← Numbers (4/36) → |
1. | ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನಂದರೆ -- |
2. | ಲೇವಿಯ ಮಕ್ಕಳೊಳಗಿಂದ ಅವರ ತಂದೆಗಳ ಮನೆ ತನದ ಕುಟುಂಬಗಳ ಪ್ರಕಾರವಾಗಿ |
3. | ಮೂವತ್ತು ವರುಷವಾದವರನ್ನೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ವರನ್ನೂ ಅಂದರೆ ಐವತ್ತು ವರುಷದ ವರೆಗೆ ಸಭೆಯ ಗುಡಾರದಲ್ಲಿ ಕೆಲಸ ಮಾಡುವದಕ್ಕೆ ಸೈನ್ಯದಲ್ಲಿ ಸೇರುವವ ರನ್ನೆಲ್ಲಾ ಎಣಿಸಿ ಕೆಹಾತನ ಮಕ್ಕಳ ಲೆಕ್ಕವನ್ನು ತಕ್ಕೊಳ್ಳಿರಿ. |
4. | ಸಭೆಯ ಗುಡಾರದಲ್ಲಿ ಕೆಹಾತನ ಮಕ್ಕಳ ಸೇವೆಯು ಅತಿ ಪರಿಶುದ್ಧವಾದದ್ದೇ. |
5. | ಪಾಳೆಯವು ಹೊರಡು ವಾಗ ಆರೋನನೂ ಅವನ ಮಕ್ಕಳೂ ಒಳಗೆ ಹೋಗಿ ತೆರೆಯನ್ನು ಇಳಿಸಿ ಅದರಿಂದ ಸಾಕ್ಷಿಯ ಮಂಜೂಷವನ್ನು ಮುಚ್ಚಿ |
6. | ಅದರ ಮೇಲೆ ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹೊದಿಸಬೇಕು. ಅದರ ಮೇಲ್ಭಾಗ ದಲ್ಲಿ ಪೂರ್ಣವಾದ ನೀಲಿ ವಸ್ತ್ರವನ್ನು ಹಾಸಿ ಅದರ ಕೋಲುಗಳನ್ನು ಇಡಬೇಕು. 7 |
7. | ಸಮ್ಮುಖದ ರೊಟ್ಚಿಯ ಮೇಜಿನ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದರ ಮೇಲೆ ಪಾತ್ರೆ ಚಮಟಿಕೆ ಪಾನದ ಅರ್ಪ ಣೆಯ ಹೂಜಿ ಇವುಗಳನ್ನು ಇಡಬೇಕು. ನಿತ್ಯವಾದ ರೊಟ್ಟಿಯೂ ಅದರ ಮೇಲೆ ಇರಬೇಕು. |
8. | ಅವೆ ಲ್ಲವುಗಳ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಹೊದಿಸಿ ಅದರ ಕೋಲುಗಳನ್ನು ಇಡಬೇಕು. |
9. | ಇದ ಲ್ಲದೆ ಅವರು ನೀಲಿ ವಸ್ತ್ರವನ್ನು ತಕ್ಕೊಂಡು ಅದರಿಂದ ದೀಪಸ್ತಂಭವನ್ನೂ ಅದರ ದೀಪಗಳನ್ನೂ ಚಮಟಿಕೆಗಳನ್ನೂ ದೀಪದ ಕುಡಿತೆಗೆಯುವ ಬಟ್ಟಲುಗಳನ್ನೂ ಅದಕ್ಕೆ ಸೇವೆ ಮಾಡುವ ಸಕಲ ಎಣ್ಣೆಯ ಪಾತ್ರೆಗಳನ್ನೂ ಮುಚ್ಚಬೇಕು. |
10. | ಅವರು ಅದನ್ನೂ ಅದರ ಎಲ್ಲಾ ವಸ್ತುಗಳನ್ನೂ ಕಡಲು ಹಂದಿಯ ಚರ್ಮಗಳ ಮುಚ್ಚಳ ದೊಳಗೆ ಇಟ್ಟು ಅಡ್ಡದಂಡೆಯ ಮೇಲೆ ಹಾಕಬೇಕು. |
