← Proverbs (20/31) → |
1. | ದ್ರಾಕ್ಷಾರಸವು ಪರಿಹಾಸ್ಯಕರವಾಗಿದೆ; ಮಾದಕ ಮದ್ಯವು ಉದ್ರೇಕಿಸುತ್ತದೆ. ಇದ ರಿಂದ ಮೋಸಹೋದವನು ಜ್ಞಾನಿಯಲ್ಲ. |
2. | ಅರಸನ ಭಯವು ಸಿಂಹದ ಗರ್ಜನೆಯಂತಿದೆ; ಅವನಿಗೆ ಕೋಪ ವನ್ನೆಬ್ಬಿಸುವವನು ತನ್ನ ಪ್ರಾಣಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ. |
3. | ಕಲಹವನ್ನು ತಡೆಯುವವನು ಮಾನಕ್ಕೆ ಯೋಗ್ಯನು; ಪ್ರತಿಯೊಬ್ಬ ಬುದ್ಧಿಹೀನನು ತಲೆಹಾಕು ತ್ತಾನೆ. |
4. | ಮೈಗಳ್ಳನು ಚಳಿಯ ನಿಮಿತ್ತವಾಗಿ ಉಳುವದಿಲ್ಲ; ಆದಕಾರಣ ಸುಗ್ಗಿಯಲ್ಲಿ ಅವನು ಬೇಡಿಕೊಂಡರೂ ಏನೂ ಸಿಕ್ಕುವದಿಲ್ಲ. |
5. | ಮನುಷ್ಯನ ಹೃದಯದ ಆಲೋ ಚನೆಯು ಆಳವಾದ (ಬಾವಿಯ) ನೀರಿನಂತಿದೆ; ವಿವೇ ಕಿಯು ಅದನ್ನು ಸೇದುವನು. |
6. | ಅನೇಕರಲ್ಲಿ ಪ್ರತಿಯೊ ಬ್ಬನು ತಮ್ಮ ಸ್ವಂತ ಸೌಜನ್ಯವನ್ನು ಸಾರುವನು; ನಂಬಿ ಗಸ್ತನಾದ ಮನುಷ್ಯನನ್ನು ಯಾರು ಕಂಡುಕೊಳ್ಳಬಲ್ಲರು? |
7. | ನೀತಿವಂತನು ತನ್ನ ಯಥಾರ್ಥತೆಯಲ್ಲಿ ನಡೆಯುತ್ತಾನೆ; ಅವನು ಗತಿಸಿದ ಮೇಲೆ ಅವನ ಮಕ್ಕಳು ಆಶೀರ್ವದಿ ಸಲ್ಪಡುವರು. |
8. | ನ್ಯಾಯತೀರ್ಪಿನ ಸಿಂಹಾಸನದ ಮೇಲೆ ಕೂತಿರುವ ಅರಸನು ತನ್ನ ಕಣ್ಣು ದೃಷ್ಟಿಯಿಂದ ಸಕಲ ಕೆಟ್ಟತನವನ್ನು ಚದರಿಸುವನು. |
9. | ನನ್ನ ಹೃದಯವನ್ನು ಶುದ್ಧಿಮಾಡಿಕೊಂಡಿದ್ದೇನೆ, ನನ್ನ ಪಾಪದಿಂದ ನಾನು ಶುದ್ಧನು ಎಂದು ಯಾರು ಹೇಳಬಲ್ಲರು? |
10. | ವಿಧ ವಿಧವಾದ ತೂಕಗಳೂ ತರತರವಾದ ಅಳತೆಗಳೂ ಇವೆರಡೂ ಸಮವಾಗಿಯೇ ಕರ್ತನಿಗೆ ಅಸಹ್ಯ. |
11. | ತನ್ನ ಕೆಲಸವು ಶುದ್ಧವೋ ಇಲ್ಲವೆ ನ್ಯಾಯವೋ ಎಂಬದು ತನ್ನ ಕ್ರಿಯೆಗಳಿಂದಲೇ ಹುಡುಗನು ತೋರ್ಪಡಿಸಿ ಕೊಳ್ಳುತ್ತಾನೆ. |
12. | ಕೇಳುವ ಕಿವಿ ನೋಡುವ ಕಣ್ಣು, ಇವೆರಡನ್ನು ಕರ್ತನು ಮಾಡಿದ್ದಾನೆ. |
13. | ನೀನು ಬಡ ತನಕ್ಕೆ ಬಾರದಂತೆ ನಿದ್ರೆಯಲ್ಲಿ ಆಸಕ್ತಿಯುಳ್ಳವನಾಗಿರ ಬೇಡ; ನಿನ್ನ ಕಣ್ಣುಗಳನ್ನು ತೆರೆದರೆ ನೀನು ರೊಟ್ಟಿ ಯಿಂದ ತೃಪ್ತನಾಗುವಿ. |
14. | ಇದು ನಿಷ್ಪ್ರಯೋಜಕವಾದದ್ದು, ಇದು ನಿಷ್ಪ್ರಯೋಜಕವಾದದ್ದು ಎಂದು ಕೊಳ್ಳು ವವನು ಹೇಳುತ್ತಾನೆ. ಅವನು ಹೋದ ಮೇಲೆ ಹೊಗ ಳುತ್ತಾನೆ. |
