← Proverbs (22/31) → |
1. | ಬಹು ಐಶ್ವರ್ಯಕ್ಕಿಂತಲೂ ಒಳ್ಳೆಯ ಹೆಸರನ್ನೂ ಬೆಳ್ಳಿ ಬಂಗಾರಕ್ಕಿಂತ ಪ್ರೀತಿಯ ದಯವನ್ನೂ ಆರಿಸಿಕೊಳ್ಳುವದು ಉತ್ತಮ. |
2. | ಧನಿಕರು, ಬಡವರು ಒಟ್ಟಾಗಿ ಸಂಧಿಸುತ್ತಾರೆ; ಅವರೆಲ್ಲರನ್ನು ಸೃಷ್ಟಿಸಿದಾತನು ಕರ್ತನೇ. |
3. | ಜಾಣನು ಕೇಡನ್ನು ಮುಂದಾಗಿ ನೋಡಿ ಅಡಗಿಕೊಳ್ಳುತ್ತಾನೆ; ಬುದ್ಧಿಹೀನರು ಮುಂದೆ ಹೋಗಿ ಶಿಕ್ಷೆಯನ್ನು ಹೊಂದುತ್ತಾರೆ. |
4. | ಐಶ್ವ ರ್ಯವೂ ಮಾನವೂ ಜೀವವೂ ವಿನಯ ಕರ್ತನ ಭಯದಿಂದಲೇ. |
5. | ಮೂಢರ ದಾರಿಯಲ್ಲಿ ಮುಳ್ಳು ಗಳೂ ಉರುಲುಗಳೂ ಇವೆ; ತನ್ನ ಪ್ರಾಣವನ್ನು ಕಾಪಾ ಡಿಕೊಳ್ಳುವವನು ಅವುಗಳಿಂದ ದೂರವಾಗಿರುವನು. |
6. | ನಡೆಯಬೇಕಾದ ಮಾರ್ಗದಲ್ಲಿರುವಂತೆ ಹುಡುಗನಿಗೆ ಶಿಕ್ಷಣಕೊಡು; ಆಗ ಮುಪ್ಪಿನಲ್ಲಿಯೂ ಅವನು ಅದ ರಿಂದ ಹೊರಟು ಹೋಗುವದಿಲ್ಲ. |
7. | ಐಶ್ವರ್ಯವಂತನು ಬಡವನ ಮೇಲೆ ಆಳುತ್ತಾನೆ. ಸಾಲಗಾರನು ಸಾಲಕೊಟ್ಟ ವನಿಗೆ ಸೇವಕನು. |
8. | ಕೆಟ್ಟತನವನ್ನು ಬಿತ್ತುವವನು ವ್ಯರ್ಥ ವನ್ನು ಕೊಯ್ಯುವನು; ಅವನ ಕೋಪದ ದಂಡವು ಬಿದ್ದುಹೋಗುವದು. |
9. | ದಯಾದೃಷ್ಟಿಯುಳ್ಳವನು ಆಶೀ ರ್ವಾದವನ್ನು ಹೊಂದುವನು; ತನಗಿದ್ದ ಆಹಾರದಲ್ಲಿ ಬಡವರಿಗೆ ಕೊಡುತ್ತಾನೆ. |
10. | ಪರಿಹಾಸ್ಯ ಮಾಡುವವ ನನ್ನು ಹೊರಗೆ ತಳ್ಳಿಬಿಟ್ಟರೆ ಕಲಹವು ನಿಲ್ಲುವದು; ಹೌದು, ವಿವಾದವೂ ನಿಂದೆಯೂ ನಿಂತುಹೋಗು ವವು. |
11. | ಹೃದಯ ಶುದ್ಧಿಯನ್ನು ಪ್ರೀತಿಸುವವನಿಗೆ ತನ್ನ ತುಟಿಗಳ ಕೃಪೆಗಾಗಿ ಅರಸನು ಅವನಿಗೆ ಸ್ನೇಹಿತ ನಾಗಿರುವನು. |
12. | ಕರ್ತನ ಕಣ್ಣುಗಳು ತಿಳುವಳಿಕೆಯನ್ನು ಕಾಪಾಡುತ್ತವೆ; ಆತನು ದೋಷಿಯ ಮಾತುಗಳನ್ನು ಕೆಡವಿಹಾಕುತ್ತಾನೆ. |
13. | ಸೋಮಾರಿಯು--ಹೊರಗೆ ಸಿಂಹವಿದೆ; ಅದು ನನ್ನನ್ನು ಬೀದಿಗಳಲ್ಲಿ ಕೊಂದು ಹಾಕುತ್ತದೆ ಎಂದು ಹೇಳುತ್ತಾನೆ. |
14. | ಪರಸ್ತ್ರೀಯ ಬಾಯಿ ಆಳವಾದ ಕುಣಿ; ಕರ್ತನಿಗೆ ಅಸಹ್ಯವಾದವನು ಅದರಲ್ಲಿ ಬೀಳುವನು. |
