← Nehemiah (4/13) → |
1. | ಆದರೆ ನಾವು ಗೋಡೆಯನ್ನು ಕಟ್ಟುವವರ್ತಮಾನ ಸನ್ಬಲ್ಲಟನು ಕೇಳಿದಾಗ ಏನಾ ಯಿತಂದರೆ, ಅವನು ಕೋಪಗೊಂಡು ಬಹಳ ಕೋಪ ದಿಂದ ರೇಗುತ್ತಾ ಯೆಹೂದ್ಯರಿಗೆ ಗೇಲಿ ಮಾಡಿ ತನ್ನ ಸಹೋದರರ ಮುಂದೆಯೂ ಸಮಾರ್ಯದಲ್ಲಿರುವ ಸೈನ್ಯದ ಮುಂದೆಯೂ-- |
2. | ಈ ಬಲಹೀನರಾದ ಯೆಹೂ ದ್ಯರು ಮಾಡುವದೇನು? ತಮ್ಮನ್ನು ಬಲಪಡಿಸು ವರೋ? ಬಲಿಯನ್ನು ಅರ್ಪಿಸುವರೋ? ಒಂದೇ ದಿವಸದಲ್ಲಿ ತೀರಿಸುವರೋ? ಮಣ್ಣು ದಿಬ್ಬೆಗಳಲ್ಲಿರುವ ಸುಡಲ್ಪಟ್ಟ ಕಲ್ಲುಗಳನ್ನು ಉಜ್ಜೀವಿಸ ಮಾಡುವರೋ ಅಂದನು. |
3. | ಇದಲ್ಲದೆ ಅಮ್ಮೋನ್ಯನಾದ ಟೋಬೀ ಯನು ಅವನ ಬಳಿಯಲ್ಲಿದ್ದು--ಒಂದು ನರಿಯು ಅವರು ಕಟ್ಟಿದರ ಮೇಲೆ ಹಾರಿದರೆ ಅದು ಅವರ ಕಲ್ಲುಗೋಡೆಯನ್ನು ಕೆಡವಿಹಾಕುವದು ಅಂದನು. |
4. | ನಮ್ಮ ದೇವರೇ, ಕೇಳು; ಯಾಕಂದರೆ ನಾವು ತಿರಸ್ಕರಿಸಲ್ಪಟ್ಟವರಾಗಿದ್ದೇವೆ. ನೀನು ಅವರ ನಿಂದೆಯನ್ನು ಅವರ ತಲೆಗಳ ಮೇಲೆ ತಿರುಗುವಂತೆ ಮಾಡಿ ಸೆರೆಯ ದೇಶದಲ್ಲಿ ಅವರನ್ನು ಕೊಳ್ಳೆಯಾಗಿ ಒಪ್ಪಿಸು. |
5. | ಅವರು ಕಟ್ಟುವವರ ಮುಂದೆ ನಿನಗೆ ಕೋಪ ಎಬ್ಬಿಸಿದ್ದರಿಂದ ನೀನು ಅವರ ಅಕ್ರಮವನ್ನು ಮುಚ್ಚಬೇಡ. ಅವರ ಪಾಪವು ನಿನ್ನ ಮುಂದೆ ಅಳಿಸಲ್ಪಡದೆ ಇರಲಿ. |
6. | ಹೀಗೆಯೇ ನಾವು ಗೋಡೆಯನ್ನು ಕಟ್ಟಿದೆವು; ಗೋಡೆಯಲ್ಲಾ ಅರ್ಧ ಎತ್ತರದ ವರೆಗೂ ಒಂದಾಗಿ ಕೂಡಿತು. ಜನರು ಕೆಲಸ ಮಾಡುವದಕ್ಕೆ ಮನಸ್ಸುಳ್ಳ ವರಾಗಿದ್ದರು. |
7. | ಯೆರೂಸಲೇಮಿನ ಗೋಡೆಗಳು ಕಟ್ಟಲ್ಪ ಟ್ಟವೆಂದೂ ಅದರ ಸಂದುಗಳು ಮುಚ್ಚಲ್ಪಟ್ಟವೆಂದೂ ಸನ್ಬಲ್ಲಟನು ಟೋಬೀಯನೂ ಅರಬಿಯರೂ ಅಮ್ಮೋ ನ್ಯರೂ ಅಷ್ಡೋದ್ಯರೂ ಕೇಳಿದಾಗ ಏನಾಯಿತಂದರೆ |
8. | ಅವರೆಲ್ಲಾ ಬಹುಕೋಪಗೊಂಡು ಯೆರೂಸಲೇಮಿಗೆ ವಿರೋಧವಾಗಿ ಯುದ್ಧಮಾಡುವದಕ್ಕೂ ಅಭ್ಯಂತರಿಸು ವದಕ್ಕೂ ಬರಲು ಏಕವಾಗಿ ಒಳಸಂಚು ಮಾಡಿದರು. |
