← Nehemiah (10/13) → |
1. | ಮುದ್ರೆ ಹಾಕಿದವರು ಯಾರಂದರೆ--ಹಕಲ್ಯನ ಮಗನಾದ, |
2. | ಅಧಿಪತಿಯಾದ ನೆಹೆವಿಾಯನು, ಚಿದ್ಕೀಯನು, ಸೆರಾಯನು, |
3. | ಅಜ ರ್ಯನು, ಯೆರೆವಿಾಯನು, ಪಷ್ಹೂರನು, ಅಮ ರ್ಯನು, |
4. | ಮಲ್ಕೀಯನು, ಹಟೂಷನು, ಶೆಬನ್ಯನು, ಮಲ್ಲೂಕನು, |
5. | ಹಾರಿಮನು, ಮೆರೇಮೋತನು, ಓಬ ದ್ಯನು, |
6. | ದಾನಿಯೇಲನು, ಗಿನ್ನೆತೋನನು, |
7. | ಬಾರೂ ಕನು, ಮೆಷುಲ್ಲಾಮನು, ಅಬೀಯನು, ಮಿಯ್ಯಾವಿಾ ನನು, |
8. | ಮಾಜ್ಯನು, ಬಿಲ್ಗೈಯು, ಶೆಮಾಯನು, ಇವರು ಯಾಜಕರಾಗಿದ್ದರು. |
9. | ಲೇವಿಯರು--ಅಜನ್ಯನ ಮಗನಾದ ಯೇಷೂ ವನು, ಹೇನಾದಾದನ ಮಕ್ಕಳಲ್ಲಿ ಬಿನ್ನೂಯ್, ಕದ್ಮೀ ಯೇಲನು; |
10. | ಅವರ ಸಹೋದರರಾದ ಶೆಬನ್ಯನು, ಹೋದೀಯನು, ಕೆಲೀಟನು, ಪೆಲಾಯನು, ಹಾನಾ ನನು, |
11. | ವಿಾಕನು, ರೆಹೋಬನು, ಹಷಬ್ಯನು, |
12. | ಜಕ್ಕೂರನು, ಶೇರೇಬ್ಯನು, ಶೆಬನ್ಯನು, |
13. | ಹೋದೀ ಯನು, ಬಾನೀಯು, ಬೆನೀನೂ. |
14. | ಜನರ ಮುಖ್ಯಸ್ಥರು--ಪರೋಷನು, ಪಹತ್ ಮೋವಾಬನು ಏಲಾಮನು, |
15. | ಜತ್ತುವು, ಬಾನೀಯು, ಬುನ್ನೀಯು, ಅಜ್ಗಾದನು, ಬೇಬೈಯು, |
16. | ಅದೋನೀ ಯನು, ಬಿಗ್ವೈಯು, ಆದೀನನು, |
17. | ಆಟೇರನು, ಹಿಜ್ಕೀಯನು, ಅಜ್ಜೂರನು, |
18. | ಹೋದೀಯನು, ಹಾಷುಮನು, ಬೇಚೈಯು, |
19. | ಹಾರೀಫನು, ಅನಾ ತೋತನು, ನೇಬೈಯು, ಮಗ್ಪೀಯಾಷನು, |
20. | ಮೆಷು ಲ್ಲಾಮನು, ಹೇಜೀರನು, ಮೆಷೇಜಬೇಲನು, |
21. | ಚಾದೋಕನು, |
22. | ಯದ್ದೂವನು, ಪೆಲಟ್ಯನು, ಹಾನಾನನು, ಆನಾಯನು, |
23. | ಹೋಷೇಯನು ಹನ ನ್ಯನು, ಹಷ್ಷೂಬನು, |
24. | ಹಲೋಹೇಷನು, ಫಿಲ್ಹನು, ಶೋಬೇಕನು, |
25. | ರೆಹೂಮನು, ಹಷಬ್ನನು ಮಾಸೇ ಯನು, |
26. | ಅಹೀಯನು, ಹಾನಾನನು, |
27. | ಆನಾನನು, ಮಲ್ಲೂಕನು, ಹಾರೀಮನು, ಬಾನನು. |
