← Philippians (4/4) |
1. | ಆದದರಿಂದ ಅತಿಪ್ರಿಯರೂ ಇಷ್ಟವಾದ ವರೂ ಆದ ನನ್ನ ಸಹೋದರರೇ, ನನ್ನ ಸಂತೋಷವೂ ಕಿರೀಟವೂ ಆಗಿರುವ ನನ್ನ ಅತಿ ಪ್ರಿಯರೇ, ಕರ್ತನಲ್ಲಿ ದೃಢವಾಗಿ ನಿಲ್ಲಿರಿ. |
2. | ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರಬೇಕೆಂದು ಯುವೊದ್ಯಳನ್ನೂ ಸಂತುಕೆಯನ್ನೂ ಬೇಡಿಕೊಳ್ಳುತ್ತೇನೆ. |
3. | ನಿಜ ಜೊತೆಗಾರನೇ, ನೀನು ಆ ಸ್ತ್ರೀಯರಿಗೆ ಸಹಾಯಕ ನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕ್ಲೇಮೆನ್ಸ್ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಕೂಡ ಸುವಾರ್ತೆಗೋಸ್ಕರ ಪ್ರಯಾಸ ಪಟ್ಟವರು. ಅವರ ಹೆಸರುಗಳು ಜೀವಗ್ರಂಥದಲ್ಲಿ ಬರೆದವೆ. |
4. | ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ನಾನು ತಿರಿಗಿ ಹೇಳುತ್ತೇನೆ. |
5. | ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ; ಕರ್ತನು ಹತ್ತಿರವಾಗಿದ್ದಾನೆ. |
6. | ಯಾವ ಸಂಬಂಧ ವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆ ಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯ ಪಡಿಸಿರಿ. |
7. | ಆಗ ಎಲ್ಲಾ ಗ್ರಹಿಕೆಯನ್ನೂ ವಿಾರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನೂ ಮನಸ್ಸು ಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವದು. |
8. | ಕಡೇದಾಗಿ ಸಹೋದರರೇ, ಸತ್ಯವಾದವುಗಳು ಯಾವವೋ ಪ್ರಾಮಾಣಿಕವಾದವುಗಳು ಯಾವವೋ ನ್ಯಾಯವಾದವುಗಳು ಯಾವವೋ ಶುದ್ಧವಾದವುಗಳು ಯಾವವೋ ಪ್ರೀತಿಕರವಾದವುಗಳು ಯಾವವೋ ಮಾನ್ಯವಾದವುಗಳು ಯಾವವೋ ಅವುಗಳನ್ನು ಮತ್ತು ಸದ್ಗುಣವನ್ನೂ ಸ್ತುತ್ಯವಾದದ್ದನ್ನೂ ಯೊ |
9. | ನೀವು ಯಾವದನ್ನು ನನ್ನಿಂದ ಕಲಿತು ಹೊಂದಿದಿರೋ ಮತ್ತು ಯಾವದನ್ನು ನನ್ನಲ್ಲಿ ಕೇಳಿಕಂಡಿರೋ ಅದನ್ನೇ ಮಾಡುತ್ತಾ ಬನ್ನಿರಿ. ಆಗ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು. |
10. | ಈಗಲಾದರೋ ನನ್ನ ವಿಷಯವಾದ ನಿಮ್ಮ ಯೋಚನೆಯು ನಿಮ್ಮಲ್ಲಿ ಪುನಃ ಚಿಗುರಿದ್ದಕ್ಕೆ ನಾನು ಕರ್ತನಲ್ಲಿ ಬಹಳವಾಗಿ ಸಂತೋಷಪಟ್ಟೆನು. ಈ ವಿಷಯ ದಲ್ಲಿ ನೀವು ಯೋಚನೆಯುಳ್ಳವರಾಗಿದ್ದರೂ ನಿಮಗೆ ಸಂದರ್ಭ ಸಿಕ್ಕಲಿಲ್ಲವೇನೋ. |
