← Proverbs (31/31) |
1. | ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ಪ್ರವಾದನೆಯು. |
2. | ನನ್ನ ಮಗನೇ ಏನು? ನನ್ನ ಗರ್ಭಪುತ್ರನೇ ಏನು? ನನ್ನ ಪ್ರತಿಜ್ಞೆಯ ಮಗನೇ ಏನು? |
3. | ನಿನ್ನ ತ್ರಾಣವನ್ನು ಸ್ತ್ರೀಯರಲ್ಲಿ ಒಪ್ಪಿಸದಿರು, ಇಲ್ಲವೆ ಅರಸರನ್ನು ನಾಶಪಡಿಸುವ ದಾರಿಗಳಿಗೆ ತಿರುಗಬೇಡ. |
4. | ದ್ರಾಕ್ಷಾರಸವನ್ನು ಕುಡಿ ಯುವದು ರಾಜರಿಗೆ ಯೋಗ್ಯವಲ್ಲ; ಓ ಲೆಮೂ ವೇಲನೇ, ಅದು ಅರಸರಿಗೆ ಬೇಡ; ಇಲ್ಲವೆ ಪ್ರಭುಗ ಳಿಗೆ ಕುಡಿಯುವದು ಹಿತವಲ್ಲ; |
5. | ಕುಡಿದರೆ ಅವರು ಕಟ್ಟಿಳೆಯನ್ನು ಮರೆತು ಬಾಧಿತರಲ್ಲಿ ಯಾವನಿಗಾದರೂ ನ್ಯಾಯತೀರ್ಪನ್ನು ವ್ಯತ್ಯಾಸಮಾಡುತ್ತಾರೆ. |
6. | ನಾಶ ವಾಗುವದಕ್ಕೆ ಸಿದ್ಧವಾಗಿರುವವನಿಗೆ ಮದ್ಯವನ್ನೂ ಮನೋವ್ಯಥೆಪಡುವವರಿಗೆ ದ್ರಾಕ್ಷಾರಸವನ್ನೂ ಕೊಡು. |
7. | ಅವನು ಕುಡಿದು ತನ್ನ ಬಡತನವನ್ನು ಮರೆತುಬಿಡಲಿ; ತನ್ನ ಶ್ರೆಮೆಯನ್ನು ಇನ್ನು ಜ್ಞಾಪಕಕ್ಕೆ ತಾರದಿರಲಿ; |
8. | ಮೂಕರಿಗಾಗಿಯೂ ನಾಶವಾಗುವದಕ್ಕೆ ನೇಮಿಸಲ್ಪಟ್ಟ ವರೆಲ್ಲರಿಗಾಗಿಯೂ ನಿನ್ನ ಬಾಯನ್ನು ತೆರೆ. |
9. | ನಿನ್ನ ಬಾಯಿ ತೆರೆದು ನೀತಿಯಿಂದ ನ್ಯಾಯತೀರಿಸು; ದರಿದ್ರ ರಿಗಾಗಿಯೂ ದಿಕ್ಕಿಲ್ಲದವರಿಗಾಗಿಯೂ ವ್ಯಾಜ್ಯಮಾಡು. |
10. | ಗುಣವತಿಯಾದ ಸ್ತ್ರೀಯನ್ನು ಯಾವನು ಕಂಡು ಕೊಂಡಾನು? ಅವಳ ಕ್ರಯ ಹವಳಕ್ಕಿಂತಲೂ ಅಮೂ ಲ್ಯವೇ. |
11. | ತನಗೆ ಯಾವ ನಷ್ಟವೂ ಇರದಂತೆ ಅವಳ ಪತಿಯ ಹೃದಯವು ತನ್ನಲ್ಲಿ ನಿರ್ಭಯವಾಗಿ ಭರವಸೆ ಇಡುತ್ತದೆ. |
12. | ತನ್ನ ಜೀವಮಾನದಲ್ಲೆಲ್ಲಾ ಆಕೆಯು ಅವನಿಗೆ ಕೆಟ್ಟದ್ದನ್ನಲ್ಲ, ಒಳ್ಳೇದನ್ನೇ ಮಾಡುವಳು. |
13. | ಆಕೆಯು ಉಣ್ಣೆಯನ್ನೂ ಸಣಬನ್ನೂ ಹುಡುಕು ವವಳಾಗಿ ತನ್ನ ಕೈಗಳಿಂದ ಮನಃಪೂರ್ವಕವಾಗಿ ಕೆಲಸ ಮಾಡುತ್ತಾಳೆ. |
14. | ಆಕೆಯು ವರ್ತಕರ ಹಡಗುಗಳಂತೆ ಇದ್ದಾಳೆ; ಆಕೆಯು ದೂರದಿಂದ ತನ್ನ ಆಹಾರವನ್ನು ತರುತ್ತಾಳೆ. |
15. | ಆಕೆಯು ಇನ್ನೂ ಕತ್ತಲಿರುವಾಗಲೇ ಎದ್ದು ತನ್ನ ಮನೆಯವರಿಗೆ ಆಹಾರವನ್ನು ಕೊಟ್ಟು ತನ್ನ ದಾಸಿಯರಿಗೆ ಭತ್ಯವನ್ನು ಹಂಚುತ್ತಾಳೆ. |
16. | ಆಕೆಯು ಯೋಚಿಸಿ ಹೊಲವನ್ನು ಕೊಂಡುಕೊಳ್ಳುತ್ತಾಳೆ; ತನ್ನ ಕೈಕೆಲಸದ ಫಲದಿಂದ ಆಕೆಯು ದ್ರಾಕ್ಷಾಲತೆಗಳನ್ನು ನೆಡುತ್ತಾಳೆ. |
