← Philippians (2/4) → |
1. | ಕ್ರಿಸ್ತನಲ್ಲಿ ಆದರಣೆ, ಪ್ರೀತಿಯ ಸಂತೈಸುವಿಕೆ, ಆತ್ಮನ ಅನ್ಯೋನ್ಯತೆ, ದಯಾ ವಾತ್ಸಲ್ಯಗಳು ಇರುವದಾದರೆ |
2. | ಐಕ್ಯಮತ್ಯವುಳ್ಳವ ರಾಗಿದ್ದು ನನ್ನ ಸಂತೋಷವನ್ನು ಪರಿಪೂರ್ಣ ಮಾಡಿರಿ. ನಿಮ್ಮೆಲ್ಲರಲ್ಲಿ ಒಂದೇ ಪ್ರೀತಿಯಿರಲಿ; ಅನ್ಯೋ ನ್ಯತೆಯುಳ್ಳವರೂ ಒಂದೇ ಮನಸ್ಸಿನವರೂ ಆಗಿರ್ರಿ. |
3. | ಕಲಹದಿಂದಾಗಲಿ ಒಣ ಹೆಮ್ಮೆಯಿಂದಾಗಲಿ ಯಾವ ದನ್ನೂ ಮಾಡದೆ ಪ್ರತಿಯೊಬ್ಬನು ದೀನ ಮನಸ್ಸಿನಿಂದ ಬೇರೆಯವರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. |
4. | ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ. |
5. | ಕ್ರಿಸ್ತ ಯೇಸುವಿನಲ್ಲಿದ್ದ ಮನಸ್ಸೇ ನಿಮ್ಮಲ್ಲಿ ಇರಲಿ. |
6. | ಆತನು ದೇವಸ್ವರೂಪ ನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವೆನೆಂದಿಣಿ ಸದೆ |
7. | ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡಾಗ ಮನುಷ್ಯರ ಹೋಲಿಕೆ ಯಲ್ಲಿ ಮಾಡಲ್ಪಟ್ಟನು. |
8. | ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಾಗ ತನ್ನನ್ನು ತಗ್ಗಿಸಿ ಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣ ವನ್ನಾದರೂ ಹೊಂದುವಷ್ಟು ವಿಧೇಯನಾದನು. |
9. | ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತವಾಗಿ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. |
10. | ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತವಾಗಿ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. |
11. | ತಂದೆಯಾದ ದೇವರ ಮಹಿಮೆಗಾಗಿ ಯೇಸು ಕ್ರಿಸ್ತನು ಕರ್ತನೆಂದು ಪ್ರತಿಯೊಂದು ನಾಲಿಗೆಯೂ ಅರಿಕೆ ಮಾಡುವದು. |
12. | ಹೀಗಿರುವಲ್ಲಿ ನನ್ನ ಪ್ರಿಯರೇ, ನೀವು ಯಾವಾ ಗಲೂ ವಿಧೇಯರಾದಂತೆ ಈಗಲೂ ವಿಧೇಯರಾಗಿ ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರು ವಾಗಲೂ ಬಹು ಹೆಚ್ಚಾಗಿ ಭಯದಿಂದ ನಡುಗುತ್ತಾ ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ. |
13. | ತನ್ನ ಸುಚಿತ್ತದ ಪ್ರಕಾರ ನಿಮ್ಮಲ್ಲಿ ಉದ್ದೇಶವನ್ನೂ ಕಾರ್ಯ ವನ್ನೂ ಸಾಧಿಸುವಾತನು ದೇವರೇ. |
14. | ಗುಣಗುಟ್ಟದೆ ಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ. |
15. | ಹೀಗೆ ನೀವು ದೋಷವಿಲ್ಲದವರೂ ಕೇಡುಮಾಡ ದವರೂ ನಿಂದಾರಹಿತರೂ ಆದ ದೇವಪುತ್ರರಾಗಿ ವಕ್ರವುಳ್ಳ ದುಷ್ಟಜನಾಂಗದ ಮಧ್ಯದಲ್ಲಿ ಜೀವದಾಯಕ ವಾಕ್ಯವನ್ನು ಹಿಡುಕೊಂಡು ಲೋಕದಲ್ಲಿ ಬೆಳಕುಗಳಂತೆ ಹೊಳೆಯುವವರಾಗಿದ್ದೀರಿ. |
16. | ಹೀಗೆ ನಾನು ಕೆಲಸ ಸಾಧಿಸಿದ್ದೂ ಪ್ರಯಾಸಪಟ್ಟದ್ದೂ ವ್ಯರ್ಥವಾಗಲಿಲ್ಲ ವೆಂದು ತಿಳಿದು ಕ್ರಿಸ್ತನ ದಿನದಲ್ಲಿ ಸಂತೋಷಪಡುವೆನು. |
