← Psalms (13/150) → |
1. | ಓ ಕರ್ತನೇ, ಎಷ್ಟರ ವರೆಗೆ ನನ್ನನ್ನು ಮರೆಯುವಿ? ಎಂದೆಂದಿಗೂ ಮರೆಯು ವಿಯೋ? ಎಷ್ಟರ ವರೆಗೆ ನಿನ್ನ ಮುಖವನ್ನು ನನ್ನಿಂದ ಮರೆಮಾಡುವಿ? |
2. | ಎಷ್ಟರ ವರೆಗೆ ನನ್ನ ಪ್ರಾಣದಲ್ಲಿ ಆಲೋಚನೆಗಳನ್ನೂ ಪ್ರತಿದಿನ ನನ್ನ ಹೃದಯದಲ್ಲಿ ದುಃಖವನ್ನೂ ಇಟ್ಟುಕೊಳ್ಳಬೇಕು? ಎಷ್ಟರ ವರೆಗೆ ನನ್ನ ಶತ್ರುವು ನನ್ನ ಮೇಲೆ ಹೆಚ್ಚಿಸಿಕೊಳ್ಳುವನು? |
3. | ನನ್ನ ದೇವರಾದ ಓ ಕರ್ತನೇ, ದೃಷ್ಟಿಸಿ ನನಗೆ ಉತ್ತರಕೊಡು; ನಾನು ಮರಣದ ನಿದ್ದೆಮಾಡದ ಹಾಗೆಯೂ |
4. | ನನ್ನ ಶತ್ರುವು--ಅವನನ್ನು ಗೆದ್ದೆನೆಂದು ಹೇಳದ ಹಾಗೆಯೂ ನಾನು ಕದಲುವಾಗ ನನ್ನನ್ನು ಹಿಂಸಿಸುವವರು ಉಲ್ಲಾಸಪಡದ ಹಾಗೆಯೂ ನನ್ನ ಕಣ್ಣುಗಳನ್ನು ಬೆಳಗುವ ಹಾಗೆ ಮಾಡು. |
5. | ನಾನಾದರೋ ನಿನ್ನ ಕರುಣೆಯಲ್ಲಿ ಭರವಸವಿ ಟ್ಟಿದ್ದೇನೆ; ನಿನ್ನ ರಕ್ಷಣೆಯಲ್ಲಿ ನನ್ನ ಹೃದಯವು ಉಲ್ಲಾ ಸಪಡುವದು. |
6. | ನಾನು ಕರ್ತನಿಗೆ ಹಾಡುವೆನು; ಆತನು ನನಗೆ ಮೇಲು ಮಾಡಿದ್ದಾನೆ. |
← Psalms (13/150) → |