9. | ಆದರೆ ನಾವು ನಮ್ಮ ದೇವರಿಗೆ ಪ್ರಾರ್ಥನೆ ಮಾಡಿ ಅವರ ನಿಮಿತ್ತ ಅವರಿಗೆ ಎದುರಾಗಿ ರಾತ್ರಿ ಹಗಲು ಕಾವಲನ್ನು ಇಟ್ಟೆವು. |
10. | ಆಗ ಯೆಹೂದದವರು--ಹೊರೆ ಹೊರುವವರ ಬಲವು ಕಡಿಮೆಯಾಗಿ ಮಣ್ಣು ಬಹಳವಾಗಿದೆ; ಗೋಡೆಯನ್ನು ನಾವು ಕಟ್ಟಲಾರೆವು ಅಂದರು. |
11. | ನಮ್ಮ ವೈರಿಗಳು--ಅವರು ತಿಳಿಯದ ಹಾಗೆಯೂ ನೋಡದ ಹಾಗೆಯೂ ನಾವು ಅವರ ನಡುವೆ ಬಂದು ಅವರನ್ನು ಕೊಂದುಹಾಕಿ ಕೆಲಸವನ್ನು ನಿಲ್ಲಿಸಿ ಬಿಡುವೆವು ಅಂದರು. |
12. | ಅವರ ಬಳಿಯಲ್ಲಿ ವಾಸವಾಗಿರುವ ಯೆಹೂದ್ಯರು ನಮ್ಮ ಬಳಿಗೆ ಬಂದಾಗನೀವು ತಿರುಗುವ ಎಲ್ಲಾ ಸ್ಥಳಗಳಿಂದ ನಮ್ಮ ಮೇಲೆ ಬಂದಾರು ಎಂದು ನಮಗೆ ಹತ್ತುಸಾರಿ ಹೇಳಿದರು. |
13. | ಆದಕಾರಣ ನಾನು ಗೋಡೆಗೆ ಹಿಂದಾಗಿರುವ ತಗ್ಗಿನ ಸ್ಥಳಗಳಲ್ಲಿಯೂ ಎತ್ತರವಾದ ಸ್ಥಳಗಳಲ್ಲಿಯೂ ಜನರನ್ನು ನಿಲ್ಲಿಸಿದೆನು; ತಮ್ಮ ಕತ್ತಿಗಳನ್ನೂ ಈಟಿಗ ಳನ್ನೂ ಬಿಲ್ಲುಗಳನ್ನೂ ಹಿಡುಕೊಂಡಿರುವ ಜನವನ್ನು ಅವರವರ ವಂಶಗಳ ಪ್ರಕಾರ ನಿಲ್ಲಿಸಿದೆನು. |
14. | ನಾನು ನೋಡಿದ ತರುವಾಯ ಎದ್ದು ಶ್ರೇಷ್ಠರಿಗೂ ಅಧಿಕಾರ ಸ್ಥರಿಗೂ ಇತರ ಜನರಿಗೂ--ನೀವು ಅವರಿಗೋಸ್ಕರ ಭಯಪಡಬೇಡಿರಿ; ದೊಡ್ಡವನಾಗಿಯೂ ಭಯಂಕರ ನಾಗಿಯೂ ಇರುವ ಕರ್ತನನ್ನು ಜ್ಞಾಪಕಮಾಡಿ ಕೊಂಡು ನಿಮ್ಮ ಸಹೋದರರಿಗೋಸ್ಕರ, ಕುಮಾರ, ಕುಮಾರ್ತೆಯರಿಗೋಸ್ಕರ, ಹೆಂಡತಿಯರಿಗೋಸ್ಕರ, ನಿಮ್ಮ ಮನೆಗಳಿಗೋಸ್ಕರ ಯುದ್ಧಮಾಡಿರಿ ಅಂದೆನು. |
15. | ಆ ವರ್ತಮಾನ ನಮಗೆ ತಿಳಿಯಿತೆಂದೂ ದೇವರು ತಮ್ಮ ಆಲೋಚನೆಯನ್ನು ವ್ಯರ್ಥಮಾಡಿದನೆಂದೂ ನಮ್ಮ ಶತ್ರುಗಳು ಕೇಳಿದಾಗ ನಾವೆಲ್ಲರೂ ಗೋಡೆಗೆ ತಿರುಗಿ ಬಂದೆವು; ಪ್ರತಿ ಮನುಷ್ಯನು ತನ್ನ ಕೆಲಸಕ್ಕೆ ಸೇರಿದನು. |
