← Psalms (103/150) → |
1. | ಓ ನನ್ನ ಮನವೇ, ಕರ್ತನನ್ನೂ ನನ್ನ ಎಲ್ಲಾ ಅಂತರಂಗವೇ, ಆತನ ಪರಿಶುದ್ಧವಾದ ಹೆಸರನ್ನೂ ಸ್ತುತಿಸು. |
2. | ಓ ನನ್ನ ಮನವೇ, ಕರ್ತನನ್ನು ಸ್ತುತಿಸು. ಆತನ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ. |
3. | ಆತನು ನಿನ್ನ ಅಪ ರಾಧಗಳನ್ನೆಲ್ಲಾ ಮನ್ನಿಸಿ ನಿನ್ನ ರೋಗಗಳನ್ನೆಲ್ಲಾ ಸ್ವಸ್ಥ ಮಾಡಿ |
4. | ನಿನ್ನ ಜೀವವನ್ನು ನಾಶದೊಳಗಿಂದ ವಿಮೋ ಚಿಸಿ ಪ್ರೀತಿ ಕೃಪೆಯನ್ನೂ ಅಂತಃಕರಣಗಳನ್ನೂ ನಿನಗೆ ಕಿರೀಟವಾಗಿ ಇಟ್ಟು |
5. | ನಿನ್ನ ಯೌವನವು ಹದ್ದಿನಂತೆ ಹೊಸದಾಗುವ ಹಾಗೆ ನಿನ್ನ ಬಾಯಿಯನ್ನು ಒಳ್ಳೇದ ರಿಂದ ತೃಪ್ತಿಪಡಿಸುತ್ತಾನೆ. |
6. | ಕುಗ್ಗಿಸಲ್ಪಡುವವರೆಲ್ಲರಿಗೆ ಕರ್ತನು ನೀತಿಯನ್ನೂ ನ್ಯಾಯವನ್ನೂ ನಡಿಸುತ್ತಾನೆ. |
7. | ಆತನು ತನ್ನ ಮಾರ್ಗಗಳನ್ನು ಮೋಶೆಗೂ ತನ್ನ ಕ್ರಿಯೆಗಳನ್ನು ಇಸ್ರಾಯೇಲಿನ ಮಕ್ಕಳಿಗೂ ತಿಳಿಯಮಾಡಿದನು. |
8. | ಕರ್ತನು ಅಂತಃಕರಣವೂ ದಯೆಯೂ ದೀರ್ಘಶಾಂತಿಯೂ ಬಹಳ ಕೃಪೆಯೂ ಉಳ್ಳವನಾಗಿದ್ದಾನೆ. |
9. | ಆತನು ಸದಾಕಾಲಕ್ಕೂ ಗದರಿಸುವದಿಲ್ಲ; ನಿತ್ಯವೂ ಕೋಪಿ ಸುವಾತನಲ್ಲ; |
10. | ನಮ್ಮ ಪಾಪಗಳಿಗೆ ತಕ್ಕಂತೆ ನಮಗೆ ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳ ಪ್ರಕಾರ ನಮ್ಮನ್ನು ದಂಡಿಸಲಿಲ್ಲ. |
11. | ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ಆತನ ಕೃಪೆಯು ಆತನಿಗೆ ಭಯಪಡುವವರ ಮೇಲೆ ಅಷ್ಟು ಅಪಾರವಾಗಿದೆ. |
12. | ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರವೋ ನಮ್ಮ ದ್ರೋಹಗಳನ್ನು ನಮ್ಮಿಂದ ಅಷ್ಟು ದೂರ ಮಾಡಿದ್ದಾನೆ. |
13. | ತಂದೆಯು ಮಕ್ಕಳ ಮೇಲೆ ಅಂತಃಕರಣ ಪಡುವ ಪ್ರಕಾರ ಕರ್ತನು ತನಗೆ ಭಯಪಡುವವರ ಮೇಲೆ ಅಂತಃಕರಣಪಡುವವನಾಗಿದ್ದಾನೆ. |
14. | ಆತನು ನಮ್ಮ ಪ್ರಕೃತಿಯನ್ನು ತಿಳುಕೊಂಡು ನಾವು ಧೂಳಿ ಯಾಗಿದ್ದೇವೆಂದು ಜ್ಞಾಪಕಮಾಡಿಕೊಳ್ಳುತ್ತಾನೆ; |
15. | ಮನುಷ್ಯನ ದಿವಸಗಳೋ ಹುಲ್ಲಿನ ಹಾಗೆ ಅವೆ; ಅವನು ಹೊಲದ ಹೂವಿನ ಹಾಗೆಯೇ ಶೋಭಿಸುತ್ತಾನೆ. |
16. | ಆದಾಗ್ಯೂ ಗಾಳಿಯು ಅದರ ಮೇಲೆ ಬೀಸುತ್ತಲೇ ಅದು ಇಲ್ಲದೆ ಹೋಗುತ್ತದೆ; ಅದರ ಸ್ಥಳವು ಅದನ್ನು ಇನ್ನು ಅರಿಯದು. |
17. | ಆದರೆ ಕರ್ತನ ಕೃಪೆಯು ಆತನಿಗೆ ಭಯಪಡುವವರ ಮೇಲೆಯೂ ಆತನ ನೀತಿಯು ಮಕ್ಕಳ ಮಕ್ಕಳಿಗೂ |
18. | ಆತನ ಒಡಂಬಡಿಕೆಯನ್ನು ಕೈಕೊಂಡು ಆತನ ಕಟ್ಟಳೆಗಳನ್ನು ನೆನಸಿ ಅದರಂತೆ ಮಾಡುವವರಿಗೂ ನಿತ್ಯತ್ವದಿಂದ ನಿತ್ಯತ್ವಕ್ಕೂ ಇರುವದು. |
19. | ಕರ್ತನು ಆಕಾಶಗಳಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನ ರಾಜ್ಯವು ಎಲ್ಲರ ಮೇಲೆ ಆಳುತ್ತದೆ. |
20. | ಆತನ ದೂತರೇ, ಆತನ ಮಾತಿನ ಸ್ವರವನ್ನು ಕೇಳಿ, ಆತನ ಆಜ್ಞೆಗಳನ್ನು ನಡಿಸುವ ಶ್ರೇಷ್ಠರಾದ ಶೂರರೇ, |
21. | ಕರ್ತನನ್ನು ಸ್ತುತಿಸಿರಿ. ಆತನ ಎಲ್ಲಾ ಸೈನ್ಯಗಳೇ, ಆತನ ಇಷ್ಟವನ್ನು ನಡಿಸುವ ಆತನ ಸೇವಕರೇ, ಕರ್ತನನ್ನು ಸ್ತುತಿಸಿರಿ. |
22. | ಆತನ ಆಳಿಕೆಯ ಎಲ್ಲಾ ಸ್ಥಳಗಳಲ್ಲಿ ಇರುವ ಆತನ ಎಲ್ಲಾ ಕೆಲಸಗಳೇ. ಕರ್ತನನ್ನು ಸ್ತುತಿಸಿರಿ. ನನ್ನ ಮನವೇ, ಕರ್ತನನ್ನು ಸ್ತುತಿಸು. |
← Psalms (103/150) → |