← Numbers (14/36) → |
1. | ಆಗ ಸಭೆಯವರೆಲ್ಲಾ ತಮ್ಮ ಸ್ವರವೆತ್ತಿ ಕೂಗುವವರಾಗಿ ಆ ರಾತ್ರಿಯೆಲ್ಲಾ ಅತ್ತರು. |
2. | ಇಸ್ರಾಯೇಲ್ ಮಕ್ಕಳೆಲ್ಲರೂ ಮೋಶೆಗೂ ಆರೋನ ರಿಗೂ ವಿರೋಧವಾಗಿ ಗುಣುಗುಟ್ಟಿದರು. ಸಭೆಯಲ್ಲಾ ಅವರಿಗೆ--ನಾವು ಐಗುಪ್ತ ದೇಶದಲ್ಲಿ ಸತ್ತಿದ್ದರೆ ಇಲ್ಲವೆ ಈ ಅರಣ್ಯದಲ್ಲಿ ಸತ್ತರೆ ನಮಗೆ ಒಳ್ಳೇದಾಗಿತ್ತು. |
3. | ನಾವು ಕತ್ತಿಯಿಂದ ಕೊಲೆಯಾಗುವಂತೆ ನಮ್ಮ ಹೆಂಡತಿ ಮಕ್ಕಳೂ ಸುಲಿಗೆಯಾಗುವ ಹಾಗೆಯೂ ಕರ್ತನು ನಮ್ಮನ್ನು ಈ ದೇಶಕ್ಕೆ ಯಾಕೆ ಬರಮಾಡಿದ್ದಾನೆ? ಐಗುಪ್ತದೇಶಕ್ಕೆ ನಾವು ತಿರಿಗಿ ಹೋಗುವದು ನಮಗೆ ಒಳ್ಳೇದಲ್ಲವೋ? |
4. | ನಾವು ನಾಯಕನೊಬ್ಬನನ್ನು ಮಾಡಿ ಕೊಂಡು ಐಗುಪ್ತದೇಶಕ್ಕೆ ಹಿಂತಿರುಗೋಣ ಬನ್ನಿರಿ ಎಂದು ಒಬ್ಬರಿಗೊಬ್ಬರು ಹೇಳಿಕೊಂಡರು. |
5. | ಆಗ ಮೋಶೆಯೂ ಆರೋನನೂ ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯ ಕೂಟದ ಮುಂದೆ ಅಡ್ಡಬಿದ್ದರು. |
6. | ಆಗ ದೇಶವನ್ನು ಪಾಳತಿ ನೋಡಿದವರಲ್ಲಿದ್ದ ನೂನನ ಮಗನಾದ ಯೆಹೋಶುವನೂ ಯೆಫುನ್ನೆಯ ಮಗನಾದ ಕಾಲೇಬನೂ ತಮ್ಮ ವಸ್ತ್ರಗಳನ್ನು ಹರಕೊಂಡು |
7. | ಇಸ್ರಾ ಯೇಲ್ ಮಕ್ಕಳ ಸಮಸ್ತ ಸಭೆಯ ಕೂಟಕ್ಕೆ--ಪಾಳತಿ ನೋಡುವದಕ್ಕೆ ನಾವು ದಾಟಿಹೋದ ದೇಶವು ಅತ್ಯು ತ್ತಮವಾದ ದೇಶವೇ. |
8. | ಕರ್ತನು ನಮ್ಮಲ್ಲಿ ಇಷ್ಟಪಟ್ಟರೆ ಹಾಲು ಜೇನೂ ಹರಿಯುವ ಆ ದೇಶಕ್ಕೆ ನಮ್ಮನ್ನು ಬರಮಾಡಿ ಅದನ್ನು ನಮಗೆ ಕೊಡುವನು. |