15. | ಬಂಗಾರವೂ ಮಾಣಿಕ್ಯಗಳ ರಾಶಿಯೂ ಇವೆ. ತಿಳುವಳಿಕೆಯ ತುಟಿಗಳು ಅಮೂಲ್ಯವಾದ ರತ್ನ ವಾಗಿವೆ. |
16. | ಪರರ ಹೊಣೆಯಾಗಿರುವ ಬಟ್ಟೆಯನ್ನು ತೆಗೆದುಕೋ; ಪರಸ್ತ್ರೀಗೋಸ್ಕರ ಅವನಿಂದ ಒತ್ತೆ ತೆಗೆ ದುಕೋ. |
17. | ಮೋಸದಿಂದ ಸಿಕ್ಕಿದ ರೊಟ್ಟಿಯು ಮನು ಷ್ಯನಿಗೆ ರುಚಿ; ಆಮೇಲೆ ಅವನ ಬಾಯಿಯು ಮರಳಿ ನಿಂದ ತುಂಬುವದು. |
18. | ಪ್ರತಿಯೊಂದು ಉದ್ದೇಶವು ಆಲೋಚನೆಯಿಂದ ಸಫಲವಾಗುವದು; ಹಿತವಾದ ಸಲಹೆಯಿಂದ ಯುದ್ಧಮಾಡು. |
19. | ತಿರುಗುವ ಚಾಡಿ ಕೋರನು ಗುಟ್ಟುಗಳನ್ನು ರಟ್ಟುಮಾಡುತ್ತಾನೆ. ಆದ ಕಾರಣ ತನ್ನ ತುಟಿಗಳಿಂದ ಮುಖಸ್ತುತಿ ಮಾಡುವವನ ಗೊಡವೆಗೆ ಹೋಗಬೇಡ. |
20. | ತನ್ನ ತಂದೆ ತಾಯಿಯನ್ನಾ ಗಲಿ ಶಪಿಸುವವನ ದೀಪವು ಮಂಕಾದ ಕತ್ತಲೆಯಲ್ಲಿ ಆರಿಹೋಗುವದು. |
21. | ಮೊದಲು ಸ್ವಾಸ್ತ್ಯವನ್ನೂ ತ್ವರೆ ಯಾಗಿ ಹೊಂದಬಹುದು; ಅದರ ಕೊನೆಯು ಆಶೀ ರ್ವದಿಸಲ್ಪಡುವದಿಲ್ಲ. |
22. | ನೀನು--ಕೇಡಿಗೆ ಮುಯ್ಯಿ ತೀರಿಸುವೆನು ಅನ್ನಬೇಡ; ಕರ್ತನನ್ನು ನಿರೀಕ್ಷಿಸು; ಆಗ ಆತನು ನಿನ್ನನ್ನು ರಕ್ಷಿಸುವನು. |
23. | ವಿಧವಿಧವಾದ ತೂಕ ಗಳು ಕರ್ತನಿಗೆ ಅಸಹ್ಯವಾಗಿವೆ; ಮೋಸದ ತಕ್ಕಡಿಯು ಒಳ್ಳೇದಲ್ಲ. |
24. | ಮನುಷ್ಯನ ನಡೆಗಳು ಕರ್ತನಿಂದಲೇ; ಹಾಗಾದರೆ ಒಬ್ಬ ಮನುಷ್ಯನು ತನ್ನ ಮಾರ್ಗವನ್ನು ಹೇಗೆ ತಿಳುಕೊಳ್ಳಬಲ್ಲನು? |
25. | ಪರಿಶುದ್ಧವಾದದ್ದನ್ನು ನುಂಗಿದವನಾಗಿ ತರುವಾಯ ವಿಚಾರಿಸುವದಕ್ಕಾಗಿ ಆಣೆಯಿಟ್ಟು ಕೊಳ್ಳುವದು ಒಬ್ಬ ಮನುಷ್ಯನಿಗೆ ಉರ್ಲಾ ಗಿದೆ. |
26. | ಜ್ಞಾನಿಯಾದ ಅರಸನು ದುಷ್ಟರನ್ನು ಚದರಿಸಿ ಅವರ ಮೇಲೆ ಚಕ್ರವನ್ನು ಎಳೆಯುತ್ತಾನೆ. |
27. | ಮನುಷ್ಯನ ಆತ್ಮವು ಹೊಟ್ಟೆಯ ಒಳಭಾಗಗಳನ್ನು ಶೋಧಿಸುವಂಥ ಕರ್ತನ ದೀಪವಾಗಿವೆ. |
28. | ಕರುಣೆಯೂ ಸತ್ಯವೂ ಅರಸನನ್ನು ಕಾಯುತ್ತದೆ; ಕರುಣೆಯಿಂದಲೇ ಅವನ ಸಿಂಹಾಸನವು ಸ್ಥಿರಗೊಳ್ಳುತ್ತದೆ. |
29. | ಯೌವನಸ್ಥರ ಘನತೆಯು ಅವರ ಬಲವೇ; ಮುದುಕರ ಅಲಂಕಾರವು ನರೆತ ತಲೆಯೇ. |
30. | ನೀಲಿಯಾದ ಗಾಯವು ದುಷ್ಟ ತ್ವವನ್ನು ತೊಳೆಯುತ್ತದೆ; ಹಾಗೆಯೇ ಏಟುಗಳು ಹೊಟ್ಟೆಯ ಒಳಭಾಗಗಳನ್ನು ಶುದ್ಧಮಾಡುತ್ತವೆ. |
← Proverbs (20/31) → |