17. | ಹೌದು, ನಿಮ್ಮ ನಂಬಿಕೆಯೆಂಬ ಯಜ್ಞವನ್ನು ಅರ್ಪಿಸುವ ಸೇವೆಯಲ್ಲಿ ನಾನೇ ಅರ್ಪಿತವಾಗ ಬೇಕಾದರೂ ನಾನು ಹರ್ಷಗೊಂಡು ನಿಮ್ಮೆಲ್ಲರ ಕೂಡ ಸಂತೋಷಿಸುವೆನು. |
18. | ಈ ಕಾರಣಕ್ಕಾಗಿಯೇ ನೀವು ಆನಂದಿಸಿರಿ, ನನ್ನೊಂದಿಗೆ ಸಂತೊಷಪಡಿರಿ. |
19. | ನಾನು ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸುವದಕ್ಕೆ ಕರ್ತನಾದ ಯೇಸುವಿನಲ್ಲಿ ನಿರೀಕ್ಷಿಸುತ್ತೇನೆ. ಅವನ ಮುಖಾಂತರ ನಿಮ್ಮ ವಿಷಯವನ್ನು ತಿಳಿದು ನಾನು ಸಹ ಆದರಣೆಹೊಂದೇನು. |
20. | ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಸ್ವಾಭಾವಿಕವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ. |
21. | ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡು ತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವದಿಲ್ಲ. |
22. | ಆದರೆ ಅವನನ್ನು ನೀವು ಪರೀಕ್ಷಿಸಿ ತಿಳಿದುಕೊಂಡಿದ್ದೀರಿ. ಮಗನು ತಂದೆಗೆ ಹೇಗೋ ಹಾಗೆಯೇ ಅವನು ಸುವಾರ್ತೆಯಲ್ಲಿ ನನ್ನೊಂದಿಗೆ ಸೇವೆ ಮಾಡಿದ್ದಾನೆ. |
23. | ಆದದರಿಂದ ನನ್ನ ಸಂಗತಿಯು ಹೇಗಾಗುವದೋ ಅದನ್ನು ತಿಳಿದ ಕೂಡಲೆ ಅವನನ್ನು ಕಳುಹಿಸುವದಕ್ಕೆ ನಿರೀಕ್ಷಿಸುತ್ತೇನೆ. |
24. | ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತನಲ್ಲಿ ದೃಢವಾಗಿ ನಂಬಿದ್ದೇನೆ. |
25. | ಆದಾಗ್ಯೂ ನನ್ನ ಕೊರತೆಯನ್ನು ನೀಗುವದಕ್ಕೆ ನೀವು ಕಳುಹಿಸಿದಂಥ ನನ್ನ ಸಹೋದರನೂ ಜೊತೆ ಕೆಲಸದವನೂ ಸಹ ಭಟನೂ ಆಗಿರುವ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವದು ಅವಶ್ಯವೆಂದು ನಾನು ನೆನಸಿದ್ದೇನೆ. |
26. | ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದನು, ತಾನು ಅಸ್ವಸ್ಥನಾಗಿದ್ದ ವರ್ತಮಾನವನ್ನು ನೀವು ಕೇಳಿದ್ದರಿಂದ ತುಂಬಾ ವ್ಯಸನಪಟ್ಟನು. |
27. | ಅವನು ರೋಗದಲ್ಲಿ ಬಿದ್ದು ಸಾಯುವಹಾಗಿದ್ದನೆಂಬದು ನಿಜವೇ. ಆದರೆ ದೇವರು ಅವನನ್ನು ಕರುಣಿಸಿದನು; ಅವನನ್ನು ಮಾತ್ರವಲ್ಲದೆ ನನಗೆ ದುಃಖದ ಮೇಲೆ ದುಃಖ ಬಾರದಂತೆ ನನ್ನನ್ನೂ ಕರುಣಿಸಿದನು. |
28. | ಆದದ ರಿಂದ ನೀವು ಅವನನ್ನು ನೋಡಿ ತಿರಿಗಿ ಸಂತೋಷಪಡ ಬೇಕೆಂತಲೂ ನನಗೆ ಕೂಡ ದುಃಖವು ಕಡಿಮೆಯಾಗ ಬೇಕೆಂತಲೂ ನಾನು ಅವನನ್ನು ಬಹಳ ಜಾಗ್ರತೆಯಿಂದ ಕಳುಹಿಸಿದ್ದೇನೆ. |
29. | ಆದದರಿಂದ ನೀವು ಅವನನ್ನು ಪೂರ್ಣ ಸಂತೋಷದಿಂದ ಕರ್ತನಲ್ಲಿ ಸೇರಿಸಿಕೊಳ್ಳಿರಿ ಮತ್ತು ಅಂಥವರನ್ನು ಸನ್ಮಾನಿಸಿರಿ. |
30. | ಹೀಗಿರಲಾಗಿ ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕಡಿಮೆಯಾದದ್ದನ್ನು ಪೂರ್ತಿ ಮಾಡುವದಕ್ಕಾಗಿ ಅವನು ಜೀವದ ಆಶೆಯನ್ನು ಲಕ್ಷ್ಯ ಮಾಡದೆ ಕ್ರಿಸ್ತನ ಕೆಲಸದ ನಿಮಿತ್ತ ಸಾಯುವಹಾಗಿದ್ದನು. |
← Philippians (2/4) → |