9. | ನೀವಾ ದರೋ ಕರ್ತನಿಗೆ ವಿರೋಧವಾಗಿ ಬೀಳಬೇಡಿರಿ, ಆ ದೇಶದ ಜನರಿಗೆ ಭಯಪಡಬೇಡಿರಿ, ಅವರು ನಮಗೆ ರೊಟ್ಟಿಯಾಗುವರು; ಅವರಿಗಿದ್ದ ಆಶ್ರಯವು ಅವರ ಬಳಿಯಿಂದ ಹೋಯಿತು; ಕರ್ತನು ನಮ್ಮ ಸಂಗಡ ಇದ್ದಾನೆ; ಅವರಿಗೆ ಭಯಪಡಬೇಡಿರಿ ಅಂದನು. |
10. | ಸಭೆಯವರೆಲ್ಲರೂ ಅವರನ್ನು ಕಲ್ಲೆಸೆಯಬೇಕೆಂದಿ ದ್ದರು. ಆಗ ಕರ್ತನ ಮಹಿಮೆಯು ಸಭೆಯ ಗುಡಾರ ದಲ್ಲಿ ಇಸ್ರಾಯೇಲ್ ಮಕ್ಕಳಿಗೆಲ್ಲಾ ಪ್ರತ್ಯಕ್ಷವಾಯಿತು. |
11. | ಆಗ ಕರ್ತನು ಮೋಶೆಗೆ--ಎಷ್ಟರ ವರೆಗೆ ಈ ಜನರು ನನಗೆ ಕೋಪವನ್ನೆಬ್ಬಿಸುವರು? ನಾನು ಅವರ ಮಧ್ಯದಲ್ಲಿ ನಡಿಸಿದ ಸಕಲ ಸೂಚಕಕಾರ್ಯಗಳ ದೆಸೆ ಯಿಂದ ನನ್ನನ್ನು ಎಷ್ಟು ಮಾತ್ರಕ್ಕೂ ನಂಬದೆ ಇರುವ ರಲ್ಲಾ? |
12. | ನಾನು ಅವರನ್ನು ವ್ಯಾಧಿಯಿಂದ ಹೊಡೆದು ನಿರ್ಮೂಲಮಾಡಿ ನಿನ್ನನ್ನು ಅವರಿಗಿಂತ ದೊಡ್ಡದಾದ ಬಲವುಳ್ಳ ಜನಾಂಗವನ್ನಾಗಿ ಮಾಡುವೆನು ಅಂದನು. |
13. | ಆಗ ಮೋಶೆ ಕರ್ತನಿಗೆ--ಹಾಗಾದರೆ ಐಗುಪ್ತ್ಯರು ಅದನ್ನು ಕೇಳುವರು; ನೀನು ಈ ಜನರನ್ನು ನಿನ್ನ ಬಲದೊಂದಿಗೆ ಅವರ ಮಧ್ಯದಲ್ಲಿಂದ ಹೊರಗೆ ಬರಮಾಡಿದಿಯಲ್ಲಾ! |
14. | ಅವರು ಈ ದೇಶದ ನಿವಾಸಿ ಗಳಿಗೆ ಅದನ್ನು ಹೇಳುವರು; ಯಾಕಂದರೆ ಕರ್ತನಾದ ನೀನೇ ಈ ಜನರ ಸಂಗಡ ಇದ್ದೀಯೆಂದೂ ಕರ್ತ ನಾದ ನೀನೇ ಮುಖಾಮುಖಿಯಾಗಿ ಕಾಣಿಸಿಕೊಳ್ಳುತ್ತೀ ಯೆಂದೂ ನಿನ್ನ ಮೇಘವು ಅವರ ಮೇಲೆ ನಿಂತಿದೆ ಯೆಂದೂ ನೀನು ಹಗಲು ಹೊತ್ತಿನಲ್ಲಿ ಮೇಘ ಸ್ತಂಭದಲ್ಲಿಯೂ ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ನಡೆಯುತ್ತೀಯೆಂದೂ ಅವರು ಕೇಳಿದ್ದಾರೆ. |
