← Numbers (23/36) → |
1. | ಆಗ ಬಿಳಾಮನು ಬಾಲಾಕನಿಗೆ--ಏಳು ಬಲಿಪೀಠಗಳನ್ನು ಕಟ್ಟಿ, ಏಳು ಹೋರಿ ಗಳನ್ನೂ ಏಳು ಟಗರುಗಳನ್ನೂ ನನಗೆ ಇಲ್ಲಿ ಸಿದ್ಧಮಾಡು ಅಂದನು. |
2. | ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿದನು; ಬಾಲಾಕನೂ ಬಿಳಾಮನೂ ಒಂದೊಂದು ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಅರ್ಪಿಸಿದರು. |
3. | ಆಗ ಬಿಳಾಮನು ಬಾಲಾಕನಿಗೆ--ನೀನು ನಿನ್ನ ದಹನ ಬಲಿಯ ಹತ್ತಿರ ನಿಂತುಕೊ; ನಾನು ಹೋಗುತ್ತೇನೆ; ಒಂದು ವೇಳೆ ಕರ್ತನು ನನಗೆ ಎದುರಾಗಿ ಬರುವನು, ಆತನು ನನಗೆ ಏನು ತೋರಿಸುವನೋ ಅದನ್ನು ನಿನಗೆ ತಿಳಿಸುವೆನೆಂದು ಹೇಳಿ ಒಂದು ಎತ್ತರವಾದ ಸ್ಥಳಕ್ಕೆ ಹೋದನು. |
4. | ಆಗ ದೇವರು ಬಿಳಾಮನನ್ನು ಸಂಧಿಸಿದನು. ಅವನು ಆತನಿಗೆ--ನಾನು ಏಳು ಬಲಿ ಪೀಠಗಳನ್ನು ಸಿದ್ಧಮಾಡಿ, ಒಂದೊಂದು ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಅರ್ಪಿಸಿದ್ದೇನೆ ಅಂದನು. |
5. | ಕರ್ತನು ಬಿಳಾಮನ ಬಾಯಲ್ಲಿ ತನ್ನ ಮಾತನ್ನು ಇಟ್ಟು ಅವನಿಗೆನೀನು ಬಾಲಾಕನ ಬಳಿಗೆ ತಿರಿಗಿ ಹೋಗಿ ಈ ಪ್ರಕಾರ ಮಾತನಾಡಬೇಕು ಅಂದನು. |
6. | ಆಗ ಅವನು ಬಾಲಾಕನ ಬಳಿಗೆ ತಿರಿಗಿ ಬಂದನು; ಅಗೋ, ಬಾಲಾಕನೂ ಮೋವಾಬಿನ ಸಕಲ ಪ್ರಭುಗಳೂ ಅವನು ಮಾಡಿದ ದಹನಬಲಿಯ ಹತ್ತಿರ ನಿಂತಿದ್ದರು. |
7. | ಆಗ ಅವನು ಸಾಮ್ಯರೂಪವಾಗಿ--ಮೋವಾಬಿನ ಅರಸನಾದ ಬಾಲಾಕನು ನನ್ನನ್ನು ಅರಾಮಿನಿಂದಲೂ ಪೂರ್ವ ಪರ್ವತಗಳಿಂದಲೂ ಕರೆಯಿಸಿ--ನನಗೋ ಸ್ಕರ ಯಾಕೋಬನನ್ನು ಶಪಿಸ ಬಾ; ಇಸ್ರಾಯೇಲನ್ನು ಎದುರಿಸುವದಕ್ಕೆ ಬಾ ಎಂದು ನನಗೆ ಹೇಳಿದ್ದಾನೆ. |
8. | ದೇವರು ಶಪಿಸದವನನ್ನು ನಾನು ಹೇಗೆ ಶಪಿಸಲಿ? ಕರ್ತನು ಎದುರಿಸದವನನ್ನು ನಾನು ಹೇಗೆ ಎದುರಿ ಸಲಿ? |
9. | ಬಂಡೆಗಳ ತುದಿಯಿಂದ ಅವನನ್ನು ನೋಡು ತ್ತೇನೆ; ಗುಡ್ಡಗಳಿಂದ ಅವನನ್ನು ದೃಷ್ಟಿಸಿದ್ದೇನೆ; ಇಗೋ, ಆ ಜನಾಂಗವು ಒಂಟಿಯಾಗಿ ವಾಸಿಸುವದು, ಜನಾಂಗ ಗಳಲ್ಲಿ ಅದು ಎಣಿಸಲ್ಪಡುವದಿಲ್ಲ. |
