← Matthew (6/28) → |
1. | ಜನರು ನೋಡಲಿ ಎಂದು ನೀವು ನಿಮ್ಮ ದಾನವನ್ನು ಅವರ ಮುಂದೆ ಮಾಡದಂತೆ ಎಚ್ಚರಿಕೆ ತಂದುಕೊಳ್ಳಿರಿ; ಇಲ್ಲವಾದರೆ ಪರಲೋಕ ದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ಸಿಗಲಾರದು. |
2. | ಆದದರಿಂದ ಕಪಟಿಗಳು ಜನರಿಂದ ಹೊಗಳಿಸಿ ಕೊಳ್ಳಬೇಕೆಂದು ಸಭಾಮಂದಿರಗಳಲ್ಲಿಯೂ ಬೀದಿಗಳ ಲ್ಲಿಯೂ ಮಾಡುವಂತೆ ನೀನು ದಾನ ಮಾಡುವಾಗ ನಿನ್ನ ಮುಂದೆ ತುತ್ತೂರಿಯನ್ನೂದಬೇಡ. ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಅವರು ತಮ್ಮ ಪ್ರತಿಫಲವನ್ನು ಹೊಂದಿದ್ದಾರೆ. |
3. | ಆದರೆ ನೀನು ದಾನಮಾಡುವಾಗ ನಿನ್ನ ಬಲಗೈ ಮಾಡುವದು ನಿನ್ನ ಎಡಗೈಗೆ ತಿಳಿಯದಿರಲಿ. |
4. | ಹೀಗೆ ನಿನ್ನ ದಾನವು ಅಂತರಂಗದಲ್ಲಿರುವದು; ಮತ್ತು ಅಂತರಂಗದಲ್ಲಿ ನೋಡುವ ನಿನ್ನ ತಂದೆಯು ತಾನೇ ಬಹಿರಂಗವಾಗಿ ನಿನಗೆ ಪ್ರತಿಫಲ ಕೊಡುವನು. |
5. | ನೀನು ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಇರಬೇಡ; ಯಾಕಂದರೆ ಜನರು ನೋಡುವಂತೆ ಸಭಾಮಂದಿರಗಳಲ್ಲಿಯೂ ಬೀದಿಗಳ ಮೂಲೆಗಳ ಲ್ಲಿಯೂ ನಿಂತು ಪ್ರಾರ್ಥನೆಮಾಡುವದನ್ನು ಅವರು ಪ್ರೀತಿಸುತ್ತಾರೆ. ನಾನು ನಿಮಗೆ ನಿಜವಾಗಿ ಹೇಳುವ ದೇನಂದರೆ--ಅವರು ತಮ್ಮ ಪ್ರತಿಫಲವನ್ನು ಹೊಂದಿ ದ್ದಾರೆ. |
6. | ಆದರೆ ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೋಣೆಯೊಳಕ್ಕೆ ಹೋಗಿ ಬಾಗಿಲನ್ನು ಮುಚ್ಚಿ ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಆಗ ಅಂತರಂಗದಲ್ಲಿ ನೋಡುವ ನಿನ್ನ ತಂದೆಯು ಬಹಿರಂಗವಾಗಿ ನಿನಗೆ ಪ್ರತಿಫಲ ಕೊಡುವನು. |
7. | ಆದರೆ ನೀವು ಪ್ರಾರ್ಥನೆ ಮಾಡುವಾಗ ಅನ್ಯರು ಮಾಡುವಂತೆ ವ್ಯರ್ಥವಾದದ್ದನ್ನು ಪದೇಪದೇ ಹೇಳ ಬೇಡಿರಿ ಯಾಕಂದರೆ ತಾವು ಬಹಳವಾಗಿ ಮಾತನಾಡು ವದರಿಂದ ತಮ್ಮ ಪ್ರಾರ್ಥನೆಯು ಕೇಳಲ್ಪಡುವದೆಂದು ಅವರು ಯೋಚಿಸುತ್ತಾರೆ. |