28. | ಜನರಲ್ಲಿ ಉಳಿದವರಾದ ಯಾಜಕರೂ ಲೇವಿ ಯರೂ ದ್ವಾರಪಾಲಕರೂ ಹಾಡುಗಾರರೂ ನೆತಿನಿ ಯರೂ, ದೇವರ ನ್ಯಾಯಪ್ರಮಾಣದ ಪ್ರಕಾರವಾಗಿ ಆ ದೇಶಗಳ ಜನರೊಳಗಿಂದ ತಮ್ಮನ್ನು ಪ್ರತ್ಯೇಕಿಸಿ ಕೊಂಡವರೆಲ್ಲರೂ ಅವರ ಹೆಂಡತಿಯರೂ ಕುಮಾ ರರೂ ಕುಮಾರ್ತೆಯರೂ ತಿಳಿವಳಿಕೆಯೂ ಗ್ರಹಿಕೆಯೂ ಉಳ್ಳವರೆಲ್ಲರೂ; |
29. | ಇವರು ತಮ್ಮ ಸಹೋದರರಾದ ತಮ್ಮ ಮುಖ್ಯಸ್ಥರ ಸಂಗಡ ಕೂಡಿಕೊಂಡು--ದೇವರ ಸೇವಕನಾದ ಮೋಶೆಯ ಕೈಯಿಂದ ಕೊಟ್ಟ ದೇವರ ನ್ಯಾಯಪ್ರಮಾಣದಲ್ಲಿ ನಡೆಯುತ್ತೇವೆಂದೂ ಕರ್ತ ನಾದ ನಮ್ಮ ದೇವರ ಆಜ್ಞೆಗಳನ್ನೂ ಆತನ ನ್ಯಾಯ ಗಳನ್ನೂ ಆತನ ಕಟ್ಟಳೆಗಳನ್ನೂ ಎಲ್ಲವನ್ನೂ ಕೈಕೊಂಡು ಮಾಡುತ್ತೇವೆಂದೂ; |
30. | ನಾವು ನಮ್ಮ ಕುಮಾರ್ತೆಯರನ್ನು ಆ ದೇಶದ ಜನರಿಗೆ ಕೊಡುವದಿಲ್ಲ. ನಮ್ಮ ಕುಮಾರರಿಗೆ ಅವರ ಕುಮಾರ್ತೆಯರನ್ನು ತಕ್ಕೊಳ್ಳುವದಿಲ್ಲ |
31. | ಎಂದೂ ದೇಶದ ಜನರು ಸಬ್ಬತ್ ದಿವಸದಲ್ಲಿ ಸರಕುಗಳನ್ನೂ ಧಾನ್ಯವನ್ನೂ ಮಾರಲುತಕ್ಕೊಂಡು ಬಂದರೆ ನಾವು ಅವುಗಳನ್ನು ಸಬ್ಬತ್ ದಿವಸದಲ್ಲಾದರೂ ಪರಿಶುದ್ಧ ದಿವಸದಲ್ಲಾದರೂ ಅವ ರಿಂದ ಕೊಂಡುಕೊಳ್ಳುವದಿಲ್ಲವೆಂದೂ ನಾವು ಏಳನೇ ವರುಷದಲ್ಲಿ ಎಲ್ಲಾ ಕೈ ಸಾಲವನ್ನು ಬಿಟ್ಟುಬಿಡುತ್ತೇ ವೆಂದೂ ಶಪಥಕ್ಕೂ ಆಣೆಗೂ ಒಳಗಾದರು. |
32. | ಇದಲ್ಲದೆ ಸಮ್ಮುಖದ ರೊಟ್ಟಿಗೋಸ್ಕರವೂ ನಿತ್ಯ ಕಾಣಿಕೆಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮಾವಾಸ್ಯೆ ಗಳಲ್ಲಿಯೂ ಅರ್ಪಿಸುವ ನಿತ್ಯ ದಹನಬಲಿಗಳಿಗೋ ಸ್ಕರವೂ ನೇಮಿಸಿದ ಹಬ್ಬಗಳಿಗೋಸ್ಕರವೂ ಪರಿಶುದ್ಧ ವಾದವುಗಳಿಗೋಸ್ಕರವೂ |
33. | ಇಸ್ರಾಯೇಲ್ಯರ ಪ್ರಾಯ ಶ್ಚಿತ್ತವಾದ ಪಾಪಬಲಿಗೋಸ್ಕರವೂ ನಮ್ಮ ದೇವರ ಆಲಯದ ಸಮಸ್ತ ಕಾರ್ಯಕ್ಕೋಸ್ಕರವೂ ನಮ್ಮ ದೇವರ ಆಲಯದ ಸೇವೆಯ ನಿಮಿತ್ತವಾಗಿ ವರುಷಕ್ಕೆ ಶೆಕೆಲಿನಲ್ಲಿ ಮೂರರಲ್ಲಿ ಒಂದು ಪಾಲು ಕೊಡಲು ನಮಗೆ ನಾವು ನೇಮಕ ಮಾಡಿಕೊಂಡೆವು. |
