← Mark (5/16) → |
1. | ತರುವಾಯ ಅವರು ಸಮುದ್ರದ ಆಚೆಗೆ ಗದರೇನರ ಸೀಮೆಗೆ ಬಂದರು. |
2. | ಆತನು ದೋಣಿಯಿಂದ ಹೊರಗೆ ಬಂದಾಗ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನು ಕೂಡಲೆ ಸಮಾಧಿಗಳೊಳಗಿಂದ ಬಂದು ಆತನನ್ನು ಸಂಧಿಸಿದನು. |
3. | ಇವನು ಸಮಾಧಿ ಗಳಲ್ಲಿ ವಾಸಿಸುತ್ತಿದ್ದನು. ಇವನನ್ನು ಯಾವ ಮನುಷ್ಯನೂ ಸಂಕೋಲೆಗಳಿಂದಲಾದರೂ ಕಟ್ಟಲಾರದೆ ಹೋದನು. |
4. | ಯಾಕಂದರೆ ಅನೇಕ ಸಾರಿ ಅವನನ್ನು ಬೇಡಿಗಳಿಂದ ಮತ್ತು ಸರಪಣಿಗಳಿಂದ ಕಟ್ಟಿದ್ದರೂ ಅವನು ಸರಪಣಿ ಗಳನ್ನು ಕಿತ್ತುಹಾಕಿ ಬೇಡಿಗಳನ್ನು ಮುರಿದು ತುಂಡು ಮಾಡುತ್ತಿದ್ದದ್ದರಿಂದ ಯಾವ ಮನುಷ್ಯನೂ ಅವನನ್ನು ಹತೋಟಿಗೆ ತರಲಾರದೆ ಇದ್ದನು. |
5. | ಅವನು ರಾತ್ರಿ ಹಗಲು ಯಾವಾಗಲೂ ಬೆಟ್ಟಗಳಲ್ಲಿಯೂ ಸಮಾಧಿಗಳ ಲ್ಲಿಯೂ ಕೂಗುತ್ತಾ ಕಲ್ಲುಗಳಿಂದ ತನ್ನನ್ನು ತಾನೇ ಕೊಯ್ದುಕೊಳ್ಳುತ್ತಿದ್ದನು. |
6. | ಆದರೆ ಅವನು ದೂರದಿಂದ ಯೇಸುವನ್ನು ನೋಡಿದಾಗ ಓಡಿಬಂದು ಆತನನ್ನು ಆರಾಧಿಸಿ -- |
7. | ಮಹೋನ್ನತನಾದ ದೇವಕುಮಾರನಾಗಿ ರುವ ಯೇಸುವೇ, ನನ್ನ ಗೊಡವೆ ನಿನಗೆ ಯಾಕೆ? ನನ್ನನ್ನು ಯಾತನೆಪಡಿಸಬೇಡವೆಂದು ನಾನು ನಿನಗೆ ದೇವರಾಣೆ ಇಡುತ್ತೇನೆ ಎಂದು ಮಹಾ ಶಬ್ದದಿಂದ ಕೂಗಿ ಹೇಳಿದನು. |
8. | ಯಾಕಂದರೆ ಆತನು ಅವ ನಿಗೆ--ಅಶುದ್ಧಾತ್ಮವೇ, ಆ ಮನುಷ್ಯನೊಳಗಿನಿಂದ ಹೊರಗೆ ಬಾ ಎಂದು ಹೇಳಿದ್ದನು. |
9. | ಆತನು ಅವನಿಗೆ--ನಿನ್ನ ಹೇಸರೇನು ಎಂದು ಕೇಳಲು ಅವನು ಪ್ರತ್ಯುತ್ತರವಾಗಿ--ನನ್ನ ಹೆಸರು ಲೀಜೆನ್ (ದಂಡು); ಯಾಕಂದರೆ ನಾವು ಅನೇಕರಿದ್ದೇವೆ ಅಂದನು. |
10. | ತಮ್ಮನ್ನು ಆ ದೇಶದೊಳಗಿಂದ ಹೊರಗೆ ಕಳುಹಿಸದಂತೆ ಅವನು ಆತನನ್ನು ಬಹಳವಾಗಿ ಬೇಡಿ ಕೊಂಡನು. |
11. | ಆಗ ಅಲ್ಲಿ ಬೆಟ್ಟಗಳ ಸವಿಾಪದಲ್ಲಿ ಹಂದಿಗಳ ದೊಡ್ಡ ಗುಂಪು ಮೇಯುತ್ತಿತ್ತು. |
12. | ಎಲ್ಲಾ ದೆವ್ವಗಳು ಆತನಿಗೆ--ನಾವು ಆ ಹಂದಿಗಳೊಳಗೆ ಸೇರಿಕೊಳ್ಳುವಂತೆ ನಮ್ಮನ್ನು ಕಳುಹಿಸು ಎಂದು ಬೇಡಿಕೊಂಡವು. |