8. | ಆದದರಿಂದ ನೀವು ಅವರಂತೆ ಇರಬೇಡಿರಿ; ನಿಮ್ಮ ತಂದೆಯನ್ನು ಕೇಳುವದಕ್ಕಿಂತ ಮುಂಚೆಯೇ ನಿಮಗೆ ಅಗತ್ಯವಾಗಿ ರುವವುಗಳು ಯಾವವು ಎಂಬದು ಆತನಿಗೆ ತಿಳಿದದೆ. |
9. | ಆದದರಿಂದ ನೀವು ಈ ರೀತಿಯಲ್ಲಿ ಪ್ರಾರ್ಥನೆ ಮಾಡಿರಿ--ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವಾಗಿರಲಿ. ನಿನ್ನ ರಾಜ್ಯವು ಬರಲಿ. |
10. | ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರು ವಂತೆ ಭೂಲೋಕದಲ್ಲಿಯೂ ನೆರೆವೇರಲಿ. |
11. | ನಮ್ಮ ಅನುದಿನದ ರೊಟ್ಟಿಯನ್ನು ಈ ದಿನವು ನಮಗೆ ದಯಪಾಲಿಸು. |
12. | ನಮ್ಮ ಸಾಲಗಾರರನ್ನು ನಾವು ಕ್ಷಮಿಸುವಂತೆ ನಮ್ಮ ಸಾಲಗಳನ್ನು ನಮಗೆ ಕ್ಷಮಿಸು. |
13. | ನಮ್ಮನ್ನು ಶೋಧನೆಯೊಳಗೆ ನಡಿಸದೆ ಕೇಡಿನಿಂದ ತಪ್ಪಿಸು. ಯಾಕಂದರೆ ರಾಜ್ಯವೂ ಬಲವೂ ಮಹಿಮೆಯೂ ಎಂದೆಂದಿಗೂ ನಿನ್ನವೇ. ಆಮೆನ್. |
14. | ಆದದರಿಂದ ನೀವು ಮನುಷ್ಯರ ಅಪರಾಧ ಗಳನ್ನು ಕ್ಷಮಿಸುವದಾದರೆ ಪರಲೋಕದ ನಿಮ್ಮ ತಂದೆಯು ಸಹ ನಿಮ್ಮನ್ನು ಕ್ಷಮಿಸುವನು. |
15. | ನೀವು ಮನುಷ್ಯರ ಅಪರಾಧಗಳನ್ನು ಕ್ಷಮಿಸದೆ ಹೋದರೆ ನಿಮ್ಮ ತಂದೆಯೂ ನಿಮ್ಮ ಅಪರಾಧಗಳನ್ನು ಕ್ಷಮಿಸು ವದಿಲ್ಲ. |
16. | ಇದಲ್ಲದೆ ನೀವು ಉಪವಾಸ ಮಾಡುವಾಗ ಕಪಟಿಗಳ ಹಾಗೆ ವ್ಯಸನದ ಮುಖ ಮಾಡಿಕೊಳ್ಳ ಬೇಡಿರಿ. ಯಾಕಂದರೆ ತಾವು ಉಪವಾಸವಾಗಿ ದ್ದೇವೆಂದು ಜನರಿಗೆ ತೋರುವಂತೆ ಅವರು ತಮ್ಮ ಮುಖಗಳನ್ನು ವಿಕಾರ ಮಾಡಿಕೊಳ್ಳುತ್ತಾರೆ. ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಅವರು ತಮ್ಮ ಪ್ರತಿ |
17. | ಆದರೆ ನೀನು ಉಪವಾಸ ಮಾಡುವಾಗ ನಿನ್ನ ತಲೆಗೆ ಎಣ್ಣೆ ಹಚ್ಚಿಕೊಂಡು ನಿನ್ನ ಮುಖವನ್ನು ತೊಳೆದುಕೋ. |