11. | ಇದಲ್ಲದೆ ಬಂಗಾರದ ಬಲಿಪೀಠದ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮವನ್ನು ಮುಚ್ಚಳ ಹೊದಿಸಿ ಅದರ ಕೋಲುಗಳನ್ನು ಇಡಬೇಕು. |
12. | ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವ ಸೇವೆಯ ಎಲ್ಲಾ ವಸ್ತುಗಳನ್ನು ಅವರು ತಕ್ಕೊಂಡು ನೀಲಿ ವಸ್ತ್ರದಿಂದ ಕಟ್ಟಿ ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಮುಚ್ಚಿ ಅಡ್ಡದಂಡೆಯ ಮೇಲೆ ಹಾಕಬೇಕು. |
13. | ಬಲಿಪೀಠದ ಬೂದಿಯನ್ನು ತೆಗೆದು ಅದರ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ |
14. | ಸೇವೆ ಮಾಡುವ ಎಲ್ಲಾ ವಸ್ತುಗಳನ್ನೂ ಅಗ್ನಿಪಾತ್ರೆಗಳನ್ನೂ ಮುಳ್ಳುಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಬಲಿಪೀಠದ ಎಲ್ಲಾ ವಸ್ತುಗಳನ್ನೂ ಅದರ ಮೇಲಿಟ್ಟು ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹಾಕಿ ಅದರ ಕೋಲುಗಳನ್ನು ಇಡಬೇಕು. |
15. | ಆರೋನನೂ ಅವನ ಕುಮಾರರೂ ಪರಿಶುದ್ಧ ಸ್ಥಳವನ್ನು ಅದರ ಎಲ್ಲಾ ವಸ್ತುಗಳನ್ನು ಮುಚ್ಚಿದಮೇಲೆ ಪಾಳೆಯವು ಹೊರಡುವಾಗ ಕೆಹಾತನ ಕುಮಾರರು ಅದನ್ನು ಹೊತ್ತು ಕೊಂಡು ಹೋಗುವದಕ್ಕೆ ಪ್ರವೇಶಿಸಬೇಕು; ಅವರು ಸಾಯದ ಹಾಗೆ ಪರಿಶುದ್ಧವಾದ ಯಾವದನ್ನೂ ಮುಟ್ಟ ಬಾರದು. ಸಭೆಯ ಗುಡಾರದಲ್ಲಿ ಕೆಹಾತನ ಕುಮಾರರ ಹೊರೆಗಳು ಇವೇ ಆಗಿವೆ. |
16. | ಯಾಜಕನಾದ ಆರೋನನ ಮಗನಾದ ಎಲ್ಲಾಜಾ ರನ ಕೆಲಸ ಯಾವದಂದರೆ: ದೀಪದ ಎಣ್ಣೆಯೂ ಸುಗಂಧ ಧೂಪವೂ ನಿತ್ಯದ ಆಹಾರ ಸಮರ್ಪಣೆಯೂ ಅಭಿಷೇಕದ ತೈಲವೂ ಸಮಸ್ತಗುಡಾರವೂ ಅದರ ಲ್ಲಿರುವ ಸಕಲವೂ ಪರಿಶುದ್ಧ ಸ್ಥಳದಲ್ಲಿಯೂ ಅದರ ವಸ್ತುಗಳೂ ಅವನ ಮೇಲ್ವಿಚಾರಣೆಯಲ್ಲಿರಬೇಕು. |
17. | ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನಂದರೆ-- |
18. | ನೀವು ಲೇವಿಯರೊಳಗಿಂದ ಕೆಹಾತಿಯರ ಗೋತ್ರದ ಕುಟುಂಬಗಳನ್ನು ಕಡಿದು ಹಾಕಬೇಡಿರಿ. |
