← Numbers (12/36) → |
1. | ಮೋಶೆಯು ಮದುವೆಯಾಗಿದ್ದ ಐಥೋಪ್ಯಳಾದ ಸ್ತ್ರೀಯ ನಿಮಿತ್ತ ಮಿರ್ಯಾಮಳೂ ಆರೋನನೂ ಅವನಿಗೆ ವಿರೋಧವಾಗಿ ಮಾತ ನಾಡಿದರು. ಯಾಕಂದರೆ ಅವನು ಐಥೋಪ್ಯಳಾದ ಸ್ತ್ರೀಯನ್ನು ಮದುವೆ ಮಾಡಿಕೊಂಡಿದ್ದನು. |
2. | ಅವರುಕರ್ತನು ಮೋಶೆಯ ಮುಖಾಂತರ ಮಾತ್ರವೇ ಮಾತನಾಡಿದ್ದಾನೋ? ಆತನು ನಮ್ಮ ಮುಖಾಂತ ರವಾಗಿಯೂ ಮಾತನಾಡಲಿಲ್ಲವೋ ಅಂದರು. |
3. | (ಆದರೆ ಮೋಶೆ ಎಂಬವನು ಭೂಮುಖದ ಮೇಲಿರುವ ಸಕಲ ಮನುಷ್ಯರೆಲ್ಲರಿಗಿಂತ ಬಹು ಸಾತ್ವಿಕನಾಗಿದ್ದನು.) |
4. | ಆಗ ಕರ್ತನು ಫಕ್ಕನೆ ಮೋಶೆಗೂ ಆರೋನನಿಗೂ ಮಿರ್ಯಾಮಳಿಗೂ--ನೀವು ಮೂರು ಮಂದಿ ಹೊರಗೆ ಸಭೆಯ ಗುಡಾರದ ಸವಿಾಪಕ್ಕೆ ಬನ್ನಿರಿ ಅಂದನು. ಆ ಮೂವರು ಹೊರಗೆ ಬಂದಾಗ. |
5. | ಕರ್ತನು ಮೇಘಸ್ತಂಭದಲ್ಲಿ ಇಳಿದು ಗುಡಾರದ ಬಾಗಿಲ ಬಳಿಯಲ್ಲಿ ನಿಂತು ಆರೋನನನ್ನೂ ಮಿರ್ಯಾಮ ಳನ್ನೂ ಕರೆದಾಗ ಅವರಿಬ್ಬರೂ ಮುಂದೆ ಬಂದರು. |
6. | ಆತನು--ನನ್ನ ಮಾತುಗಳನ್ನು ಈಗ ಕೇಳಿರಿ--ನಿಮ್ಮಲ್ಲಿ ಒಬ್ಬ ಪ್ರವಾದಿ ಇದ್ದರೆ ಕರ್ತನಾದ ನಾನು ದರ್ಶನದಲ್ಲಿ ಅವನಿಗೆ ತಿಳಿಯಪಡಿಸುವೆನು, ಸ್ವಪ್ನದಲ್ಲಿ ಅವನ ಸಂಗಡ ಮಾತನಾಡುವೆನು. |
7. | ನನ್ನ ಸೇವಕನಾದ ಮೋಶೆಯು ಹಾಗಲ್ಲ; ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನಾ ಗಿದ್ದಾನೆ. |
8. | ಗೂಢವಾಗಿ ಅಲ್ಲ, ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ನಾನು ಅವನ ಸಂಗಡ ಮಾತನಾ ಡುತ್ತೇನೆ. ಅವನು ಕರ್ತನ ರೂಪವನ್ನು ನೋಡುತ್ತಾನೆ; ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತನಾಡಲು ಯಾಕೆ ಭಯಪಡಲಿಲ್ಲ ಎಂದು ಹೇಳಿದನು. |
9. | ಕರ್ತನ ಕೋಪವು ಅವರ ಮೇಲೆ ಉರಿಯಿತು, ಆತನು ಹೋದನು. |
10. | ಆ ಮೇಘವು ಗುಡಾರದ ಮೇಲಿನಿಂದ ತೊಲಗಿ ಹೋಯಿತು; ಆಗ ಇಗೋ, ಮಿರ್ಯಾಮಳು ಹಿಮದ ಹಾಗೆ ಕುಷ್ಠವುಳ್ಳವಳಾದಳು. ಆರೋನನು ಮಿರ್ಯಾಮಳ ಕಡೆಗೆ ನೋಡಿದಾಗ ಇಗೋ, ಅವಳು ಕುಷ್ಠರೋಗಿ ಯಾಗಿದ್ದಳು. |
11. | ಆರೋನನು ಮೋಶೆಗೆ--ಅಯ್ಯೋ, ನನ್ನ ಒಡೆಯನೇ, ನಾವು ಪಾಪಮಾಡಿದೆವು, ಬುದ್ಧಿಯಿಲ್ಲದೆ ಮಾಡಿದ ಈ ಪಾಪವನ್ನು ನಮ್ಮ ಮೇಲೆ ಹಾಕಬೇಡ. |
12. | ತನ್ನ ತಾಯಿಯ ಗರ್ಭದಿಂದ ಹೊರಗೆ ಬಂದಾಗಲೇ ಅರ್ಧ ಮಾಂಸ ಕೊಳೆತುಹೋದಂಥ ಶವದಂತೆ ಆಕೆಯನ್ನು ಇರಗೊಡಿಸಬೇಡ ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು. |
13. | ಆಗ ಮೋಶೆಯು ಕರ್ತನಿಗೆ ಕೂಗಿ--ಓ ದೇವರೇ, ಅವಳನ್ನು ಈಗ ಸ್ವಸ್ಥಮಾಡು ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು. |
14. | ಆಗ ಕರ್ತನು ಮೋಶೆಗೆ--ಆಕೆಯ ತಂದೆ ಆಕೆಯ ಮುಖದ ಮೇಲೆ ಉಗುಳಿದರೆ ಆಕೆಯು ಏಳು ದಿವಸ ನಾಚಿಕೊಳ್ಳುವದಿಲ್ಲವೋ? ಆಕೆಯು ಏಳು ದಿವಸ ಪಾಳೆಯದ ಹೊರಗೆ ಮರೆಯಾಗಿದ್ದು ತರುವಾಯ ಸೇರಿಸಲ್ಪಡಲಿ ಎಂದು ಹೇಳಿದನು. |
15. | ಹಾಗೆಯೇ ಮಿರ್ಯಾಮಳನ್ನು ಪಾಳೆಯದ ಹೊರಗೆ ಏಳು ದಿವಸ ಮರೆಯಾಗಿಯಿಟ್ಟರು. ಮಿರ್ಯಾಮಳು ತಿರಿಗಿ ಒಳಗೆ ಬರುವ ವರೆಗೆ ಜನರು ಪ್ರಯಾಣ ಮಾಡಲಿಲ್ಲ. |
16. | ತರುವಾಯ ಜನರು ಹಚೇರೋತಿನಿಂದ ಹೊರಟು ಪಾರಾನ್ ಅರಣ್ಯದಲ್ಲಿ ಇಳುಕೊಂಡರು. |
← Numbers (12/36) → |