← Psalms (125/150) → |
1. | ಕರ್ತನಲ್ಲಿ ಭರವಸವಿಡುವವರು ಚೀಯೋನ್ ಪರ್ವತದ ಹಾಗಿ ದ್ದಾರೆ; ಅದು ಕದಲದೆ ಯುಗಯುಗಕ್ಕೂ ಇರುವದು. |
2. | ಯೆರೂಸಲೇಮಿನ ಸುತ್ತಲೂ ಬೆಟ್ಟಗಳಿರುವಂತೆ ಕರ್ತನು ಈಗಿನಿಂದ ಯುಗಯುಗಕ್ಕೂ ತನ್ನ ಜನರ ಸುತ್ತಲೂ ಇದ್ದಾನೆ. |
3. | ನೀತಿವಂತರು ತಮ್ಮ ಕೈಗಳನ್ನು ಅನ್ಯಾಯಕ್ಕೆ ಚಾಚದ ಹಾಗೆ, ದುಷ್ಟನ ಕೋಲು ನೀತಿವಂತರ ಸ್ವಾಸ್ತ್ಯದ ಮೇಲೆ ನೆಲೆಯಾಗಿರುವದಿಲ್ಲ. |
4. | ಓ ಕರ್ತನೇ, ಒಳ್ಳೆಯವರಿಗೂ ಯಥಾರ್ಥ ಹೃದಯವುಳ್ಳವರಿಗೂ ಒಳ್ಳೇದನ್ನು ಮಾಡು. |
5. | ಆದರೆ ತಮ್ಮ ಡೊಂಕು ಮಾರ್ಗಗಳಲ್ಲಿ ತಿರುಗುವವರನ್ನು ದುಷ್ಟತನ ಮಾಡುವವರ ಸಂಗಡ ಕರ್ತನು ಹೋಗ ಮಾಡುವನು. ಇಸ್ರಾಯೇಲಿನ ಮೇಲೆ ಸಮಾಧಾನ ವಿರುವದು. |
← Psalms (125/150) → |