← Proverbs (30/31) → |
1. | ಯಾಕೆ ಎಂಬವನ ಮಗನಾದ ಆಗೂರನ ಪ್ರವಾದನೆಯ ಮಾತುಗಳು; ಇವನು ಇಥಿಯೇಲನಿಗೆ ಹೌದು, ಇಥಿಯೇಲನಿಗೂ ಉಕ್ಕಾಲ ನಿಗೂ ಹೀಗೆ ಹೇಳಿದನು. |
2. | ಖಂಡಿತವಾಗಿಯೂ ಪ್ರತಿಯೊಬ್ಬ ಮನುಷ್ಯನಿಗಿಂತ ನಾನು ಪಶುಪ್ರಾಯನು; ಮನುಷ್ಯನ ವಿವೇಕವು ನನಗೆ ಇಲ್ಲ. |
3. | ನಾನು ಜ್ಞಾನವನ್ನು ಪಡೆದುಕೊಂಡಿಲ್ಲ; ಅಲ್ಲದೆ ಪರಿಶುದ್ಧನ ವಿಷಯವಾದ ತಿಳುವಳಿಕೆಯು ನನಗಿಲ್ಲ. |
4. | ಆಕಾಶಕ್ಕೆ ಏರಿದವನು ಇಲ್ಲವೆ ಇಳಿದವನು ಯಾರು? ತನ್ನ ಮುಷ್ಟಿಗಳಲ್ಲಿ ಗಾಳಿಯನ್ನು ಕೂಡಿಸಿದವನಾರು? ವಸ್ತ್ರದಲ್ಲಿ ನೀರನ್ನು ಕಟ್ಟಿದವ ನಾರು? ಭೂಮಿಯ ಕೊನೆಗಳನ್ನೆಲ್ಲಾ ಸ್ಥಾಪಿಸಿದವ ನಾರು? ನೀನು ಹೇಳುವದಾದರೆ ಆತನ ಹೆಸರೇನು? ಆತನ ಮಗನ ಹೆಸರೇನು? |
5. | ದೇವರ ಪ್ರತಿಯೊಂದು ಮಾತು ಶುದ್ಧವಾಗಿದೆ; ಆತನಲ್ಲಿ ಭರವಸವಿಡುವವನಿಗೆ ಆತನು ಗುರಾಣಿಯಾಗಿದ್ದಾನೆ. |
6. | ಆತನು ನಿನ್ನನ್ನು ಗದರಿಸುವಂತೆಯೂ ನೀನು ಸುಳ್ಳುಗಾರನೆಂದು ತೋರು ವಂತೆಯೂ ಆತನ ಮಾತುಗಳಿಗೆ ಯಾವದನ್ನು ಸೇರಿಸ ಬೇಡ. |
7. | ನಿನ್ನಿಂದ ಎರಡನ್ನು ಕೇಳಿಕೊಂಡಿದ್ದೇನೆ; ನಾನು ಸಾಯುವದಕ್ಕಿಂತ ಮುಂಚೆ ಅವುಗಳನ್ನು ಕೊಡುವದಕ್ಕೆ ಹಿಂತೆಗೆಯಬೇಡ; |
8. | ವ್ಯರ್ಥತ್ವವನ್ನೂ ಸುಳ್ಳುಗಳನ್ನೂ ನನ್ನಿಂದ ದೂರವಾಗಿ ತೆಗೆದುಹಾಕು. ಬಡತನವಾಗಲಿ ಐಶ್ವರ್ಯವಾಗಲಿ ನನಗೆ ಕೊಡಬೇಡ; ನನಗೆ ತಕ್ಕಷ್ಟು ಆಹಾರವನ್ನು ಭೋಜನ ಮಾಡಿಸು; |
9. | ಇಲ್ಲವಾದರೆ ನಾನು ಸಂತೃಪ್ತನಾಗಿ ನಿನ್ನನ್ನು ನಿರಾಕರಿಸಿ--ಕರ್ತನು ಯಾರು ಎಂದು ಹೇಳಿಯೇನು? ಇಲ್ಲವೆ ನಾನು ಬಡವನಾಗಿ ಕದ್ದುಕೊಂಡು ದೇವರ ನಾಮವನ್ನು ಅಯೋಗ್ಯವಾಗಿ ಎತ್ತೇನು. |
