿಯುವದು. |
31. | ದೇವರ ನ್ಯಾಯ ಪ್ರಮಾ ಣವು ಅವನ ಹೃದಯದಲ್ಲಿ ಅದೆ; ಅವನ ಹೆಜ್ಜೆಗಳು ಕದಲುವದಿಲ್ಲ. |
32. | ದುಷ್ಟನು ನೀತಿವಂತನಿಗಾಗಿ ಹೊಂಚು ಹಾಕು ತ್ತಾನೆ. ಅವನನ್ನು ಕೊಲ್ಲಲು ಹುಡುಕುತ್ತಾನೆ. |
33. | ಕರ್ತನು ಅವನನ್ನು ದುಷ್ಟನ ಕೈಯಲ್ಲಿ ಬಿಡುವದಿಲ್ಲ; ಇಲ್ಲವೆ ನ್ಯಾಯವಿಚಾರಣೆಯಲ್ಲಿ ಅವನು ದುಷ್ಟನೆಂದು ತೀರ್ಪು ಹೊಂದುವದಿಲ್ಲ. |
34. | ಕರ್ತನನ್ನು ನಿರೀಕ್ಷಿಸು, ಆತನ ಮಾರ್ಗವನ್ನು ಕೈಕೊಳ್ಳು; ಆಗ ಭೂಮಿಯನ್ನು ಸ್ವಾಧೀ ನಮಾಡಿಕೊಳ್ಳುವ ಹಾಗೆ ನಿನ್ನನ್ನು ಆತನು ಎತ್ತು ವನು; ದುಷ್ಟರು ಕಡಿದುಹಾಕಲ್ಪಟ್ಟಾಗ ನೀನು ಅದನ್ನು ನೋಡುವಿ. |
35. | ದುಷ್ಟನು ದೊಡ್ಡ ಅಧಿಕಾರದಲ್ಲಿರು ವದನ್ನು ನಾನು ನೋಡಿದೆನು; ಅವನು ಹಸುರಾಗಿ ವಿಸ್ತರಿಸಿಕೊಂಡ ಮರದ ಹಾಗೆ ಇದ್ದನು. |
36. | ಆದರೆ ಅವನು ಅಳಿದು ಹೋದನು; ಇಗೋ, ಅವನು ಇಲ್ಲವಾದನು; ಹೌದು, ಅವನನ್ನು ನಾನು ಹುಡು ಕಿದೆನು; ಆದರೆ ಅವನು ಸಿಕ್ಕಲಿಲ್ಲ. |
37. | ಸಂಪೂರ್ಣನನ್ನು ಗಮನಿಸು, ಯಥಾರ್ಥನನ್ನು ನೋಡು; ಆ ಮನುಷ್ಯನ ಅಂತ್ಯವು ಸಮಾಧಾನವಾಗಿದೆ. |
38. | ಅಪರಾಧಿಗಳು ಏಕ ವಾಗಿ ನಾಶವಾಗುವರು; ದುಷ್ಟರ ಅಂತ್ಯವು ತೆಗೆದು ಹಾಕಲ್ಪಡುವದು. |
39. | ನೀತಿವಂತರ ರಕ್ಷಣೆಯು ಕರ್ತ ನಿಂದಲೇ; ಇಕ್ಕಟ್ಟಿನ ಕಾಲದಲ್ಲಿ ಅವರ ಬಲವು ಆತನೇ. |
40. | ಕರ್ತನು ಅವರಿಗೆ ಸಹಾಯಮಾಡಿ ಅವರನ್ನು ತಪ್ಪಿಸುವನು; ದುಷ್ಟರಿಂದ ಅವರನ್ನು ತಪ್ಪಿಸಿ ರಕ್ಷಿಸುವನು; ಅವರು ಆತನಲ್ಲಿ ಭರವಸವಿಟ್ಟಿದ್ದಾರೆ. |
← Psalms (37/150) → |