← Matthew (23/28) → |
1. | ತರುವಾಯ ಯೇಸು ಜನಸಮೂಹಕ್ಕೂ ಶಿಷ್ಯರಿಗೂ ಹೇಳಿದ್ದೇನಂದರೆ -- |
2. | ಶಾಸ್ತ್ರಿ ಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಕೂತಿ ದ್ದಾರೆ; |
3. | ಆದದರಿಂದ ಅವರು ನಿಮಗೆ ಹೇಳುವವು ಗಳನ್ನೆಲ್ಲಾ ಕೈಕೊಂಡು ನಡೆಯಿರಿ; ಅವರ ಕ್ರಿಯೆಗಳ ಪ್ರಕಾರ ನೀವು ಮಾಡಬೇಡಿರಿ; ಯಾಕಂದರೆ ಅವರು ಹೇಳುತ್ತಾರೆ, ಮಾಡುವದಿಲ್ಲ. |
4. | ಹೊರುವದಕ್ಕೆ ಅವರು ಭಾರವಾದ ಮತ್ತು ಕ್ರೂರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲುಗಳ ಮೇಲೆ ಹೊರಿಸುತ್ತಾರೆ. ತಾವಾ ದರೋ ತಮ್ಮ ಬೆರಳುಗಳಲ್ಲಿ ಒಂದರಿಂದ ಲಾದರೂ ಅವುಗಳನ್ನು ಸರಿಸುವದಿಲ್ಲ. |
5. | ಆದರೆ ತಾವು ಮಾಡುವ ತಮ್ಮ ಕ್ರಿಯೆಗಳನ್ನೆಲ್ಲಾ ಜನರು ನೋಡುವಂತೆ ಮಾಡು ತ್ತಾರೆ. ಅವರು ತಮ್ಮ ಜ್ಞಾಪಕಪಟ್ಟಿಗಳನ್ನು ಅಗಲಮಾಡಿ ಉಡುಪುಗಳ ಅಂಚುಗಳನ್ನು ಉದ್ದ ಮಾಡುತ್ತಾ |
6. | ಔತಣಗಳಲ್ಲಿ ಪ್ರಥಮ ಸ್ಥಾನಗಳನ್ನೂ ಸಭಾಮಂದಿರ ಗಳಲ್ಲಿ ಮುಖ್ಯಸ್ಥಳಗಳನ್ನೂ |
7. | ಸಂತೆಯ ಸ್ಥಳಗಳಲ್ಲಿ ವಂದನೆಗಳನ್ನೂ ಮತ್ತು ಜನರಿಂದ--ಬೋಧಕರೇ, ಬೋಧಕರೇ ಎಂದು ಕರೆಯಲ್ಪಡುವದನ್ನೂ ಅವರು ಪ್ರೀತಿಸುತ್ತಾರೆ. |
8. | ಆದರೆ ನೀವು ಬೋಧಕರೆಂದು ಕರೆ ಯಲ್ಪಡಬೇಡಿರಿ. ಕ್ರಿಸ್ತನೊಬ್ಬನೇ ನಿಮ್ಮ ಬೋಧಕನು ಮತ್ತು ನೀವೆಲ್ಲರೂ ಸಹೋದರರು. |
9. | ಭೂಮಿಯ ಮೇಲೆ ಯಾರನ್ನೂ ನಿಮ್ಮ ತಂದೆಯೆಂದು ಕರೆಯಬೇಡಿರಿ; ಪರಲೋಕದಲ್ಲಿರುವಾತನೊಬ್ಬನೇ ನಿಮ್ಮ ತಂದೆ. |
10. | ನೀವು ಗುರುಗಳೆಂದು ಕರೆಯಲ್ಪಡಬೇಡಿರಿ; ಕ್ರಿಸ್ತ ನೊಬ್ಬನೇ ನಿಮ್ಮ ಗುರುವು. |
11. | ಆದರೆ ನಿಮ್ಮಲ್ಲಿ ಅತಿ ದೊಡ್ಡವನಾಗಿರುವವನು ನಿಮ್ಮ ಸೇವಕನಾಗಿರಬೇಕು. |
12. | ಯಾವನಾದರೂ ತನ್ನನ್ನು ಹೆಚ್ಚಿಸಿಕೊಂಡರೆ ಅವನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು. |
