← Psalms (139/150) → |
1. | ಕರ್ತನೇ, ನನ್ನನ್ನು ಪರಿಶೋಧಿಸಿ ತಿಳುಕೊಂಡಿದ್ದೀ; |
2. | ನಾನು ಕೂತು ಕೊಳ್ಳುವದನ್ನೂ ಏಳುವದನ್ನೂ ನೀನು ತಿಳುಕೊಂಡಿದ್ದೀ; ನನ್ನ ಆಲೋಚನೆಯನ್ನು ದೂರದಿಂದ ಗ್ರಹಿಸಿ ಕೊಂಡ್ಡಿದ್ದೀ; |
3. | ನಾನು ನಡೆಯುವದನ್ನೂ ಮಲಗುವದನ್ನೂ ನೀನು ಶೋಧಿಸಿದ್ದೀ; ನನ್ನ ಮಾರ್ಗಗಳೆಲ್ಲಾ ನಿನಗೆ ಗೊತ್ತಾಗಿವೆ. |
4. | ಇಗೋ, ಓ ಕರ್ತನೇ, ನನ್ನ ನಾಲಿಗೆಯಲ್ಲಿ ನಿನಗೆ ತಿಳಿಯದ ಮಾತು ಒಂದಾದರೂ ಇಲ್ಲ. |
5. | ನೀನು ಹಿಂದೆಯೂ ಮುಂದೆಯೂ ನನ್ನನ್ನು ಸುತ್ತಿಕೊಂಡು ನಿನ್ನ ಕೈಯನ್ನು ನನ್ನ ಮೇಲೆ ಇಟ್ಟಿದ್ದೀ. |
6. | ಇಂಥ ತಿಳುವಳಿಕೆಯು ನನಗೆ ಅತಿ ಅದ್ಭುತವಾಗಿದೆ; ಅದು ನನಗೆ ನಿಲುಕದಷ್ಟು ಉನ್ನತವಾಗಿದೆ. |
7. | ನಾನು ನಿನ್ನ ಆತ್ಮಕ್ಕೆ ತಪ್ಪಿಸಿಕೊಂಡು ಎಲ್ಲಿಗೆ ಹೋಗಲಿ? ನಿನ್ನ ಸನ್ನಿಧಿಯಿಂದ ತಪ್ಪಿಸಿಕೊಂಡು ಎಲ್ಲಿಗೆ ಓಡಲಿ? |
8. | ನಾನು ಆಕಾಶಕ್ಕೆ ಏರಿಹೋದರೆ ನೀನು ಅಲ್ಲಿ ಇದ್ದೀ; ಪಾತಾಳದಲ್ಲಿ ನನ್ನ ಹಾಸಿಗೆಯನ್ನು ಮಾಡಿಕೊಂಡರೆ ಅಗೋ, ನೀನು ಅಲ್ಲಿ ಇದ್ದೀ. |
9. | ಉದಯದ ರೆಕ್ಕೆಗಳನ್ನು ಕಟ್ಟಿಕೊಂಡು ಸಮುದ್ರದ ಕಟ್ಟಕಡೆಯಲ್ಲಿ ವಾಸಮಾಡಿದರೆ |
10. | ಅಲ್ಲಿಯೂ ನಿನ್ನ ಕೈ ನನ್ನನ್ನು ನಡಿಸಿ ನಿನ್ನ ಬಲಗೈ ನನ್ನನ್ನು ಹಿಡಿಯುವದು. |
11. | ನಿಶ್ಚಯವಾಗಿ ಕತ್ತಲೆಯು ನನ್ನನ್ನು ಕವಿದು ಕೊಳ್ಳುವದೆಂದು ನಾನು ಹೇಳಿದರೆ ರಾತ್ರಿಯು ನನ್ನ ಸುತ್ತಲೂ ಬೆಳಕಾಗಿರುವದು. |
12. | ಕರ್ತನೇ, ಕತ್ತಲೆಯು ನಿನಗೆ ಕಾಣದಂತೆ ಮುಚ್ಚುವದಿಲ್ಲ; ರಾತ್ರಿಯು ಹಗಲಿನ ಹಾಗೆ ಬೆಳಗುವದು; ಕತ್ತಲೂ ಬೆಳಕೂ ನಿನಗೆ ಒಂದೇ ಆಗಿವೆ. |
13. | ನೀನು ನನ್ನ ಅಂತರಿಂದ್ರಿಯಗಳನ್ನು ರೂಪಿಸಿದ್ದೀ; ನನ್ನ ತಾಯಿಯ ಗರ್ಭದಲ್ಲಿ ನೀನು ನನ್ನನ್ನು ಮುಚ್ಚಿದ್ದೀ. |
