← Psalms (121/150) → |
1. | ನಾನು ಕಣ್ಣೆತ್ತಿ ಬೆಟ್ಟಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವದು? |
2. | ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ ಕರ್ತನ ಬಳಿಯಿಂದಲೇ ನನ್ನ ಸಹಾ ಯವು ಬರುತ್ತದೆ. |
3. | ಆತನು ನಿನ್ನ ಪಾದವನ್ನು ಕದಲಿ ಸದಿರಲಿ; ನಿನ್ನನ್ನು ಕಾಪಾಡುವಾತನು ತೂಕಡಿಸುವ ದಿಲ್ಲ. |
4. | ಇಗೋ, ಇಸ್ರಾಯೇಲನ್ನು ಕಾಪಾಡುವಾತನು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ. |
5. | ಕರ್ತನು ನಿನ್ನನ್ನು ಕಾಪಾಡುವಾತನಾಗಿದ್ದಾನೆ; ಕರ್ತನು ನಿನ್ನ ಬಲ ಗಡೆಯಲ್ಲಿ ನಿನ್ನ ನೆರಳಿನಂತೆ ಇದ್ದಾನೆ. |
6. | ಹಗಲಲ್ಲಿ ಸೂರ್ಯನೂ ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವದಿಲ್ಲ. |
7. | ಕರ್ತನು ಎಲ್ಲಾ ಕೇಡಿನಿಂದ ನಿನ್ನನೂ ನಿನ್ನ ಪ್ರಾಣವನ್ನೂ ಕಾಪಾಡುವನು. |
8. | ಕರ್ತನು ನಿನ್ನ ಹೋಗೋಣವನ್ನೂ ಬರೋಣವನ್ನೂ ಇಂದಿನಿಂದ ಸದಾಕಾಲವೂ ಕಾಪಾಡುವನು. |
← Psalms (121/150) → |