← Nehemiah (11/13) → |
1. | ಅಧಿಕಾರಿಗಳು ಯೆರೂಸಲೇಮಿನಲ್ಲಿ ವಾಸವಾಗಿದ್ದರು. ಇದಲ್ಲದೆ ಹತ್ತು ಮಂದಿ ಯಲ್ಲಿ ಒಬ್ಬನು ಪರಿಶುದ್ಧ ಪಟ್ಟಣವಾದ ಯೆರೂ ಸಲೇಮಿನಲ್ಲಿ ವಾಸವಾಗಿರುವದಕ್ಕೂ ಉಳಿದ ಒಂಭತ್ತು ಮಂದಿ ಇತರ ಪಟ್ಟಣಗಳಲ್ಲಿ ವಾಸವಾಗಿರುವದಕ್ಕೂ ಚೀಟುಗಳನ್ನು ಹಾಕಿದರು. |
2. | ಆಗ ಜನರು ಯೆರೂ ಸಲೇಮಿನಲ್ಲಿ ವಾಸವಾಗಿರಲು ಸಮ್ಮತಿಸಿದವರನ್ನೆಲ್ಲಾ ಆಶೀರ್ವದಿಸಿದರು. |
3. | ಯೆಹೂದದ ಪಟ್ಟಣಗಳಲ್ಲಿ ಇಸ್ರಾಯೇಲ್ಯರೂ ಯಾಜಕರೂ ಲೇವಿಯರೂ ನೆತಿನಿಯರೂ ಸೊಲೊ ಮೋನನ ಸೇವಕರ ಮಕ್ಕಳೂ ಅವರವರು ತಮ್ಮ ತಮ್ಮ ಪಟ್ಟಣಗಳ ಸ್ವಾಸ್ತ್ಯಗಳಲ್ಲಿ ವಾಸವಾಗಿದ್ದರು;ಆದರೆ ವಾಸವಾಗಿದ್ದ ಸೀಮೆಯ ಮುಖ್ಯಸ್ಥರು ಯಾರಂದರೆ-- |
4. | ಯೆರೂಸಲೇಮಿನೊಳಗೆ ಯೂದನ ಮಕ್ಕಳಲ್ಲಿಯೂ ಬೆನ್ಯಾವಿಾನನ ಮಕ್ಕಳಲ್ಲಿಯೂ ಕೆಲ ವರು ವಾಸವಾಗಿದ್ದರು. |
5. | ಯೆಹೂದನ ಮಕ್ಕಳು ಯಾರಂದರೆ--ಪೆರೆಚನ ಮಕ್ಕಳಲ್ಲಿ ಮಹಲಲೇಲನ ಮಗನಾದ ಶೆಫಟ್ಯನ ಮಗ ನಾದ ಅಮರ್ಯನ ಮಗನಾದ ಜೆಕರ್ಯನ ಮಗನಾದ ಉಜ್ಜೀಯನ ಮಗನಾದ ಅತಾಯನೂ. ಶಿಲೋನಿಯ ಮಗನಾದ ಜೆಕರೀಯನ ಮಗನಾದ ಯೋಯಾರೀಬನ ಮಗನಾದ ಅದಾಯನ ಮಗನಾದ ಹಜಾಯನ ಮಗನಾದ ಕೊಲ್ಹೋಜೆಯ ಮಗನಾದ ಬಾರೂಕನ ಮಗನಾದ ಮಾಸೇಯನೂ, |
6. | ಯೆರೂ ಸಲೇಮಿನಲ್ಲಿ ವಾಸವಾಗಿರುವ ಪೆರೆಚನ ಕುಮಾರರೆಲ್ಲಾ ನಾನೂರ ಅರವತ್ತೆಂಟು ಮಂದಿ. ಇವರು ಪರಾಕ್ರಮಶಾಲಿಗಳು. |
7. | ಬೆನ್ಯಾವಿಾನನ ಕುಮಾರರು ಯಾರಂದರೆ--ಯೆಶಾ ಯನ ಮಗನಾದ ಈತೀಯೇಲನ ಮಗನಾದ ಮಾಸೇ ಯನ ಮಗನಾದ ಕೋಲಾಯನ ಮಗನಾದ ಪೆದಾ ಯನ ಮಗನಾದ ಯೋವೇದನ ಮಗನಾದ ಮೆಷು ಲ್ಲಾಮನ ಮಗನಾದ ಸಲ್ಲುವು. |
