← Psalms (130/150) → |
1. | ಓ ಕರ್ತನೇ, ಆಗಾಧಗಳೊಳಗಿಂದ ನಿನಗೆ ಕೂಗುತ್ತೇನೆ. |
2. | ಕರ್ತನೇ, ನನ್ನ ಸ್ವರವನ್ನು ಕೇಳು; ನಿನ್ನ ಕಿವಿಗಳು ನನ್ನ ವಿಜ್ಞಾಪನೆಗಳ ಮೊರೆಯನ್ನು ಆಲೈಸುತ್ತಾ ಇರಲಿ. |
3. | ಕರ್ತನೇ, ನೀನು ಅಕ್ರಮಗಳ ಮೇಲೆ ಕಣ್ಣಿಟ್ಟರೆ ಓ ಕರ್ತನೇ, ಯಾರು ನಿಲ್ಲುವರು? |
4. | ಆದರೆ ಜನರು ನಿನಗೆ ಭಯಪಡುವ ಹಾಗೆ ನಿನ್ನಲ್ಲಿ ಕ್ಷಮಾಪಣೆ ಉಂಟು. |
5. | ಕರ್ತನನ್ನು ನಿರೀಕ್ಷಿಸುತ್ತೇನೆ; ನನ್ನ ಪ್ರಾಣವು ನಿರೀಕ್ಷಿಸುತ್ತದೆ; ಆತನ ವಾಕ್ಯದಲ್ಲಿ ನಿರೀಕ್ಷಿಸುತ್ತೇನೆ. |
6. | ಉದಯಕ್ಕಾಗಿ ಕಾದುಕೊಳ್ಳುವವ ರಿಗಿಂತ ಹೌದು, ಉದಯಕ್ಕಾಗಿ ಕಾದುಕೊಳ್ಳುವವರಿ ಗಿಂತ ನನ್ನ ಪ್ರಾಣವು ಕರ್ತನಿಗಾಗಿ ನಿರೀಕ್ಷಿಸುತ್ತದೆ. |
7. | ಇಸ್ರಾಯೇಲು ಕರ್ತನಲ್ಲಿ ನಿರೀಕ್ಷಿಸಲಿ; ಕರ್ತನ ಬಳಿಯಲ್ಲಿ ಕರುಣೆಯೂ ಆತನಲ್ಲಿ ವಿಮೋಚನೆಯೂ ಬಹಳವಾಗಿದೆ. |
8. | ಆತನು ಇಸ್ರಾಯೇಲನ್ನು ಅದರ ಎಲ್ಲಾ ಅಕ್ರಮಗಳಿಂದ ವಿಮೋಚಿಸುವನು. |
← Psalms (130/150) → |