← Proverbs (26/31) → |
1. | ಬೇಸಿಗೆಯಲ್ಲಿ ಹಿಮದಂತೆಯೂ ಸುಗ್ಗಿಯಲ್ಲಿ ಮಳೆಯಂತೆಯೂ ಬುದ್ಧಿಹೀನನಿಗೆ ಮಾನ ವು ಸರಿಯಲ್ಲ. |
2. | ಅಲೆದಾಡುವ ಪಕ್ಷಿಯಂತೆಯೂ ಹಾರಾ ಡುವ ಬಾನಕ್ಕಿಯಂತೆಯೂ ಕಾರಣವಿಲ್ಲದ ನಾಶವು ಬರುವದಿಲ್ಲ. |
3. | ಕುದುರೆಗೆ ಬಾರುಗೋಲು, ಕತ್ತೆಗೆ ಕಡಿ ವಾಣ, ಮೂಢನ ಬೆನ್ನಿಗೆ ಬೆತ್ತ. |
4. | ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಿಸಬೇಡ; ಇಲ್ಲವಾದರೆ ನೀನು ಅವನಿಗೆ ಸಮಾನನಾದೀಯೇ. |
5. | ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಕೊಡು; ಇಲ್ಲವಾದರೆ ತನ್ನ ದೃಷ್ಟಿ ಯಲ್ಲಿ ಅವನು ಜ್ಞಾನಿಯಾದಾನು. |
6. | ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು ಪಾದಗಳನ್ನು ಕಡಿದು ಕೇಡನ್ನು ಕುಡಿಯುತ್ತಾನೆ. |
7. | ಕುಂಟನ ಕಾಲು ಗಳು ಸಮವಲ್ಲ; ಹಾಗೆಯೇ ಬುದ್ಧಿಹೀನರ ಬಾಯಲ್ಲಿ ಸಾಮ್ಯವು ಇರುತ್ತದೆ. |
8. | ಕವಣಿಯಲ್ಲಿ ಕಲ್ಲನ್ನು ಕಟ್ಟುವವನ ಹಾಗೆಯೇ ಮೂಢನಿಗೆ ಮಾನಕೊಡುವವನು ಇರು ವನು. |
9. | ಕುಡುಕನ ಕೈಯಲ್ಲಿ ಮುಳ್ಳು ಹೊಕ್ಕಂತೆ ಬುದ್ಧಿ ಹೀನರ ಬಾಯಲ್ಲಿ ಸಾಮ್ಯವು ಇರುವದು. |
10. | ಎಲ್ಲವು ಗಳನ್ನು ನಿರ್ಮಿಸಿದ ಮಹಾ ದೇವರು ತಾನೇ ಮೂಢ ನಿಗೂ ಅಪರಾಧಿಗಳಿಗೂ ಪ್ರತಿಫಲ ಕೊಡುತ್ತಾನೆ. |
11. | ತಾನು ಕಕ್ಕಿದ್ದಕ್ಕೆ ನಾಯಿಯು ತಿರುಗುವಂತೆ ಮೂಢನು ತನ್ನ ಮೂಢತನಕ್ಕೆ ಹಿಂದಿರುಗುತ್ತಾನೆ. |
12. | ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾದವನನ್ನು ನೀನು ನೋಡಿ ದ್ದೀಯೋ? ಅವನಿಗಿಂತ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯು ಇರುತ್ತದೆ, |
13. | ಸೋಮಾರಿಯು --ದಾರಿಯಲ್ಲಿ ಸಿಂಹವಿದೆ, ಬೀದಿಗಳಲ್ಲಿ ಸಿಂಹ ಇದೆ ಎಂದು ಹೇಳುತ್ತಾನೆ. |
14. | ಬಾಗಲು ತಿರುಗುಣಿಗಳ ಮೇಲೆ ಹೇಗೆ ತಿರುಗುತ್ತದೋ ಹಾಗೆಯೇ ಸೋಮಾರಿಯು ತನ್ನ ಹಾಸಿಗೆಯ ಮೇಲೆ ತಿರುಗುತ್ತಾನೆ. |