13. | ಕೂಡಲೆ ಯೇಸು ಅವುಗಳಿಗೆ ಅಪ್ಪಣೆಕೊಟ್ಟನು. ಆಗ ಅಶುದ್ಧಾತ್ಮಗಳು ಹೊರಗೆ ಹೋಗಿ ಆ ಹಂದಿಗಳೊಳಗೆ ಸೇರಿಕೊಂಡವು; ಮತ್ತು ಆ ಗುಂಪು ಉಗ್ರತೆಯಿಂದ ಓಡಿ ಇಳಿಜಾರಿನಿಂದ ಸಮುದ್ರದೊಳಗೆ ಬಿದ್ದು ಉಸುರುಗಟ್ಟಿ ಸತ್ತವು. (ಅವು ಸುಮಾರು ಎರಡು ಸಾವಿರ ಇದ್ದವು.) |
14. | ಆಗ ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿ ಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ತಿಳಿಸಿ ದರು; ಅವರು ನಡೆದ ಸಂಗತಿ ಏನೆಂದು ನೋಡುವದಕ್ಕೆ ಹೊರಟರು. |
15. | ಅವರು ಯೇಸುವಿನ ಬಳಿಗೆ ಬಂದು ಆ ದೆವ್ವಗಳ ದಂಡು ಹಿಡಿದವನು ಬಟ್ಟೆಗಳನ್ನು ಧರಿಸಿಕೊಂಡು ಸ್ವಸ್ಥಚಿತ್ತದಿಂದ ಕೂತು ಕೊಂಡಿರುವದನ್ನು ನೋಡಿ ಭಯಪಟ್ಟರು. |
16. | ಅದನ್ನು ನೋಡಿದವರು ದೆವ್ವ ಹಿಡಿದಿದ್ದವನಿಗೆ ಆದದ್ದನ್ನೂ ಹಂದಿಗಳ ವಿಷಯವಾಗಿಯೂ ಅವರಿಗೆ ಹೇಳಿದರು. |
17. | ಆಗ ಅವರು ತಮ್ಮ ಮೇರೆಗಳನ್ನು ಬಿಟ್ಟುಹೋಗ ಬೇಕೆಂದು ಆತನನ್ನು ಬೇಡಿಕೊಳ್ಳಲಾರಂಭಿಸಿದರು. |
18. | ಆತನು ದೋಣಿಯೊಳಗೆ ಬಂದಾಗ ಆ ದೆವ್ವ ಹಿಡಿದಿದ್ದವನು ತಾನು ಆತನ ಜೊತೆಯಲ್ಲಿಯೇ ಇರುತ್ತೇನೆಂದು ಆತನನ್ನು ಬೇಡಿಕೊಂಡನು. |
19. | ಆದಾಗ್ಯೂ ಯೇಸು ಅವನನ್ನು ಇರಗೊಡದೆ ಅವನಿಗೆ--ನಿನ್ನ ಮನೆಗೂ ಸ್ನೇಹಿತರ ಬಳಿಗೂ ಹೋಗಿ ಕರ್ತನು ನಿನ್ನ ಮೇಲೆ ಕರುಣೆಯಿಟ್ಟು ಎಂಥಾ ಮಹತ್ಕಾರ್ಯಗಳನ್ನು ಮಾಡಿ ದ್ದಾನೆಂದು ಅವರಿಗೆ ಹೇಳು ಅಂದನು. |
20. | ಅವನು ಹೊರಟು ಹೋಗಿ ಯೇಸು ತನಗೆ ಎಂಥೆಂಥಾ ಮಹತ್ಕಾರ್ಯಗಳನ್ನು ಮಾಡಿದನೆಂಬದನ್ನು ದೆಕಪೊಲಿ ಯದಲ್ಲಿ ಪ್ರಕಟಿಸಲಾರಂಭಿಸಿದನು. ಆಗ ಎಲ್ಲರೂ ಆಶ್ಚರ್ಯಪಟ್ಟರು. |
21. | ಯೇಸು ತಿರಿಗಿ ದೋಣಿಯಲ್ಲಿ ಆಚೇದಡಕ್ಕೆ ಹೋದಾಗ ಬಹಳ ಜನರು ಆತನ ಬಳಿಗೆ ಕೂಡಿಬಂದರು; ಆಗ ಆತನು ಸಮುದ್ರದ ಸವಿಾಪದ ಲ್ಲಿದ್ದನು. |
