← Matthew (2/28) → |
1. | ಅರಸನಾದ ಹೆರೋದನ ದಿನಗಳಲ್ಲಿ ಯೂದಾಯದ ಬೇತ್ಲೆಹೇಮಿನಲ್ಲಿ ಯೇಸು ಹುಟ್ಟಿದಾಗ ಇಗೋ, ಮೂಡಲದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದು -- |
2. | ಯೆಹೂದ್ಯರ ಅರಸ ನಾಗಿ ಹುಟ್ಟಿದಾತನು ಎಲ್ಲಿದ್ದಾನೆ? ಯಾಕೆಂದರೆ ನಾವು ಮೂಡಲದಲ್ಲಿ ಆತನ ನಕ್ಷತ್ರವನ್ನು ನೋಡಿ ಆತನನ್ನು ಆರಾಧಿಸುವದಕ್ಕೆ ಬಂದಿದ್ದೇವೆ ಅಂದರು. |
3. | ಅರಸನಾದ ಹೆರೋದನು ಇವುಗಳನ್ನು ಕೇಳಿ ಅವನು ಯೆರೂಸ ಲೇಮಿನವರೆಲ್ಲರೊಂದಿಗೆ ಕಳವಳಪಟ್ಟನು. |
4. | ಇದಲ್ಲದೆ ಅವನು ಜನರ ಎಲ್ಲಾ ಪ್ರಧಾನ ಯಾಜಕರನ್ನೂ ಶಾಸ್ತ್ರಿಗಳನ್ನೂ ಒಟ್ಟುಗೂಡಿಸಿ ಕ್ರಿಸ್ತನು ಹುಟ್ಟತಕ್ಕದ್ದು ಎಲ್ಲಿ ಎಂದು ಅವರನ್ನು ವಿಚಾರಿಸಿದನು. |
5. | ಅದಕ್ಕೆ ಅವರು ಅವನಿಗೆ--ಯೂದಾಯದ ಬೇತ್ಲೆಹೇಮಿ ನಲ್ಲಿಯೇ; ಯಾಕಂದರೆ ಪ್ರವಾದಿಯಿಂದ ಹೀಗೆ ಬರೆಯಲ್ಪಟ್ಟಿದೆ-- |
6. | ಯೂದಾಯದ ಸೀಮೆಯಲ್ಲಿನ ಬೇತ್ಲೆಹೇಮೇ, ಯೂದಾಯದ ಮುಖ್ಯ ಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರವೂ ಸಣ್ಣದಲ್ಲ; ಯಾಕಂದರೆ ನನ್ನ ಜನರಾದ ಇಸ್ರಾಯೇಲ್ಯರನ್ನು ಆಳುವ ಒಬ್ಬ ಅಧಿಪತಿಯು ನಿನ್ನೊಳಗಿಂದ ಬರುವನು ಎಂದು ಹೇಳಿದರು. |
7. | ಆಗ ಹೆರೋದನು ರಹಸ್ಯವಾಗಿ ಆ ಜ್ಞಾನಿಗಳನ್ನು ಕರೆಯಿಸಿ ಆ ನಕ್ಷತ್ರವು ಯಾವ ಕಾಲದಲ್ಲಿ ಕಾಣಿಸಿಕೊಂಡಿತೆಂದು ಅವರನ್ನು ಪರಿಷ್ಕಾರವಾಗಿ ವಿಚಾರಿಸಿಕೊಂಡು |
8. | ಅವರನ್ನು ಬೇತ್ಲೆಹೇಮಿಗೆ ಕಳುಹಿ ಸುವಾಗ--ನೀವು ಹೋಗಿ ಆ ಶಿಶುವಿನ ವಿಷಯದಲ್ಲಿ ಪರಿಷ್ಕಾರವಾಗಿ ಹುಡುಕಿ ಆತನನ್ನು ಕಂಡುಕೊಂಡ ಮೇಲೆ ತಿರಿಗಿ ಬಂದು ನನಗೆ ತಿಳಿಸಿರಿ; ಆಗ ನಾನು ಸಹ ಬಂದು ಆತನನ್ನು ಆರಾಧಿಸುವೆನು ಅಂದನು. |