10. | ಅವನ ಯಜಮಾನನಿಗೆ ಸೇವಕನ ವಿಷಯವಾಗಿ ದೂರು ಹೇಳಬೇಡ; ಇದ ರಿಂದ ಅವನು ಶಪಿಸಾನು; ಆಗ ನೀನು ದೋಷಿ ಯಾಗುವಿ. |
11. | ತಮ್ಮ ತಂದೆಯನ್ನು ಶಪಿಸಿ ತಮ್ಮ ತಾಯಿಗೆ ಶುಭವನ್ನು ಕೋರದೆ ಇರುವ ವಂಶಾವಳಿ ಇದೆ. |
12. | ತಮ್ಮ ಮಲಿನತ್ವದಿಂದ ಇನ್ನು ತೊಳೆಯಲ್ಪಡದೆ ತಮ್ಮ ದೃಷ್ಟಿಯಲ್ಲಿ ಶುದ್ಧವಾಗಿರುವ ಒಂದು ವಂಶಾವಳಿಯು ಇದೆ. |
13. | ಒಂದು ವಂಶಾ ವಳಿಯು ಇದೆ: ಅದರ ಕಣ್ಣುಗಳು ಎಷ್ಟೋ ಉನ್ನತ ವಾಗಿವೆ! ಅದರ ಕಣ್ಣು ರೆಪ್ಪೆಗಳು ಎತ್ತಲ್ಪಟ್ಟಿವೆ. |
14. | ಭೂಮಿಯೊಳಗಿಂದ ಬಡವರನ್ನೂ ಮನುಷ್ಯ ರೊಳಗಿಂದ ದಿಕ್ಕಿಲ್ಲದವರನ್ನೂ ನುಂಗುವಂತೆ ತಮ್ಮ ಹಲ್ಲುಗಳು ಖಡ್ಗಗಳಂತೆಯೂ ತಮ್ಮ ದವಡೆಯ ಹಲ್ಲು ಗಳು ಕತ್ತಿಗಳಂತೆಯೂ ಇರುವ ಒಂದು ವಂಶಾವಳಿಯು ಇದೆ. |
15. | ಕೊಡು, ಕೊಡು ಎಂದು ಕೂಗುವ ಇಬ್ಬರು ಹೆಣ್ಣುಮಕ್ಕಳು ಜಿಗಣೆಗೆ ಇವೆ. ಎಂದಿಗೂ ತೃಪ್ತಿಪಡದ ಮೂರು ಸಂಗತಿಗಳು ಇವೆ; ಹೌದು, ಸಾಕು ಎಂದು ಹೇಳದಿರುವ ನಾಲ್ಕು ಸಂಗತಿಗಳಿವೆ. |
16. | ಯಾವವಂದರೆ: ಸಮಾಧಿ, ಬಂಜೆಯಾದ ಗರ್ಭ, ನೀರಿನಿಂದ ತುಂಬ ದಿದ್ದ ಭೂಮಿ, ಸಾಕೆಂದು ಹೇಳದೆ ಇರುವ ಬೆಂಕಿ. |
17. | ತನ್ನ ತಂದೆಯನ್ನು ಹಾಸ್ಯಮಾಡಿ ತನ್ನ ತಾಯಿಯನ್ನು ಧಿಕ್ಕರಿಸುವವನ ಕಣ್ಣನ್ನು ಕಣಿವೆಯ ಕಾಗೆಗಳು ಕಿತ್ತು ಹಾಕುವವು, ಪ್ರಾಯದ ಹದ್ದುಗಳು ಅದನ್ನು ತಿನ್ನು ವವು. |
18. | ನನಗೆ ಆಶ್ಚರ್ಯವಾದ ಮೂರು ಸಂಗತಿಗ ಳಿವೆ. ಹೌದು, ನಾನು ಅರಿಯದಿರುವ ನಾಲ್ಕು ಸಂಗ ತಿಗಳಿವೆ-- |
19. | ಆಕಾಶದಲ್ಲಿ ಹದ್ದಿನ ಹಾದಿ, ಬಂಡೆಯ ಮೇಲೆ ಸರ್ಪದ ಸರಣಿ; ಸಮುದ್ರದಲ್ಲಿ ಹಡಗಿನ ಮಾರ್ಗ, ಕನ್ಯೆಯೊಂದಿಗೆ ಮನುಷ್ಯನ ಮಾರ್ಗ. |
