← Psalms (11/150) → |
1. | ಕರ್ತನಲ್ಲಿ ನಾನು ಭರವಸವನ್ನು ಇಟ್ಟಿದ್ದೇನೆ; ಪಕ್ಷಿಯಂತೆ ನಿಮ್ಮ ಬೆಟ್ಟಕ್ಕೆ ಓಡು ಎಂದು ನನ್ನ ಪ್ರಾಣಕ್ಕೆ ನೀವು ಹೇಳುವದು ಹೇಗೆ? |
2. | ಇಗೋ, ದುಷ್ಟರು ಬಿಲ್ಲು ಬೊಗ್ಗಿಸಿ ಯಥಾರ್ಥ ಹೃದಯವುಳ್ಳವರ ಮೇಲೆ ಗುಪ್ತವಾಗಿ ಎಸೆಯುವದಕ್ಕೆ ತಮ್ಮ ಬಾಣವನ್ನು ಬಿಲ್ಲಿಗೆ ಹೂಡಿ ಸಿದ್ಧಮಾಡುತ್ತಾರೆ. |
3. | ಅಸ್ತಿವಾರಗಳೇ ನಿರ್ಮೂಲವಾದರೆ ನೀತಿವಂತನು ಏನು ಮಾಡಬಹುದು? |
4. | ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಕರ್ತನ ಸಿಂಹಾಸನವು ಪರಲೋಕದಲ್ಲಿ ಅದೆ; ಆತನ ಕಣ್ಣುಗಳು ದೃಷ್ಟಿಸುತ್ತವೆ; ಆತನ ರೆಪ್ಪೆಗಳು ಮನು ಷ್ಯನ ಮಕ್ಕಳನ್ನು ಶೋಧಿಸುತ್ತವೆ; |
5. | ಕರ್ತನು ನೀತಿ ವಂತನನ್ನು ಶೋಧಿಸುತ್ತಾನೆ; ಆದರೆ ದುಷ್ಟನನ್ನೂ ಬಲಾತ್ಕಾರ ಪ್ರಿಯನನ್ನೂ ಆತನ ಪ್ರಾಣವು ಹಗೆ ಮಾಡುತ್ತದೆ. |
6. | ದುಷ್ಟರ ಮೇಲೆ ಉರ್ಲುಗಳನ್ನೂ ಬೆಂಕಿಯನ್ನೂ ಗಂಧಕವನ್ನೂ ಉರಿಗಾಳಿಯನ್ನೂ ಆತನು ಸುರಿಸುವನು. ಇದು ಅವರ ಪಾನದ ಬಟ್ಟ ಲಾಗಿರುವದು; |
7. | ನೀತಿಯ ಕರ್ತನು ನೀತಿಯನ್ನು ಪ್ರೀತಿ ಮಾಡುತ್ತಾನೆ; ಆತನ ಮುಖವು ಯಥಾರ್ಥನನ್ನು ದೃಷ್ಟಿಸುತ್ತದೆ. |
← Psalms (11/150) → |