15. | ಈಗ ನೀನು ಈ ಜನರನ್ನು ಒಬ್ಬ ಮನುಷ್ಯನೋ ಎಂಬಂತೆ ಕೊಂದುಹಾಕಿದರೆ ನಿನ್ನ ಸುದ್ದಿಯನ್ನು ಕೇಳಿದ ಜನಾಂಗಗಳು-- |
16. | ಕರ್ತನು ಈ ಜನರನ್ನು ಅವರಿಗೆ ಪ್ರಮಾಣಮಾಡಿದ ದೇಶಕ್ಕೆ ತರಲು ಶಕ್ತಿಸಾಲದ ಕಾರಣ ಅವರನ್ನು ಅರಣ್ಯದಲ್ಲಿ ಕೊಂದು ಹಾಕಿದನು ಎಂದು ಹೇಳುವರು. |
17. | ಈಗ ನೀನು ಹೇಳಿದ ಪ್ರಕಾರ ನನ್ನ ಕರ್ತನ ಶಕ್ತಿಯು ದೊಡ್ಡದಾಗಿರಲಿ ಎಂದು ನಾನು ಬೇಡುತ್ತೇನೆ. |
18. | ಕರ್ತನು ದೀರ್ಘಶಾಂತನೂ ಮಹಾಕೃಪೆಯುಳ್ಳವನೂ ಅಕ್ರಮವನ್ನೂ ದ್ರೋಹವನ್ನೂ ಮನ್ನಿಸುವಾತನೂ ಅಪರಾಧಿಯನ್ನು ನಿರಪರಾಧಿಯೆಂದು ಎಣಿಸದವನೂ ಮೂರನೇ ನಾಲ್ಕನೇ ತಲೆಗಳ ವರೆಗೂ ಪಿತೃಗಳ ಅಕ್ರಮವನ್ನು ಮಕ್ಕಳಲ್ಲಿ ವಿಚಾರಿಸುವಾತನೂ ಎಂದು ನೀನು ಹೇಳಿದ್ದೀಯಲ್ಲಾ? |
19. | ನಿನ್ನ ಕೃಪೆಯು ದೊಡ್ಡದಾಗಿರುವ ಪ್ರಕಾರವೂ ನೀನು ಐಗುಪ್ತದಿಂದ ಇಲ್ಲಿಯ ವರೆಗೆ ಮನ್ನಿಸಿದ ಪ್ರಕಾರವೂ ಈ ಜನರ ಅಕ್ರಮವನ್ನು ದಯ ದಿಂದ ಮನ್ನಿಸು ಎಂದು ಬೇಡಿಕೊಂಡನು. |
20. | ಆಗ ಕರ್ತನು--ನಿನ್ನ ಮಾತಿನ ಪ್ರಕಾರ ಮನ್ನಿಸಿ ದ್ದೇನೆ. |
21. | ಆದಾಗ್ಯೂ ನನ್ನ ಜೀವದಾಣೆ, ಭೂಮಿಯೆಲ್ಲಾ ಕರ್ತನ ಮಹಿಮೆಯಿಂದ ತುಂಬಿರುವದು. |
22. | ಐಗುಪ್ತ ದೇಶದಲ್ಲಿಯೂ ಅರಣ್ಯದಲ್ಲಿಯೂ ನಾನು ನಡಿಸಿದ ಸೂಚಕಕಾರ್ಯಗಳನ್ನೂ ನನ್ನ ಮಹಿಮೆಯನ್ನೂ ನೋಡಿದ ಈ ಸಕಲ ಮನುಷ್ಯರು ನನ್ನನ್ನು ಈಗ ಹತ್ತು ಸಾರಿ ಶೊಧಿಸಿ ಕೇಳದೆ ಹೋದದ್ದರಿಂದ |