8. | ಅವನ ತರುವಾಯ ಗಬ್ಬಾಯನು, ಸಲ್ಲಾಯನು, ಮೊದಲಾದ ಒಂಭೈನೂರ ಇಪ್ಪತ್ತೆಂಟು ಮಂದಿಯು. |
9. | ಜಿಕ್ರಿಯ ಮಗನಾದ ಯೋವೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು. ಹಸ್ಸೆನೂವನ ಮಗನಾದ ಯೆಹೂದನು ಪಟ್ಟಣದ ಮೇಲೆ ಎರಡನೆಯವನಾಗಿದ್ದನು. |
10. | ಯಾಜಕರಲ್ಲಿ ಯಾರಂದರೆ--ಯೋಯಾರೀಬನ ಮಗನಾದ ಯೆದಾಯನು, ಯಾಕೀನನು. |
11. | ಅಹೀ ಟೂಬನ ಮಗನಾದ ಮೆರಾಯೋತನ ಮಗನಾದ ಚಾದೋಕನ ಮಗನಾದ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನಾದ ಸೆರಾಯನು ದೇವರ ಆಲ ಯದ ನಾಯಕನಾಗಿದ್ದನು. |
12. | ಮನೆಯ ಕೆಲಸವನ್ನು ನಡಿಸುವ ಅವರ ಸಹೋದರರು ಎಂಟು ನೂರ ಇಪ್ಪತ್ತೆರಡು ಮಂದಿ ಇದ್ದರು. ಮಲ್ಕೀಯನ ಮಗನಾದ ಪಷ್ಹೂರನ ಮಗನಾದ ಜೆಕರೀಯನ ಮಗನಾದ ಅಮ್ಜಿಯ ಮಗನಾದ ಪೆಲಲ್ಯನ ಮಗನಾದ ಯೆರೋ ಹಾಮನ ಮಗನಾದ ಅದಾಯನೂ. |
13. | ಪಿತೃಗಳಲ್ಲಿ ಮುಖ್ಯಸ್ಥರಾದ ಅವನ ಸಹೋದರರೂ ಇನ್ನೂರ ನಾಲ್ವತ್ತೆರಡು ಮಂದಿಯಾಗಿದ್ದರು. ಇಮ್ಮೇರನ ಮಗ ನಾದ ಮೆಷಿಲ್ಲೇಮೋತನ ಮಗನಾದ ಅಹಜೈಯ ಮಗನಾದ ಅಜರೇಲನ ಮಗನಾದ ಅಮಷ್ಷೈಯೂ. |
14. | ಅವರ ಸಹೋದರರಾದ ಪರಾಕ್ರಮಶಾಲಿಗಳೂ ನೂರ ಇಪ್ಪತ್ತೆಂಟು ಮಂದಿಯಾಗಿದ್ದರು. ಮಹಾ ಪುರುಷರಲ್ಲಿ ಒಬ್ಬನ ಮಗನಾದ ಜಬ್ದೀಯೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು. |
15. | ಲೇವಿಯರಲ್ಲಿ ಯಾರಂದರೆ--ಲೇವಿಯರ ಯಜ ಮಾನರಲ್ಲಿ ಬುನ್ನೀಯ ಮಗನಾದ ಹಷಬ್ಯನ ಮಗನಾದ ಅಜ್ರೀಕಾಮನ ಮಗನಾದ ಹಷ್ಷೂಬನ ಮಗನಾದ ಶೆಮಾಯನು; |