13. | ಆದರೆ ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಮನುಷ್ಯರ ಮುಂದೆ ಪರ ಲೋಕರಾಜ್ಯವನ್ನು ಮುಚ್ಚುತ್ತೀರಿ. ನೀವಂತೂ ಪ್ರವೇಶಿ ಸುವದಿಲ್ಲ, ಪ್ರವೇಶಿಸುವವರನ್ನೂ ನೀವು ಒಳಗೆ ಹೋಗಗೊಡಿಸುವದಿಲ್ಲ. |
14. | ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ವಿಧವೆಯರ ಮನೆಗಳನ್ನು ನುಂಗುತ್ತೀರಿ; ಮತ್ತು ನಟನೆಗಾಗಿ ಉದ್ದವಾದ ಪ್ರಾರ್ಥನೆಯನ್ನು ಮಾಡುತ್ತೀರಿ; ಆದದರಿಂದ ನೀವು ಹೆಚ್ಚಾದ ದಂಡನೆಯನ್ನು ಹೊಂದುವಿರಿ. |
15. | ಕಪಟಿಗಳಾದ ಫರಿಸಾಯರೇ, ಶಾಸ್ತ್ರಿಗಳೇ, ನಿಮಗೆ ಅಯ್ಯೋ! ಒಬ್ಬನನ್ನು ಮತಾಂತರ ಮಾಡು ವದಕ್ಕೆ ನೀವು ಸಮುದ್ರವನ್ನೂ ಭೂಮಿಯನ್ನೂ ಸುತ್ತುತ್ತೀರಿ; ಮತಾಂತರ ಮಾಡಿದ ಮೇಲೆ ಅವನನ್ನು ನಿಮಗಿಂತಲೂ ಎರಡರಷ್ಟು ನರಕದ ಮಗನನ್ನಾಗಿ ಮಾಡುತ್ತೀರಿ. |
16. | ಕುರುಡರಾದ ಮಾರ್ಗದರ್ಶಕರೇ, ನಿಮಗೆ ಅಯ್ಯೋ! ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲ ಅನ್ನುತ್ತೀರಿ; ಆದರೆ ಯಾವನಾದರೂ ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೆ ಅವನು ಸಾಲಗಾರನು ಎಂದು ಅನ್ನುತ್ತೀರಿ. |
17. | ಮೂರ್ಖರೇ, ಕುರುಡರೇ, ಯಾವದು ದೊಡ್ಡದು? ಚಿನ್ನವೋ ಇಲ್ಲವೆ ಚಿನ್ನವನ್ನು ಪಾವನ ಮಾಡುವ ದೇವಾಲಯವೋ? |
18. | ಯಾರಾದರೂ ಯಜ್ಞವೇದಿಯ ಮೇಲೆ ಆಣೆಯಿಡುವದಾದರೆ ಅದು ಏನೂ ಅಲ್ಲವೆಂದೂ ಯಾರಾದರೂ ಅದರಲ್ಲಿರುವ ಕಾಣಿಕೆಯ ಮೇಲೆ ಆಣೆಯಿಟ್ಟರೆ ಅವನು ಅಪರಾಧಿ ಯೆಂದೂ ಅನ್ನುತ್ತೀರಿ. |
19. | ಮೂರ್ಖರೇ, ಕುರುಡರೇ, ಯಾವದು ದೊಡ್ಡದು? ಕಾಣಿಕೆಯೋ ಇಲ್ಲವೆ ಕಾಣಿಕೆಯನ್ನು ಪಾವನಮಾಡುವ ಯಜ್ಞವೇದಿಯೋ? |
20. | ಆದದರಿಂದ ಯಜ್ಞವೇದಿಯ ಮೇಲೆ ಆಣೆಯಿಡು ವವನು ಅದರ ಮೇಲೆಯೂ ಅದರಲ್ಲಿರುವಂಥವುಗಳ ಮೇಲೆಯೂ ಆಣೆಯಿಡುವವನಾಗಿದ್ದಾನೆ. |
21. | ದೇವಾ ಲಯದ ಮೇಲೆ ಆಣೆಯಿಡುವವನು ಅದರ ಮೇಲೆ ಯೂ ಆದರಲ್ಲಿ ವಾಸಿಸುವಾತನ ಮೇಲೆಯೂ ಆಣೆ ಯಿಡುವವನಾಗಿದ್ದಾನೆ. |