9. | ಅವರು ಅರಸನ ಮಾತನ್ನು ಕೇಳಿ ಹೊರಟಾಗ ಇಗೋ, ಮೂಡಲದಲ್ಲಿ ಅವರು ಕಂಡ ನಕ್ಷತ್ರವು ಶಿಶುವು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದೆ ಹೋಯಿತು. |
10. | ಅವರು ಆ ನಕ್ಷತ್ರವನ್ನು ಕಂಡು ಅತ್ಯಧಿಕವಾದ ಆನಂದದಿಂದ ಸಂತೋಷಪಟ್ಟರು. |
11. | ಅವರು ಮನೆಯೊಳಕ್ಕೆ ಬಂದಾಗ ಆ ಶಿಶುವನ್ನು ಆತನ ತಾಯಿಯಾದ ಮರಿಯಳೊಂದಿಗೆ ಕಂಡುಕೊಂಡು ಸಾಷ್ಟಾಂಗವೆರಗಿ ಆತನನ್ನು ಆರಾಧಿಸಿದರು; ತರುವಾಯ ತಮ್ಮ ಬೊಕ್ಕಸಗಳನ್ನು ತೆರೆದು ಚಿನ್ನ ಧೂಪ ರಕ್ತಬೋಳಗಳನ್ನು ಆತನಿಗೆ ಕಾಣಿಕೆಯಾಗಿ ಅರ್ಪಿಸಿದರು. |
12. | ಆಮೇಲೆ ಅವರು ಹೆರೋದನ ಬಳಿಗೆ ಹಿಂತಿರುಗಬಾರದೆಂದು ಕನಸಿನಲ್ಲಿ ದೇವರಿಂದ ಎಚ್ಚರಿಸಲ್ಪಟ್ಟು ಬೇರೊಂದು ದಾರಿಯಿಂದ ತಮ್ಮ ಸ್ವದೇಶಕ್ಕೆ ಹೊರಟುಹೋದರು. |
13. | ಅವರು ಹೋದಮೇಲೆ ಇಗೋ, ಕರ್ತನ ದೂತನು ಕನಸಿನಲ್ಲಿ ಯೋಸೇಫನಿಗೆ ಕಾಣಿಸಿ ಕೊಂಡು -- ಎದ್ದು ಈ ಶಿಶುವನ್ನೂ ಇದರ ತಾಯಿ ಯನ್ನೂ ಕರಕೊಂಡು ಐಗುಪ್ತಕ್ಕೆ ಓಡಿಹೋಗಿ ನಾನು ನಿನಗೆ ತಿಳಿಸುವ ತನಕ ಅಲ್ಲೇ ಇರು; ಯಾಕಂದರೆ ಹೆರೋದನು ಈ ಶಿಶುವನ್ನು ಕೊಲ್ಲಬೇಕೆಂದು |
14. | ಆಗ ಅವನು ಎದ್ದು ಆ ಶಿಶುವನ್ನೂ ಅದರ ತಾಯಿಯನ್ನೂ ಕರ ಕೊಂಡು ರಾತ್ರಿಯಲ್ಲಿ ಐಗುಪ್ತಕ್ಕೆ ಹೊರಟುಹೋಗಿ ಹೆರೋದನು ಸಾಯುವ ವರೆಗೆ ಅಲ್ಲೇ ಇದ್ದನು. |
15. | ಅದು--ನಾನು ನನ್ನ ಮಗನನ್ನು ಐಗುಪ್ತದಿಂದ ಕರೆದೆನು ಎಂದು ಪ್ರವಾದಿಯ ಮುಖಾಂತರ ಕರ್ತನಿಂದ ಹೇಳಲ್ಪಟ್ಟ ಮಾತು ನೆರವೇರುವಂತೆ ಹೀಗಾಯಿತು. |