34. | ನ್ಯಾಯಪ್ರಮಾಣದಲ್ಲಿ ಬರೆದ ಹಾಗೆ, ನಮ್ಮ ದೇವರಾಗಿರುವ ಕರ್ತನ ಬಲಿಪೀಠದ ಮೇಲೆ ಸುಡು ವದಕ್ಕೆ ನೇಮಿಸಲ್ಪಟ್ಟ ಕಾಲಗಳಲ್ಲಿ ವರುಷ ವರುಷಕ್ಕೆ ನಮ್ಮ ಪಿತೃಗಳ ಮನೆಗಳ ಪ್ರಕಾರ ನಮ್ಮ ದೇವರ ಆಲಯದೊಳಗೆ ತಕ್ಕೊಂಡು ಬರಬೇಕಾದ ಸೌದೆಯ ಅರ್ಪಣೆಗೋಸ್ಕರ ಯಾಜಕರಿಗೂ ಲೇವಿಯರಿಗೂ ಜನರಿಗೂ ಚೀಟುಗಳನ್ನು ಹಾಕಿದೆವು. |
35. | ಕರ್ತನ ಆಲಯಕ್ಕೆ ಪ್ರತಿ ವರುಷದಲ್ಲಿಯೂ ನಮ್ಮ ಭೂಮಿಯ ಪ್ರಥಮ ಫಲಗಳನ್ನೂ ಎಲ್ಲಾ ಮರಗಳ ಸಕಲ ಫಲಗಳಿಂದ ಪ್ರಥಮ ಫಲಗಳನ್ನೂ ತರುವದಕ್ಕೂ; |
36. | ನ್ಯಾಯಪ್ರಮಾಣದಲ್ಲಿ ಬರೆದಿರುವ ಹಾಗೆ ನಮ್ಮ ಕುಮಾರರಲ್ಲಿಯೂ ಪಶುಗಳಲ್ಲಿಯೂ ಚೊಚ್ಚಲಾದ ವುಗಳನ್ನು ದನಗಳಲ್ಲಿಯೂ ಮಂದೆಗಳಲ್ಲಿಯೂ ಚೊಚ್ಚ ಲಾದವುಗಳನ್ನು ದೇವರ ಆಲಯಕ್ಕೆ ಸೇವಿಸುವ ಯಾಜ ಕರ ಬಳಿಗೆ ತರುವೆವು; |
37. | ನಮ್ಮ ಹಿಟ್ಟಿನಲ್ಲಿ ಮೊದಲಿನ ಪಾಲನ್ನೂ ನಮ್ಮ ಕಾಣಿಕೆಗಳನ್ನೂ ಸಕಲ ಮರಗಳ ಫಲವನ್ನೂ ದ್ರಾಕ್ಷಾ ರಸವನ್ನೂ ಎಣ್ಣೆಯನ್ನೂ ಯಾಜಕರ ಬಳಿಗೆ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದಿಡುವದಕ್ಕೂ; ಲೇವಿಯರು ಒಕ್ಕಲುತನದವರಿರುವ ಪಟ್ಟಣಗಳಿಂದ ಹತ್ತರಲ್ಲೊಂದು ಪಾಲನ್ನು ಹೊಂದುವ ಹಾಗೆ ನಮ್ಮ ಭೂಮಿಯ ಹತ್ತರಲ್ಲೊಂದು ಪಾಲನ್ನು ಲೇವಿಯರಿಗೆ ತರುವದಕ್ಕೂ ಪ್ರಮಾಣಮಾಡಿದೆವು. |
38. | ಇದಲ್ಲದೆ ಲೇವಿಯರು ಹತ್ತರಲ್ಲೊಂದು ಪಾಲನ್ನು ತೆಗೆದುಕೊಳ್ಳುವಾಗ ಆರೋನನ ಮಗನಾದ ಯಾಜ ಕನು ಲೇವಿಯರ ಸಂಗಡ ಇರಬೇಕು. ಲೇವಿಯರು ಹತ್ತರಲ್ಲೊಂದು ಪಾಲಾದದ್ದರಲ್ಲಿ ಹತ್ತರಲ್ಲೊಂದು ಪಾಲನ್ನು ತೆಗೆದುಕೊಂಡು ನಮ್ಮ ದೇವರ ಆಲಯದಲ್ಲಿ ಕೊಠಡಿಗಳ ಬಳಿಯ ಬೊಕ್ಕಸದ ಮನೆಗೆ ತರಬೇಕು. |
39. | ಪರಿಶುದ್ಧ ಸ್ಥಾನದ ಪಾತ್ರೆಗಳೂ ಸೇವೆಮಾಡುವ ಯಾಜಕರೂ ದ್ವಾರಪಾಲಕರೂ ಹಾಡುಗಾರರೂ ಇರುವ ಕೊಠಡಿಗಳಿಗೆ ಇಸ್ರಾಯೇಲ್ ಮಕ್ಕಳೂ ಲೇವಿಯರ ಮಕ್ಕಳೂ ಕಾಣಿಕೆಯಾದ ಧಾನ್ಯವನ್ನೂ ದ್ರಾಕ್ಷೇರಸವನ್ನೂ ಎಣ್ಣೆಯನ್ನೂ ತರಬೇಕು. ನಾವು ನಮ್ಮ ದೇವರ ಆಲಯವನ್ನು ಮರೆತು ಬಿಡುವುದಿಲ್ಲ ಅಂದರು. |
← Nehemiah (10/13) → |