14. | ನಾನು ಭಯಭರಿತನಾಗಿಯೂ ಅದ್ಭುತ ವಾಗಿಯೂ ಮಾಡಲ್ಪಟ್ಟದ್ದರಿಂದ ನಿನ್ನನ್ನು ಕೊಂಡಾ ಡುತ್ತೇನೆ; ನಿನ್ನ ಕೆಲಸಗಳು ಅದ್ಭುತಗಳಾಗಿವೆ ಎಂದು ನನ್ನ ಮನಸ್ಸಿಗೆ ಚೆನ್ನಾಗಿ ತಿಳಿದಿದೆ; |
15. | ನಾನು ಮರೆ ಯಲ್ಲಿ ಮಾಡಲ್ಪಟ್ಟಾಗಲೂ ಭೂಮಿಯ ಅಧೋ ಭಾಗಗಳಲ್ಲಿ ವಿಚಿತ್ರವಾಗಿ ಮಾಡಲ್ಪಟ್ಟಾಗಲೂ ನನ್ನ ಅಸ್ತಿತ್ವವು ನಿನಗೆ ಮರೆಯಾಗಿರಲಿಲ್ಲ. |
16. | ಅದು ಇನ್ನೂ ಪೂರ್ಣವಾಗದಿರುವಾಗ ನನ್ನ ಅಸ್ತಿತ್ವವನ್ನು ನಿನ್ನ ಕಣ್ಣುಗಳು ನೋಡಿದವು; ನನ್ನ ಅಂಗಗಳೆಲ್ಲಾ ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟವು; ಅವುಗಳಲ್ಲಿ ಒಂದಾ ದರೂ ಇಲ್ಲದಿದ್ದಾಗ ಅವುಗಳು ರೂಪಿಸಲ್ಪಟ್ಟವು. |
17. | ಓ ದೇವರೇ, ನಿನ್ನ ಆಲೋಚನೆಗಳು ನನಗೆ ಎಷ್ಟೋ ಪ್ರಿಯವಾಗಿವೆ! ಅವುಗಳ ಸಂಖ್ಯೆ ಎಷ್ಟೋ ದೊಡ್ಡ ದಾಗಿದೆ. |
18. | ಅವುಗಳನ್ನು ಲೆಕ್ಕಿಸಿದರೆ ಮರಳು ಗಿಂತ ಹೆಚ್ಚಾಗಿವೆ; ನಾನು ಎಚ್ಚರವಾದಾಗ ಇನ್ನೂ ನಿನ್ನ ಬಳಿಯಲ್ಲಿಯೇ ಇದ್ದೇನೆ. |
19. | ಓ ದೇವರೇ, ನಿಶ್ಚಯವಾಗಿ ನೀನು ದುಷ್ಟನನ್ನು ಕೊಂದುಹಾಕುವಿ; ರಕ್ತ ಪ್ರಿಯರೇ, ನನ್ನಿಂದ ತೊಲ ಗಿರಿ. |
20. | ಅವರು ನಿನಗೆ ವಿರೋಧವಾಗಿ ಕೆಟ್ಟತನದಿಂದ ಮಾತನಾಡುತ್ತಾರೆ; ನಿನ್ನ ವೈರಿಗಳು ನಿನ್ನ ಹೆಸರನ್ನು ವ್ಯರ್ಥವಾಗಿ ಎತ್ತುತ್ತಾರೆ. |
21. | ಓ ಕರ್ತನೇ, ನಾನು ನಿನ್ನನ್ನು ದ್ವೇಷಿಸುವವರನ್ನು ಹಗೆಮಾಡುವದಿಲ್ಲವೋ? ನಿನ್ನ ವಿರೋಧಿಗಳಿಗೆ ನಾನು ಬೇಸರಗೊಳ್ಳುವ ದಿಲ್ಲವೋ? |
22. | ಪೂರ್ಣ ದ್ವೇಷದಿಂದ ಅವರನ್ನು ನಾನು ಹಗೆಮಾಡುತ್ತೇನೆ; ಅವರು ನನ್ನ ಶತ್ರುಗಳೆಂದು ನಾನು ಎಣಿಸುತ್ತೇನೆ. |
23. | ದೇವರೇ, ನನ್ನನ್ನು ಶೋಧಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಪರೀಕ್ಷಿಸಿ ನನ್ನ ಆಲೋಚನೆಗಳನ್ನು ತಿಳಿದುಕೋ. |
24. | ನನ್ನಲ್ಲಿ ದುಷ್ಟತ ನದ ಮಾರ್ಗ ಉಂಟೇನೋ ನೋಡಿ ನಿತ್ಯವಾದ ಮಾರ್ಗದಲ್ಲಿ ನನ್ನನ್ನು ನಡಿಸು. |
← Psalms (139/150) → |