← Psalms (142/150) → |
1. | ನನ್ನ ಸ್ವರವೆತ್ತಿ ಕರ್ತನಿಗೆ ಮೊರೆಯಿಟ್ಟಿದ್ದೇನೆ ಸ್ವರವೆತ್ತಿ ನನ್ನ ಕರ್ತನಿಗೆ ವಿಜ್ಞಾಪನೆ ಮಾಡಿದ್ದೇನೆ. |
2. | ಆತನ ಮುಂದೆ ನನ್ನ ಚಿಂತೆಯನ್ನು ಹೊಯ್ದಿದ್ದೇನೆ; ನನ್ನ ಇಕ್ಕಟ್ಟನ್ನು ಆತನ ಮುಂದೆ ತಿಳಿಸಿದ್ದೇನೆ. |
3. | ನನ್ನ ಆತ್ಮವು ನನ್ನಲ್ಲಿ ಕುಂದಿ ಹೋದಾಗ ನೀನು ನನ್ನ ದಾರಿಯನ್ನು ತಿಳುಕೊಂಡಿದ್ದೀ; ನಾನು ನಡೆಯುವ ದಾರಿಯಲ್ಲಿ ಗುಪ್ತವಾಗಿ ನನಗೆ ಉರ್ಲನ್ನು ಒಡ್ಡಿದ್ದಾರೆ. |
4. | ನನ್ನ ಬಲಗಡೆಯಲ್ಲಿ ನೋಡಿದೆನು; ನೋಡಿದಾಗ ನನ್ನನ್ನು ತಿಳಿಯುವವನು ಯಾವನೂ ಇಲ್ಲ. ಆಶ್ರಯವು ನನ್ನ ಬಳಿಯಿಂದ ತಪ್ಪಿಹೋಯಿತು; ನನ್ನ ಪ್ರಾಣಕ್ಕಾಗಿ ಚಿಂತಿಸುವವನು ಒಬ್ಬನೂ ಇಲ್ಲ. |
5. | ಓ ಕರ್ತನೇ, ನಿನಗೆ ಮೊರೆಯಿಡುತ್ತೇನೆ, ನಾನು ಹೇಳುವದೇನಂದರೆ -- ನೀನು ನನ್ನ ಆಶ್ರಯವೂ ಜೀವಿತರ ದೇಶದಲ್ಲಿ ನನ್ನ ಪಾಲೂ ಆಗಿದ್ದೀ ಎಂಬದೇ. |
6. | ನನ್ನ ಕೂಗನ್ನು ಆಲೈಸು; ನಾನು ಬಹಳ ಕುಂದಿ ಹೋಗಿದ್ದೇನೆ. ನನ್ನನ್ನು ಹಿಂಸಿಸುವವರಿಂದ ನನ್ನನ್ನು ಬಿಡಿಸು; ಅವರು ನನಗಿಂತ ಬಲವುಳ್ಳವರಾಗಿದ್ದಾರೆ. |
7. | ನಿನ್ನ ಹೆಸರನ್ನು ಕೊಂಡಾಡುವ ಹಾಗೆ ನನ್ನ ಪ್ರಾಣ ವನ್ನು ಸೆರೆಯಿಂದ ಹೊರಗೆ ಬರಮಾಡು; ನೀತಿವಂತರು ನನ್ನನ್ನು ಮುತ್ತಿಕೊಳ್ಳುವರು; ನನಗೆ ನೀನು ಉಪಕಾರ ಮಾಡುವಿ. |
← Psalms (142/150) → |