← Numbers (5/36) → |
1. | ಇದಲ್ಲದೆ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- |
2. | ಕುಷ್ಠವಿ ರುವವರೆಲ್ಲರನ್ನೂ ಮೇಹವುಳ್ಳವರೆಲ್ಲರನ್ನೂ ಹೆಣದಿಂದ ಅಶುದ್ಧವಾದವರೆಲ್ಲರನ್ನೂ ಪಾಳೆಯದೊಳಗಿಂದ ಕಳು ಹಿಸಬೇಕೆಂದು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸು. |
3. | ಗಂಡಸನ್ನಾಗಲಿ ಹೆಂಗಸನ್ನಾಗಲಿ ನೀವು ಹೊರಗೆ ಕಳುಹಿಸಬೇಕು. ನಾನು ಅವರ ಮಧ್ಯದಲ್ಲಿ ವಾಸ ಮಾಡುವ ಪಾಳೆಯವನ್ನು ಅವರು ಅಶುದ್ಧ ಮಾಡದ ಹಾಗೆ ನೀವು ಅವರನ್ನು ಹೊರಗೆ ಕಳುಹಿಸಬೇಕು ಎಂಬದೇ. |
4. | ಆಗ ಇಸ್ರಾಯೇಲ್ ಮಕ್ಕಳು ಹಾಗೆ ಮಾಡಿ ಅವರನ್ನು ಪಾಳೆಯದ ಹೊರಗೆ ಕಳುಹಿಸಿದರು. ಕರ್ತನು ಮೋಶೆಗೆ ಹೇಳಿದ ಹಾಗೆ ಇಸ್ರಾಯೇಲ್ ಮಕ್ಕಳು ಮಾಡಿದರು. |
5. | ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ-- |
6. | ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಬೇಕಾದದ್ದೇನಂದರೆ--ಪುರುಷನಾದರೂ ಸ್ರ್ತೀಯಾದರೂ ಮನುಷ್ಯರು ಮಾಡುವ ಯಾವ ದೊಂದು ಪಾಪಮಾಡಿ ಕರ್ತನಿಗೆ ವಿರೋಧವಾಗಿ ಆಜ್ಞೆವಿಾರಿದರೆ ಆ ಮನುಷ್ಯನು ಅಪರಾಧಿಯಾಗಿದ್ದಾನೆ; |
7. | ಆಗ ಅವರು ಮಾಡಿದ ಪಾಪವನ್ನು ಅರಿಕೆಮಾಡಿ ಅವರ ಅಪರಾಧದ ಬದಲು ಕೊಟ್ಟು ಅದರ ಸಂಗಡ ಐದನೇ ಪಾಲನ್ನು ಕೂಡಿಸಿ ಯಾರಿಗೆ ಅಪರಾಧ ಮಾಡಿ ದರೋ ಅವರಿಗೆ ಕೊಡಬೇಕು. |
8. | ಆದರೆ ಅಪರಾಧಕ್ಕೆ ಬದಲು ಕೊಡುವದಕ್ಕೆ ಆ ಮನುಷ್ಯನಿಗೆ ಸಂಬಂಧಿಕನು ಇಲ್ಲದಿದ್ದರೆ ಸಲ್ಲಿಸಿದ ಆ ಅಪರಾಧವು ಅವನ ನಿಮಿತ್ತ ಪಾಪ ಮುಚ್ಚುವ ಟಗರಿನ ಹೊರತಾಗಿ ಅದು ಕರ್ತನದೂ ಯಾಜಕನದೂ ಆಗಿರಬೇಕು. |
