← Numbers (17/36) → |
1. | ಕರ್ತನು ಮೋಶೆಯ ಸಂಗಡ ಮಾತ ನಾಡಿ-- |
2. | ನೀನು ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಿ ಅವರಿಂದ ಅವರ ಪಿತೃಗಳ ಮನೆಯ ಪ್ರಕಾರ, ಅವರ ಪ್ರಧಾನರೆಲ್ಲರ ಪಿತೃಗಳ ಮನೆಯ ಪ್ರಕಾರ, ಒಂದೊಂದು ಕೋಲನ್ನಾಗಿ ಹನ್ನೆರಡು ಕೋಲುಗಳನ್ನು ತಕ್ಕೊಂಡು ಒಬ್ಬೊಬ್ಬನ ಹೆಸರನ್ನು ಅವನವನ ಕೋಲಿನ ಮೇಲೆ ಬರೆ. |
3. | ಆರೋನನ ಹೆಸರನ್ನು ಲೇವಿಯ ಕೋಲಿನ ಮೇಲೆ ಬರೆಯಬೇಕು. ಅವರ ಪಿತೃಗಳ ಮನೆಯ ಮುಖ್ಯಸ್ಥನಿಗೆ ಒಂದು ಕೋಲು ಇರಬೇಕು. |
4. | ಅವುಗಳನ್ನು ಸಭೆಯ ಗುಡಾರದಲ್ಲಿ ನಾನು ನಿಮ್ಮ ಸಂಗಡ ಸಂಧಿಸುವ ಸಾಕ್ಷಿಯ ವಿಧಿಗಳ ಮುಂದೆ ಇಡಬೇಕು. |
5. | ಆಗ ಏನಾಗುವ ದಂದರೆ, ನಾನು ಯಾವನನ್ನು ಆದುಕೊಳ್ಳುತ್ತೇನೋ ಆ ಮನುಷ್ಯನ ಕೋಲು ಚಿಗುರುವದು. ಹೀಗೆ ಇಸ್ರಾ ಯೇಲ್ ಮಕ್ಕಳು ನಿಮಗೆ ವಿರೋಧವಾಗಿ ಗುಣುಗುಟ್ಟು ವದನ್ನು ನಾನು ನಿಲ್ಲಿಸಿಬಿಡುವೆನು ಅಂದನು. |
6. | ಹಾಗೆಯೇ ಮೋಶೆಯು ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಿದನು. ಅವರ ಪ್ರಧಾನರೆಲ್ಲರೂ ತಮ್ಮ ಪಿತೃಗಳ ಮನೆಗಳ ಪ್ರಕಾರ ಒಬ್ಬೊಬ್ಬ ಪ್ರಧಾನಿ ಗೋಸ್ಕರ ಒಂದೊಂದು ಕೋಲಿನ ಪ್ರಕಾರ ಹನ್ನೆರಡು ಕೋಲುಗಳನ್ನು ಕೊಟ್ಟರು. ಆರೋನನ ಕೋಲು ಸಹ ಅವರ ಕೋಲುಗಳ ಮಧ್ಯದಲ್ಲಿ ಇತ್ತು. |
7. | ಆಗ ಮೋಶೆಯು ಆ ಕೋಲುಗಳನ್ನು ಸಾಕ್ಷಿಯ ಗುಡಾರ ದೊಳಗೆ ಕರ್ತನ ಸಮ್ಮುಖದಲ್ಲಿ ಇಟ್ಟನು. |
8. | ಮರು ದಿವಸದಲ್ಲಿ ಆದದ್ದೇನಂದರೆ, ಮೋಶೆಯು ಸಾಕ್ಷೀ ಗುಡಾರದೊಳೆಗೆ ಪ್ರವೇಶಿಸುವಾಗ ಇಗೋ, ಲೇವಿ ಮನೆಯ ಕೋಲಾಗಿದ್ದ ಆರೋನನ ಕೋಲು ಚಿಗುರಿ ಮೊಗ್ಗುಬಿಟ್ಟು ಹೂವು ಅರಳಿ ಬಾದಾಮಿ ಹಣ್ಣುಗಳನ್ನು ಫಲಿಸಿತ್ತು. |
9. | ಆಗ ಮೋಶೆಯು ಎಲ್ಲಾ ಕೋಲುಗಳನ್ನು ಕರ್ತನ ಸನ್ನಿಧಿಯಿಂದ ಇಸ್ರಾಯೇಲ್ ಮಕ್ಕಳೆಲ್ಲರಿಗೆ ತೋರಿಸುವದಕ್ಕಾಗಿ ಹೊರಗೆ ತಂದನು. ಆಗ ಅವರು ನೋಡಿ ತಮ್ಮ ತಮ್ಮ ಕೋಲನ್ನು ತೆಗೆದುಕೊಂಡರು. |
10. | ತರುವಾಯ ಕರ್ತನು ಮೋಶೆಗೆ--ಆರೋನನ ಕೋಲನ್ನು ಎದುರು ಬೀಳುವವರಿಗೆ ಗುರುತಾಗಿ ಸಾಕ್ಷಿಯ ವಿಧಿಗಳ ಮುಂದೆ ತಿರಿಗಿ ಇಡು. ಹೀಗೆ ಅವರು ಸಾಯದ ಹಾಗೆ ನನ್ನ ಮುಂದೆ ಗುಣು ಗುಟ್ಟುವದನ್ನು ನನ್ನಿಂದ ನೀನು ಸಂಪೂರ್ಣವಾಗಿ ತೆಗೆದು ಬಿಡಬೇಕು ಅಂದನು. |
11. | ಮೋಶೆಯು ಹಾಗೆಯೇ ಮಾಡಿದನು. ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರ ಮಾಡಿದನು. |
12. | ಆಗ ಇಸ್ರಾಯೇಲ್ ಮಕ್ಕಳು ಮೋಶೆಯ ಸಂಗಡ ಮಾತನಾಡಿ--ಇಗೋ, ಸಾಯುತ್ತೇವೆ. ನಾಶವಾಗು ತ್ತೇವೆ: ನಾವೆಲ್ಲರೂ ನಾಶವಾಗುತ್ತೇವೆ. |
13. | ಕರ್ತನ ಗುಡಾರದ ಸವಿಾಪಕ್ಕೆ ಬರುವವರೆಲ್ಲರೂ ಸಾಯುವರು. ಸಾಯುವದರಿಂದ ನಾವು ನಾಶವಾಗಬೇಕೋ ಎಂದು ಹೇಳಿದರು. |
← Numbers (17/36) → |