23. | ನಾನು ಅವರ ಪಿತೃಗಳಿಗೆ ಪ್ರಮಾಣಮಾಡಿದ ದೇಶವನ್ನು ನಿಶ್ಚಯವಾಗಿ ಅವರು ನೋಡುವದಿಲ್ಲ; ಇಲ್ಲವೆ ನನಗೆ ಕೋಪವನ್ನು ಎಬ್ಬಿಸಿದವರು ಸಹ ಅದನ್ನು ನೋಡು ವದಿಲ್ಲ. |
24. | ಆದರೆ ನನ್ನ ಸೇವಕನಾದ ಕಾಲೇಬನಲ್ಲಿ ನನ್ನ ಆತ್ಮವಿದದ್ದರಿಂದಲೂ ಅವನು ನನ್ನನ್ನು ಪೂರ್ಣ ವಾಗಿ ಹಿಂಬಾಲಿಸಿದ್ದರಿಂದಲೂ ಅವನು ಸಂಚರಿಸಿದ ದೇಶಕ್ಕೆ ಅವನನ್ನು ತರುವೆನು; ಅವನ ಸಂತಾನವು ಅದನ್ನು ಸ್ವತಂತ್ರಿಸಿಕೊಳ್ಳುವದು. |
25. | (ಆಗ ಅಮಾಲೇ ಕ್ಯರೂ ಕಾನಾನ್ಯರೂ ತಗ್ಗಿನಲ್ಲಿ ವಾಸಮಾಡುತ್ತಿದ್ದರು.) ನಾಳೆ ನೀವು ತಿರುಗಿಕೊಂಡು ಕೆಂಪು ಸಮುದ್ರದ ಮಾರ್ಗವಾಗಿ ಅರಣ್ಯಕ್ಕೆ ಹೊರಡಿರಿ ಎಂದು ಹೇಳಿದನು. |
26. | ಕರ್ತನು ಮಾತನಾಡಿ ಮೋಶೆಗೂ ಆರೋನ ನಿಗೂ-- |
27. | ಈ ಕೆಟ್ಟ ಸಭೆಯು ನನಗೆ ವಿರೋಧವಾಗಿ ಗುಣುಗುಟ್ಟುವದನ್ನು ನಾನು ಎಷ್ಟುಕಾಲ ಸಹಿಸಲಿ? ಇಸ್ರಾಯೇಲ್ ಮಕ್ಕಳು ನನಗೆ ವಿರೋಧವಾಗಿ ಗುಣುಗುಟ್ಟಿದ್ದನ್ನು ನಾನು ಕೇಳಿದ್ದೇನೆ. |
28. | ಆದದರಿಂದ ನೀನು ಅವರಿಗೆ--ನನ್ನ ಜೀವದಾಣೆ, ನೀವು ನನ್ನ ಕಿವಿಗಳು ಕೇಳುವಂತೆ ಮಾತನಾಡಿದ ಪ್ರಕಾರವೇ ನಿಮಗೆ ಮಾಡುವೆನು ಎಂದು ಕರ್ತನು ಹೇಳುತ್ತಾನೆ. |
29. | ಈ ಅರಣ್ಯದಲ್ಲಿ ನಿಮ್ಮ ಹೆಣಗಳು ಬೀಳುವವು. ನನಗೆ ವಿರೋಧವಾಗಿ ಗುಣುಗುಟ್ಟಿದವರೆಲ್ಲರೂ ನಿಮ್ಮ ಪೂರ್ಣ ಸಂಖ್ಯೆಯ ಪ್ರಕಾರ ಎಣಿಸಿದ ಇಪ್ಪತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಆದ ನೀವೇ. |
