← Numbers (13/36) → |
1. | ಕರ್ತನು ಮೋಶೆಯ ಸಂಗಡ ಮಾತನಾಡಿ |
2. | ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ಕಾನಾನ್ ದೇಶವನ್ನು ಪರೀಕ್ಷಿಸುವ ಹಾಗೆ ನೀನು ಮನುಷ್ಯರನ್ನು ಕಳುಹಿಸು. ಅವರವರ ಪಿತೃಗಳ ಗೋತ್ರದ ಪ್ರಕಾರ ಅವರೊಳಗೆ ಅಧಿಕಾರಿಯಾಗಿರುವ ಪ್ರತಿಯೊಬ್ಬನನ್ನು ಕಳುಹಿಸು ಅಂದನು. |
3. | ಆಗ ಮೋಶೆಯು ಕರ್ತನ ಆಜ್ಞೆಯಂತೆ ಪಾರಾನ್ ಅರಣ್ಯ ದಿಂದ ಅವರನ್ನು ಕಳುಹಿಸಿದನು. ಅವರೆಲ್ಲರೂ ಇಸ್ರಾ ಯೇಲ್ ಮಕ್ಕಳ ಮುಖ್ಯಸ್ಥರಾಗಿದ್ದರು. |
4. | ಅವರ ಹೆಸರುಗಳು ಯಾವವಂದರೆ: ರೂಬೇನ್ ಗೋತ್ರದ ಜಕ್ಕೂರನ ಮಗನಾದ ಶಮ್ಮೂವನು, |
5. | ಸಿಮೆಯೋನ್ ಗೋತ್ರದ ಹೋರಿಯ ಮಗನಾದ ಶಾಫಾಟನು, |
6. | ಯೂದಾ ಗೋತ್ರದ ಯೆಫುನ್ನೆಯ ಮಗನಾದ ಕಾಲೇಬನು, |
7. | ಇಸ್ಸಾಕಾರ್ ಗೋತ್ರದ ಯೋಸೇಫನ ಮಗನಾದ ಇಗಾಲನು, |
8. | ಎಫ್ರಾಯಾಮ್ ಗೋತ್ರದ ನೂನನ ಮಗನಾದ ಹೋಶೇಯನು, |
9. | ಬೆನ್ಯಾವಿಾನ್ ಗೋತ್ರದ ರಾಫೂವನ ಮಗನಾದ ಪಲ್ಟೀಯು, |
10. | ಜೆಬುಲೂನ್ ಗೋತ್ರದ ಸೋದೀಯ ಮಗನಾದ ಗದ್ದೀಯೇಲ್, |
11. | ಯೋಸೇಫನ ಗೋತ್ರ ಅಂದರೆ ಮನಸ್ಸೆ ಗೋತ್ರದ ಸೂಸೀಯ ಮಗನಾದ ಗದ್ದೀ, |
12. | ದಾನ್ ಗೋತ್ರದ ಗೆಮಲ್ಲೀಯನ ಮಗನಾದ ಅವ್ಮೆಾಯೇಲನು, |
13. | ಆಶೇರ್ ಗೋತ್ರದ ವಿಾಕಾ ಯೇಲನ ಮಗನಾದ ಸೆತೂರ್, |
14. | ನಫ್ತಾಲಿ ಗೋತ್ರದ ವಾಪೆಸೀಯನ ಮಗನಾದ ನಹಬೀ, |
15. | ಗಾದನ ಗೋತ್ರದ ಮಾಕೀಯನ ಮಗನಾದ ಗೆಯೂವೇಲ್. |
16. | ಮೋಶೆಯು ದೇಶವನ್ನು ಪಾಳತಿ ನೋಡುವದಕ್ಕಾಗಿ ಕಳುಹಿಸಿದ ಮನುಷ್ಯರ ಹೆಸರುಗಳು ಇವೇ. ಮೋಶೆ ನೂನನ ಮಗನಾದ ಹೋಶೇಯನಿಗೆ ಯೆಹೋಶು ವನೆಂದು ಹೆಸರಿಟ್ಟನು. |
17. | ಮೋಶೆ ಕಾನಾನ್ ದೇಶವನ್ನು ಪಾಳತಿ ನೋಡು ವದಕ್ಕೆ ಅವರನ್ನು ಕಳುಹಿಸುವಾಗ ಅವರಿಗೆ--ಈ ದಕ್ಷಿಣ ಕಡೆಯಲ್ಲಿ ಹೋಗಿ ಬೆಟ್ಟವನ್ನೇರಿ |