19. | ಆದರೆ ಅವರು ಅತಿ ಪರಿಶುದ್ಧವಾ ದವುಗಳನ್ನು ಸವಿಾಪಿಸುವಾಗ ಅವರು ಸಾಯದೆ ಬದುಕುವ ಹಾಗೆ ಅವರಿಗೆ ಮಾಡಬೇಕಾದದ್ದೇ ನೆಂದರೆ--ಆರೋನನೂ ಅವನ ಕುಮಾರರೂ ಒಳಗೆ ಪ್ರವೇಶಿಸಿ ಅವರಲ್ಲಿ ಒಬ್ಬೊಬ್ಬನನ್ನು ಅವನ ಕೆಲಸಕ್ಕೂ ಅವನ ಹೊರೆಗೂ ನೇಮಿಸಬೇಕು. |
20. | ಆದರೆ ಅವರು ಸಾಯದ ಹಾಗೆ ಪರಿಶುದ್ಧವಾದವುಗಳನ್ನು ನೋಡಲು ಒಳಗೆ ಹೋಗಬಾರದು. |
21. | ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿ ದ್ದೇನಂದರೆ-- |
22. | ಗೇರ್ಷೋನನ ಕುಮಾರರ ಲೆಕ್ಕವನ್ನು ಸಹ ಅವರ ತಂದೆ ಮನೆಗಳ ಪ್ರಕಾರವಾಗಿಯೂ ಅವರ ಕುಟುಂಬಗಳ ಪ್ರಕಾರವಾಗಿಯೂ ತೆಗೆದುಕೊಳ್ಳ ಬೇಕು. |
23. | ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಐವತ್ತು ವರುಷಗಳ ಪ್ರಾಯವುಳ್ಳವರನ್ನು ಸಭೆಯ ಗುಡಾರದಲ್ಲಿ ಸೇವೆಮಾಡುವದಕ್ಕೂ ಅದನ್ನು ಪೂರೈಸು ವದಕ್ಕೂ ಸೇರುವವರೆಲ್ಲರನ್ನೂ ಎಣಿಸು. |
24. | ಗೇರ್ಷೋನಿಯರ ಕುಟುಂಬಗಳ ಸೇವೆಯೂ ಹೊರೆಯೂ ಯಾವದಂದರೆ-- |
25. | ಅವರು ಗುಡಾರದ ತೆರೆಗಳನ್ನೂ ಸಭೆಯ ಗುಡಾರವನ್ನೂ ಅದರ ಹೊದಿಕೆ ಯನ್ನೂ ಅದರ ಮೇಲಿರುವ ಕಡಲು ಹಂದಿಯ ಚರ್ಮದ ಹೊದಿಕೆಯನ್ನೂ ಸಭೆಯ ಗುಡಾರದ ಬಾಗಲಿನ ತೆರೆಯನ್ನೂ |
26. | ಅಂಗಳದ ಪರದೆಗಳನ್ನೂ ಗುಡಾರವನ್ನೂ ಬಲಿಪೀಠವನ್ನೂ ಇವುಗಳ ಸುತ್ತಲಿರುವ ಅಂಗಳದ ಬಾಗಲಿನ ತೆರೆಯನ್ನೂ ಅವುಗಳ ಹಗ್ಗಗ ಳನ್ನೂ ಅವುಗಳ ಸೇವೆಯ ಎಲ್ಲಾ ವಸ್ತುಗಳನ್ನೂ ಹೊತ್ತು ಕೊಳ್ಳಬೇಕು. ಅವುಗಳಿಗೆ ಮಾಡತಕ್ಕ ಎಲ್ಲಾ ಸೇವೆಯನ್ನು ಹೀಗೆ ಅವರು ಮಾಡಬೇಕು. |
27. | ಆರೋನನೂ ಅವನ ಕುಮಾರರೂ ನೇಮಿಸುವ ಹಾಗೆಯೇ ಗೇರ್ಷೋನನ ಕುಮಾರರ ಸೇವೆಯೆಲ್ಲಾ ಅವರು ಹೊರತಕ್ಕದ್ದೆಲ್ಲವೂ ಮಾಡತಕ್ಕದ್ದೆಲ್ಲವೂ ಆಗಬೇಕು. ನೀವು ಅವರ ಸಮಸ್ತ ಹೊರೆಯನ್ನೂ ಅಪ್ಪಣೆಯ ಪ್ರಕಾರ ಅವರಿಗೆ ನೇಮಿಸ ಬೇಕು. |
28. | ಗೇರ್ಷೋನನ ಕುಮಾರರು ಸಭೆಯ ಗುಡಾರದಲ್ಲಿ ಮಾಡುವ ಸೇವೆಯು ಇದೇ: ಯಾಜಕ ನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರುವದು ಅವರಿಗೆ ಕೊಡಲ್ಪಟ್ಟ ಅಪ್ಪಣೆಯಾಗಿದೆ. |
