← Proverbs (29/31) → |
1. | ಅನೇಕ ಸಲ ಗದರಿಸಲ್ಪಟ್ಟರೂ ಬಗ್ಗದಕುತ್ತಿಗೆಯವನು ಏಳದ ಹಾಗೆ ಫಕ್ಕನೆ ಮುರಿದು ಬೀಳುವನು. |
2. | ನೀತಿವಂತರು ಅಧಿಕಾರದಲ್ಲಿ ದ್ದಾಗ ಜನರು ಹರ್ಷಿಸುತ್ತಾರೆ; ದುಷ್ಟನು ಆಳಿದರೆ ಜನರು ಶೋಕಿಸುತ್ತಾರೆ. |
3. | ಜ್ಞಾನವನ್ನು ಪ್ರೀತಿಸುವವನು ತನ್ನ ತಂದೆಯನ್ನು ಹರ್ಷಗೊಳಿಸುತ್ತಾನೆ; ವೇಶ್ಯೆಯ ರೊಂದಿಗೆ ಸಹವಾಸ ಮಾಡುವವನು ತನ್ನ ಆಸ್ತಿಯನ್ನು ವೆಚ್ಚಮಾಡುತ್ತಾನೆ. |
4. | ನ್ಯಾಯತೀರ್ಪಿನಿಂದ ಅರಸನು ದೇಶವನ್ನು ಸ್ಥಿರಗೊಳಿಸುತ್ತಾನೆ; ಲಂಚಗಳನ್ನು ಸ್ವೀಕರಿಸು ವವನು ಅದನ್ನು ಕೆಡವಿಹಾಕುತ್ತಾನೆ. |
5. | ತನ್ನ ನೆರೆಯವ ನನ್ನು ಮುಖಸ್ತುತಿ ಮಾಡುವವನು ಅವನ ಪಾದಗಳಿಗೆ ಬಲೆಯನ್ನು ಒಡ್ಡುತ್ತಾನೆ. |
6. | ಕೆಟ್ಟವನ ದೋಷದಲ್ಲಿ ಉರ್ಲು ಇದೆ; ನೀತಿವಂತನು ಹಾಡಿ ಹರ್ಷಿಸುತ್ತಾನೆ. |
7. | ಬಡವರ ನಿಮಿತ್ತ ನೀತಿವಂತನು ಯೋಚಿಸುತ್ತಾನೆ; ದುಷ್ಟನು ಅದನ್ನು ತಿಳುಕೊಳ್ಳುವಂತೆ ಲಕ್ಷ್ಯಕ್ಕೆ ತರುವ ದಿಲ್ಲ. |
8. | ಪರಿಹಾಸ್ಯಗಾರರು ಪಟ್ಟಣಕ್ಕೆ ಉರ್ಲನ್ನು ಒಡ್ಡು ತ್ತಾರೆ; ಜ್ಞಾನಿಗಳು ಕೋಪವನ್ನು ತಿರುಗಿಸುವರು. |
9. | ಜ್ಞಾನಿಯು ಬುದ್ಧಿಹೀನನೊಂದಿಗೆ ವ್ಯಾಜ್ಯ ಮಾಡಿ ದರೆ ಅವನು ರೇಗಿದರೂ ನಕ್ಕರೂ ಶಮನವಾಗುವು ದಿಲ್ಲ. |
10. | ಕೊಲೆಪಾತಕರು ನೀತಿವಂತರನ್ನು ದ್ವೇಷಿಸು ತ್ತಾರೆ; ಯಥಾರ್ಥವಂತರು ಅವನ ಪ್ರಾಣವನ್ನು ಹುಡು ಕುತ್ತಾರೆ. |
11. | ಮೂಢನು ತನ್ನ ಮನಸ್ಸನ್ನೆಲ್ಲಾ ಹೊರ ಪಡಿಸುತ್ತಾನೆ; ಜ್ಞಾನಿಯು ಅದನ್ನು ಕಾಯುತ್ತಾನೆ. |
12. | ಸುಳ್ಳಿಗೆ ಕಿವಿಗೊಡುವ ಅಧಿಕಾರಿಗೆ ಕಿವಿಗೊಟ್ಟರೆ ಅವನ ಸೇವಕರೆಲ್ಲರೂ ದುಷ್ಟರೇ. |
13. | ಬಡವರೂ ಮೋಸಗಾರರೂ ಒಟ್ಟಾಗಿ ಸಂಧಿಸುತ್ತಾರೆ; ಕರ್ತನು ಅವರಿಬ್ಬರ ಕಣ್ಣುಗಳನ್ನು ಬೆಳಗಿಸುತ್ತಾನೆ. |
14. | ಬಡವರಿಗೆ ನಂಬಿಕೆಯಿಂದ ನ್ಯಾಯತೀರಿಸುವ ಅರಸನ ಸಿಂಹಾ ಸನವು ಎಂದೆಂದಿಗೂ ಸ್ಥಿರಗೊಳ್ಳುವದು. |
