← Proverbs (21/31) → |
1. | ನೀರಿನ ನದಿಗಳಂತೆ ಅರಸನ ಹೃದಯವು ಕರ್ತನ ಕೈಯಲ್ಲಿದೆ; ತನಗೆ ಇಷ್ಟವಾದ ಕಡೆಗೆ ಆತನು ಅದನ್ನು ತಿರುಗಿಸುತ್ತಾನೆ. |
2. | ತನ್ನ ದೃಷ್ಟಿ ಯಲ್ಲಿ ಮನುಷ್ಯನ ಪ್ರತಿಯೊಂದು ಮಾರ್ಗವು ಸರಿ ಯಾಗಿದೆ; ಕರ್ತನು ಹೃದಯಗಳನ್ನು ಪರೀಕ್ಷಿಸುತ್ತಾನೆ. |
3. | ಯಜ್ಞಕ್ಕಿಂತ ನೀತಿನ್ಯಾಯಗಳನ್ನು ನಡಿಸುವದು ಕರ್ತ ನಿಗೆ ಎಷ್ಟೋ ಮೆಚ್ಚಿಕೆಯಾಗಿದೆ. |
4. | ಹೆಮ್ಮೆಯ ದೃಷ್ಟಿ, ಗರ್ವದ ಹೃದಯ, ದುಷ್ಟರ ಉಳುವಿಕೆ ಪಾಪವೇ. |
5. | ಶ್ರದ್ಧೆಯುಳ್ಳ ಯೋಚನೆಗಳು ಸಮ್ಮದ್ಧಿಗೆ ಒಲಿಯುತ್ತವೆ; ಆತುರಪಡುವ ಪ್ರತಿಯೊಬ್ಬನ ಯೋಚನೆಗಳು ಕೊರ ತೆಗೆ ಉಳಿಯುತ್ತವೆ. |
6. | ಸುಳ್ಳಿನ ನಾಲಿಗೆಯಿಂದ ಸಂಪಾ ದಿಸುವ ಸಂಪತ್ತು ಮೃತ್ಯುವನ್ನು ಹುಡುಕುವವರಿಂದ ಬಡಿಯಲ್ಪಟ್ಟ ವ್ಯರ್ಥತ್ವವಾಗಿದೆ. |
7. | ದುಷ್ಟರ ಸೂರೆಯು ಅವರನ್ನು ನಾಶಪಡಿಸುವದು; ನ್ಯಾಯವಾದದ್ದನ್ನು ಮಾಡುವದನ್ನು ಅವರು ನಿರಾಕರಿಸುತ್ತಾರೆ. |
8. | ಮನುಷ್ಯನ ಮಾರ್ಗವು ಡೊಂಕು ಮತ್ತು ಅಪರಿಚಿತ; ಪವಿತ್ರನಿ ಗಾದರೋ ಅವನ ಕ್ರಿಯೆಯು ಸರಳ. |
9. | ವಿಶಾಲವಾದ ಮನೆಯಲ್ಲಿ ಜಗಳಗಂಟಿಯೊಂದಿಗೆ ಇರುವದಕ್ಕಿಂತ ಮಾಳಿಗೆಯ ಒಂದು ಮೂಲೆಯಲ್ಲಿ ವಾಸಿಸುವದು ಲೇಸು. |
10. | ದುಷ್ಟರ ಮನಸ್ಸು ಕೇಡನ್ನು ಅಪೇಕ್ಷಿಸುತ್ತದೆ; ಅವನ ದೃಷ್ಟಿಯಲ್ಲಿ ತನ್ನ ನೆರೆಯವನು ಯಾವ ದಯೆ ಯನ್ನು ಕಂಡುಕೊಳ್ಳುವದಿಲ್ಲ. |
11. | ಪರಿಹಾಸ್ಯಕರನ್ನು ಶಿಕ್ಷಿಸಿ ದರೆ ಬುದ್ಧಿಹೀನರು ಜ್ಞಾನವಂತರಾಗುವರು; ಜ್ಞಾನಿಯು ಶಿಕ್ಷಣ ಹೊಂದಿದರೆ ಅವನು ತಿಳುವಳಿಕೆಯನ್ನು ಹೊಂದು ತ್ತಾನೆ. |
12. | ನೀತಿವಂತನು ದುಷ್ಟನ ಮನೆಯನ್ನು ಬುದ್ಧಿ ಯಿಂದ ಲಕ್ಷಿಸುತ್ತಾನೆ; ಅವರ ದುಷ್ಟತನಕ್ಕಾಗಿ ದೇವರು ಅವರನ್ನು ಕೆಡವುತ್ತಾನೆ. |
13. | ಬಡವರ ಕೂಗಿಗೆ ತನ್ನ ಕಿವಿಗಳನ್ನು ಮುಚ್ಚಿಕೊಳ್ಳುವವನು ತಾನು ಕೂಗಿದಾಗ ಯಾರೂ ಅವನಿಗೆ ಉತ್ತರಕೊಡುವದಿಲ್ಲ. |
14. | ಗುಪ್ತ ಲಂಚವು ಕೋಪವನ್ನು ಅಡಗಿಸುವದು; ಎದೆಯಲ್ಲಿ ಕೊಟ್ಟ ಬಹುಮಾನವು ರೌದ್ರವನ್ನು ಆರಿಸುತ್ತದೆ. |
15. | ನ್ಯಾಯತೀರಿಸುವದು ನೀತಿವಂತರಿಗೆ ಸಂತೋಷವಾ ಗಿದೆ; ಅಕ್ರಮವನ್ನು ಮಾಡುವವರಿಗೆ ನಾಶನ. |