18. | ಆ ದೇಶವು ಎಂಥದ್ದೋ? ಅದರಲ್ಲಿ ವಾಸಿಸುವ ಜನರು ಬಲವುಳ್ಳ ವರೋ ಇಲ್ಲವೆ ಬಲಹೀನರೋ, ಸ್ವಲ್ಪ ಜನರೋ ಇಲ್ಲವೆ ಬಹಳ ಜನರೋ ಎಂದೂ |
19. | ಅವರು ವಾಸಿ ಸುವ ದೇಶವು ಎಂಥದ್ದೋ ಅದು ಒಳ್ಳೆಯದಾಗಿ ದೆಯೋ ಕೆಟ್ಟದ್ದಾಗಿದೆಯೋ ಅವರು ವಾಸಿಸುವ ಪಟ್ಟಣಗಳು ಎಂಥವುಗಳೋ ಅವರು ವಾಸಿಸುವದು ಡೇರೆಗಳಲ್ಲಿಯೋ ಬಲವಾದ ಕೋಟೆಗಳಲ್ಲಿಯೋ ಎಂದೂ |
20. | ಆ ಭೂಮಿಯು ಎಂಥದ್ದೋ ಸಾರವಾ ದದ್ದೋ? ನಿಸ್ಸಾರವಾದದ್ದೋ ಮರಗಳುಳ್ಳದ್ದೋ? ಇಲ್ಲದಿರುವದೋ ಎಂದೂ ನೋಡಿರಿ. ನೀವು ಧೈರ್ಯ ವುಳ್ಳವರಾಗಿದ್ದು ಆ ಭೂಮಿಯ ಫಲವನ್ನು ತೆಗೆದು ಕೊಳ್ಳಿರಿ ಅಂದನು. ಆಗ ಪ್ರಥಮ ದ್ರಾಕ್ಷೇಹಣ್ಣುಗಳ ಕಾಲವಾಗಿತ್ತು. |
21. | ಆಗ ಅವರು ಏರಿಹೋಗಿ ಜಿನ್ ಎಂಬ ಅರಣ್ಯ ದಿಂದ ಹಮಾತಿನ ಕಡೆಯಲ್ಲಿರುವ ರೆಹೋಬಿನ ವರೆಗೂ ದೇಶವನ್ನು ಪಾಳತಿ ನೋಡಿದರು. |
22. | ಅವರು ದಕ್ಷಿಣದ ಕಡೆಯಲ್ಲಿ ಹೆಬ್ರೋನಿನ ವರೆಗೆ ಬಂದರು; ಅಲ್ಲಿ ಅನಾಕನ ಮಕ್ಕಳಾದ ಅಹೀಮನ ಶೇಷೈಯನೂ ತಲ್ಮೈಯನೂ ಇದ್ದರು. ಹೆಬ್ರೋನು ಐಗುಪ್ತದೇಶದ ಚೋವನಿಗಿಂತ ಏಳು ವರುಷಗಳ ಮೊದಲು ಕಟ್ಟಲ್ಪ ಟ್ಟಿತ್ತು. |
23. | ಅವರು ಎಷ್ಕೋಲ ಹಳ್ಳದ ವರೆಗೂ ಬಂದು ಅಲ್ಲಿ ದ್ರಾಕ್ಷೇಹಣ್ಣುಗಳ ಗೊಂಚಲಿನ ಕೊಂಬೆಯನ್ನು ಕೊಯ್ದು ಅದನ್ನು ಅಡ್ಡಕೋಲಿನ ಮೇಲೆ ಇಬ್ಬರಾಗಿ ಹೊತ್ತುಕೊಂಡು ಹೋದರು; ಇದಲ್ಲದೆ ದಾಳಿಂಬರ ಅಂಜೂರ ಹಣ್ಣುಗಳನ್ನು ತಕ್ಕೊಂಡು ಹೋದರು. |
24. | ಇಸ್ರಾಯೇಲ್ ಮಕ್ಕಳು ಅಲ್ಲಿ ದ್ರಾಕ್ಷೇಗೊಂಚಲನ್ನು ಕೊಯ್ದದ್ದರಿಂದ ಆ ಸ್ಥಳಕ್ಕೆ ಎಷ್ಕೋಲ್ ಹಳ್ಳವೆಂದು ಹೆಸರಿಟ್ಟರು. |
25. | ಅವರು ದೇಶವನ್ನು ಪಾಳತಿ ನೋಡಿ ನಾಲ್ವತ್ತು ದಿವಸಗಳಾದ ಮೇಲೆ ತಿರಿಗಿ ಬಂದರು. |