15. | ಬೆತ್ತ ಬೆದ ರಿಕೆಗಳು ಜ್ಞಾನವನ್ನುಂಟುಮಾಡುತ್ತವೆ; ಶಿಕ್ಷಿಸದೆ ಬಿಟ್ಟ ಹುಡುಗನು ತನ್ನ ತಾಯಿಗೆ ಅವಮಾನವನ್ನು ತರುತ್ತಾನೆ. |
16. | ದುಷ್ಟರು ವೃದ್ಧಿಯಾದಾಗ ದೋಷವು ಹೆಚ್ಚುತ್ತದೆ; ನೀತಿವಂತರು ಅವರ ಬೀಳುವಿಕೆಯನ್ನು ಕಣ್ಣಾರೆ ನೋಡುವರು. |
17. | ನಿನ್ನ ಮಗನನ್ನು ಶಿಕ್ಷಿಸಿದರೆ ಅವ ನಿಂದ ನಿನಗೆ ನೆಮ್ಮದಿಯಾಗುವದು; ಹೌದು, ಅವನು ನಿನ್ನ ಪ್ರಾಣಕ್ಕೆ ಆನಂದವನ್ನುಂಟು ಮಾಡುವನು. |
18. | ದರ್ಶನವಿಲ್ಲದಿರುವಲ್ಲಿ ಜನರು ನಾಶವಾಗುತ್ತಾರೆ; ನ್ಯಾಯಪ್ರಮಾಣವನ್ನು ಕೈಕೊಳ್ಳುವವನು ಧನ್ಯನು. |
19. | ಮಾತುಗಳಿಂದ ಸೇವಕನು ಶಿಕ್ಷಿಸಲ್ಪಡುವದಿಲ್ಲ; ಅವನು ತಿಳಿದುಕೊಂಡರೂ ಉತ್ತರಿಸುವದಿಲ್ಲ. |
20. | ತನ್ನ ಮಾತುಗಳಲ್ಲಿ ದುಡುಕುವವನನ್ನು ನೀನು ನೋಡಿದ್ದೀಯೋ? ಅವನಿಗಿಂತಲೂ ಬುದ್ದಿಹೀನನ ವಿಷಯ ದಲ್ಲಿ ಹೆಚ್ಚು ನಿರೀಕ್ಷೆ ಇದೆ. |
21. | ಬಾಲ್ಯದಿಂದ ತನ್ನ ಸೇವಕನನ್ನು ಕೋಮಲವಾಗಿ ಸಾಕುವವನು ತರುವಾಯ ತನಗೆ ಮಗನಂತೆ ಆಗುವನು. |
22. | ಕೋಪಿಷ್ಠನು ಜಗಳ ವನ್ನೆಬ್ಬಿಸುತ್ತಾನೆ; ರೋಷಗೊಂಡವನು ದೋಷದಲ್ಲಿ ತುಂಬಿರುತ್ತಾನೆ. |
23. | ಮನುಷ್ಯನ ಗರ್ವವು ತನ್ನನ್ನು ಹೀನಸ್ಥಿತಿಗೆ ತರುವದು; ಆತ್ಮದಲ್ಲಿ ದೀನರಾಗಿರುವವರು ಸನ್ಮಾನಹೊಂದುವರು. |
24. | ಕಳ್ಳರೊಂದಿಗೆ ಪಾಲು ಗಾರನು ತನ್ನನ್ನು ತಾನೇ ಹಗೆಮಾಡುತ್ತಾನೆ; ಅವನು ಶಾಪವನ್ನು ಕೇಳಿತಿಳಿಸುವದಿಲ್ಲ. |
25. | ಮನುಷ್ಯನ ಭಯವು ಉರುಲನ್ನು ತರುತ್ತದೆ; ಕರ್ತನಲ್ಲಿ ಭರವಸ ವಿಡುವವನು ಕ್ಷೇಮದಿಂದಿರುವನು. |
26. | ಅನೇಕರು ಅಧಿ ಪತಿಯ ದಯೆಯನ್ನು ಹುಡುಕುತ್ತಾರೆ; ಕರ್ತನಿಂದಲೇ ಪ್ರತಿಯೊಬ್ಬನ ನ್ಯಾಯತೀರ್ಪು ಬರುತ್ತದೆ. |
27. | ಅನೀತಿ ವಂತನು ನೀತಿವಂತರಿಗೆ ಅಸಹ್ಯ; ತನ್ನ ಮಾರ್ಗದಲ್ಲಿ ಯಥಾರ್ಥವಾಗಿರುವವನು ದುಷ್ಟರಿಗೆ ಅಸಹ್ಯ. |
← Proverbs (29/31) → |