20. | ಜಾರಸ್ತ್ರೀಯ ನಡತೆಯು ಹಾಗೆಯೇ ಇದೆ; ಅವಳು ತಿಂದು ತನ್ನ ಬಾಯನ್ನು ಒರಸಿಕೊಂಡು--ನಾನು ಯಾವ ಕೆಟ್ಟದ್ದನ್ನೂ ಮಾಡಲಿಲ್ಲ ಎಂದು ಹೇಳುತ್ತಾಳೆ. |
21. | ಭೂಮಿಯು ಮೂರರಿಂದ ಕಳವಳಗೊಳ್ಳುತ್ತದೆ; ನಾಲ್ವರನ್ನು ಅದು ತಾಳಲಾರದು |
22. | ಆಳುವ ದಾಸನು, ಹೊಟ್ಟೆತುಂಬಿದ ನೀಚನು, |
23. | ಮದುವೆಯಾದ ಚಂಡಿಯು, ತನ್ನ ಯಜಮಾನಳಿಗೆ ಬಾಧ್ಯಸ್ಥಳಾದ ದಾಸಿಯು. |
24. | ಭೂಮಿಯ ಮೇಲೆ ಅಧಿಕ ಜ್ಞಾನವು ಳ್ಳವುಗಳಾದ ನಾಲ್ಕು ಸಣ್ಣ ಪ್ರಾಣಿಗಳು ಇವೆ. |
25. | ಇರುವೆಗಳು ದುರ್ಬಲ ಜಾತಿಯಾಗಿದ್ದರೂ ಬೇಸಿಗೆ ಯಲ್ಲಿ ತಮ್ಮ ಆಹಾರವನ್ನು ಸಿದ್ಧಮಾಡಿಕೊಳ್ಳುತ್ತವೆ. |
26. | ಮೊಲಗಳು ಬಲಹೀನವಾದ ಜಾತಿಯಾಗಿದ್ದರೂ ಅವು ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳು ತ್ತವೆ. |
27. | ಮಿಡತೆಗಳಿಗೆ ಅರಸನಿಲ್ಲ; ಆದರೂ ಅವೆಲ್ಲಾ ದಂಡುದಂಡಾಗಿ ಹೋಗುತ್ತವೆ. |
28. | ಜೇಡರ ಹುಳು ತನ್ನ ಕೈಗಳಿಂದ ಹಿಡಿದುಕೊಳ್ಳುತ್ತದೆ; ಅದು ಅರಮನೆ ಗಳಲ್ಲಿ ಇರುತ್ತದೆ. |
29. | ಗಂಭೀರ ಗಮನದ ಮೂರು ಪ್ರಾಣಿಗಳಿವೆ; ಹೌದು, ನಡತೆಯಲ್ಲಿ ಅಂದವಾಗಿರುವ ನಾಲ್ಕು ಪ್ರಾಣಿಗಳಿವೆ. |
30. | ಮೃಗಗಳಲ್ಲಿ ಬಲಿಷ್ಠವಾಗಿ ರುವ ಸಿಂಹವು ಯಾವದಕ್ಕೂ ಹೆದರುವುದಿಲ್ಲ. |
31. | ಬೇಟೆಯ ನಾಯಿ; ಹೋತವು ಸಹ; ಸೈನ್ಯಸಮೇತ ನಾದ ಅರಸನು. |
32. | ನೀನು ಉಬ್ಬಿಕೊಂಡು ಮೂರ್ಖ ನಾಗಿ ನಡೆದಿದ್ದರೆ ಇಲ್ಲವೆ ಕೆಟ್ಟದ್ದಾಗಿ ಆಲೋಚಿಸಿದ್ದರೆ ನಿನ್ನ ಬಾಯಿಯ ಮೇಲೆ ಕೈಯಿಟ್ಟುಕೋ. |
33. | ಹಾಲು ಕರೆಯುವದರಿಂದ ನಿಜವಾಗಿಯೂ ಬೆಣ್ಣೆ ಬರುತ್ತದೆ; ಮೂಗು ಹಿಂಡುವದರಿಂದ ರಕ್ತ ಬರುತ್ತದೆ; ಹಾಗೆಯೇ ಕೋಪವನ್ನೆಬ್ಬಿಸುವದರಿಂದ ಜಗಳ ಬರುತ್ತದೆ. |
← Proverbs (30/31) → |