← Psalms (135/150) → |
1. | ಕರ್ತನನ್ನು ಸ್ತುತಿಸಿರಿ. ಕರ್ತನ ಹೆಸರನ್ನು ಸ್ತುತಿಸಿರಿ; ಕರ್ತನ ಆಲಯ ದಲ್ಲಿಯೂ |
2. | ನಮ್ಮ ದೇವರ ಆಲಯದ ಅಂಗಳ ಗಳಲ್ಲಿಯೂ ನಿಲ್ಲುವ ಕರ್ತನ ಸೇವಕರೇ, ಸ್ತುತಿಸಿರಿ. |
3. | ಕರ್ತನನ್ನು ಸ್ತುತಿಸಿರಿ; ಕರ್ತನು ಒಳ್ಳೆಯವನು; ಆತನ ಹೆಸರಿಗೆ ಸ್ತುತಿಗಳನ್ನು ಹಾಡಿರಿ; ಅದು ರಮ್ಯ ವಾದದ್ದು. |
4. | ಕರ್ತನು ಯಾಕೋಬನನ್ನು ತನಗೋ ಸ್ಕರವೂ ಇಸ್ರಾಯೇಲನ್ನು ತನ್ನ ಅಸಾಮಾನ್ಯವಾದ ಸಂಪತ್ತಾಗಿಯೂ ಆದುಕೊಂಡಿದ್ದಾನೆ. |
5. | ಕರ್ತನು ದೊಡ್ಡವನು; ನಮ್ಮ ಕರ್ತನು ಎಲ್ಲಾ ದೇವರುಗಳಿ ಗಿಂತ ದೊಡ್ಡವನೆಂದು ನಾನು ತಿಳಿದಿದ್ದೇನೆ. |
6. | ಕರ್ತನು ಆಕಾಶದಲ್ಲಿಯೂ ಭೂಮಿಯಲ್ಲಿಯೂ ಸಮುದ್ರದ ಲ್ಲಿಯೂ ಎಲ್ಲಾ ಅಗಾಧಗಳಲ್ಲಿಯೂ ತಾನು ಅಪೇಕ್ಷಿಸು ವದನ್ನೆಲ್ಲಾ ಮಾಡುತ್ತಾನೆ. |
7. | ಭೂಮಿಯ ಅಂತ್ಯಗಳಿಂದ ಮೋಡಗಳನ್ನು ಏಳ ಮಾಡಿ, ಮಳೆಗೋಸ್ಕರ ಮಿಂಚು ಗಳನ್ನು ಮಾಡಿ, ಗಾಳಿಯನ್ನು ತನ್ನ ಉಗ್ರಾಣಗಳಿಂದ ಹೊರಗೆ ಬರಮಾಡುತ್ತಾನೆ. |
8. | ಆತನು ಐಗುಪ್ತದ ಚೊಚ್ಚಲಾದವುಗಳನ್ನು, ಮನು ಷ್ಯರು ಮೊದಲುಗೊಂಡು ಪಶುಗಳ ವರೆಗೂ ಹೊಡೆ ದನು. |
9. | ಐಗುಪ್ತವೇ, ನಿನ್ನ ಮಧ್ಯದಲ್ಲಿ ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಫರೋಹನಿಗೂ ಅವನ ಸಕಲ ಸೇವಕರಿಗೂ ವಿರೋಧವಾಗಿ ಕಳುಹಿಸಿದನು. |
10. | ಆತನು ದೊಡ್ಡ ಜನಾಂಗಗಳನ್ನೂ ಬಲವಾದ ಅರಸುಗಳನ್ನೂ ಕೊಂದುಹಾಕಿದನು. |
11. | ಅಮೋರಿ ಯರ ಅರಸನಾದ ಸೀಹೋನನನ್ನೂ ಬಾಷಾನಿನ ಅರಸನಾದ ಓಗನನ್ನೂ ಕಾನಾನಿನ ಎಲ್ಲಾ ರಾಜ್ಯ ಗಳನ್ನೂ ಹೊಡೆದನು. |
12. | ಅವರ ದೇಶವನ್ನು ಬಾಧ್ಯತೆ ಯಾಗಿ ಅಂದರೆ ತನ್ನ ಜನರಾದ ಇಸ್ರಾಯೇಲಿಗೆ ಬಾಧ್ಯತೆಯಾಗಿ ಕೊಟ್ಟನು. |
13. | ಓ ಕರ್ತನೇ, ನಿನ್ನ ಹೆಸರು ಶಾಶ್ವತವಾದದ್ದು, ಓ ಕರ್ತನೇ, ನಿನ್ನ ಜ್ಞಾಪಕವು ತಲತಲಾಂತರಕ್ಕೂ ಇರುವದು. |
14. | ಕರ್ತನು ತನ್ನ ಜನರಿಗೆ ನ್ಯಾಯತೀರಿಸಿ ತನ್ನ ಸೇವಕರನ್ನು ಕನಿಕರಿಸುವನು. |
15. | ಅನ್ಯಜನಾಂಗಗಳ ವಿಗ್ರಹಗಳು ಬೆಳ್ಳಿ ಬಂಗಾರ ದಿಂದ ಮಾಡಿದ ಮನುಷ್ಯನ ಕೈ ಕೆಲಸವಾಗಿವೆ. |
16. | ಅವು ಗಳಿಗೆ ಬಾಯಿ ಉಂಟು, ಮಾತನಾಡುವದಿಲ್ಲ. ಕಣ್ಣುಗ ಳುಂಟು, ನೋಡುವುದಿಲ್ಲ. |
17. | ಕಿವಿಗಳುಂಟು, ಕೇಳುವ ದಿಲ್ಲ. ಅವುಗಳ ಬಾಯಿಯಲ್ಲಿ ಶ್ವಾಸವೇನೂ ಇಲ್ಲ. |
18. | ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸ ವಿಡುವವರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ. |
19. | ಇಸ್ರಾಯೇಲಿನ ಮನೆಯವರೇ, ಕರ್ತನನ್ನು ಸ್ತುತಿ ಸಿರಿ. ಆರೋನನ ಮನೆಯವರೇ, ಕರ್ತನನ್ನು ಸ್ತುತಿಸಿರಿ. |
20. | ಲೇವಿಯ ಮನೆಯವರೇ, ಕರ್ತನನ್ನು ಸ್ತುತಿಸಿರಿ. ಕರ್ತನಿಗೆ ಭಯಪಡುವವರೇ, ಕರ್ತನನ್ನು ಸ್ತುತಿಸಿರಿ. |
21. | ಯೆರೂಸಲೇಮಿನಲ್ಲಿ ವಾಸಿಸುವ ಕರ್ತನಿಗೆ ಚೀಯೋನಿನೊಳಗಿಂದ ಸ್ತುತಿಯುಂಟಾಗಲಿ. ಕರ್ತನನ್ನು ಸ್ತುತಿಸಿರಿ. |
← Psalms (135/150) → |