15. | ಮೂರ್ಖತನವು ಹುಡುಗನ ಹೃದಯದಲ್ಲಿ ಕಟ್ಟಲ್ಪಟ್ಟಿದೆ. ಶಿಕ್ಷೆಯ ಬೆತ್ತವು ಅದನ್ನು ಅವನಿಂದ ದೂರವಾಗಿ ಓಡಿಸಿಬಿಡುವದು. |
16. | ತನ್ನ ಐಶ್ವರ್ಯವನ್ನು ವೃದ್ಧಿಗೊಳಿಸುವದಕ್ಕಾಗಿ ಬಡವರನ್ನು ಹಿಂಸಿಸುವವನೂ ಐಶ್ವರ್ಯವಂತರಿಗೆ ಕೊಡುವವನೂ ನಿಶ್ಚಯವಾಗಿ ಕೊರತೆಪಡುವನು. |
17. | ಕಿವಿಗೊಟ್ಟು ಜ್ಞಾನಿ ಗಳ ಮಾತನ್ನು ಕೇಳು; ನನ್ನ ತಿಳುವಳಿಕೆಗೆ ನಿನ್ನ ಹೃದಯ ವನ್ನು ಪ್ರಯೋಗಿಸು. |
18. | ಅವುಗಳನ್ನು ನಿನ್ನೊಳಗೆ ಕಾಪಾಡಿದರೆ ಅದು ರಮ್ಯವಾಗಿದೆ; ಅವು ನಿನ್ನ ತುಟಿ ಗಳಲ್ಲಿ ಹೊಂದಿಕೊಂಡಿರುವವು. |
19. | ನಿನ್ನ ಭರವಸವು ಕರ್ತನಲ್ಲಿ ಇರುವಂತೆ ನಿನಗೆ ಈ ದಿವಸ ತಿಳಿಯ ಪಡಿಸಿದ್ದೇನೆ. |
20. | ಸತ್ಯದ ಮಾತುಗಳ ಸ್ಥಿರತೆಯನ್ನು ನಾನು ನಿನಗೆ ತಿಳಿಯಪಡಿಸುವಂತೆಯೂ ನಿನ್ನ ಕಡೆಗೆ ಕಳುಹಿ ಸಿದವರಿಗೆ |
21. | ನೀನು ಸತ್ಯದ ಮಾತುಗಳನ್ನು ಉತ್ತರಿ ಸುವಂತೆಯೂ ಆಲೋಚನೆಗಳ ತಿಳುವಳಿಕೆಯಲ್ಲಿ ಶ್ರೇಷ್ಠವಾದ ಸಂಗತಿಗಳನ್ನು ನಿನಗೆ ಬರೆಯಲಿಲ್ಲವೋ? |
22. | ಅವನು ಬಡವನೆಂದು ಬಡವನನ್ನು ಸೂರೆಮಾಡ ಬೇಡ; ಮಾತ್ರವಲ್ಲದೆ ದ್ವಾರದಲ್ಲಿ ದರಿದ್ರರನ್ನು ಹಿಂಸಿಸ ಬೇಡ. |
23. | ಕರ್ತನು ಅವರ ವ್ಯಾಜ್ಯವನ್ನು ನಡಿಸಿ ಸೂರೆ ಮಾಡಿದವರ ಪ್ರಾಣವನ್ನು ಸೂರೆಮಾಡುವನು. |
24. | ಸಿಟ್ಟುಗಾರನೊಂದಿಗೆ ಸ್ನೇಹಮಾಡಬೇಡ; ಕೋಪಿ ಷ್ಠನ ಸಂಗಡ ನೀನು ಹೋಗಬೇಡ. |
25. | ಹಾಗೆ ಮಾಡಿ ದರೆ ನೀನು ಅವನ ನಡತೆಗಳನ್ನು ಕಲಿತು ನಿನ್ನ ಪ್ರಾಣಕ್ಕೆ ಉರ್ಲನ್ನು ಸಿಕ್ಕಿಸಿಕೊಳ್ಳುವಿ. |
26. | ಕೈ ಕೊಡುವವರಲ್ಲಿ ಇಲ್ಲವೆ ಸಾಲಕ್ಕೆ ಹೊಣೆಯಾಗುವವರಲ್ಲಿ ನೀನು ಒಬ್ಬ ನಾಗಬೇಡ. |
27. | ಸಲ್ಲಿಸುವದಕ್ಕೆ ನಿನಗೆ ಏನೂ ಇಲ್ಲದೆ ಹೋದರೆ ನಿನ್ನ ಕೆಳಗಿನ ಹಾಸಿಗೆಯನ್ನು ಅವನು ತೆಗೆದು ಕೊಂಡು ಹೋಗುವದು ಯಾಕೆ? |
28. | ನಿನ್ನ ಪಿತೃಗಳು ಹಾಕಿದ ಪೂರ್ವಕಾಲದ ಮೇರೆಯನ್ನು ತೆಗೆಯಬೇಡ. |
29. | ತನ್ನ ಕೆಲಸದಲ್ಲಿ ಶ್ರದ್ಧೆಯುಳ್ಳವನನ್ನು ನೀನು ನೋಡಿ ದ್ದೀಯಾ? ಅವನು ನೀಚರ ಮುಂದೆ ಅಲ್ಲ, ಅರಸರ ಮುಂದೆಯೇ ನಿಲ್ಲುವನು. |
← Proverbs (22/31) → |