22. | ಆಗ ಇಗೋ, ಸಭಾಮಂದಿರದ ಅಧಿಕಾರಿ ಗಳಲ್ಲಿ ಯಾಯಿರನೆಂದು ಹೆಸರಿದ್ದ ಒಬ್ಬನು ಬಂದು ಆತನನ್ನು ಕಂಡು ಆತನ ಪಾದಗಳಿಗೆ ಬಿದ್ದು-- |
23. | ನನ್ನ ಚಿಕ್ಕಮಗಳು ಸಾಯುವ ಸ್ಥಿತಿಯಲ್ಲಿ ಮಲಗಿದ್ದಾಳೆ, ಅವಳು ಸ್ವಸ್ಥಳಾಗುವಂತೆ ನೀನು ಬಂದು ನಿನ್ನ ಕೈಗಳನ್ನು ಅವಳ ಮೇಲೆ ಇಡು; ಆಗ ಅವಳು ಬದುಕುವಳು ಎಂದು ಆತನನ್ನು ಬಹಳವಾಗಿ ಬೇಡಿಕೊಂಡನು. |
24. | ಆಗ ಯೇಸು ಅವನ ಸಂಗಡ ಹೋದನು; ಮತ್ತು ಬಹಳ ಜನರು ನೂಕಾಡುತ್ತಾ ಆತನ ಹಿಂದೆ ಹೋದರು. |
25. | ಆಗ ಹನ್ನೆರಡು ವರುಷಗಳಿಂದ ರಕ್ತಸ್ರಾವವಿದ್ದ ಒಬ್ಬ ಸ್ತ್ರೀಯು |
26. | ಅನೇಕ ವೈದ್ಯರಿಂದ ಬಹು ಕಷ್ಟಗಳನ್ನು ಅನುಭವಿಸಿ ತನಗಿದ್ದದ್ದನ್ನೆಲ್ಲಾ ವೆಚ್ಚ ಮಾಡಿದ್ದಾಗ್ಯೂ ರೋಗವು ಹೆಚ್ಚಾಯಿತೇ ಹೊರತು ಗುಣವಾಗಲಿಲ್ಲ. |
27. | ಆಗ ಆಕೆಯು ಯೇಸುವಿನ ವಿಷಯ ಕೇಳಿ ಜನರ ಗುಂಪಿನ ಹಿಂದೆ ಬಂದು ಆತನ ಉಡುಪನ್ನು ಮುಟ್ಟಿ ದಳು. |
28. | ಯಾಕಂದರೆ ಆಕೆಯು--ನಾನು ಆತನ ಉಡುಪುಗಳನ್ನು ಮುಟ್ಟಿದರೆ ಸಾಕು, ಗುಣವಾಗುವೆನು ಎಂದು ಅಂದುಕೊಂಡಿದ್ದಳು. |
29. | ಕೂಡಲೆ ಆಕೆಗೆ ರಕ್ತ ಹರಿಯುವದು ನಿಂತುಹೋಯಿತು; ಆಗ ಆ ಜಾಡ್ಯ ದಿಂದ ತನಗೆ ಗುಣವಾಯಿತೆಂದು ಆಕೆಯ ಶರೀರದಲ್ಲಿ ಆಕೆಗೆ ಅನ್ನಿಸಿತು. |
30. | ತಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳುಕೊಂಡು ಗುಂಪಿ ನಲ್ಲಿ ಹಿಂತಿರುಗಿ--ನನ್ನ ಉಡುಪುಗಳನ್ನು ಮುಟ್ಟಿದವರು ಯಾರು ಎಂದು ಕೇಳಲು |
31. | ಆತನ ಶಿಷ್ಯರು ಆತನಿಗೆ --ಜನಸಮೂಹವು ನಿನ್ನನ್ನು ನೂಕುವದನ್ನು ನೋಡಿ ಯೂ--ನನ್ನನ್ನು ಯಾರು ಮುಟ್ಟಿದರೆಂದು ನೀನು ಹೇಳುತ್ತೀಯಲ್ಲಾ ಅಂದರು. |
32. | ಆದರೆ ಆತನು ಇದನ್ನು ಮಾಡಿದವಳನ್ನು ಕಾಣಬೇಕೆಂದು ಸುತ್ತಲೂ ನೋಡಿದನು. |
33. | ಆದರೆ ಆ ಸ್ತ್ರೀಯು ತನ್ನಲ್ಲಿ ಆದದ್ದನ್ನು ತಿಳುಕೊಂಡು ಭಯದಿಂದ ನಡುಗುತ್ತಾ ಬಂದು ಆತನ ಮುಂದೆ ಅಡ್ಡಬಿದ್ದು ಸತ್ಯವನ್ನೆಲ್ಲಾ ಆತನಿಗೆ ತಿಳಿಸಿದಳು. |