16. | ಶಬ್ಬೆತೈನೂ ಯೋಜಾಬಾದನೂ ದೇವರ ಆಲಯದ ಹೊರಗಿನ ಕೆಲಸವನ್ನು ವಿಚಾರಿಸುವವರಾಗಿದ್ದರು. |
17. | ಇದಲ್ಲದೆ ಆಸಾಫನ ಮಗ ನಾದ ಜಬ್ದೀಯ ಮಗನಾದ ವಿಾಕಾಯನ ಮಗ ನಾದ ಮತ್ತನ್ಯನು ಪ್ರಾರ್ಥನೆಯಲ್ಲಿ ಸ್ತುತಿಯನ್ನು ಪ್ರಾರಂಭಿಸಲು ಮುಖ್ಯಸ್ಥನಾಗಿದ್ದನು. ಅವನ ಸಹೋ ದರರಲ್ಲಿ ಎರಡನೆಯವನು ಬಕ್ಬುಕ್ಯನು; ಅವನ ಸಂಗಡ ಯೆದುತೂನನ ಮಗನಾದ ಗಾಲಾಲನ ಮಗನಾದ ಶಮ್ಮೂವನ ಮಗನಾದ ಅಬ್ದನು. |
18. | ಪರಿ ಶುದ್ಧ ಪಟ್ಟಣದಲ್ಲಿರುವ ಲೇವಿಯರೆಲ್ಲಾ ಇನ್ನೂರ ಎಂಭತ್ತು ನಾಲ್ಕು ಮಂದಿಯಾಗಿದ್ದರು. |
19. | ದ್ವಾರಪಾಲಕರಾದ ಅಕ್ಕೂಬನೂ ಟಲ್ಮೋನನೂ ಬಾಗಲುಗಳನ್ನು ಕಾಯುವವರಾದ ಅವರ ಸಹೋ ದರರೂ ನೂರ ಎಪ್ಪತ್ತೆರಡು ಮಂದಿಯಾಗಿದ್ದರು. |
20. | ಇಸ್ರಾಯೇಲ್ಯರ ಮಿಕ್ಕಾದ ಯಾಜಕರೂ ಲೇವಿ ಯರೂ ತಮ್ಮ ತಮ್ಮ ಸ್ವಾಸ್ತ್ಯಗಳಾದ ಯೆಹೂದದ ಎಲ್ಲಾ ಪಟ್ಟಣಗಳಲ್ಲಿ ವಾಸವಾಗಿದ್ದರು. |
21. | ಆದರೆ ನೆತಿನಿಯರು ಓಫೇಲಿನಲ್ಲಿ ವಾಸವಾಗಿದ್ದರು. ಚೀಹನೂ ಗಿಷ್ಪನೂ ನೆತಿನಿಯರ ಮೇಲಿದ್ದರು; |
22. | ವಿಾಕನ ಮಗ ನಾದ ಮತ್ತನ್ಯನ ಮಗನಾದ ಹಷಬ್ಯನ ಮಗನಾದ ಬಾನೀಯ ಮಗನಾದ ಉಜ್ಜಿಯು ಯೆರೂಸಲೇಮಿ ನಲ್ಲಿರುವ ಲೇವಿಯರ ಮೇಲ್ವಿಚಾರಕನಾಗಿದ್ದನು. |
23. | ಆಸಾಫನ ಕುಮಾರರಲ್ಲಿರುವ ಹಾಡುಗಾರರು ದೇವರ ಆಲಯದ ಕಾರ್ಯದ ಮೇಲೆ ವಿಚಾರಣಾ ಕರ್ತರಾಗಿದ್ದರು. ದಿನದಿನಕ್ಕೆ ಹಾಡುಗಾರರಿಗೋಸ್ಕರ ಪ್ರತಿದಿನ ಕಟ್ಟಳೆ ಇರಬೇಕೆಂದು ಅರಸನು ಅವರನ್ನು ಕುರಿತು ಆಜ್ಞಾಪಿಸಿದ್ದನು. |
24. | ಇದಲ್ಲದೆ ಯೆಹೂದನ ಮಗನಾದ ಜೇರಹನ ಮಕ್ಕಳಲ್ಲಿ ಒಬ್ಬನಾಗಿರುವ ಮೆಷೇಜಬೇಲನ ಮಗನಾದ ಪೆತಹ್ಯನು ಜನರಿ ಗೋಸ್ಕರ ಸಕಲ ಕಾರ್ಯಗಳಲ್ಲಿ ಅರಸನ ಕೈ ಹತ್ತಿರ ಇದ್ದನು. |
