← Numbers (34/36) → |
1. | ಕರ್ತನು ಮೋಶೆಯ ಸಂಗಡ ಮಾತನಾಡಿ-- |
2. | ನೀನು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಿ ಅವರಿಗೆ ಹೇಳಬೇಕಾದದ್ದೇ ನಂದರೆ--ನೀವು ಕಾನಾನ್ ದೇಶದೊಳಗೆ ಬರುವಾಗ ನಿಮಗೆ ಸ್ವಾಸ್ತ್ಯಕ್ಕಾಗಿ ಬರುವ ಕಾನಾನ್ ದೇಶವು ಅದರ ಮೇರೆಗಳ ಪ್ರಕಾರ ಹೀಗಿರಬೇಕು. |
3. | ಹೇಗೆ ಅಂದರೆ ನಿಮ್ಮ ದಕ್ಷಿಣ ಕಡೆಯು ಜಿನ್ ಅರಣ್ಯದಿಂದ ಎದೋಮಿಗೆ ಅನುಸಾರವಾಗಿರಬೇಕು; ನಿಮ್ಮ ದಕ್ಷಿಣ ಮೇರೆಯು ಉಪ್ಪಿನ ಸಮುದ್ರದ ಪೂರ್ವದ ಕಡೆಯಿಂದ ಆರಂಭಿಸಬೇಕು. |
4. | ನಿಮ್ಮ ಮೇರೆಯು ದಕ್ಷಿಣದಿಂದ ಅಕ್ರಬ್ಬೀಮ್ ದಿನ್ನೆಗೆ ತಿರುಗಿ ಜಿನ್‌ಗೆ ಹಾದು ಕಾದೇಶ್‌ಬರ್ನೇಯಕ್ಕೆ ದಕ್ಷಿಣದಲ್ಲಿ ಮುಗಿದು ಅಲ್ಲಿಂದ ಹಚರದ್ದಾರಿಗೆ ಹೊರಟು ಅಚ್ಮೋನಿಗೆ ಹಾದು ಹೋಗಬೇಕು. |
5. | ಮೇರೆ ಅಚ್ಮೋನಿನಿಂದ ಐಗುಪ್ತದ ಹಳ್ಳಕ್ಕೆ ತಿರುಗಿ ಸಮುದ್ರ ತೀರದಲ್ಲಿ ಮುಗಿಯಬೇಕು. |
6. | ಪಶ್ಚಿಮದ ಮೇರೆಯಾದರೆ ದೊಡ್ಡ ಸಮುದ್ರವೇ ನಿಮಗೆ ಮೇರೆಯಾಗಿರಬೇಕು; ಇದೇ ನಿಮ್ಮ ಪಶ್ಚಿಮ ಮೇರೆಯಾಗಿರುವದು. |
7. | ನಿಮ್ಮ ಉತ್ತರ ಮೇರೆ ಯಾವದಂದರೆ--ನೀವು ದೊಡ್ಡ ಸಮುದ್ರದಿಂದ ಹೋರ್ ಪರ್ವತದ ವರೆಗೂ |
8. | ಸಾಲು ಮಾಡಿಕೊಂಡು ಹೋರ್ ಪರ್ವತದಿಂದ ಹಮಾತಿನ ಪ್ರದೇಶದ ವರೆಗೆ ಸಾಲು ಮಾಡಿರಿ; ಮೇರೆಯು ಚೆದಾದಿಗೆ ಹೊರಟು |
9. | ಜಿಫ್ರೋನಿಗೆ ಹೋಗಿ ಹಚರೇನಾನಿನಲ್ಲಿ ಮುಗಿಯಲಿ; ಇದು ನಿಮ್ಮ ಉತ್ತರ ಮೇರೆ. |
10. | ಪೂರ್ವದ ಮೇರೆಗೋಸ್ಕರ ಹಚರೇನಾನಿನಿಂದ ಶೆಫಾಮಿಗೆ ಸಾಲು ಮಾಡಿಕೊಳ್ಳಿರಿ. |
11. | ಶೆಫಾಮಿನಿಂದ ಮೇರೆ ಆಯಿನಿನ ಪೂರ್ವದಲ್ಲಿರುವ ರಿಬ್ಲಕ್ಕೆ ಇಳಿದು ಕಿನ್ನೆರೆತ್ ಸಮುದ್ರದ ಪೂರ್ವ ತೀರವನ್ನು ಮುಟ್ಟಲಿ. |
12. | ಅಲ್ಲಿಂದ ಮೇರೆಯು ಯೊರ್ದನ್ ನದಿಗೆ ಅನುಸಾರ ವಾಗಿ ಇಳಿದು ಉಪ್ಪಿನ ಸಮುದ್ರದಲ್ಲಿ ಮುಗಿಯುವದು; ಇದು ಅದರ ಸುತ್ತಮುತ್ತಲ ಮೇರೆಗಳ ಪ್ರಕಾರ ನಿಮ್ಮ ದೇಶವಾಗಿರಬೇಕು. |
13. | ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾ ಪಿಸಿ--ನೀವು ಚೀಟಿನಿಂದ ಸ್ವಾಧೀನಪಡಿಸಿಕೊಳ್ಳ ಬೇಕಾದ ದೇಶವು ಒಂಭತ್ತುವರೆ ಗೋತ್ರಗಳಿಗೆ ಕೊಡ ಬೇಕೆಂದು ಕರ್ತನು ಆಜ್ಞಾಪಿಸಿದ ದೇಶವು ಇದೇ. |
14. | ರೂಬೇನನ ಮಕ್ಕಳ ಗೋತ್ರವೂ ಗಾದನ ಮಕ್ಕಳ ಗೋತ್ರವೂ ಮನಸ್ಸೆಯ ಅರ್ಧ ಗೋತ್ರವೂ ತಮ್ಮ ಪಿತೃಗಳ ಮನೆಯ ಪ್ರಕಾರವಾಗಿ ತಮ್ಮ ಸ್ವಾಸ್ತ್ಯವನ್ನು ಪಡೆದುಕೊಂಡಿದ್ದಾರೆ. |
15. | ಎರಡೂವರೆ ಗೋತ್ರಗಳು ತಮ್ಮ ಸ್ವಾಸ್ತ್ಯವನ್ನು ಯೊರ್ದನಿನ ಈಚೆಯಲ್ಲಿ ಯೆರಿ ಕೋವಿಗೆ ಸೂರ್ಯನು ಉದಯಿಸುವ ಪೂರ್ವ ದಿಕ್ಕಿನಲ್ಲಿ ಪಡೆದುಕೊಂಡಿದ್ದಾರೆ ಎಂದು ಹೇಳಿದನು. |
16. | ಕರ್ತನು ಮೋಶೆಯ ಸಂಗಡ ಮಾತನಾಡಿ |
17. | ದೇಶವನ್ನು ನಿಮಗೆ ಹಂಚಬೇಕಾದ ಮನುಷ್ಯರ ಹೆಸರುಗಳು ಇವೇ: ಯಾಜಕನಾದ ಎಲ್ಲಾಜಾರನೂ ನೂನನ ಮಗನಾದ ಯೆಹೋಶುವನೂ |
18. | ದೇಶದ ಸ್ವಾಸ್ತ್ಯವನ್ನು ಹಂಚುವದಕ್ಕೆ ನೀವು ಒಂದೊಂದು ಗೋತ್ರದಿಂದ ಒಬ್ಬೊಬ್ಬ ಪ್ರಧಾನನನ್ನು ತಕ್ಕೊಳ್ಳಿರಿ. |
19. | ಈ ಮನುಷ್ಯರ ಹೆಸರುಗಳು ಇವೇ: ಯೆಹೂದನ ಕುಟುಂಬದಿಂದ ಯೆಪುನ್ನೆಯ ಮಗನಾದ ಕಾಲೇಬನೂ |
20. | ಸಿಮೆಯೋನನ ಮಕ್ಕಳ ಗೋತ್ರದಿಂದ ಅವ್ಮೆಾಹೂ ದನ ಮಗನಾದ ಶೆಮೂವೇಲನೂ |
21. | ಬೆನ್ಯಾವಿಾನನ ಗೋತ್ರದಿಂದ ಕಿಸ್ಲೋನನ ಮಗನಾದ ಎಲೀದಾದನೂ |
22. | ದಾನನ ಮಕ್ಕಳ ಗೋತ್ರದ ಪ್ರಧಾನನು ಯೊಗ್ಲೀಯ ಮಗನಾದ ಬುಕ್ಕೀಯೂ |
23. | ಯೋಸೇಫನ ಮಕ್ಕಳಾದ ಮನಸ್ಸೆಯ ಗೋತ್ರದ ಪ್ರಧಾನನು ಎಫೋದನ ಮಗನಾದ ಹನ್ನೀಯೇಲನೂ |
24. | ಎಫ್ರಾಯಾಮ್ ಮಕ್ಕಳ ಗೋತ್ರದ ಪ್ರಧಾನನು ಶಿಫ್ಟಾನನ ಮಗನಾದ ಕೆಮೂವೇಲನೂ |
25. | ಜೆಬುಲೂನನ ಮಕ್ಕಳ ಗೋತ್ರದ ಪ್ರಧಾನನು ಪರ್ನಾಕನ ಮಗನಾದ ಎಲೀಚಾಫಾನನೂ |
26. | ಇಸ್ಸಾಕಾರನ ಮಕ್ಕಳ ಗೋತ್ರದ ಪ್ರಧಾನನು ಅಜ್ಜಾನನ ಮಗನಾದ ಪಲ್ಟೀಯೇಲನೂ |
27. | ಆಶೇರನ ಮಕ್ಕಳ ಗೋತ್ರದ ಪ್ರಧಾನನು ಶೆಲೋಮಿಯ ಮಗನಾದ ಅಹೀಹೂದನೂ |
28. | ನಫ್ತಾಲಿಯ ಮಕ್ಕಳ ಗೋತ್ರದ ಪ್ರಧಾನನು ಅವ್ಮೆಾಹೂದನ ಮಗನಾದ ಪೆದಹೇಲನೂ. |
29. | ಕಾನಾನ್ ದೇಶದಲ್ಲಿ ಇಸ್ರಾಯೇಲ್ ಮಕ್ಕಳಿಗೆ ಸ್ವಾಸ್ತ್ಯವನ್ನು ಹಂಚುವದಕ್ಕೆ ಕರ್ತನು ನೇಮಿಸಿದ ಮನುಷ್ಯರು ಇವರೇ. |
← Numbers (34/36) → |