34. | ಆಗ ಆತನು ಆಕೆಗೆ--ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು; ಸಮಾಧಾನದಿಂದ ಹೋಗು; ನಿನ್ನ ಜಾಡ್ಯದಿಂದ ನೀನು ಸ್ವಸ್ಥಳಾಗು ಅಂದನು. |
35. | ಆತನು ಇನ್ನೂ ಮಾತನಾಡುತ್ತಿರುವಾಗ ಸಭಾ ಮಂದಿರದ ಅಧಿಕಾರಿಯ ಮನೆಯಿಂದ ಕೆಲವರು ಅಲ್ಲಿಗೆ ಬಂದು--ನಿನ್ನ ಮಗಳು ಸತ್ತಿದ್ದಾಳೆ; ಬೋಧಕ ನಿಗೆ ಇನ್ನು ನೀನು ತೊಂದರೆಪಡಿಸುವದು ಯಾಕೆ? ಅಂದರು. |
36. | ಹಾಗೆ ಹೇಳಿದ್ದನ್ನು ಯೇಸು ಕೇಳಿದ ಕೂಡಲೆ ಆ ಸಭಾಮಂದಿರದ ಅಧಿಕಾರಿಗೆ--ಭಯ ಪಡಬೇಡ, ನಂಬಿಕೆ ಮಾತ್ರ ಇರಲಿ ಅಂದನು. |
37. | ಆತನು ಪೇತ್ರ, ಯಾಕೋಬ, ಯಾಕೋಬನ ಸಹೋದರನಾದ ಯೋಹಾನ ಇವರನ್ನೇ ಹೊರತು ಬೇರೆ ಯಾರನ್ನೂ ತನ್ನ ಹಿಂದೆ ಬರಗೊಡಲಿಲ್ಲ. |
38. | ಆತನು ಆ ಸಭಾಮಂದಿರದ ಅಧಿಕಾರಿಯ ಮನೆಗೆ ಬಂದು ಗೊಂದಲವನ್ನೂ ಬಹಳವಾಗಿ ಗೋಳಾಡುತ್ತಾ ಅಳುತ್ತಿರುವವರನ್ನೂ ಕಂಡನು. |
39. | ಆತನು ಒಳಕ್ಕೆ ಬಂದಾಗ ಅವರಿಗೆ--ನೀವು ಈ ಗೊಂದಲ ಮಾಡು ವದೂ ಅಳುವದೂ ಯಾಕೆ? ಹುಡುಗಿಯು ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ ಅಂದನು. |
40. | ಆಗ ಅವರು ಆತನಿಗೆ ಹಾಸ್ಯಮಾಡಿ ನಕ್ಕರು. ಆದರೆ ಆತನು ಅವರೆಲ್ಲರನ್ನು ಹೊರಗೆ ಹಾಕಿ ಹುಡುಗಿಯ ತಂದೆ ತಾಯಿಗಳನ್ನು ಮತ್ತು ತನ್ನ ಜೊತೆಯಲ್ಲಿದ್ದವರನ್ನು ಕರೆದುಕೊಂಡು ಒಳಕ್ಕೆ ಹುಡುಗಿಯು ಮಲಗಿದ್ದಲ್ಲಿಗೆ ಹೋದನು. |
41. | ಮತ್ತು ಆತನು ಆ ಹುಡುಗಿಯ ಕೈ ಹಿಡಿದು ಆಕೆಗೆ --ತಲಿಥಾ ಕೂಮ್ ಅಂದನು. ಹುಡುಗಿಯೇ, ಎದ್ದೇಳು ಎಂದು ನಾನು ನಿನಗೆ ಹೇಳುತ್ತೇನೆ ಎಂದರ್ಥ. |
42. | ಕೂಡಲೆ ಆ ಹನ್ನೆರಡು ವರುಷದ ಹುಡುಗಿಯು ಎದ್ದು ನಡೆದಾಡಿದಳು; ಆಗ ಅವರು ಅತ್ಯಾಶ್ಚರ್ಯ ದಿಂದ ಬೆರಗಾದರು. |
43. | ಇದು ಯಾವ ಮನುಷ್ಯ ನಿಗೂ ತಿಳಿಯಬಾರದೆಂದು ಆತನು ಅವರಿಗೆ ಖಂಡಿತ ವಾಗಿ ಹೇಳಿ ಅವಳಿಗೆ ತಿನ್ನುವದಕ್ಕೆ ಏನಾದರೂ ಕೊಡಬೇಕೆಂದು ಅಪ್ಪಣೆಕೊಟ್ಟನು. |
← Mark (5/16) → |