15. | ಸೋಮಾ ರಿಯು ಎದೆಯಲ್ಲಿ ತನ್ನ ಕೈಯನ್ನು ಮುಚ್ಚಿಕೊಳ್ಳುತ್ತಾನೆ; ತಿರುಗಿ ಅದನ್ನು ತನ್ನ ಬಾಯಿಯ ಹತ್ತಿರ ತರುವದಕ್ಕೆ ಕೊರಗುತ್ತಾನೆ. |
16. | ತನ್ನ ಸ್ವಂತ ಅಭಿಪ್ರಾಯವುಳ್ಳ ಸೋಮಾರಿಯು ನೆವ ಹೇಳುವ ಏಳು ಮಂದಿಗಿಂತ ಜಾಣನಾಗಿದ್ದಾನೆ. |
17. | ಹಾದು ಹೋಗುತ್ತಾ ತನ್ನದಾಗ ದಿರುವ ವ್ಯಾಜ್ಯದಲ್ಲಿ ತಲೆಹಾಕುವವನು ಕಿವಿಹಿಡಿದು ನಾಯಿಯನ್ನು ತೆಗೆದುಕೊಂಡು ಹೋಗುವವನಂತೆ ಇದ್ದಾನೆ. |
18. | ನೆರೆಯವನನ್ನು ಮೋಸಗೊಳಿಸಿ ತಮಾಷೆ ಗೋಸ್ಕರ ಮಾಡಿದೆನಲ್ಲಾ ಎನ್ನುವವನು-- |
19. | ಕೊಳ್ಳಿ ಗಳನ್ನೂ ಅಂಬುಗಳನ್ನೂ ಸಾವನ್ನೂ ಬೀರುವ ದೊಡ್ಡ ಹುಚ್ಚನ ಹಾಗೆ. |
20. | ಕಟ್ಟಿಗೆ ಇಲ್ಲದಿರುವಲ್ಲಿ ಬೆಂಕಿಯು ಆರಿ ಹೋಗುತ್ತದೆ--ಹಾಗಯೇ ಚಾಡಿಕೋರನು ಇಲ್ಲ ದಿರುವಲ್ಲಿ ಜಗಳ ಶಮನವಾಗುವದು. |
21. | ಕೆಂಡಗಳಿಗೆ ಇದ್ದಲು, ಬೆಂಕಿಗೆ ಕಟ್ಟಿಗೆ; ಹಾಗೆಯೇ ಜಗಳವನ್ನು ಕೆರಳಿಸುವಂತೆ ಕಲಹಮಾಡುವವನು ಇರುವನು. |
22. | ಚಾಡಿಕೋರನ ಮಾತುಗಳು ಗಾಯಗಳ ಹಾಗೆ ಹೊಟ್ಟೆಯೊಳಕ್ಕೆ ಇಳಿಯುತ್ತವೆ. |
23. | ಉರಿಯುವ ತುಟಿ ಗಳೂ ಕೆಟ್ಟಹೃದಯವೂ ಬೆಳ್ಳಿಯ ಕಿಟ್ಟದಿಂದ ಮುಚ್ಚ ಲ್ಪಟ್ಟ ಬೋಕಿಯಂತೆ ಇದೆ. |
24. | ಹಗೆಮಾಡುವವನು ತನ್ನ ತುಟಿಗಳಿಂದ ಮೋಸವನ್ನು ನಟಿಸುತ್ತಾನೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾನೆ. |
25. | ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ. |
26. | ಯಾವನ ಹಗೆ ತನವು ಮೋಸದಿಂದ ಮುಚ್ಚಲ್ಪಟ್ಟಿದೆಯೋ ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವದು. |
27. | ಗುಂಡಿ ಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ; ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರಿಗಿ ಹೊರಳುವದು. |
28. | ಸುಳ್ಳು ನಾಲಿಗೆಯಿಂದ ಬಾಧಿಸಲ್ಪ ಟ್ಟವರನ್ನೇ ಅದು ಹಗೆಮಾಡುವದು; ಮುಖಸ್ತುತಿ ಮಾಡುವ ಬಾಯಿಯು ನಾಶನವನ್ನುಂಟುಮಾಡುತ್ತದೆ. |
← Proverbs (26/31) → |