← Psalms (33/150) → |
1. | ಓ ನೀತಿವಂತರೇ, ನೀವು ಕರ್ತನಲ್ಲಿ ಸಂತೋಷಪಡಿರಿ; ಯಥಾರ್ಥರು ಸ್ತೋತ್ರ ಮಾಡುವದು ಯೋಗ್ಯವಾಗಿದೆ. |
2. | ಕರ್ತನನ್ನು ಕಿನ್ನರಿ ಯಿಂದ ಕೊಂಡಾಡಿರಿ; ಹತ್ತು ತಂತಿಗಳ ವೀಣೆಯಿಂದ ಆತನನ್ನು ಕೀರ್ತಿಸಿರಿ. |
3. | ಆತನಿಗೆ ಹೊಸ ಹಾಡನ್ನು ಹಾಡಿರಿ; ಮಹಾಧ್ವನಿಯಿಂದ ಇಂಪಾಗಿ ಬಾರಿಸಿರಿ. |
4. | ಕರ್ತನ ವಾಕ್ಯವು ಯಥಾರ್ಥವಾದದ್ದು. ಆತನ ಕೆಲಸಗಳೆಲ್ಲಾ ಸತ್ಯದಲ್ಲಿ ಮಾಡಲ್ಪಟ್ಟಿವೆ. |
5. | ಆತನು ನೀತಿ ನ್ಯಾಯಗಳನ್ನು ಪ್ರೀತಿಮಾಡುತ್ತಾನೆ; ಭೂಮಿ ಎಲ್ಲಾ ಕರ್ತನ ಒಳ್ಳೇತನದಿಂದ ತುಂಬಿದೆ. |
6. | ಕರ್ತನ ವಾಕ್ಯ ದಿಂದ ಆಕಾಶವೂ ಆತನ ಬಾಯಿಯ ಉಸುರಿನಿಂದ ಅದರ ಸೈನ್ಯವೆಲ್ಲವೂ ಉಂಟಾದವು. |
7. | ಆತನು ಸಮು ದ್ರದ ನೀರುಗಳನ್ನು ರಾಶಿಯಾಗಿ ಕೂಡಿಸುತ್ತಾನೆ; ಆಗಾಧವನ್ನು ಉಗ್ರಾಣಗಳಲ್ಲಿ ಇಡುತ್ತಾನೆ. |
8. | ಭೂಮಿ ಯೆಲ್ಲಾ ಕರ್ತನಿಗೆ ಭಯಪಡಲಿ; ಭೂಲೋಕ ನಿವಾಸಿ ಗಳೆಲ್ಲರು ಆತನಿಗೆ ಹೆದರಲಿ. |
9. | ಆತನು ಹೇಳಲು ಆಯಿತು; ಆಜ್ಞಾಪಿಸಲು ಅದು ಸ್ಥಿರವಾಯಿತು. |
10. | ಕರ್ತನು ಜನಾಂಗಗಳ ಆಲೋಚನೆಯನ್ನು ವ್ಯರ್ಥ ಮಾಡುವನು; ಜನರ ಕಲ್ಪನೆಗಳನ್ನು ನಿಷ್ಫಲಮಾಡು ತ್ತಾನೆ. |
11. | ಕರ್ತನ ಆಲೋಚನೆಯು ಎಂದೆಂದಿಗೂ ಆತನ ಹೃದಯದ ಆಲೋಚನೆಗಳು ತಲತಲಾಂತ ರಕ್ಕೂ ನಿಲ್ಲುವವು. |
12. | ಕರ್ತನು ಯಾರ ದೇವರಾಗಿರು ವನೋ ಯಾವ ಜನಾಂಗವನ್ನು ತನ್ನ ಸ್ವಾಸ್ಥ್ಯವನ್ನಾಗಿ ಆದುಕೊಂಡಿದ್ದಾನೋ ಆ ಜನರೇ ಧನ್ಯರು. |
13. | ಕರ್ತನು ಆಕಾಶದಿಂದ ಮನುಷ್ಯರ ಮಕ್ಕಳೆಲ್ಲರನ್ನು ದೃಷ್ಟಿಸಿ ನೋಡುತ್ತಾನೆ. |
14. | ತನ್ನ ನಿವಾಸಸ್ಥಳದಿಂದ ಭೂನಿವಾ ಸಿಗಳೆಲ್ಲರ ಮೇಲೆ ಕಣ್ಣಿಡುತ್ತಾನೆ. |
15. | ಅವರ ಹೃದಯ ಗಳನ್ನು ಏಕವಾಗಿ ರೂಪಿಸಿ ಅವರ ಕೆಲಸಗಳನ್ನೆಲ್ಲಾ ಗ್ರಹಿಸಿಕೊಳ್ಳುವವನು ಆತನೇ. |
16. | ಯಾವ ಅರಸನೂ ಅಧಿಕವಾದ ಸೈನ್ಯದಿಂದ ರಕ್ಷಿಸಲ್ಪಡುವದಿಲ್ಲ. ಪರಾಕ್ರಮ ಶಾಲಿಯು ಅಧಿಕಶಕ್ತಿಯಿಂದ ಬಿಡಿಸಲ್ಪಡುವದಿಲ್ಲ. |
17. | ಕುದುರೆಯು ಭದ್ರತೆಗೆ ವ್ಯರ್ಥವಾಗಿದೆ; ಇಲ್ಲವೆ ತನ್ನ ಅಧಿಕಬಲದಿಂದ ಯಾರನ್ನೂ ತಪ್ಪಿಸುವದಿಲ್ಲ. |
18. | ಇಗೋ, ಕರ್ತನ ಕಣ್ಣು ಆತನಿಗೆ ಭಯಪಡುವ ವರ ಮೇಲೆಯೂ ಆತನ ಕರುಣೆಯನ್ನು ಎದುರು ನೋಡುವವರ ಮೇಲೆಯೂ ಅದೆ. |
19. | ಇದರಿಂದ ಅವರ ಪ್ರಾಣವನ್ನು ಮರಣದಿಂದ ಬಿಡಿಸಿ ಬರಗಾಲ ದಲ್ಲಿ ಅವರ ಜೀವವನ್ನು ಕಾಪಾಡುತ್ತಾನೆ. |
20. | ನಮ್ಮ ಪ್ರಾಣವು ಕರ್ತನಿಗಾಗಿ ಕಾದುಕೊಳ್ಳುತ್ತದೆ; ನಮ್ಮ ಸಹಾಯವೂ ಗುರಾಣಿಯೂ ಆತನೇ. |
21. | ಆತನಲ್ಲಿ ನಮ್ಮ ಹೃದಯವು ಸಂತೋಷಿಸುತ್ತದೆ; ನಾವು ಆತನ ಪರಿಶುದ್ಧವಾದ ಹೆಸರಿನಲ್ಲಿ ಭರಸವಿಟ್ಟಿದ್ದೇವೆ. |
22. | ನಾವು ನಿನ್ನನ್ನು ನಿರೀಕ್ಷಿಸುವ ಪ್ರಕಾರ ಓ ಕರ್ತನೇ, ನಿನ್ನ ಕೃಪೆಯು ನಮ್ಮ ಮೇಲೆ ಇರಲಿ. |
← Psalms (33/150) → |