25. | ಗ್ರಾಮಗಳಲ್ಲಿಯೂ ಅವರ ಹೊಲಗಳಲ್ಲಿಯೂ ಇದ್ದವರು ಯಾರಂದರೆ--ಯೆಹೂದನ ಮಕ್ಕಳಲ್ಲಿ ಕೆಲವರು ಕಿರ್ಯತರ್ಬದಲ್ಲಿಯೂ ಅದರ ಗ್ರಾಮಗಳ ಲ್ಲಿಯೂ ದೀಬೋನಿನಲ್ಲಿಯೂ ಅದರ ಗ್ರಾಮಗಳ ಲ್ಲಿಯೂ ಯೆಕಬ್ಜೆಯೇಲಿನಲ್ಲಿಯೂ ಅದರ ಗ್ರಾಮಾಗ ಳಲ್ಲಿಯೂ |
26. | ಯೇಷೂವದಲ್ಲಿಯೂ ಮೋಲಾದದ ಲ್ಲಿಯೂ ಬೇತ್ಫೆಲೆಟದಲ್ಲಿಯೂ |
27. | ಹಚರ್ಷೂವಲಿ ನಲ್ಲಿಯೂ ಬೇರ್ಷೆಬದಲ್ಲಿಯೂ |
28. | ಅವುಗಳ ಗ್ರಾಮ ಗಳಲ್ಲಿಯೂ ಚಿಕ್ಲಗನಲ್ಲಿಯೂ ಮೆಕೋನದಲ್ಲಿಯೂ ಅವುಗಳ ಗ್ರಾಮಗಳಲ್ಲಿಯೂ |
29. | ಏನ್ರಿಮ್ಮೋನದ ಲ್ಲಿಯೂ ಚೋರ್ರದಲ್ಲಿಯೂ ಯರ್ಮೂತಿನಲ್ಲಿಯೂ |
30. | ಜನೋಹನಲ್ಲಿಯೂ ಅದುಲ್ಲ್ಲಾಮಿನಲ್ಲಿಯೂ ಇವು ಗಳ ಗ್ರಾಮಗಳಲ್ಲಿಯೂ ಲಾಕೀಷನಲ್ಲಿಯೂ ಅದರ ಹೊಲಗಳಲ್ಲಿಯೂ ಅಜೇಕದಲ್ಲಿಯೂ ಅದರ ಗ್ರಾಮ ಗಳಲ್ಲಿಯೂ ವಾಸವಾಗಿದ್ದರು. ಅವರು ಬೇರ್ಷೆಬ ಮೊದಲುಗೊಂಡು ಹಿನ್ನೋಮನ ತಗ್ಗಿನ ವರೆಗೂ ವಾಸವಾಗಿದ್ದರು. |
31. | ಇದಲ್ಲದೆ ಬೆನ್ಯಾವಿಾನನ ಮಕ್ಕಳು ಗೆಬವು ಮೊದಲುಗೊಂಡು ಮಿಕ್ಮಾಷಿನ ವರೆಗೂ ವಾಸವಾಗಿ ದ್ದರು. ಅಯ್ಯಾವು ಬೇತೇಲು ಇವುಗಳ ಗ್ರಾಮಗಳೂ |
32. | ಅನಾತೋತು ನೋಬು ಅನನ್ಯವು |
33. | ಹಾಚೋರು ರಾಮಾವು ಗಿತ್ತಯಿಮ್ |
34. | ಹಾದೀದು ಚೆಬೋ ಯಾಮ್ ನೆಬಲ್ಲಾಟು |
35. | ಲೋದು ಓನೋನು ಎಂಬ ಕಸಬುಗಾರರ ತಗ್ಗೂ ಇವರಿಗೆ ಇದ್ದವು. |
36. | ಲೇವಿಯರ ಯೆಹೂದದಲ್ಲಿಯೂ ಬೆನ್ಯಾವಿಾನಿ ನಲ್ಲಿಯೂ ವಿಭಾಗಿಸಲ್ಪಟ್ಟಿದ್ದರು. |
← Nehemiah (11/13) → |