9. | ಇದಲ್ಲದೆ ಇಸ್ರಾಯೇಲ್ ಮಕ್ಕಳು ತರುವ ಸಕಲ ಪರಿಶುದ್ಧವಾದ ಬಲಿಗಳೆಲ್ಲಾ ಯಾಜಕನಿಗೇ ಸಲ್ಲಬೇಕು. |
10. | ಪ್ರತಿ ಮನುಷ್ಯನ ಪರಿಶುದ್ಧವಾದವುಗಳು ಅವನಿಗೇ ಸಲ್ಲಬೇಕು. ಯಾವನಾದರೂ ಏನಾದರೂ ಯಾಜಕನಿಗೆ ಕೊಟ್ಟದ್ದು ಅವನಿಗೇ ಆಗಬೇಕು ಎಂದು ಹೇಳಿದನು. |
11. | ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ-- |
12. | ಯಾವನ ಹೆಂಡತಿಯಾದರೂ ದಾರಿತಪ್ಪಿ ಅವನಿಗೆ ವಿರೋಧವಾದ ಕೃತ್ಯವನ್ನು ಮಾಡಿ ದರೆ |
13. | ಇಲ್ಲವೆ ಒಬ್ಬನು ಅವಳ ಸಂಗಡ ಮಲಗಿ ಸಂಗಮ ಮಾಡಿದ್ದು ಅವಳ ಗಂಡನ ಕಣ್ಣುಗಳಿಗೆ ಮರೆಯಾಗಿದ್ದರೆ, ಅವಳು ಅಶುದ್ಧಳೆಂಬದು ಗುಪ್ತವಾಗಿ ದ್ದರೆ, ಅವಳಿಗೆ ವಿರೋಧವಾಗಿ ಸಾಕ್ಷಿ ಇಲ್ಲದೆ ಅವಳು ಹಿಡಿಯಲ್ಪಡದಿದ್ದರೆ, |
14. | ಗಂಡನ ಮೇಲೆ ರೋಷದ ಆತ್ಮ ಬಂದು ಅವನು ಅಶುದ್ಧಳಾದ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ ಇಲ್ಲವೆ ರೋಷದ ಆತ್ಮವು ಅವನ ಮೇಲೆ ಬಂದು ಅಶುದ್ಧಳಾಗದೆ ಇರುವ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ, |
15. | ಆ ಮನು ಷ್ಯನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ತಂದು ಅವಳಿಗೋಸ್ಕರ ಕಾಣಿಕೆಯಾಗಿ ಏಫದ ಹತ್ತನೇ ಪಾಲನ್ನು ಜವೆಗೋಧಿಯ ಹಿಟ್ಟನ್ನು ತರಬೇಕು. ಅದರ ಮೇಲೆ ಎಣ್ಣೆಯನ್ನಾದರೂ ಸಾಂಬ್ರಾಣಿಯನ್ನಾದರೂ ಹಾಕ ಬಾರದು; ಅದು ರೋಷದ ಕಾಣಿಕೆಯೂ ಅಪರಾಧ ವನ್ನು ಜ್ಞಾಪಕಕ್ಕೆ ತರುವ ಕಾಣಿಕೆಯೂ ಆಗಿದೆ. |
16. | ಯಾಜಕನು ಅವಳನ್ನು ಸವಿಾಪಕ್ಕೆ ಕರೆದು ಕರ್ತನ ಸಮ್ಮುಖದಲ್ಲಿ ನಿಲ್ಲಿಸಬೇಕು. |
