← Numbers (29/36) → |
1. | ಏಳನೇ ತಿಂಗಳಿನ ಮೊದಲನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿರಬೇಕು; ಕಷ್ಟಕರವಾದ ಕೆಲಸವನ್ನು ನೀವು ಮಾಡಬಾರದು; ಅದು ನಿಮಗೆ ತುತೂರಿಗಳನ್ನು ಊದುವ ದಿವಸ ವಾಗಿರುವದು. |
2. | ನೀವು ಕರ್ತನಿಗೆ ಸುವಾಸನೆಗಾಗಿ ದೋಷವಿಲ್ಲದ ಒಂದು ಎಳೇ ಹೋರಿಯನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿಗಳನ್ನೂ ದಹನ ಬಲಿಯಾಗಿ ಅರ್ಪಿಸಬೇಕು. |
3. | ಅವುಗಳ ಆಹಾರ ಸಮ ರ್ಪಣೆಯು ಎಣ್ಣೆಯಿಂದ ಕಲಸಿದ ಹಿಟ್ಟು, ಹೋರಿಗೆ ಮೂರು ದಶಾಂಶಗಳು, ಟಗರಿಗೆ ಎರಡು ದಶಾಂಶ ಗಳು, |
4. | ಆ ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಒಂದು ದಶಾಂಶ; |
5. | ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡುವದಕ್ಕೆ ಪಾಪಬಲಿಗಾಗಿ ಒಂದು ಮೇಕೆಮರಿ. |
6. | ಇದಲ್ಲದೆ ತಿಂಗಳಿನ ದಹನಬಲಿಯನ್ನೂ ಅದರ ಆಹಾರ ಸಮರ್ಪಣೆಯನ್ನೂ ನಿತ್ಯವಾದ ದಹನ ಬಲಿಯನ್ನೂ ಅದರ ಆಹಾರ ಸಮರ್ಪಣೆಯನ್ನೂ ಅವುಗಳ ಪಾನಾರ್ಪಣೆಗಳನ್ನೂ ಬೆಂಕಿಯಿಂದ ಮಾಡ ಲ್ಪಟ್ಟು ಕರ್ತನಿಗೆ ಸುವಾಸನೆಗಾಗಿ ಅವುಗಳಿಗೆ ತಕ್ಕಂತೆ ಅರ್ಪಿಸಬೇಕು. |
7. | ಈ ಏಳನೇ ತಿಂಗಳಿನ ಹತ್ತನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಬೇಕು; ಅದರಲ್ಲಿ ನಿಮ್ಮ ಪ್ರಾಣಗಳನ್ನು ವ್ಯಥೆಪಡಿಸಿ ಯಾವ ಕೆಲಸವನ್ನಾದರೂ ಮಾಡಬಾರದು. |
8. | ಆದರೆ ಕರ್ತನಿಗೆ ಸುವಾಸನೆಯಾದ ದಹನ ಬಲಿಗಾಗಿ ದೋಷವಿಲ್ಲದ ಒಂದು ಎಳೇ ಹೋರಿ ಯನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿ ಗಳನ್ನೂ |
9. | ಅವುಗಳ ಆಹಾರ ಸಮರ್ಪಣೆಗಾಗಿ ಎಣ್ಣೇ ಕಲಸಿದ ಹಿಟ್ಟನ್ನೂ ಹೋರಿಗೆ ಮೂರು ದಶಾಂಶಗಳನ್ನೂ ಟಗರಿಗೆ ಎರಡು ದಶಾಂಶಗಳನ್ನೂ |
10. | ಏಳು ಕುರಿಮರಿ ಗಳಲ್ಲಿ ಒಂದೊಂದಕ್ಕೆ ಒಂದು ದಶಾಂಶವನ್ನೂ |
11. | ಪಾಪ ಬಲಿಗಾಗಿ ಒಂದು ಮೇಕೆ ಮರಿಯಲ್ಲದೆ ಪ್ರಾಯಶ್ಚಿತ್ತದ ಪಾಪ ಬಲಿಯನ್ನೂ ನಿತ್ಯ ದಹನಬಲಿಯನ್ನೂ ಅದರ ಆಹಾರ ಸಮರ್ಪಣೆಯನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
12. | ಏಳನೇ ತಿಂಗಳಿನ ಹದಿನೈದನೇ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಬೇಕು; ಕಷ್ಟಕರವಾದ ಕೆಲಸವನ್ನು ಮಾಡಬಾರದು. |
13. | ಕರ್ತನಿಗೆ ಏಳು ದಿವಸ ಹಬ್ಬವನ್ನು ಮಾಡಬೇಕು. ಕರ್ತನಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಗಾಗಿ ಬಲಿಯನ್ನು ಅರ್ಪಿಸಬೇಕು; ಏನಂದರೆ, ಹದಿಮೂರು ಎಳೇ ಹೋರಿ ಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ; ಅವು ದೋಷವಿಲ್ಲದ್ದಾಗಿರಬೇಕು; |
14. | ಅವುಗಳ ಆಹಾರ ಸಮರ್ಪಣೆಯು ಎಣ್ಣೇ ಕಲಸಿದ ಹಿಟ್ಟು; ಹದಿಮೂರು ಹೋರಿಗಳಲ್ಲಿ ಒಂದೊಂದಕ್ಕೆ ಮೂರು ದಶಾಂಶಗಳು; ಎರಡು ಟಗರುಗಳಲ್ಲಿ ಒಂದೊಂದಕ್ಕೆ ಎರಡು ದಶಾಂಶಗಳು; |
15. | ಹದಿನಾಲ್ಕು ಕುರಿಮರಿಗಳಲ್ಲಿ ಒಂದೊಂದಕ್ಕೆ ಒಂದು ದಶಾಂಶ; |
16. | ಪಾಪಬಲಿಗೆ ಒಂದು ಮೇಕೆಮರಿ; ಇದಲ್ಲದೆ ನಿತ್ಯ ದಹನ ಬಲಿಯನ್ನೂ ಅದರ ಆಹಾರ ಸಮರ್ಪಣೆ ಯನ್ನೂ ಪಾನದ ಅರ್ಪಣೆಯನ್ನೂ ಅರ್ಪಿಸಬೇಕು. |