29. | ಮೆರಾರೀಯ ಕುಮಾರರನ್ನು ಅವರ ಕುಟುಂಬಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ಎಣಿಸಬೇಕು. |
30. | ಮೂವತ್ತು ವರುಷವು ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರನ್ನು ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದ ಸೇವೆಮಾಡುವ ದಕ್ಕಾಗಿ ಒಳಗೆ ಪ್ರವೇಶಿಸುವವರನ್ನೆಲ್ಲಾ ಎಣಿಸಬೇಕು. |
31. | ಸಭೆಯ ಗುಡಾರದಲ್ಲಿ ಅವರು ಮಾಡತಕ್ಕ ಸಮಸ್ತ ಸೇವೆಯ ಪ್ರಕಾರ ಅವರು ಹೊರುವದಕ್ಕೆ ಕೊಡಲ್ಪಟ್ಟ ಅಪ್ಪಣೆಯು ಏನಂದರೆ, ಗುಡಾರದ ಹಲಿಗೆಗಳೂ ಅದರ ಅಡ್ಡ ತೊಲೆಗಳೂ ಕಂಬಗಳೂ ಕುಣಿಕೆಗಳೂ. |
32. | ಸುತ್ತಲಿರುವ ಅಂಗಳದ ಕಂಬಗಳೂ ಕುಣಿಕೆಗಳೂ ಗೂಟಗಳೂ ಅವುಗಳ ಹಗ್ಗಗಳೂ ಎಲ್ಲಾ ವಸ್ತುಗಳ ಪ್ರಕಾರವಾಗಿಯೂ ಅವುಗಳ ಸಮಸ್ತ ಸೇವೆಯ ಪ್ರಕಾರವಾಗಿಯೂ ಅವರು ಹೊರುವದಕ್ಕೆ ಕೊಡಲ್ಪಟ್ಟ ಅಪ್ಪಣೆಯ ವಸ್ತುಗಳನ್ನು ನೀವು ಹೆಸರೆಸರಾಗಿ ಎಣಿಸ ಬೇಕು. |
33. | ಮೆರಾರೀಯ ಕುಮಾರರ ಕುಟುಂಬಗಳ ಸೇವೆಯೂ ಗುಡಾರದಲ್ಲಿ ಅವರು ಮಾಡುವ ಸಮಸ್ತ ಸೇವೆಯೂ ಇದೇ. ಅದು ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರಬೇಕು. |
34. | ಆಗ ಮೋಶೆಯೂ ಆರೋನನೂ ಸಭೆಯ ಮುಖ್ಯಸ್ಥರೂ ಕೆಹಾತಿಯರ ಕುಮಾರರನ್ನು ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ |
35. | ಮೂವತ್ತು ವರು ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದಲ್ಲಿ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನು ಎಣಿಸಿ ದರು. |
36. | ಕುಟುಂಬಗಳ ಪ್ರಕಾರ ಅವರಲ್ಲಿ ಎಣಿಸಲ್ಪ ಟ್ಟವರು ಎರಡು ಸಾವಿರದ ಏಳು ನೂರ ಐವತ್ತು ಮಂದಿಯಾಗಿದ್ದರು. |
37. | ಮೋಶೆಗೆ ಕರ್ತನು ಅಪ್ಪಣೆ ಮಾಡಿದ ಹಾಗೆ ಮೋಶೆಯೂ ಆರೋನನೂ ಎಣಿಸದ ಕೆಹಾತಿಯರ ಕುಟುಂಬಗಳಲ್ಲಿ ಎಣಿಸಲ್ಪಟ್ಟವರೂ ಸಭೆಯ ಗುಡಾರದಲ್ಲಿ ಸೇವೆಮಾಡುವವರೆಲ್ಲರೂ ಇವರೇ. |