18. | ಆಗ ನೀನು ಉಪವಾಸಮಾಡುತ್ತೀ ಎಂದು ಜನರಿಗೆ ಕಾಣದಿದ್ದರೂ ಅಂತರಂಗದಲ್ಲಿರುವ ನಿನ್ನ ತಂದೆಗೆ ಕಾಣುವದು. ಮತ್ತು ಅಂತರಂಗದಲ್ಲಿ ನೋಡುವ ನಿನ್ನ ತಂದೆಯು ಬಹಿರಂಗವಾಗಿ ನಿನಗೆ ಪ್ರತಿಫಲ ಕೊಡುವನು. |
19. | ಭೂಲೋಕದಲ್ಲಿ ನಿಮಗೋಸ್ಕರ ಸಂಪತ್ತನ್ನು ಕೂಡಿಸಿಟ್ಟುಕೊಳ್ಳಬೇಡಿರಿ; ಇಲ್ಲಿ ನುಸಿಯೂ ಕಿಲುಬೂ ಅದನ್ನು ಹಾಳುಮಾಡುವದು; ಮತ್ತು ಕಳ್ಳರು ಕನ್ನಾ ಕೊರೆದು ಕದಿಯುವರು. |
20. | ಆದರೆ ನಿಮ್ಮ ಗೋಸ್ಕರ ಪರಲೋಕದಲ್ಲಿ ಸಂಪತ್ತನ್ನು ಕೂಡಿಸಿಟ್ಟುಕೊಳ್ಳಿರಿ; ಅಲ್ಲಿ ನುಸಿಯೂ ಕಿಲುಬೂ ಅದನ್ನು ಹಾಳು ಮಾಡುವದಿಲ್ಲ; ಮತ್ತು ಕಳ್ಳರು ಕನ್ನಾ ಕೊರೆದು ಕದಿಯುವದೂ ಇಲ್ಲ. |
21. | ಯಾಕಂದರೆ ನಿಮ್ಮ ಸಂಪತ್ತು ಎಲ್ಲಿ ಇದೆಯೋ ಅಲ್ಲಿ ನಿಮ್ಮ ಹೃದಯವೂ ಇರುವದು. |
22. | ಕಣ್ಣು ಶರೀರದ ದೀಪವಾಗಿದೆ. ಆದಕಾರಣ ನಿನ್ನ ಕಣ್ಣು ಶುದ್ಧವಾಗಿದ್ದರೆ ನಿನ್ನ ಶರೀರವೆಲ್ಲಾ ಬೆಳಕಾಗಿರುವದು. |
23. | ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ ನಿನ್ನ ಶರೀರವೆಲ್ಲಾ ಕತ್ತಲಾಗಿರುವದು. ಆದದರಿಂದ ನಿನ್ನಲ್ಲಿರುವ ಬೆಳಕೇ ಕತ್ತಲಾಗಿರುವದಾದರೆ ಆ ಕತ್ತಲು ಎಷ್ಟೋ ಅಧಿಕವಾದದ್ದಾಗಿರುವದು. |
24. | ಯಾವ ಮನುಷ್ಯನೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು; ಯಾಕಂದರೆ ಅವನು ಒಬ್ಬನನ್ನು ಹಗೆಮಾಡಿ ಇನ್ನೊಬ್ಬನನ್ನು ಪ್ರೀತಿಮಾಡುವನು; ಇಲ್ಲವಾದರೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬ ನನ್ನು ಅಸಡ್ಡೆ ಮಾಡುವನು. ನೀವು ದೇವರನ್ನೂ ಧನವನ್ನೂ ಸೇವಿಸಲಾರಿರಿ. |
25. | ಆದಕಾರಣ ನಾನು ನಿಮಗೆ ಹೇಳುವದೇ ನಂದರೆ--ನಿಮ್ಮ ಪ್ರಾಣಕ್ಕೋಸ್ಕರ ನೀವು ಏನು ತಿನ್ನಬೇಕು ಮತ್ತು ಏನು ಕುಡಿಯಬೇಕು ಎಂಬದರ ವಿಷಯಕ್ಕಾಗಲೀ ಇಲ್ಲವೆ ನಿಮ್ಮ ಶರೀರಕ್ಕೆ ನೀವು ಏನು ಹೊದ್ದುಕೊಳ್ಳಬೇಕೆಂತಾಗಲೀ ಚಿಂತೆ ಮಾಡ ಬೇಡಿರಿ; ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ಶರೀರವೂ ಹೆ |