17. | ಆಗ ಯಾಜಕನು ಪವಿತ್ರ ವಾದ ನೀರನ್ನು ಮಣ್ಣಿನ ಗಡಿಗೆಗಳಲ್ಲಿ ತೆಗೆದು ಕೊಳ್ಳಬೇಕು; ಗುಡಾರದ ನೆಲದಲ್ಲಿರುವ ಧೂಳನ್ನು ಯಾಜಕನು ತಕ್ಕೊಂಡು ಆ ನೀರಿನೊಳಗೆ ಹಾಕಬೇಕು. |
18. | ಯಾಜಕನು ಆ ಸ್ತ್ರೀಯನ್ನು ಕರ್ತನ ಸಮ್ಮುಖದಲ್ಲಿ ನಿಲ್ಲಿಸಿ ಆಕೆಯ ತಲೆಯ ಮೇಲಿರುವ ಮುಸುಕನ್ನು ತೆಗೆದು ಅವಳ ಕೈಗಳಲ್ಲಿ ರೋಷದ ಕಾಣಿಕೆಯಾಗಿರುವ ಜ್ಞಾಪಕದ ಕಾಣಿಕೆಯನ್ನು ಇಡಬೇಕು. ಆದರೆ ಯಾಜಕನ ಕೈಯಲ್ಲಿ ಶಪಿಸುವಂತ ಕಹಿಯಾದ ನೀರು ಇರಬೇಕು. |
19. | ಆಗ ಯಾಜಕನು ಅವಳನ್ನು ಪ್ರಮಾಣಮಾಡಿಸಿ ಹೇಳಬೇಕಾದದ್ದು: ಒಬ್ಬ ಮನುಷ್ಯನು ನಿನ್ನ ಸಂಗಡ ಮಲಗದೆ ನೀನು ಅಪವಿತ್ರಳಾಗಿ ನಿನ್ನ ಗಂಡನನ್ನು ಬಿಟ್ಟು ಜಾರತ್ವಮಾಡದೆ ಇದ್ದರೆ ಶಪಿಸುವ ಈ ಕಹಿಯಾದ ನೀರಿಗೆ ನಿರಪರಾಧಿಯಾಗು. |
20. | ಆದರೆ ನೀನು ನಿನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾಗಿದ್ದರೆ ನಿನ್ನ ಗಂಡನನ್ನು ಬಿಟ್ಟು ಮತ್ತೊಬ್ಬನು ನಿನ್ನ ಸಂಗಡ ಮಲಗಿದ್ದರೆ |
21. | ಯಾಜಕನು ಶಾಪದ ಪ್ರಮಾಣ ದಿಂದ ಆ ಸ್ತ್ರೀಗೆ ಹೇಳಬೇಕಾದದ್ದೇನಂದರೆ--ಕರ್ತನು ನಿನ್ನ ತೊಡೆಯನ್ನು ಕ್ಷೀಣವಾಗುವಂತೆಯೂ ನಿನ್ನ ಹೊಟ್ಟೆಯನ್ನು ಉಬ್ಬುವಂತೆಯೂ ಮಾಡುವದರಿಂದ ಕರ್ತನು ನಿನ್ನನ್ನು ನಿನ್ನ ಜನರೊಳಗೆ ಶಾಪವನ್ನಾಗಿಯೂ ದೂಷಣೆಯನ್ನಾಗಿಯೂ ಇಡಲಿ. |
22. | ಶಪಿಸುವಂಥ ಈ ನೀರು ಹೊಟ್ಟೆಯನ್ನು ಉಬ್ಬಿಸುವದಕ್ಕೂ ತೊಡೆಯನ್ನು ಕ್ಷೀಣಿಸುವದಕ್ಕೂ ನಿನ್ನ ಕರುಳುಗಳ ಒಳಗೆ ಹೋಗು ವದು; ಈ ಪ್ರಕಾರ ಯಾಜಕನು ಆ ಸ್ತ್ರೀಯನ್ನು ಶಾಪದ ಪ್ರಮಾಣದಿಂದ ಪ್ರಮಾಣ ಮಾಡಿಸಬೇಕು. ಅದಕ್ಕೆ ಆ ಸ್ತ್ರೀಯು--ಹಾಗೆಯೇ ಆಗಲಿ ಅನ್ನಬೇಕು. |