16. | ಆಗ ಜ್ಞಾನಿಗಳು ತನ್ನನ್ನು ಪರಿಹಾಸ್ಯ ಮಾಡಿ ದರೆಂದು ಹೆರೋದನು ತಿಳಿದು ಅತಿ ರೋಷಗೊಂಡ ವನಾಗಿ ತಾನು ಅವರ ಮೂಲಕ ಪರಿಷ್ಕಾರವಾಗಿ ಶೋಧಿಸಿದ ಕಾಲಕ್ಕನುಸಾರ ಬೆತ್ಲೆಹೇಮಿನಲ್ಲಿಯೂ ಅದರ ಎಲ್ಲಾ ಪ್ರಾಂತ್ಯಗಳ ಮೇರೆಗಳಲ್ಲಿಯೂ ಎರಡು ವರುಷ ಮತ್ತು ಅದರೊಳಗಿದ್ದ ಎಲ್ಲಾ ಮಕ್ಕ |
17. | ಆಗ ಪ್ರವಾದಿಯಾದ ಯೆರೆವಿಾಯ ನಿಂದ ಹೇಳಲ್ಪಟ್ಟದ್ದು ನೆರವೇರಿತು; |
18. | ಅದೇನಂದರೆ--ರಾಮದಲ್ಲಿ ಪ್ರಲಾಪವೂ ಅಳುವಿಕೆಯೂ ಬಹು ಶೋಕದ ಧ್ವನಿಯೂ ಕೇಳಿಸಿತು; ರಾಹೇಲಳು ತನ್ನ ಮಕ್ಕಳಿಗೋಸ್ಕರ ಅಳುತ್ತಾ ಅವರು ಇಲ್ಲದ್ದರಿಂದ ಆದರಣೆ ಹೊಂದಲೊಲ್ಲದೆ ಇದ್ದಳು ಎಂಬದೇ. |
19. | ಹೆರೋದನು ಸತ್ತ ಮೇಲೆ ಇಗೋ, ಐಗುಪ್ತದಲ್ಲಿ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿ ಕೊಂಡು-- |
20. | ಎದ್ದು ಶಿಶುವನ್ನೂ ಅದರ ತಾಯಿಯನ್ನೂ ಕರಕೊಂಡು ಇಸ್ರಾಯೇಲ್ ದೇಶಕ್ಕೆ ಹೋಗು; ಯಾಕಂದರೆ ಶಿಶುವಿನ ಪ್ರಾಣವನ್ನು ತೆಗೆಯಬೇಕೆಂದು ಹುಡುಕುವವರು ಸತ್ತುಹೋದರು ಎಂದು ಹೇಳಿದನು. |
21. | ಆಗ ಅವನು ಎದ್ದು ಆ ಶಿಶುವನ್ನೂ ಅದರ ತಾಯಿ ಯನ್ನೂ ಕರಕೊಂಡು ಇಸ್ರಾಯೇಲ್ ದೇಶಕ್ಕೆ ಬಂದಾಗ |
22. | ಅರ್ಖೆಲಾಯನು ತನ್ನ ತಂದೆಯಾದ ಹೆರೋದನಿಗೆ ಬದಲಾಗಿ ಯೂದಾಯದಲ್ಲಿ ಆಳುತ್ತಿದ್ದಾನೆಂದು ಕೇಳಿ ಅಲ್ಲಿಗೆ ಹೋಗುವದಕ್ಕೆ ಭಯಪಟ್ಟನು; ಆದಾಗ್ಯೂ ಕನಸಿನಲ್ಲಿ ದೇವರಿಂದ ಎಚ್ಚರಿಸಲ್ಪಟ್ಟವನಾಗಿ ಗಲಿಲಾಯ ಪ್ರಾಂತ್ಯದ ಕಡೆಗೆ ತಿರುಗಿಕೊಂಡನು. |
23. | ಅವನು ನಜರೇತೆಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸಿಸಿದನು; ಇದರಿಂದ--ಆತನು ನಜರಾಯನೆಂದು ಕರೆಯಲ್ಪ ಡುವನು ಎಂಬದಾಗಿ ಪ್ರವಾದಿಗಳಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಹೀಗಾಯಿತು. |
← Matthew (2/28) → |