26. | ಆಕಾಶದ ಪಕ್ಷಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದೂ ಇಲ್ಲ, ಇಲ್ಲವೆ ಕಣಜದಲ್ಲಿ ಕೂಡಿಸಿಟ್ಟುಕೊಳ್ಳುವದೂ ಇಲ್ಲ; ಆದರೂ ಪರಲೋಕದ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ಅವುಗಳಿಗಿಂತ ನೀವು ಎಷ್ಟೋ ಶ್ರೇಷ್ಠರಾದವರಲ್ಲವೇ? |
27. | ನಿಮ್ಮಲ್ಲಿ ಯಾವ ನಾದರೂ ಚಿಂತೆಮಾಡಿ ತನ್ನ ನೀಳವನ್ನು ಒಂದು ಮೊಳ ಉದ್ದ ಬೆಳೆಸಿಕೊಳ್ಳಲು ಸಾಧ್ಯವಾದೀತೇ? |
28. | ಮತ್ತು ಉಡುಪಿಗಾಗಿ ನೀವು ಯಾಕೆ ಚಿಂತೆ ಮಾಡುತ್ತೀರಿ? ಹೊಲದಲ್ಲಿ ತಾವರೆಗಳು ಹೇಗೆ ಬೆಳೆಯುತ್ತವೆ ಎಂಬದನ್ನು ಗಮನಿಸಿರಿ; ಅವು ಕಷ್ಟಪಡು ವದಿಲ್ಲ ಮತ್ತು ನೂಲುವದೂ ಇಲ್ಲ. |
29. | ಆದರೂ ನಾನು ನಿಮಗೆ ಹೇಳುವದೇನಂದರೆ-- ಸೊಲೊಮೋನನು ಸಹ ತನ್ನ ಎಲ್ಲಾ ವೈಭವದಲ್ಲಿಯೂ ಇವುಗಳಲ್ಲಿ ಒಂದರಂತೆಯಾದರೂ ಧರಿಸಿರಲಿಲ್ಲ. |
30. | ಆದದರಿಂದ ಈ ಹೊತ್ತು ಇದ್ದು ನಾಳೆ ಒಲೆಗೆ ಹಾಕಲ್ಪಡುವ ಹೊಲದ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಓ ಅಲ್ಪ ವಿಶ್ವಾಸಿಗಳೇ, ಆತನು ಇನ್ನೂ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸುವನಲ್ಲವೇ? |
31. | ಆದಕಾರಣ--ನಾವು ಏನು ಊಟಮಾಡಬೇಕು? ಇಲ್ಲವೆ ಏನು ಕುಡಿಯಬೇಕು? ಇಲ್ಲವೆ ಯಾವದನ್ನು ಧರಿಸಿಕೊಳ್ಳಬೇಕು ಎಂದು ಹೇಳುತ್ತಾ ಚಿಂತೆಮಾಡ ಬೇಡಿರಿ. |
32. | (ಯಾಕಂದರೆ ಇವೆಲ್ಲವುಗಳಿಗಾಗಿ ಅನ್ಯಜನರು ತವಕ ಪಡುತ್ತಾರೆ;) ಆದರೆ ಇವೆಲ್ಲವುಗಳು ನಿಮಗೆ ಅಗತ್ಯವಾಗಿವೆ ಎಂದು ಪರಲೋಕದ ನಿಮ್ಮ ತಂದೆಗೆ ತಿಳಿದದೆ. |
33. | ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು. |
34. | ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು. |
← Matthew (6/28) → |