30. | ಯೆಫುನ್ನೆಯ ಮಗನಾದ ಕಾಲೇಬನು ನೂನನ ಮಗನಾದ ಯೆಹೋಶುವನ ಹೊರತು ನಾನು ನಿಮ್ಮನ್ನು ವಾಸಮಾಡಿಸುವದಕ್ಕಾಗಿ ಪ್ರಮಾಣಮಾಡಿದ ದೇಶಕ್ಕೆ ನಿಸ್ಸಂದೇಹವಾಗಿ ನೀವು ಬಾರದೆ ಇರುವಿರಿ. |
31. | ಆದರೆ ಸುಲಿಗೆಯಾಗುವರೆಂದು ನೀವು ಹೇಳಿದ ನಿಮ್ಮ ಮಕ್ಕಳನ್ನು ಅಲ್ಲಿಗೆ ತರುವೆನು; ನೀವು ಅಲಕ್ಷ್ಯ ಮಾಡಿದ ದೇಶವನ್ನು ಅವರು ಅನುಭವಿಸುವರು. |
32. | ನಿಮ್ಮ ವಿಷಯವಾಗಿಯಾದರೋ ನಿಮ್ಮ ಹೆಣಗಳು ಈ ಅರಣ್ಯದಲ್ಲಿ ಬೀಳುವವು. |
33. | ಇದಲ್ಲದೆ ನಿಮ್ಮ ಮಕ್ಕಳು ನಾಲ್ವತ್ತು ವರುಷ ಅರಣ್ಯದಲ್ಲಿ ಅಲೆದಾಡಿ ನಿಮ್ಮ ಹೆಣಗಳು ಅರಣ್ಯದಲ್ಲಿ ಹಾಳಾಗಿ ಹೋಗುವ ತನಕ ನಿಮ್ಮ ಜಾರತ್ವ ಗಳನ್ನು ತಾಳಿಕೊಳ್ಳುವರು. |
34. | ನೀವು ಆ ದೇಶವನ್ನು ಪರೀಕ್ಷಿಸಿದ ನಾಲ್ವತ್ತು ದಿವಸಗಳ ಪ್ರಕಾರ ಒಂದು ದಿನಕ್ಕೆ ಒಂದು ವರುಷವಾಗಿ ಈ ಪ್ರಕಾರ ನಾಲ್ವತ್ತು ವರುಷ ನಿಮ್ಮ ಅಪರಾಧಗಳನ್ನು ಹೊತ್ತು ನನ್ನ ವಾಗ್ದಾನವನ್ನು ಭಂಗಪಡಿಸಿದ ಫಲವನ್ನು ನೀವು ಅನುಭವಿಸುವಿರಿ. |
35. | ಕರ್ತನಾದ ನಾನು ಇದನ್ನು ಮಾತನಾಡಿದ್ದೇನೆ. ನನಗೆ ವಿರೋಧವಾಗಿ ಕೂಡಿ ಕೊಂಡಿರುವ ಈ ಕೆಟ್ಟ ಸಮೂಹಕ್ಕೆಲ್ಲಾ ಇದನ್ನು ನಿಶ್ಚಯವಾಗಿ ಮಾಡುವೆನು. ಈ ಅರಣ್ಯದಲ್ಲಿ ಅವರು ಕ್ಷೀಣವಾಗಿ ಅದರಲ್ಲೇ ಸಾಯುವರು. |
36. | ದೇಶವನ್ನು ಪರೀಕ್ಷಿಸುವದಕ್ಕೆ ಮೋಶೆ ಕಳುಹಿಸಿ ದವರು ಹಿಂದಿರುಗಿ ಆ ದೇಶದ ವಿಷಯವಾಗಿ ಕೆಟ್ಟಸುದ್ದಿ ಯನ್ನು ಎಬ್ಬಿಸಿ ಸಮಸ್ತ ಸಮೂಹವನ್ನು ಮೋಶೆಗೆ ವಿರೋಧವಾಗಿ ಗುಣುಗುಟ್ಟುವಂತೆ ಮಾಡಿ |
37. | ದೇಶದ ಕೆಟ್ಟ ಸುದ್ದಿಯನ್ನು ಎಬ್ಬಿಸಿದ ಇವರೇ ಕರ್ತನ ಸನ್ನಿಧಿ ಯಲ್ಲಿ ವ್ಯಾಧಿಯಿಂದ ಸತ್ತರು. |