22. | ಪರಲೋಕದ ಮೇಲೆ ಆಣೆ ಯಿಡುವವನು ದೇವರ ಸಿಂಹಾಸನದ ಮೇಲೆಯೂ ಅದರ ಮೇಲೆ ಕೂತಿರುವಾತನ ಮೇಲೆಯೂ ಆಣೆಯಿಡುವವನಾಗಿದ್ದಾನೆ. |
23. | ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಮರುಗ ಸೋಪು ಜೀರಿಗೆ ಗಳಲ್ಲಿ ದಶಮ ಭಾಗವನ್ನು ಸಲ್ಲಿಸುತ್ತೀರಿ. ಆದರೆ ನ್ಯಾಯ ಪ್ರಮಾಣದ ತೀರ್ಪು ಕರುಣೆ ನಂಬಿಕೆ ಎಂಬ ಈ ಪ್ರಾಮುಖ್ಯವಾದವುಗಳನ್ನು ಬಿಟ್ಟುಬಿಟ್ಟಿದ್ದೀರಿ. ಇವುಗ ಳೊಂದಿಗೆ ಆ ಬೇರೆಯವುಗಳನೂ |
24. | ಕುರುಡ ಮಾರ್ಗದರ್ಶಕರಾದ ನೀವು ಸೊಳ್ಳೇ ಸೋಸುವವರು ಮತ್ತು ಒಂಟೇ ನುಂಗುವವರು. |
25. | ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ. ಆದರೆ ಅವು ಒಳಗೆ ಸುಲಿಗೆಯಿಂದಲೂ ದುರಾಶೆಯಿಂದಲೂ ತುಂಬಿರುತ್ತವೆ. |
26. | ಕುರುಡನಾದ ಫರಿಸಾಯನೇ, ಮೊದಲು ಪಾತ್ರೆಯ ಮತ್ತು ತಟ್ಟೆಯ ಒಳಗಿನ ಭಾಗ ವನ್ನು ಶುಚಿಮಾಡು; ಆಗ ಅವುಗಳ ಹೊರ ಭಾಗವೂ ಶುಚಿಯಾಗುವದು. |
27. | ಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಸುಣ್ಣಾ ಹಚ್ಚಿದ ಸಮಾಧಿ ಗಳಿಗೆ ಹೋಲಿಕೆಯಾಗಿದ್ದೀರಿ. ಅವು ಹೊರಗೆ ನಿಜಕ್ಕೂ ಅಂದವಾಗಿ ಕಾಣುತ್ತವೆ; ಆದರೆ ಒಳಗೆ ಸತ್ತವರ ಎಲುಬು ಗಳಿಂದಲೂ ಎಲ್ಲಾ ಅಶುದ್ಧತೆಯಿಂದಲೂ ತುಂಬಿರು ತ್ತವೆ. |
28. | ಅದರಂತೆಯೇ ನೀವು ಸಹ ಹೊರಗಡೆ ಮನುಷ್ಯರಿಗೆ ನೀತಿವಂತರಂತೆ ಕಾಣಿಸಿಕೊಳ್ಳುತ್ತೀರಿ; ಆದರೆ ನೀವು ಒಳಗೆ ಕಪಟದಿಂದಲೂ ದುಷ್ಟತನ ದಿಂದಲೂ ತುಂಬಿದವರಾಗಿದ್ದೀರಿ. |
29. | ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟಿ ನೀತಿವಂತರ ಸಮಾಧಿಗಳನ್ನು ಅಲಂಕರಿಸುತ್ತೀರಿ. |
30. | ಆದರೂ--ನಾವು ನಮ್ಮ ಪಿತೃಗಳ ದಿನಗಳಲ್ಲಿ ಇರುತ್ತಿದ್ದರೆ ಪ್ರವಾದಿಗಳ ರಕ್ತದಲ್ಲಿ ಅವರೊಂದಿಗೆ ಪಾಲುಗಾರರಾಗುತ್ತಿರಲಿಲ್ಲ ಎಂದು ಹೇಳುತ್ತೀರಿ. |
31. | ಆದದರಿಂದ ನೀವು ಆ ಪ್ರವಾದಿ ಗಳನ್ನು ಕೊಂದವರ ಮಕ್ಕಳೇ ಎಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ. |