16. | ಅಂದಿನಿಂದ ಏನಾಯಿತಂದರೆ ನನ್ನ ಸೇವಕರಲ್ಲಿ ಅರ್ಧಜನರು ಕೆಲಸವನ್ನು ನಡಿಸಿದರು; ಮಿಕ್ಕಾದ ಅರ್ಧ ಜನರು ಈಟಿಗಳನ್ನೂ ಗುರಾಣಿಗಳನ್ನೂ ಬಿಲ್ಲುಗಳನ್ನೂ ಕವಚಗಳನ್ನೂ ಧರಿಸಿದರು. ಪ್ರಧಾನರು ಯೆಹೂದ ಮನೆಯವರ ಹಿಂದೆ ನಿಂತರು. |
17. | ಗೋಡೆಯ ಮೇಲೆ ಕಟ್ಟುವವರೂ ಹೊರೆಗಾರರೂ ಹೊರಿಸುವವರೂ ಒಂದು ಕೈಯಲ್ಲಿ ಕೆಲಸವನ್ನು ನಡಿಸಿ ಮತ್ತೊಂದು ಕೈಯಲ್ಲಿ ಆಯುಧವನ್ನು ಹಿಡುಕೊಂಡಿದ್ದರು. |
18. | ಕಟ್ಟು ವವರು ಒಬ್ಬೊಬ್ಬರು ತಮ್ಮ ಕತ್ತಿಯನ್ನು ತಮ್ಮ ನಡುವಿ ನಲ್ಲಿ ಕಟ್ಟಿಕೊಂಡು ಕಟ್ಟುತ್ತಿದ್ದರು. ತುತೂರಿ ಊದುವ ವನು ನನ್ನ ಬಳಿಯಲ್ಲಿದ್ದನು. |
19. | ಆಗ ನಾನು ಪ್ರಮುಖ ರಿಗೂ ಅಧಿಕಾರಸ್ಥರಿಗೂ ಇತರ ಜನರಿಗೂ--ಕೆಲಸವು ದೊಡ್ಡದೂ ವಿಸ್ತಾರವೂ ಆದದ್ದು. ನಾವು ಗೋಡೆಯ ಮೇಲೆ ಚದರಿ ಒಬ್ಬರಿಗೊಬ್ಬರು ದೂರವಾಗಿದ್ದೇವೆ. |
20. | ನೀವು ಎಲ್ಲಿ ತುತೂರಿಯ ಶಬ್ದವನ್ನು ಕೇಳುವಿರೋ ಅಲ್ಲಿ ಬಂದು ನಮ್ಮ ಸಂಗಡ ಕೂಡಿಕೊಳ್ಳಿರಿ. ನಮ್ಮ ದೇವರು ನಮಗೋಸ್ಕರ ಯುದ್ಧಮಾಡುವನು ಎಂದು ಹೇಳಿದೆನು. |
21. | ಹೀಗೆಯೇ ಅರ್ಧ ಜನರು ಈಟಿಗಳನ್ನು ಹಿಡುಕೊಂಡು ಉದಯ ಮೊದಲುಗೊಂಡು ನಕ್ಷತ್ರ ಗಳನ್ನು ಕಾಣುವ ಮಟ್ಟಿಗೂ ನಾವು ಕೆಲಸದಲ್ಲಿ ಕಷ್ಟ ಪಟ್ಟೆವು. |
22. | ಇದಲ್ಲದೆ ಆ ಕಾಲದಲ್ಲಿ ನಾನು ಜನರಿಗೆರಾತ್ರಿಯಲ್ಲಿ ಅವರು ನಮಗೆ ಕಾವಲಿಯಾಗಿರುವ ಹಾಗೆಯೂ ಹಗಲಲ್ಲಿ ಕೆಲಸಮಾಡುವ ಹಾಗೆಯೂ ಪ್ರತಿ ಮನುಷ್ಯನು ತನ್ನ ಸೇವಕನ ಸಂಗಡ ಯೆರೂಸಲೇ ಮಿನೊಳಗೆ ರಾತ್ರಿಯಲ್ಲಿ ಕಾವಲಾಗಿರಲಿ. |
23. | ಹೀಗೆಯೇ ನಾನಾದರೂ ನನ್ನ ಸಹೋದರರಾದರೂ ನನ್ನ ಸೇವಕ ರಾದರೂ ನನ್ನನ್ನು ಹಿಂಬಾಲಿಸಿದ ಕಾವಲುಗಾರರಾ ದರೂ ನಮ್ಮಲ್ಲಿ ಯಾವನಾದರೂ ತನ್ನ ವಸ್ತ್ರಗಳನ್ನು ಒಗೆಯುವದಕ್ಕೆ ಹೊರತು ಅವುಗಳನ್ನು ತೆಗೆದು ಹಾಕಲಿಲ್ಲ. |
← Nehemiah (4/13) → |