38. | ಆದರೆ ದೇಶವನ್ನು ಪರೀಕ್ಷಿಸುವದಕ್ಕೆ ಹೋದ ಮನುಷ್ಯರೊಳಗೆ ಇಬ್ಬರಾದ ನೂನನ ಮಗನಾದ ಯೆಹೋಶುವನೂ ಯೆಫುನ್ನೆಯ ಮಗನಾದ ಕಾಲೇಬನೂ ಉಳಿದರು. |
39. | ಮೋಶೆಯು ಇಸ್ರಾಯೇಲ್ ಮಕ್ಕಳೆಲ್ಲರಿಗೆ ಈ ಮಾತುಗಳನ್ನು ಹೇಳಿದಾಗ ಜನರು ಬಹಳವಾಗಿ ದುಃಖಪಟ್ಟರು. |
40. | ಮರುದಿವಸ ಬೆಳಿಗ್ಗೆ ಅವರು ಎದ್ದು ಬೆಟ್ಟದ ತುದಿಯ ಮೇಲಕ್ಕೆ ಏರಿ--ಇಗೋ, ಕರ್ತನು ವಾಗ್ದಾನ ಮಾಡಿದ ಸ್ಥಳಕ್ಕೆ ಏರಿ ಹೋಗುವದಕ್ಕೆ ಇದ್ದೇವೆ; ಯಾಕಂದರೆ ನಾವು ಪಾಪಮಾಡಿದ್ದೇವೆ ಅಂದರು. |
41. | ಆಗ ಮೋಶೆಯು--ನೀವು ಈ ಪ್ರಕಾರ ಯಾಕೆ ಕರ್ತನ ಆಜ್ಞೆಯನ್ನು ವಿಾರುತ್ತೀರಿ? ಅದು ಸಫಲವಾಗು ವದಿಲ್ಲ. |
42. | ನಿಮ್ಮ ಶತ್ರುಗಳು ನಿಮ್ಮನ್ನು ಹೊಡೆಯದ ಹಾಗೆ ಏರಿ ಹೋಗಬೇಡಿರಿ. ಯಾಕಂದರೆ ಕರ್ತನು ನಿಮ್ಮ ಸಂಗಡ ಇರುವದಿಲ್ಲ. |
43. | ಅಮಾಲೇಕ್ಯರೂ ಕಾನಾನ್ಯರೂ ನಿಮ್ಮ ಎದುರಿನಲ್ಲಿರುವದರಿಂದ ನೀವು ಅವರ ಕತ್ತಿಯಿಂದ ಬೀಳುವಿರಿ. ನೀವು ಕರ್ತನ ಕಡೆ ಯಿಂದ ತಿರುಗಿದ ಕಾರಣ ಆತನು ನಿಮ್ಮ ಸಂಗಡ ಇರುವದಿಲ್ಲ ಎಂದು ಹೇಳಿದನು. |
44. | ಆದರೆ ಅವರು ಹಟಮಾಡಿ ಬೆಟ್ಟದ ತುದಿಯಮೇಲೆ ಏರಿಹೋದರು. ಆದಾಗ್ಯೂ ಕರ್ತನ ಒಡಂಬಡಿಕೆಯ ಮಂಜೂಷವೂ ಮೋಶೆಯೂ ಪಾಳೆಯದಿಂದ ಹೊರಡಲಿಲ್ಲ. |
45. | ಆಗ ಆ ಬೆಟ್ಟದಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಕಾನಾ ನ್ಯರೂ ಇಳಿದು ಅವರನ್ನು ಹೊಡೆದು ಹೊರ್ಮಾದ ವರೆಗೆ ಅಟ್ಟಿಬಿಟ್ಟರು. |
← Numbers (14/36) → |