32. | ಹಾಗಾದರೆ ನಿಮ ಪಿತೃಗಳ ಅಳತೆಯನ್ನು ನೀವೇ ತುಂಬಿಸಿರಿ. |
33. | ಹಾವು ಗಳೇ, ಸರ್ಪಸಂತತಿಯವರೇ, ನೀವು ನರಕದಂಡನೆ ಯಿಂದ ಹೇಗೆ ತಪ್ಪಿಸಿಕೊಂಡೀರಿ? |
34. | ಆದದರಿಂದ ಇಗೋ, ನಾನು ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಶಾಸ್ತ್ರಿಗಳನ್ನೂ ನಿಮ್ಮ ಬಳಿಗೆ ಕಳುಹಿ ಸುತ್ತೇನೆ. ಅವರಲ್ಲಿ ಕೆಲವರನ್ನು ನೀವು ಕೊಂದು ಶಿಲುಬೆಗೆ ಹಾಕುವಿರಿ; ಮತ್ತು ಕೆಲವರನ್ನು ನೀವು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಅವ ರನ್ನು ಪಟ್ಟಣದಿಂದ ಪಟ್ಟಣಕ್ಕೆ ಅಟ್ಟಿ ಹಿಂಸಿಸ |
35. | ಹೀಗೆ ನೀತಿವಂತನಾದ ಹೇಬೆಲನ ರಕ್ತ ಮೊದಲು ಗೊಂಡು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ನೀವು ಕೊಂದು ಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದವರೆಗೂ ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತಾಪರಾಧವು ನಿಮ್ಮ ಮೇಲೆ ಬರುವದು. |
36. | ನಿಮಗೆ ನಿಜವಾಗಿ ಹೇಳು ತ್ತೇನೆ--ಇವೆಲ್ಲವುಗಳು ಈ ಸಂತತಿಯವರ ಮೇಲೆ ಬರುವವು. |
37. | ಓ ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸ ಲ್ಪಟ್ಟವರನ್ನು ಕಲ್ಲೆಸೆಯುವವಳೇ, ಕೋಳಿಯು ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಿನ್ನ ಮಕ್ಕಳನ್ನು ಕೂಡಿಸುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿನಗೆ ಮನ |
38. | ಇಗೋ, ನಿಮ್ಮ ಮನೆಯು ನಿಮಗೆ ಹಾಳಾದದ್ದಾಗಿ ಬಿಡಲ್ಪಡುವದು. |
39. | ಇಂದಿನಿಂದ ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು ಎಂದು ನೀವು ಹೇಳುವ ವರೆಗೆ ನೀವು ನನ್ನನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು. |
← Matthew (23/28) → |