10. | ಯಾಕೋಬನ ಧೂಳನ್ನು ಎಣಿಸುವದಕ್ಕೂ ಇಸ್ರಾಯೇಲಿನ ನಾಲ್ಕನೇ ಒಂದು ಪಾಲನ್ನಾದರೂ ಲೆಕ್ಕ ಮಾಡುವದಕ್ಕೂ ಯಾರಿಂದಾದೀತು? ನೀತಿವಂತನು ಸಾಯುವಂತೆ ನಾನೂ ಸಾಯಬೇಕು, ನನ್ನ ಕಡೇ ಅಂತ್ಯವು ಅವನಂತೆಯೇ ಆಗಲಿ ಎಂದು ಹೇಳಿದನು. |
11. | ಆಗ ಬಾಲಾಕನು ಬಿಳಾಮನಿಗೆ--ಇದೇನು ನೀನು ನನಗೆ ಮಾಡಿದ್ದು? ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರೆಯಿಸಿದೆನು; ಇಗೋ, ನೀನು ಅವರನ್ನು ಸಂಪೂರ್ಣ ವಾಗಿ ಆಶೀರ್ವದಿಸಿದಿ ಅಂದನು. |
12. | ಅದಕ್ಕೆ ಅವನು ಪ್ರತ್ಯುತ್ತರವಾಗಿ--ಕರ್ತನು ನನ್ನ ಬಾಯೊಳಗೆ ಇಡುವದನ್ನು ಹೇಳುವದಕ್ಕೆ ನಾನು ಜಾಗ್ರತೆಯಾಗಿರ ಬೇಕಲ್ಲವೋ ಅಂದನು. |
13. | ಬಾಲಾಕನು ಅವನಿಗೆ--ನೀನು ಅವರನ್ನು ನೋಡತಕ್ಕ ಮತ್ತೊಂದು ಸ್ಥಳಕ್ಕೆ ನನ್ನೊಂದಿಗೆ ಬಾ; ಅವರನ್ನೆಲ್ಲಾ ನೋಡದೆ ಅವರ ಅಂತ್ಯ ಭಾಗವನ್ನು ಮಾತ್ರ ನೋಡುವಿ; |
14. | ಅಲ್ಲಿಂದ ಅವರನ್ನು ನನಗೋ ಸ್ಕರ ಶಪಿಸು ಅಂದನು. ಹಾಗೆ ಬಾಲಾಕನು ಬಿಳಾಮ ನನ್ನು ಪಿಸ್ಗಾದ ತುದಿಗೆ ಚೋಫೀಮನ ಬೈಲಿಗೆ ಕರ ಕೊಂಡು ಹೋಗಿ ಏಳು ಬಲಿಪೀಠಗಳನ್ನು ಕಟ್ಟಿ ಒಂದೊಂದು ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಅರ್ಪಿಸಿ ದನು. |
15. | ಆಗ ಅವನು ಬಾಲಾಕನಿಗೆ--ಇಲ್ಲಿ ನಿನ್ನ ದಹನಬಲಿಯ ಹತ್ತಿರ ನಿಂತುಕೋ; ನಾನು ಅಲ್ಲಿ ಕರ್ತನನ್ನು ಆಚೆಯಲ್ಲಿ ಎದುರುಗೊಳ್ಳುವೆನು ಅಂದನು. |
16. | ಕರ್ತನು ಬಿಳಾಮನ ಎದುರಿಗೆ ಬಂದು ಅವನ ಬಾಯೊಳಗೆ ವಾಕ್ಯವನ್ನಿಟ್ಟು--ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ ಈ ಪ್ರಕಾರ ಮಾತನಾಡು ಅಂದನು. |
17. | ಇವನು ಅವನ ಬಳಿಗೆ ಬಂದಾಗ ಇಗೋ, ಅವನೂ ಅವನ ಸಂಗಡ ಮೋವಾಬಿನ ಪ್ರಧಾನರೂ ಅವನ ದಹನಬಲಿಯ ಹತ್ತಿರ ನಿಂತುಕೊಂಡಿದ್ದರು; |
18. | ಬಾಲಾ ಕನು ಅವನಿಗೆ--ಕರ್ತನು ಏನು ಹೇಳಿದ್ದಾನೆ ಅಂದನು. ಅವನು ಸಾಮ್ಯರೂಪವಾಗಿ--ಬಾಲಾಕನೇ, ಎದ್ದು ಕೇಳು; ಚಿಪ್ಪೋರನ ಮಗನೇ, ನನಗೆ ಕಿವಿಗೊಡು. |
19. | ಸುಳ್ಳಾಡುವ ಹಾಗೆ ದೇವರು ಮನುಷ್ಯನಲ್ಲ, ಪಶ್ಚಾತ್ತಾಪಪಡುವ ಹಾಗೆ ನರಪುತ್ರನಲ್ಲ; ಆತನು ನುಡಿದದ್ದನ್ನು ಮಾಡದಿರುವನೇ? ಮಾತನಾಡಿದ್ದನ್ನು ಆತನು ಸ್ಥಾಪಿಸನೇ? |