23. | ಯಾಜ ಕನು ಈ ಶಾಪವನ್ನು ಪುಸ್ತಕದಲ್ಲಿ ಬರೆದು, ಕಹಿಯಾದ ನೀರಿನಿಂದ ಅಳಿಸಿ, |
24. | ಆ ಸ್ತ್ರೀಗೆ ಶಪಿಸುವಂತ ಕಹಿಯಾದ ನೀರನ್ನು ಕುಡಿಸಬೇಕು. ಆಗ ಶಪಿಸುವ ನೀರು ಅವಳಲ್ಲಿ ಸೇರಿ ಕಹಿಯಾಗುವದು. |
25. | ಯಾಜಕನು ಆ ಸ್ತ್ರೀಯ ಕೈಯಿಂದ ರೋಷದ ಕಾಣಿಕೆಯನ್ನು ತಕ್ಕೊಂಡು ಆ ಕಾಣಿಕೆಯನ್ನು ಕರ್ತನ ಸಮ್ಮುಖದಲ್ಲಿ ಅಲ್ಲಾಡಿಸಿ ಬಲಿ ಪೀಠದ ಸವಿಾಪಕ್ಕೆ ತರಬೇಕು. |
26. | ಆಗ ಯಾಜಕನು ಕಾಣಿಕೆಯಿಂದ ಜ್ಞಾಪಕಭಾಗವಾಗಿ ಒಂದು ಹಿಡಿ ತಕ್ಕೊಂಡು ಯಜ್ಞವೇದಿಯ ಮೇಲೆ ಸುಟ್ಟು ಸ್ತ್ರೀಗೆ ಆ ನೀರನ್ನು ಕುಡಿಸಬೇಕು. |
27. | ಆಕೆಗೆ ಆ ನೀರನ್ನು ಕುಡಿಸಿದ ಮೇಲೆ ಆಕೆಯು ಅಶುದ್ಧಳಾಗಿ ತನ್ನ ಗಂಡನಿಗೆ ಅಪರಾಧ ಮಾಡಿದ್ದಾಗಿದ್ದರೆ ಶಪಿಸುವ ನೀರು ಆಕೆ ಯೊಳಗೆ ಸೇರಿ ಕಹಿಯಾಗುವದು; ಅವಳ ಹೊಟ್ಟೆ ಉಬ್ಬಿ ತೊಡೆ ಕ್ಷೀಣವಾಗುವದು. ಆಗ ಆ ಸ್ತ್ರೀ ತನ್ನ ಜನರ ಮಧ್ಯದಲ್ಲಿ ಶಾಪವಾಗಿರುವಳು. |
28. | ಆದರೆ ಆ ಸ್ತ್ರೀ ಅಶುದ್ಧಳಲ್ಲದೆ ಶುದ್ಧಳಾಗಿದ್ದರೆ ಅವಳು ನಿರಪರಾಧಿ ಯಾಗಿದ್ದು ಸಂತಾನವನ್ನು ಪಡೆಯುವಳು. |
29. | ರೋಷಕ್ಕೆ ನಿಯಮವು ಇದೇ. ಒಬ್ಬ ಹೆಂಡತಿ ತನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾಗಿದ್ದರೆ |
30. | ಅಥವಾ ಪುರುಷನ ಮೇಲೆ ರೋಷದ ಆತ್ಮ ಬಂದು ಅವನು ತನ್ನ ಹೆಂಡತಿಯ ಮೇಲೆ ರೋಷಗೊಂಡಿದ್ದರೆ ಅವನು ತನ್ನ ಹೆಂಡತಿಯನ್ನು ಕರ್ತನ ಸಮ್ಮುಖದಲ್ಲಿ ನಿಲ್ಲಿಸಲಿ; ಯಾಜಕನು ಅವಳಿಗೆ ಈ ಸಮಸ್ತ ಆಜ್ಞೆ ಪ್ರಕಾರ ಮಾಡುವನು. |
31. | ಆಗ ಗಂಡನು ನಿರಪರಾಧಿ ಯಾಗಿರುವನು. ಆದರೆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು ಎಂಬದೇ. |
← Numbers (5/36) → |