38. | ಗೇರ್ಷೋನನ ಕುಮಾರರಲ್ಲಿ ಅವರ ಕುಟುಂಬ ಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ ಎಣಿಸಲ್ಪಟ್ಟವರು |
39. | ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾ ರದ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನೂ |
40. | ಅಂದರೆ ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ ಎಣಿಸಲ್ಪ ಟ್ಟವರು ಎರಡು ಸಾವಿರದ ಆರುನೂರ ಮೂವತ್ತು ಮಂದಿಯಾಗಿದ್ದರು. |
41. | ಕರ್ತನ ಅಪ್ಪಣೆಯ ಹಾಗೆ ಮೋಶೆಯೂ ಆರೋನನೂ ಎಣಿಸಿದ ಗೇರ್ಷೋನನ ಕುಮಾರರ ಕುಟುಂಬಗಳಲ್ಲಿ ಎಣಿಸಲ್ಪಟ್ಟವರೂ ಸಭೆಯ ಗುಡಾರದಲ್ಲಿ ಸೇವೆಮಾಡುವವರೆಲ್ಲರೂ ಇವರೇ. |
42. | ಮೆರಾರೀಯ ಕುಮಾರರಲ್ಲಿ ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ ಎಣಿಸಲ್ಪಟ್ಟವರು; |
43. | ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದ ಕೆಲಸಕ್ಕಾಗಿ ಸೇವೆಯಲ್ಲಿ ಸೇರುವವರೆಲ್ಲರನ್ನು |
44. | ಅಂದರೆ ಅವರ ಕುಟುಂಬಗಳ ಪ್ರಕಾರ ಅವರಲ್ಲಿ ಎಣಿಸಲ್ಪಟ್ಟವರು ಮೂರುಸಾವಿರದ ಇನ್ನೂರು ಮಂದಿಯಾಗಿದ್ದರು. |
45. | ಮೋಶೆಗೆ ಕರ್ತನು ಅಪ್ಪಣೆಮಾಡಿದ ಹಾಗೆ ಮೋಶೆಯೂ ಆರೋನನೂ ಎಣಿಸಿದ ಮೆರಾರೀಯ ಕುಮಾರರ ಕುಟುಂಬಗಳಲ್ಲಿ ಎಣಿಸಲ್ಪಟ್ಟವರು ಇವರೇ. |
46. | ಮೋಶೆಯೂ ಆರೋನನೂ ಇಸ್ರಾಯೇಲಿನ ಮುಖ್ಯಸ್ಥರೂ ಎಣಿಸಿದ ಸಮಸ್ತ ಲೇವಿಯರು ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಯ ಪ್ರಕಾರವಾಗಿಯೂ |
47. | ಮೂವತ್ತು ವರು ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದಲ್ಲಿ ಕೆಲಸ ಮಾಡುವದಕ್ಕಾಗಿಯೂ ಹೊರುವದಕ್ಕಾಗಿಯೂ ಬರುವವರೆಲ್ಲರು |
48. | ಅಂದರೆ ಅವರಲ್ಲಿ ಎಣಿಸಲ್ಪಟ್ಟವರು ಎಂಟು ಸಾವಿರದ ಐನೂರ ಎಂಭತ್ತು ಮಂದಿ. |
49. | ಕರ್ತನು ಮೋಶೆಗೆ ಅಪ್ಪಣೆಕೊಟ್ಟ ಪ್ರಕಾರ ಅವರನ್ನು ಅವರವರ ಸೇವೆಗಾಗಿಯೂ ಅವರವರ ಹೊರೆ ಗಾಗಿಯೂ ಅವರನ್ನು ಎಣಿಸಿದರು. |
← Numbers (4/36) → |