26. | ಅವರು ಹೋಗಿ ಮೋಶೆ ಆರೋನರ ಬಳಿಗೂ ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯ ಬಳಿಗೂ ಪಾರಾನ್ ಅರಣ್ಯದಲ್ಲಿರುವ ಕಾದೇಶಿಗೂ ಬಂದು ಅವರಿಗೂ ಸಮಸ್ತ ಸಭೆಗೂ ವಿಷಯವನ್ನು ವಿವರಿಸಿ ಆ ದೇಶದ ಫಲಗಳನ್ನು ಅವರಿಗೆ ತೋರಿಸಿದರು. |
27. | ಅವರು ಅವ ನಿಗೆ--ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು. ಅದು ನಿಜವಾಗಿಯೂ ಹಾಲೂ ಜೇನೂ ಹರಿಯುವ ದೇಶವೇ; ಅದರ ಫಲವು ಇದೇ. |
28. | ಆದರೆ ಆ ದೇಶದಲ್ಲಿ ವಾಸವಾಗಿರುವ ಜನರು ಬಲಿಷ್ಠರು; ಪಟ್ಟಣ ಗಳು ಭದ್ರವಾಗಿಯೂ ಬಹಳ ದೊಡ್ಡವುಗಳಾಗಿಯೂ ಅವೆ. ಮತ್ತು ಅನಾಕನ ಮಕ್ಕಳನ್ನು ಅಲ್ಲಿ ನಾವು ಕಂಡೆವು. |
29. | ಅಮಾಲೇಕ್ಯರು ದೇಶದ ದಕ್ಷಿಣದಲ್ಲಿ ವಾಸವಾಗಿದ್ದಾರೆ; ಹಿತ್ತಿಯರು ಯೆಬೂಸಿಯರು ಅಮೋ ರಿಯರು ಪರ್ವತಗಳಲ್ಲಿಯೂ ಕಾನಾನ್ಯರು ಸಮುದ್ರದ ಬಳಿಯಲ್ಲಿಯೂ ಯೊರ್ದನಿನ ತೀರದಲ್ಲಿಯೂ ವಾಸ ವಾಗಿದ್ದಾರೆ ಎಂದು ಹೇಳಿದರು. |
30. | ಆದರೆ ಕಾಲೇಬನು ಮೋಶೆಯ ಎದುರಿನಲ್ಲಿ ಜನರನ್ನು ಸುಮ್ಮನಿರಿಸಿ--ನಾವು ತಕ್ಷಣವೇ ಹೋಗಿ ಅದನ್ನು ಸ್ವಾಧೀನಮಾಡಿಕೊಳ್ಳೋಣ. ಅದನ್ನು ಜಯಿ ಸಲು ನಾವು ನಿಜವಾಗಿಯೂ ಶಕ್ತ ರಾಗಿದ್ದೇವೆ ಅಂದನು. |
31. | ಅದರೆ ಅವನ ಸಂಗಡ ಹೋದ ಮನುಷ್ಯರುಆ ಜನರ ಬಳಿಗೆ ಹೋಗಲು ನಮ್ಮಿಂದಾಗುವದಿಲ್ಲ; ಅವರು ನಮಗಿಂತ ಬಲಿಷ್ಠರಾಗಿದ್ದಾರೆ ಎಂದು ಹೇಳಿ ದರು. |
32. | ಅವರು ಪಾಳತಿ ನೋಡಿದ ದೇಶದ ವಿಷಯ ಕೆಟ್ಟಸುದ್ಧಿಯನ್ನು ತಂದು--ನಾವು ಪಾಳತಿ ನೋಡುವ ದಕ್ಕೆ ಹಾದುಹೋದ ದೇಶವು ತನ್ನಲ್ಲಿ ವಾಸವಾಗಿರು ವವರನ್ನು ತಿಂದುಬಿಡುವ ದೇಶವಾಗಿದೆ; ನಾವು ಅದರಲ್ಲಿ ನೋಡಿದ ಜನರೆಲ್ಲಾ ಮಹಾಶರೀರದ ಮನುಷ್ಯರು. |
33. | ಅಲ್ಲಿ ಅಮಾನುಷ್ಯರನ್ನೂ ಅಮಾನುಷ್ಯ ಸಂತಾನ ವಾದ ಅನಾಕನ ಮಕ್ಕಳನ್ನೂ ಕಂಡೆವು; ನಮ್ಮ ದೃಷ್ಟಿಗೆ ನಾವು ಮಿಡತೆಗಳ ಹಾಗೆ ಇದ್ದೆವು, ಅದೇ ಪ್ರಕಾರ ಅವರ ದೃಷ್ಟಿಗೂ ಇದ್ದೆವು. |
← Numbers (13/36) → |