16. | ವಿವೇ ಕದ ಮಾರ್ಗವನ್ನು ಬಿಟ್ಟು, ತಿರುಗುವವನು ಸತ್ತವರ ಕೂಟದಲ್ಲಿ ಇರುವಂಥವನಾಗಿದ್ದಾನೆ. |
17. | ಭೋಗಾಸ ಕ್ತನು ಕೊರತೆಪಡುವನು; ದ್ರಾಕ್ಷಾರಸವನ್ನೂ ತೈಲವನ್ನೂ ಅಪೇಕ್ಷಿಸುವವನು ನಿರ್ಭಾಗ್ಯನಾಗುವನು. |
18. | ನೀತಿ ವಂತರಿಗಾಗಿ ದುಷ್ಟರೂ ಯಥಾರ್ಥವಂತರಿಗಾಗಿ ದೋಷಕರೂ ಈಡಾಗುವರು. |
19. | ಕಾಡುವ ಕೋಪವುಳ್ಳ ಸ್ತ್ರೀಯೊಂದಿಗೆ ವಾಸಮಾಡುವದಕ್ಕಿಂತ ಅಡವಿಯಲ್ಲಿ ವಾಸಿಸುವದು ಲೇಸು. |
20. | ಜ್ಞಾನವಂತರ ನಿವಾಸದಲ್ಲಿ ಅಪೇಕ್ಷಿಸತಕ್ಕ ಐಶ್ವರ್ಯವೂ ಎಣ್ಣೆಯೂ ಇರುತ್ತವೆ; ಬುದ್ಧಿಹೀನನು ಇದ್ದದ್ದನ್ನು ಖರ್ಚು ಮಾಡುತ್ತಾನೆ. |
21. | ನೀತಿಯನ್ನೂ ಕರುಣೆಯನ್ನೂ ಹಿಂಬಾಲಿಸುವವನು; ಜೀವವನ್ನೂ ನೀತಿಯನ್ನೂ ಕೀರ್ತಿಯನ್ನೂ ಕಂಡು ಕೊಳ್ಳುತ್ತಾನೆ. |
22. | ಜ್ಞಾನಿಯು ಬಲಿಷ್ಠರ ಪಟ್ಟಣವನ್ನು ಹತ್ತಿ ಅದರಲ್ಲಿ ಭರವಸವಿಟ್ಟು ಬಲವನ್ನು ಕೆಡವಿ ಹಾಕು ತ್ತಾನೆ. |
23. | ತನ್ನ ಬಾಯಿಯನ್ನು ನಾಲಿಗೆಯನ್ನು ಕಾಯುವ ವನು ಇಕ್ಕಟ್ಟುಗಳಿಂದ ತನ್ನ ಪ್ರಾಣವನ್ನು ಕಾಪಾಡಿ ಕೊಳ್ಳುತ್ತಾನೆ. |
24. | ಸೊಕ್ಕೇರಿದ ಗರ್ವದಲ್ಲಿ ವರ್ತಿಸುವ ವನ ಹೆಸರು ಅಹಂಕಾರಿ ಮತ್ತು ಪರಿಹಾಸ್ಯಕನು. |
25. | ಸೋಮಾರಿಯ ಆಶೆಯು ಅವನನ್ನು ಕೊಲ್ಲುತ್ತವೆ. ಅವನ ಕೈಗಳು ದುಡಿಯುವದಕ್ಕೆ ನಿರಾಕರಿಸುತ್ತವೆ. |
26. | ದಿನವೆಲ್ಲಾ ಅವನು ದುರಾಶೆಯಿಂದ ಆಶಿಸುತ್ತಾನೆ; ಆದರೆ ನೀತಿವಂತನು ಹಿಂತೆಗೆಯದೇ ಕೊಡುತ್ತಾನೆ. |
27. | ದುಷ್ಟರ ಯಜ್ಞವು ಅಸಹ್ಯ; ಹೀಗಾದರೆ ದುರ್ಬುದ್ಧಿ ಯಿಂದ ಅದನ್ನು ಅರ್ಪಿಸಿದರೆ ಇನ್ನೂ ಎಷ್ಟೋ ಅಸಹ್ಯ ಕರವಾಗಿದೆ. |
28. | ಸುಳ್ಳುಸಾಕ್ಷಿಯವನು ನಾಶವಾಗುವನು; ಕೇಳುವವನು ಬಿಡದೆ ಮಾತಾಡುವನು. |
29. | ದುಷ್ಟನು ತನ್ನ ಮುಖವನ್ನು ಕಠಿಣಮಾಡಿಕೊಳ್ಳುತ್ತಾನೆ; ಯಥಾ ರ್ಥವಂತನಾದರೋ ತನ್ನ ಮಾರ್ಗವನ್ನು ಸರಿಪಡಿಸಿ ಕೊಳ್ಳುತ್ತಾನೆ. |
30. | ಕರ್ತನಿಗೆ ವಿರೋಧವಾಗಿ ಯಾವ ಜ್ಞಾನವೂ ವಿವೇಕವೂ ಆಲೋಚನೆಯೂ ಇಲ್ಲ. |
31. | ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಭದ್ರತೆಯು ಕರ್ತನಿಂದಲೇ. |
← Proverbs (21/31) → |