17. | ಎರಡನೇ ದಿವಸದಲ್ಲಿ ಮಚ್ಚೆಯಿಲ್ಲದ ಹನ್ನೆರಡು ಎಳೇ ಹೋರಿಗಳನ್ನೂ ಎರಡು ಟಗರುಗಳನ್ನೂ ವರು ಷದ ಹದಿನಾಲ್ಕು ಕುರಿಮರಿಗಳನ್ನೂ |
18. | ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ |
19. | ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
20. | ಮೂರನೇ ದಿವಸದಲ್ಲಿ ದೋಷವಿಲ್ಲದ ಹನ್ನೊಂದು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ |
21. | ಹೋರಿ ಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನಗಳ ಅರ್ಪಣೆಗಳನ್ನೂ |
22. | ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
23. | ನಾಲ್ಕನೇ ದಿವಸದಲ್ಲಿ ದೋಷವಿಲ್ಲದ ಹತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ |
24. | ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನಗಳ ಅರ್ಪಣೆಗಳನ್ನೂ |
25. | ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
26. | ಐದನೇ ದಿವಸದಲ್ಲಿ ಮಚ್ಚೆಯಿಲ್ಲದ ಒಂಭತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ |
27. | ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರಪಾನ ಬಲಿ ಗಳನ್ನೂ |
28. | ಪಾಪಬಲಿಯಾಗಿ ಒಂದು ಮೇಕೆ ಮರಿ ಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
29. | ಆರನೇ ದಿವಸದಲ್ಲಿ ದೋಷವಿಲ್ಲದ ಎಂಟು ಹೋರಿಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ |
30. | ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ |
31. | ಪಾಪಬಲಿಯಾಗಿ ಒಂದು ಮೇಕೆ ಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
32. | ಏಳನೇ ದಿವಸದಲ್ಲಿ ದೋಷವಿಲ್ಲದ ಏಳು ಹೋರಿ ಗಳನ್ನೂ ಎರಡು ಟಗರುಗಳನ್ನೂ ವರುಷದ ಹದಿನಾಲ್ಕು ಕುರಿಮರಿಗಳನ್ನೂ |
33. | ಹೋರಿಗಳಿಗೆ ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ |
34. | ಪಾಪ ಬಲಿಯಾಗಿ ಒಂದು ಮೇಕೆಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
35. | ಎಂಟನೇ ದಿವಸದಲ್ಲಿ ನಿಮಗೆ ಹಬ್ಬದ ಸಭೆಯಾಗ ಬೇಕು. ಕಷ್ಟಕರವಾದ ಕೆಲಸವನ್ನು ನೀವು ಮಾಡ ಬಾರದು. |
36. | ಕರ್ತನಿಗೆ ಬೆಂಕಿಯಿಂದ ಮಾಡಿದ ಸುವಾ ಸನೆಯ ದಹನಬಲಿಗಾಗಿ ದೋಷವಿಲ್ಲದ ಒಂದು ಹೋರಿಯನ್ನೂ ಒಂದು ಟಗರನ್ನೂ ವರುಷದ ಏಳು ಕುರಿಮರಿಗಳನ್ನೂ |
37. | ಹೋರಿಗೆ ಟಗರಿಗೆ ಮತ್ತು ಕುರಿ ಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಆಹಾರ ಪಾನದ ಅರ್ಪಣೆಗಳನ್ನೂ |
38. | ಪಾಪ ಬಲಿಯಾಗಿ ಒಂದು ಮೇಕೆಮರಿಯನ್ನೂ ಅಲ್ಲದೆ ನಿತ್ಯ ದಹನಬಲಿಯನ್ನೂ ಅದರ ಆಹಾರ ಪಾನದ ಅರ್ಪಣೆಗಳನ್ನೂ ಅರ್ಪಿಸಬೇಕು. |
39. | ಇದಲ್ಲದೆ ನಿಮ್ಮ ಪ್ರಮಾಣಗಳನ್ನೂ ಉಚಿತವಾದ ಬಲಿಗಳನ್ನೂ ದಹನಬಲಿಗಳನ್ನೂ ಆಹಾರ ಪಾನದ ಅರ್ಪಣೆಗಳನ್ನೂ ಸಮಾಧಾನ ಬಲಿಗಳನ್ನೂ ನೀವು ನಿಮ್ಮ ಹಬ್ಬಗಳಲ್ಲಿ ಕರ್ತನಿಗೆ ಮಾಡತಕ್ಕ ಅರ್ಪಣೆಗಳು ಇವೇ ಎಂದು |
40. | ಕರ್ತನು ತನಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಹೇಳಿದನು. |
← Numbers (29/36) → |