20. | ಇಗೋ, ಆಶೀರ್ವದಿಸು ವದಕ್ಕೆ ಅಪ್ಪಣೆ ಹೊಂದಿದ್ದೇನೆ; ಆತನು ಆಶೀರ್ವದಿ ಸುತ್ತಿದ್ದಾನೆ; ನಾನು ಅದನ್ನು ಬದಲು ಮಾಡುವದ ಕ್ಕಾಗದು. |
21. | ಆತನು ಯಾಕೋಬನಲ್ಲಿ ಪಾಪವನ್ನು ಕಾಣಲಿಲ್ಲ; ಇಸ್ರಾಯೇಲನಲ್ಲಿ ವಕ್ರತೆಯನ್ನು ನೋಡಲಿಲ್ಲ; ಅವನ ದೇವರಾದ ಕರ್ತನು ಅವನ ಸಂಗಡ ಇದ್ದಾನೆ; ಅರಸನ ಜಯ ಧ್ವನಿಯು ಅವರಲ್ಲಿ ಉಂಟು. |
22. | ದೇವರು ಅವರನ್ನು ಐಗುಪ್ತದೊಳಗಿಂದ ಹೊರಗೆ ಬರಮಾಡಿದ್ದಾನೆ. ಅವನಿಗೆ ಒಂದು ಕೊಂಬುಳ್ಳ ಪ್ರಾಣಿಯಂತೆ ಬಲ ಉಂಟು. |
23. | ನಿಶ್ಚಯ ವಾಗಿ ಯಾಕೋಬನಿಗೆ ವಿರೋಧವಾಗಿ ಶಕುನವಿಲ್ಲ; ಇಸ್ರಾಯೇಲನಿಗೆ ವಿರೋಧವಾಗಿ ಯಾವ ಕಣಿ ಇಲ್ಲ; ತತ್ಕಾಲದಲ್ಲಿ ದೇವರು ಏನು ಮಾಡಿದನೆಂದು ಯಾಕೋಬನ ವಿಷಯವಾಗಿಯೂ ಇಸ್ರಾಯೇಲಿನ ವಿಷಯವಾಗಿಯೂ ಹೇಳುವರು. |
24. | ಇಗೋ, ಜನವು ದೊಡ್ಡ ಸಿಂಹದ ಹಾಗೆ ಏಳುವದು; ಸಿಂಹದ ಮರಿಯ ಹಾಗೆ ಎದ್ದೇಳುವದು; ಅದು ಬೇಟೆಯನ್ನು ತಿಂದು ಹತವಾದವರ ರಕ್ತವನ್ನು ಕುಡಿಯುವ ವರೆಗೆ ಮಲಗದು ಅಂದನು. |
25. | ಆಗ ಬಾಲಾಕನು ಬಿಳಾಮ ನಿಗೆ--ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ ಅಂದನು. |
26. | ಆದರೆ ಬಿಳಾಮನು ಪ್ರತ್ಯುತ್ತರ ವಾಗಿ ಬಾಲಾಕನಿಗೆ ಕರ್ತನು ಹೇಳುವದನ್ನೆಲ್ಲಾ ನಾನು ಮಾಡುವನೆಂದು ನಿನಗೆ ಹೇಳಲಿಲ್ಲವೋ? ಅಂದನು. |
27. | ಆಗ ಬಾಲಾಕನು ಬಿಳಾಮನಿಗೆ--ದಯಮಾಡಿ ಬಾ, ನಾನು ನಿನ್ನನ್ನು ಬೇರೆ ಒಂದು ಸ್ಥಳಕ್ಕೆ ಕರಕೊಂಡು ಹೋಗುವೆನು. ನೀನು ಅಲ್ಲಿಂದ ನನಗೋಸ್ಕರ ಅವ ರನ್ನು ಶಪಿಸುವದು ಒಂದು ವೇಳೆ ದೇವರಿಗೆ ಯುಕ್ತವಾಗಿ ದ್ದೀತು ಅಂದನು. |
28. | ಆದಕಾರಣ ಬಾಲಾಕನು ಬಿಳಾಮನನ್ನು ಕಾಡಿಗೆದುರಾಗಿರುವ ಪೆಯೋರಿನ ತುದಿಗೆ ಕರಕೊಂಡು ಹೋದನು. |
29. | ಬಿಳಾಮನು ಬಾಲಾಕನಿಗೆ--ನನಗೆ ಇಲ್ಲಿ ಏಳು ಬಲಿಪೀಠಗಳನ್ನು ಕಟ್ಟಿ, ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಸಿದ್ಧಮಾಡು ಅಂದನು. |
30. | ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿ ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಅರ್ಪಿಸಿದನು. |
← Numbers (23/36) → |