11. | ಕೊರತೆಯಲ್ಲಿದ್ದೇ ನೆಂದು ನಾನು ಇದನ್ನು ಹೇಳುವದಿಲ್ಲ; ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತು ಕೊಂಡಿದ್ದೇನೆ. |
12. | ನಾನು ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು, ನಾನು ತೃಪ್ತನಾಗಿ ದ್ದರೂ ಹಸಿದವನಾಗಿದ್ದರೂ ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ ಯಾವ ತರದ ಸ್ಥಿತಿಯಲಿರುವವನಾದರೂ ಅವೆಲ್ಲವುಗಳನ್ನು ನಾನು ಕಲಿತು ಕೊಂಡಿದ್ದೇನೆ. |
13. | ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವುಗಳನ್ನು ಮಾಡಬಲ್ಲೆನು. |
14. | ಹೀಗಿದ್ದರೂ ನೀವು ನನ್ನ ಸಂಕಟದಲ್ಲಿ ಪಾಲುಗಾರ ರಾಗಿದ್ದದ್ದು ಒಳ್ಳೇದಾಯಿತು. |
15. | ಇದಲ್ಲದೆ ಫಿಲಿಪ್ಪಿ ಯವರೇ, ಸುವಾರ್ತೆಯ ಪ್ರಾರಂಭದಲ್ಲಿ ನಾನು ಮಕೆದೋನ್ಯದಿಂದ ಹೊರಟಾಗ ಕೊಡುವದರ ಮತ್ತು ತೆಗೆದುಕೊಳ್ಳುವದರ ವಿಷಯದಲ್ಲಿ ನಿಮ್ಮ ಹೊರತು ಬೇರೆ ಸಭೆಯು ನನ್ನೊಂದಿಗೆ ಭಾಗವಹಿಸಲಿಲ್ಲವೆಂದು ನೀವು ಸಹ ಬಲ್ಲಿರಿ. |
16. | ನಾನು ಥೆಸಲೋನಿಕದಲ್ಲಿ ದ್ದಾಗಲೂ ನೀವು ಕೆಲವು ಸಾರಿ ನನ್ನ ಕೊರತೆಯನ್ನು ನೀಗಿಸುವದಕ್ಕೆ ಕೊಟ್ಟು ಕಳುಹಿಸಿದಿರಲ್ಲಾ. |
17. | ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವೆನೆಂತಲ್ಲ ಆದರೆ ನಿಮ್ಮ ಲೆಕ್ಕಕ್ಕೆ ಸಮೃದ್ಧಿಯಾದ ಫಲವನ್ನೇ ಅಪೇಕ್ಷಿಸು ತ್ತೇನೆ. ಆದರೆ ಬೇಕಾದದ್ದೆಲ್ಲ ನನಗುಂಟು, ಸಮೃದ್ಧಿ ಯಾಯಿತು. |
18. | ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲುಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ ಮೆಚ್ಚಿಕೆ ಯಾದದ್ದು; ಸುಗಂಧವಾಸನೆಯೇ, ಇಷ್ಟಯಜ್ಞವೇ |
19. | ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿ ಯೊಂದು ಕೊರತೆಯನ್ನು ನೀಗಿಸುವನು. |
20. | ನಮ್ಮ ತಂದೆಯೂ ದೇವರೂ ಆಗಿರುವಾತನಿಗೆ ಯುಗ ಯುಗಾಂತರಗಳಲ್ಲಿಯೂ ಮಹಿಮೆ ಇರಲಿ. ಆಮೆನ್. |
21. | ಕ್ರಿಸ್ತ ಯೇಸುವಿನಲ್ಲಿ ಪ್ರತಿಯೊಬ್ಬ ಪರಿಶುದ್ಧನಿಗೆ ವಂದನೆ. ನನ್ನ ಜೊತೆಯಲ್ಲಿರುವ ಸಹೋದರರು ನಿಮ್ಮನ್ನು ವಂದಿಸುತ್ತಾರೆ. |
22. | ಪರಿಶುದ್ದರೆಲ್ಲರೂ ನಿಮ್ಮನ್ನು ವಂದಿಸುತ್ತಾರೆ. ಮುಖ್ಯವಾಗಿ ಕೈಸರನ ಮನೆಯವರು ನಿಮ್ಮನ್ನು ವಂದಿಸುತ್ತಾರೆ; |
23. | ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗಿರಲಿ. ಆಮೆನ್. |
← Philippians (4/4) |