17. | ಆಕೆಯು ತನ್ನ ಬಲದಿಂದ ನಡುವನ್ನು ಕಟ್ಟಿಕೊಂಡು ತನ್ನ ತೋಳುಗಳನ್ನು ಶಕ್ತಿಗೊಳಿಸುತ್ತಾಳೆ. |
18. | ತನ್ನ ವ್ಯಾಪಾರದ ಸರಕು ಒಳ್ಳೇದೆಂದು ಆಕೆಯು ತಿಳು ಕೊಳ್ಳುತ್ತಾಳೆ; ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು. |
19. | ರಾಟೆಯ ಮೇಲೆ ಕೈಹಾಕಿ ತನ್ನ ಕೈಗಳು ಕದರನ್ನು ಹಿಡಿಯುತ್ತವೆ. |
20. | ಆಕೆಯು ಬಡವರಿಗಾಗಿ ಕೈ ಬಿಚ್ಚುತ್ತಾಳೆ; ಹೌದು, ದಿಕ್ಕಿಲ್ಲದವರಿಗೆ ಆಕೆಯು ಕೈ ನೀಡುತ್ತಾಳೆ. |
21. | ತನ್ನ ಮನೆಯವರಿಗಾಗಿ ಆಕೆಯು ಹಿಮಕ್ಕೆ ಭಯಪಡುವದಿಲ್ಲ; ಆಕೆಯ ಮನೆಯವ ರೆಲ್ಲರೂ ರಕ್ತಾಂಭರಗಳಿಂದ ಹೊದಿಸಲ್ಪಟ್ಟಿದ್ದಾರೆ. |
22. | ಆಕೆಯು ತನಗಾಗಿ ರತ್ನ ಕಂಬಳಿಗಳನ್ನು ಮಾಡು ತ್ತಾಳೆ; ಆಕೆಯ ಉಡುಪೋ ರೇಷ್ಮೆ ರಕ್ತಾಂಭರ. |
23. | ದೇಶದ ಹಿರಿಯರ ಮಧ್ಯದಲ್ಲಿ ತನ್ನ ಪತಿಯು ಕೂತಿ ರುವಾಗ ಅವನು ದ್ವಾರಗಳಲ್ಲಿ ಪ್ರಸಿದ್ಧನಾಗಿರುವನು. |
24. | ಆಕೆಯು ನಯವಾದ ನಾರುಮಡಿಯನ್ನು ನೇಯ್ದು ಮಾರಾಟ ಮಾಡುತ್ತಾಳೆ; ಆಕೆಯು ವರ್ತಕನಿಗೆ ನಡುಕಟ್ಟುಗಳನ್ನು ಒಪ್ಪಿಸುತ್ತಾಳೆ. |
25. | ಆಕೆಯ ಉಡುಪು ಬಲವೂ ಘನತೆಯೂ ಆಗಿವೆ; ಭವಿಷ್ಯತ್ತಿ ನಲ್ಲಿ ಆಕೆಯು ಸಂತೋಷಿಸುವಳು. |
26. | ಆಕೆಯು ಜ್ಞಾನದಿಂದ ತನ್ನ ಬಾಯಿ ತೆರೆಯುತ್ತಾಳೆ; ತನ್ನ ನಾಲಿಗೆಯಲ್ಲಿ ದಯೆಯ ಉಪದೇಶವಿರುವದು. |
27. | ಆಕೆಯು ತನ್ನ ಗೃಹಕೃತ್ಯಗಳ ನ್ನೆಲ್ಲಾ ಚೆನ್ನಾಗಿ ನೋಡಿಕೊಂಡವಳಾಗಿ ಸೋಮಾರಿ ತನದ ರೊಟ್ಟಿಯನ್ನು ತಿನ್ನುವದಿಲ್ಲ. |
28. | ಆಕೆಯ ಮಕ್ಕಳು ಎದ್ದು ಆಕೆಯನ್ನು ಧನ್ಯಳೆಂದು ಕರೆಯುತ್ತಾರೆ; ಆಕೆಯ ಪತಿಯು ಸಹ ಹೊಗಳುತ್ತಾನೆ. |
29. | ಅವನು--ಬಹು ಮಂದಿ ಕುಮಾರ್ತೆಯರು ಗುಣವತಿಯಾಗಿ ನಡೆದಿ ದ್ದಾರೆ; ಆದರೆ ನೀನು ಅವರೆಲ್ಲರಿಗಿಂತಲೂ ಶ್ರೇಷ್ಠಳು ಎಂದು ತನ್ನ ಪತಿಯು ಹೊಗಳುತ್ತಾನೆ. |
30. | ಸೌಂದ ರ್ಯವು ಮೋಸಕರ; ಲಾವಣ್ಯವು ವ್ಯರ್ಥ; ಕರ್ತನಿಗೆ ಭಯಪಡುವವಳು ಹೊಗಳಲ್ಪಡುವಳು. |
31. | ಆಕೆಯ ಕೈಕೆಲಸದ ಪ್ರತಿಫಲವನ್ನು ಸಲ್ಲಿಸಿರಿ; ದ್ವಾರಗಳಲ್ಲಿ ಆಕೆಯ ಕಾರ್ಯಗಳು ಆಕೆಯನ್ನು ಹೊಗಳಲಿ. |
← Proverbs (31/31) |